Karnataka Tourism
GO UP

ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ

separator
ಕೆಳಗೆ ಸ್ಕ್ರಾಲ್ ಮಾಡಿ

ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ

ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರ ವಸ್ತು ಸಂಗ್ರಹಾಲಯ, ಮಣಿಪಾಲ ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ ಅಂಗರಚನಾಶಾಸ್ತ್ರ ಮತ್ತು ರೋಗಶಾಸ್ತ್ರಕ್ಕೆ ಸಂಬಂಧಿಸಿದ 3000+ ಮಾದರಿಗಳನ್ನು ಹೊಂದಿದೆ. ಕರಾವಳಿ ಕರ್ನಾಟಕದ ಉಡುಪಿ ಬಳಿಯಿರುವ ಶೈಕ್ಷಣಿಕ ಮತ್ತು ಬ್ಯಾಂಕಿಂಗ್ ಪಟ್ಟಣವಾದ ಮಣಿಪಾಲದಲ್ಲಿರುವ ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ ಏಷ್ಯಾದಲ್ಲಿ ದೊಡ್ಡದಾಗಿದೆ.

1954 ರಲ್ಲಿ ಸಾರ್ವಜನಿಕರಿಗೆ ತೆರೆಯಲಾದ ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ ಡಾ. ಎಸ್.ಎಸ್. ಗೋಡಬೋಲೆ ಅವರ ಕನಸಿನ ಕೂಸು, ಅವರು ಮಣಿಪಾಲದ ಕೆಎಂಸಿ (ಕಸ್ತೂರ್ಬಾ ಮೆಡಿಕಲ್ ಕಾಲೇಜ್) ನಲ್ಲಿ ಮೊದಲ ಅಂಗರಚನಾಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಡಾ. ಎಸ್.ಎಸ್. ಗೋಡಬೋಲೆ ಅವರು ಜೀವಿಗಳ ಅಧ್ಯಯನಕ್ಕೆ ಬಳಸಿದ ಪದ್ಧತಿ, ಜೀವಿಗಳ ಮೃತ ದೇಹವನ್ನು ಕಾಪಿಡಲು ಕಂಡುಕೊಂಡ ವಿಧಾನಗಳು ಇತ್ಯಾದಿಗಳನ್ನು ಇಂದಿಗೂ ವಿದ್ಯಾರ್ಥಿಗಳು ವೇದ ವಾಕ್ಯದಂತೆ ಪಾಲಿಸುತ್ತಾರೆ.  ಡಾ. ಎಸ್.ಎಸ್. ಗೋಡಬೋಲೆ ಅವರು ತಮ್ಮ ವೈಯಕ್ತಿಕ ಸಂಗ್ರಹದಿಂದ 650 ಕ್ಕೂ ಹೆಚ್ಚು ಮಾದರಿಗಳನ್ನು ಸಂಗ್ರಹಾಲಯಕ್ಕಾಗಿ ದಾನ ಮಾಡಿದ್ದಾರೆ.

ಜೀವಿಗಳ ದೇಹದ ಭಾಗಗಳನ್ನು ಪ್ರದರ್ಶಿಸುವುದರ ಹೊರತಾಗಿ ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ ಮಾನವನ ದೇಹದ ಮೇಲೆ ಪರಿಣಾಮ ಬೀರಬಹುದಾದ ಜೀವನಶೈಲಿ ಪ್ರೇರಿತ ಕಾಯಿಲೆಗಳ ಬಗ್ಗೆ ವಿಶೇಷ ವಿಭಾಗವನ್ನು ಹೊಂದಿದೆ. ಪ್ರಮುಖ ಪ್ರದರ್ಶನಗಳಲ್ಲಿ ತಿಮಿಂಗಿಲದ ತಲೆಬುರುಡೆ, ಆನೆ ಮತ್ತು ನಾಗರಹಾವಿನ ಅಸ್ಥಿಪಂಜರ ಸೇರಿವೆ.

ಸಮಯ: ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

ಭೇಟಿ ಮಾಡುವುದು ಹೇಗೆ? ಮಣಿಪಾಲ್ ಬೆಂಗಳೂರಿನಿಂದ 400 ಕಿ.ಮೀ ಮತ್ತು ಮಂಗಳೂರಿನಿಂದ 62 ಕಿ.ಮೀ. ದೂರವಿದೆ. ಮಂಗಳೂರು ಹತ್ತಿರದ ವಿಮಾನ ನಿಲ್ದಾಣ ಮತ್ತು ಉಡುಪಿ ಹತ್ತಿರದ ರೈಲು ನಿಲ್ದಾಣವಾಗಿದೆ (6 ಕಿ.ಮೀ). ಕೆಎಸ್‌ಆರ್‌ಟಿಸಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೇರವಾಗಿ ಮಣಿಪಾಲಕ್ಕೆ ಐಷಾರಾಮಿ ಫ್ಲೈಬಸ್‌ಗಳನ್ನು ನಡೆಸುತ್ತಿದೆ. ಮಂಗಳೂರು ಅಥವಾ ಉಡುಪಿಯಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಮಣಿಪಾಲ್ ತಲುಪಬಹುದು. ಮಣಿಪಾಲ್ ಮ್ಯೂಸಿಯಂ ಆಫ್ ಅನ್ಯಾಟಮಿ & ಪ್ಯಾಥಾಲಜಿ ಮಣಿಪಾಲದ  ಹೃದಯಭಾಗದಲ್ಲಿರುವ ಕೆಎಂಸಿ (ಕಸ್ತೂರ್ಬಾ ಮೆಡಿಕಲ್ ಕಾಲೇಜ್) ಕ್ಯಾಂಪಸ್‌ನಲ್ಲಿದೆ.

ವಸತಿ: ಮಣಿಪಾಲ ನಗರದಲ್ಲಿ ಹಲವಾರು ಹೋಟೆಲ್‌ಗಳು ಮತ್ತು ವಸತಿಗೃಹಗಳಿವೆ

 

Tour Location

 

Leave a Reply

Accommodation
Meals
Overall
Transport
Value for Money