ಸಂತ ಫಿಲೋಮಿನಾ ಕ್ಯಾಥೆಡ್ರಲ್ ಏಷ್ಯಾದ ಅತಿ ಎತ್ತರದ ಚರ್ಚುಗಳಲ್ಲಿ ಒಂದಾಗಿದೆ. ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್ ಅನ್ನು 4ನೇ ಶತಮಾನದ ಸಂತ ಮತ್ತು ಹುತಾತ್ಮ ಸೇಂಟ್ ಫಿಲೋಮಿನಾ ಅವರ ಸ್ಮರಣಾರ್ಥವಾಗಿ 1843ರಲ್ಲಿ ಮೈಸೂರು ಮುಮ್ಮುಡಿ ಕೃಷರಾಜ ಒಡೆಯರ್ ಮಹಾರಾಜರು ನಿರ್ಮಿಸಿದರು. ಇದನ್ನು ನಿಯೋ ಗೋಥಿಕ್ ಶೈಲಿಯ ವಾಸ್ತುಶಿಲ್ಪವನ್ನು ಬಳಸಿಕೊಂಡು 1936 ರಲ್ಲಿ ನವೀಕರಿಸಲಾಯಿತು. ಸಂತ ಫಿಲೋಮಿನಾರ ಅವಶೇಷಗಳನ್ನು ಕ್ಯಾಥೆಡ್ರಲ್‌ನಲ್ಲಿ ಸಂರಕ್ಷಿಸಲಾಗಿದೆ
ಇತಿಹಾಸ: ಕ್ಯಾಥೆಡ್ರಲ್ ಅನ್ನು 19ನೇ ಶತಮಾನದಲ್ಲಿ ಮೈಸೂರಿನಲ್ಲಿ ವಾಸಿಸುತ್ತಿದ್ದ ಹೆಚ್ಚಿನ ಸಂಖ್ಯೆಯ ಯುರೋಪಿಯನ್ ಪ್ರಜೆಗಳಿಗೆ ಉಡುಗೊರೆಯಾಗಿ ನಿರ್ಮಿಸಲಾಗಿದೆ. ಯುರೋಪಿಯನ್ನರ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ದೊಡ್ಡ ಚರ್ಚ್‌ನ ಅಗತ್ಯವನ್ನು ಮನಗಂಡ ಮೈಸೂರು ಮಹಾರಾಜ ಕೃಷ್ಣರಾಜೇಂದ್ರ ಒಡೆಯರ್, 1933ರ ಅಕ್ಟೋಬರ್‌ನಲ್ಲಿ ಹೊಸ ಚರ್ಚ್‌ಗೆ ಅಡಿಪಾಯವನ್ನು ಹಾಕಿಸಿದರು.
ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್ ಅನ್ನು ಫ್ರೆಂಚ್ ವಾಸ್ತುಶಿಲ್ಪಿ ಡಾಲಿ ಅವರು ಜರ್ಮನಿಯ ಕಲೋನ್ ಕ್ಯಾಥೆಡ್ರಲ್ ಅನ್ನುಹೋಲುವಂತೆ ವಿನ್ಯಾಸಗೊಳಿಸಿದ್ದಾರೆ. 1977ರ ಪ್ರಸಿದ್ಧ ಬಾಲಿವುಡ್ ಚಲನಚಿತ್ರ, ಅಮಿತಾಬ್ ಬಚ್ಚನ್ ಅಭಿನಯದ ‘ಅಮರ್ ಅಕ್ಬರ್ ಆಂಟನಿ’ ಯ ವಿವಿಧ ದೃಶ್ಯಗಳನ್ನು ಮೈಸೂರಿನ ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್‌ನಲ್ಲಿ ಚಿತ್ರೀಕರಿಸಲಾಗಿದೆ.
ಹತ್ತಿರ: ಮೈಸೂರು ನಗರವು ಮೈಸೂರು ಅರಮನೆ, ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟಗಳು, ಕರಂಜಿ ಸರೋವರ, ಜಗನ್ಮೋಹನ್ ಅರಮನೆ ಮತ್ತು ಹೆಚ್ಚಿನ ಪ್ರವಾಸಿ ಆಕರ್ಷಣೆಯನ್ನು ನೀಡುತ್ತದೆ.
ಭೇಟಿ ನೀಡಿ: ಮೈಸೂರು ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿದೆ ಹಾಗೂ ವಾಯುಮಾರ್ಗ, ರಸ್ತೆ ಮತ್ತು ರೈಲು ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಮೈಸೂರು ನಗರವು ನಗರ ಕೇಂದ್ರದಿಂದ 12 ಕಿ.ಮೀ ದೂರದಲ್ಲಿ ವಿಮಾನ ನಿಲ್ದಾಣವನ್ನು ಹೊಂದಿದ್ದು, ಬೆಂಗಳೂರು, ಗೋವಾ, ಚೆನ್ನೈ ಮತ್ತು ಕೊಚ್ಚಿಯಂತಹ ನಗರಗಳಿಂದ ವಿಮಾನ ಸಂಪರ್ಕ ಹೊಂದಿದೆ. ಸೇಂಟ್ ಫಿಲೋಮಿನಾ ಕ್ಯಾಥೆಡ್ರಲ್ ಮೈಸೂರು ನಗರ ಕೇಂದ್ರದಿಂದ ಸ್ವಲ್ಪ ದೂರದಲ್ಲಿ ಅಶೋಕ ರಸ್ತೆಯಲ್ಲಿದೆ.
ವಸತಿ: ಮೈಸೂರು ನಗರವು ಎಲ್ಲಾ ಬಜೆಟ್ಗೆ ಹೊಂದುವ ವಿವಿಧ ವಸತಿಗೃಹಗಳನ್ನು ಹೊಂದಿದೆ.