ಶಿವನಸಮುದ್ರವು ಕಾವೇರಿ ನದಿಯಲ್ಲಿರುವ ಒಂದು ಜನಪ್ರಿಯ ಜಲಪಾತವಾಗಿದೆ, ಇದು ಮಂಡ್ಯ ಜಿಲ್ಲೆಯ ಗಡಿಯಲ್ಲಿರುವ ಚಾಮರಾಜನಗರ ಜಿಲ್ಲೆಯಲ್ಲಿದೆ. ಶಿವನಸಮುದ್ರ ವು ಉಣಬಡಿಸುವ ಸೊಬಗನ್ನು ಕಣ್ತುಂಬಿಕೊಳ್ಳಲು ಮಳೆಗಾಲದ ನಂತರದ ಭೇಟಿ ನೀಡಲೇಬೇಕು.
ಶಿವನಸಮುದ್ರವು ಎರಡು ಜಲಪಾತಗಳನ್ನು ಒಳಗೊಂಡಿದೆ- ಗಗನಚುಕ್ಕಿ ಮತ್ತು ಭರಚುಕ್ಕಿ. ಇದು ಕಾವೇರಿ ನದಿಯ ಭಾಗವಾಗಿದ್ದರೂ, ಗಗನಚುಕ್ಕಿ ಮತ್ತು ಭರಚುಕ್ಕಿಯನ್ನು ವೀಕ್ಷಿಸುವ ವೀಕ್ಷಣಾಬಿಂದುಗಳು ಸುಮಾರು 15 ಕಿ.ಮೀ ಅಂತರದಲ್ಲಿವೆ. ಗಗನಾಚುಕ್ಕಿ ಮತ್ತು ಭರಚುಕ್ಕಿ ಜಲಪಾತಗಳನ್ನು ವೀಕ್ಷಿಸಲು ಉತ್ತಮವಾಗಿ ನಿರ್ವಹಿಸಲಾದ ವೀಕ್ಷಣಾ ಡೆಕ್ ಲಭ್ಯವಿದೆ. ಎತ್ತರದ ಕಲ್ಲಿನ ಬಂಡೆಗಳ ನದಿಯ ನೀರು ಬೀಳುವುದು, ಸುತ್ತಲೂ ಹಚ್ಚ ಹಸಿರಿನ ಕಾಡುಗಳು ಮೋಡಿಮಾಡುವ ನೋಟ ಮತ್ತು ಛಾಯಾಗ್ರಾಹಕರ ಆನಂದವನ್ನು ಇಮ್ಮಡಿಗೊಳಿಸುತ್ತದೆ.
ಶಿವನಸಮುದ್ರ ಜಲಪಾತಕ್ಕೆ ಭೇಟಿ ನೀಡುವ ಸಮಯಗಳು:
ಶಿವನಸಮುದ್ರ ಜಲಪಾತಕ್ಕೆ ಸೋಮವಾರದಿಂದ ಭಾನುವಾರದವರೆಗೆ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭೇಟಿ ನೀಡಬಹುದು.
ಶಿವನಸಮುದ್ರ ಸಮೀಪ ಭೇಟಿ ನೀಡುವ ಸ್ಥಳಗಳು:
ತಲಕಾಡು (28 ಕಿಮಿ), ಬಿಆರ್ ಹಿಲ್ಸ್ (53 ಕಿಮಿ) ಮತ್ತು ಭೀಮೇಶ್ವರಿಗೆ (55 ಕಿಮಿ) ಶಿವನಸಮುದ್ರದೊಂದಿಗೆ ಭೇಟಿ ನೀಡಬಹುದು.
ಶಿವನಸಮುದ್ರಕ್ಕೆ ಭೇಟಿ ನೀಡುವ ಉತ್ತಮ ಸಮಯ:
ಶಿವನಸಮುದ್ರದ ಅತ್ಯುತ್ತಮ ನೋಟವನ್ನು ಕಣ್ತುಂಬಿಕೊಳ್ಳಲು ಮಳೆಗಾಲದ ನಂತರ ಭೇಟಿ ನೀಡಬೇಕು
ಶಿವನಸಮುದ್ರವನ್ನು ತಲುಪುವುದು ಹೇಗೆ:
ಶಿವನಸಮುದ್ರವು ಬೆಂಗಳೂರಿನಿಂದ 133 ಕಿಮಿ ಮತ್ತು ಮೈಸೂರಿನಿಂದ 78 ಕಿಮಿ ಅಂತರದಲ್ಲಿದೆ. ಮೈಸೂರು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣವನ್ನು ಹೊಂದಿದೆ.ಶಿವನಸಮುದ್ರದಿಂದ 30 ಕಿಮಿ ದೂರದಲ್ಲಿರುವ ಮಳವಳ್ಳಿಯವರೆಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಲಭ್ಯವಿದೆ. ಮಳವಳ್ಳಿಯಿಂದ (ಮಂಡ್ಯ/ಮದ್ದೂರು ಅಥವಾ ಮೈಸೂರು ನಗರಗಳು) ಟ್ಯಾಕ್ಸಿಯನ್ನು ಗೊತ್ತುಮಾಡಿಕೊಂಡು ಶಿವನಸಮುದ್ರವನ್ನು ತಲುಪಬಹುದು.
ಶಿವನಸಮುದ್ರ ಮತ್ತು ಸುತ್ತಮುತ್ತಲು ತಂಗಲು ಇರುವ ಸ್ಥಳಗಳು:
ಶಿವನಸಮುದ್ರದ ಸಮೀಪ ಕೆಎಸ್ಟಿಡಿಸಿಯು ಹೋಟೆಲ್ ಮೈಸೂರು ಭರಚುಕ್ಕಿಯನ್ನು ನಡೆಸುತ್ತಿದೆ. ಶಿವನಸಮುದ್ರದಿಂದ 15 ಕಿಮಿ ದೂರದಲ್ಲಿರುವ ದೊಡ್ಡಮಕ್ಕಲಿ ಅರಣ್ಯ ಲಾಡ್ಜ್ಗಳು ಮತ್ತು ರೆಸಾರ್ಟ್ಗಳು ನಿಸರ್ಗದೊಂದಿಗೆ ಸಾಮರಸ್ಯ ಹೊಂದಿರುವ ಕಾಟೇಜ್ ವಸತಿ ಗೃಹವನ್ನು ಒದಗಿಸುತ್ತಿವೆ. ಶಿವನಸಮುದ್ರದಿಂದ 30 ಕಿಮಿ ದೂರದಲ್ಲಿರುವ ಮಂಡ್ಯ ನಗರದಲ್ಲಿ ಹೆಚ್ಚಿನ ತಂಗುವಿಕೆ ಆಯ್ಕೆಗಳಿವೆ.