Karnataka Tourism
GO UP

ವಿರೂಪಾಕ್ಷ ದೇವಸ್ಥಾನ, ಹಂಪಿ

separator
ಕೆಳಗೆ ಸ್ಕ್ರಾಲ್ ಮಾಡಿ

ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ಐತಿಹಾಸಿಕ ತಾಣವಾಗಿದೆ. ಇದು ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ. ಅಲ್ಲಿರುವ ಶ್ರೀ ವಿರೂಪಾಕ್ಷ ದೇವಸ್ಥಾನವು 7ನೇ ಶತಮಾನದ ಶಿವನ ದೇವಾಲಯವಾಗಿದೆ.

ಈ ಐತಿಹಾಸಿಕ ದೇವಾಲಯದಲ್ಲಿ  ಮುಖ್ಯ ದೇವರಾದ ಶ್ರೀ ವಿರೂಪಾಕ್ಷನನ್ನು ಪಂಪಾಪತಿ ಎಂದೂ ಕರೆಯಲಾಗುತ್ತದೆ. ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಶ್ರೀ ಭುವನೇಶ್ವರಿ ಮತ್ತು ಶ್ರೀ ವಿದ್ಯಾರಣ್ಯ ದೇವಾಲಯಗಳು ಸಹ ಇವೆ.

ವಿರೂಪಾಕ್ಷ ದೇವಾಲಯ ಸಂಕೀರ್ಣವು ಮೂರು ಗೋಪುರಗಳಿಂದ ಆವೃತವಾಗಿದೆ. ಪೂರ್ವದಲ್ಲಿ ಮುಖ್ಯ ಗೋಪುರವು ಭವ್ಯವಾದ ರಚನೆಯಾಗಿದ್ದು, 9 ಮಹಡಿಗಳು ಹಾಗೂ 50 ಮೀಟರ್ ಎತ್ತರವಿದೆ. ಇದನ್ನು ಹದಿನೈದನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಪೂರ್ವ ದಿಕ್ಕಿನ ಗೋಪುರವು ವಿರೂಪಾಕ್ಷ ದೇವಾಲಯದ ಮುಖ್ಯ ದ್ವಾರವಾಗಿದೆ. ಪೂರ್ವ ಗೋಪುರವು ಅದರ ಪ್ರತಿಯೊಂದು ಮಹಡಿಯಲ್ಲಿ ನೂರಾರು ಹಿಂದೂ ದೇವರು ಮತ್ತು ದೇವತೆಗಳನ್ನು ಒಳಗೊಂಡ ವ್ಯಾಪಕವಾದ ಕರಕುಶಲತೆಯನ್ನು ಹೊಂದಿದೆ. ಮುಖ್ಯ ಗೋಪುರದ ತಲೆಕೆಳಗಾದ ನೆರಳು ದೇವಾಲಯದ ಒಳಗಿನ ಗೋಡೆಯ ಮೇಲೆ ಬೀಳುತ್ತದೆ. ಈ ಸ್ಥಳವನ್ನು ನೋಡಲು ನಿಮ್ಮ ಪ್ರವಾಸ ಮಾರ್ಗದರ್ಶಿ ನಿಮಗೆ ಸಹಾಯ ಮಾಡುತ್ತಾರೆ.

ಸಮಯ: ಶ್ರೀ ವಿರೂಪಾಕ್ಷ ದೇವಾಲಯ ಸಂಕೀರ್ಣವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ 5 ಗಂಟೆಯಿಂದ 9 ಗಂಟೆಯವರೆಗೆ ತೆರೆದಿರುತ್ತದೆ.

ಹಂಪಿಯನ್ನು ತಲುಪುವುದು ಹೇಗೆ:

ಹಂಪಿ ಬೆಂಗಳೂರಿನಿಂದ 350 ಕಿ.ಮೀ ದೂರದಲ್ಲಿದೆ ಮತ್ತು ರಸ್ತೆ, ರೈಲು ಅಥವಾ ವಿಮಾನದ ಮೂಲಕ ತಲುಪಬಹುದು. ವಿದ್ಯಾನಗರ ವಿಮಾನ ನಿಲ್ದಾಣ (ಕೋಡ್: VDY) ಹತ್ತಿರದ ವಿಮಾನ ನಿಲ್ದಾಣವಾಗಿದೆ (ಹಂಪಿಯಿಂದ 40 ಕಿ.ಮೀ) ಮತ್ತು ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಪ್ರತಿದಿನ ವಿಮಾನಯಾನಗಳಿವೆ. ವಿಜಯ ವಿಠಲ ದೇವಸ್ಥಾನವನ್ನು ತಲುಪಲು ಪ್ರವಾಸಿಗರು ಟ್ಯಾಕ್ಸಿ, ಬೈಕ್ ಅಥವಾ ಸೈಕಲ್ ಬಾಡಿಗೆಗೆ ಪಡೆಯಬಹುದು. ಆಯ್ದ ಆಕರ್ಷಣೆಗಳಲ್ಲಿ ವಿದ್ಯುಚಾಲಿತ ಗಾಡಿಗಳು ಲಭ್ಯವಿರುತ್ತವೆ.

ಹೊಸಪೇಟೆ ರೈಲು ನಿಲ್ದಾಣ ಹಂಪಿಗೆ ಸಮೀಪದಲ್ಲಿದೆ (ಹಂಪಿಯಿಂದ 15 ಕಿ.ಮೀ). ಹಂಪಿಗೆ ತಲುಪಲು ಬಳ್ಳಾರಿ, ಹುಬ್ಬಳ್ಳಿ ಮತ್ತು ಬೆಂಗಳೂರಿನಿಂದ ಹಲವಾರು ಬಸ್ಸುಗಳು ಸಿಗುತ್ತವೆ.

ಹಂಪಿ ಬಳಿ ಉಳಿಯಲು ಸ್ಥಳಗಳು:

ಹಂಪಿ ಮತ್ತು ಹೊಸಪೇಟೆ ಪಟ್ಟಣಗಳು ಎಲ್ಲಾ ತರಹದ ಪ್ರವಾಸಿಗರಿಗೆ ಸೂಕ್ತವಾದ ವಸತಿ ಆಯ್ಕೆಗಳನ್ನು ಹೊಂದಿವೆ. ಕೆಎಸ್‌ಟಿಡಿಸಿಯು ಹಂಪಿಯಲ್ಲಿ ಮಯೂರ ಭುವನೇಶ್ವರಿ ಹೋಟೆಲ್ ಮತ್ತು ಹೊಸಪೆಟೆಯ ತುಂಗಭದ್ರಾ ಅಣೆಕಟ್ಟು ಬಳಿ ಹೋಟೆಲ್ ಮಯೂರ ವಿಜಯನಗರ ವಸತಿ ಸ್ಥಳಗಳನ್ನು ನಿರ್ವಹಿಸುತ್ತಿದೆ. ಎವೊಲ್ವ್ ಬ್ಯಾಕ್ ಹಂಪಿ ಮತ್ತು ಹಯಾಟ್ ಪ್ಲೇಸ್ ಹಂಪಿಯಲ್ಲಿ ಲಭ್ಯವಿರುವ ಅತ್ಯಂತ ಐಷಾರಾಮಿ ಖಾಸಗಿ ವಸತಿನಿಲಯಗಳಾಗಿವೆ.

Tour Location

Leave a Reply

Accommodation
Meals
Overall
Transport
Value for Money