ಬಿಳಿಗಿರಿ ರಂಗನ ಬೆಟ್ಟ (ಬಿಆರ್ ಹಿಲ್ಸ್) ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲೊಂದಾಗಿದ್ದು ಬೆಂಗಳೂರಿನ ಆಗ್ನೇಯಕ್ಕೆ ಸುಮಾರು 175 ಕಿ.ಮೀ. ದೂರದಲ್ಲಿ ಕರ್ನಾಟಕ ತಮಿಳುನಾಡು ಗಡಿಯಲ್ಲಿದೆ. ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ.
ಬಿಳಿಗಿರಿ ರಂಗನ ಬೆಟ್ಟಕ್ಕೆ ಏಕೆ ಭೇಟಿ ನೀಡಬೇಕು?
- ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ: ಬಿಳಿಗಿರಿ ರಂಗನ ಬೆಟ್ಟದೊಳಗಿನ ಮುಖ್ಯ ದೇವಾಲಯವಾಗಿದ್ದು ರಂಗನಾಥ ಸ್ವಾಮಿಯ ಆರಾಧನೆಗಾಗಿ ಸ್ಥಾಪಿಸಲಾಗಿದೆ.
- ಅರಣ್ಯ ಸಫಾರಿ: ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಸಂಸ್ಥೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜೀಪ್ ಸಫಾರಿಗಳನ್ನು ಬಿಆರ್‌ಟಿ ವನ್ಯಜೀವಿ ಅಭಯಾರಣ್ಯದಲ್ಲಿ ದಿನಕ್ಕೆ ಎರಡು ಬಾರಿ ನಿರ್ವಹಿಸುತ್ತವೆ (ಬೆಳಿಗ್ಗೆ 6 ರಿಂದ ಬೆಳಿಗ್ಗೆ 8 ರವರೆಗೆ ಮತ್ತು ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ). ಆನೆಗಳು, ಕರಡಿಗಳು, ಕಾಡೆಮ್ಮೆ, ಮಲಬಾರ್ ದೈತ್ಯ ಅಳಿಲುಗಳು, ಕಾಡು ನಾಯಿಗಳು ಮತ್ತು ಜಿಂಕೆಗಳು ಅರಣ್ಯ ಸಫಾರಿ ಸಮಯದಲ್ಲಿ ಕಂಡುಬರುವ ಸಾಮಾನ್ಯ ಪ್ರಾಣಿಗಳಾಗಿದ್ದು, ಹುಲಿಗಳೂ ಕೆಲವೊಮ್ಮೆ ಕಾಣಿಸಬಹುದಾಗಿದೆ.
- ಪಕ್ಷಿ ವೀಕ್ಷಣೆ: ಬಿಳಿಗಿರಿ ರಂಗನ ಬೆಟ್ಟ 250ಕ್ಕೂ ಹೆಚ್ಚು ಜಾತಿಯ ಪಕ್ಷಿಗಳಿಗೆ ನೆಲೆಯಾಗಿದೆ.
- ಆನೆ ಸ್ನಾನ: ಸ್ಥಳೀಯ ಮಾಹುತರು ಜಂಗಲ್ ಲಾಡ್ಜಸ್ ಕೆ-ಗುಡಿ (ಕ್ಯಾತದೇವರ ಗುಡಿ) ಬಳಿ ಇರುವ ಕೊಳವೊಂದರಲ್ಲಿ ಆನೆಗಳ ಸ್ನಾನ ಮಾಡಿಸುತ್ತಾರೆ. ಸಂದರ್ಶಕರು ಹತ್ತಿರದಿಂದ ಇದನ್ನು ನೋಡಬಹುದಾಗಿದೆ.
- ವೀಕ್ಷಣಾ ಕೇಂದ್ರ (ವ್ಯೂ ಪಾಯಿಂಟ್): ಸೂರ್ಯಾಸ್ತದ ಉತ್ತಮ ನೋಟವನ್ನು ನೀಡುತ್ತದೆ.
ಸಮಯ: ಬಿಳಿಗಿರಿ ರಂಗನ ಬೆಟ್ಟ ಒಂದು ಮೀಸಲು ಅರಣ್ಯವಾಗಿದ್ದು, ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ.
ತಲುಪುವುದು ಹೇಗೆ? ಬಿಳಿಗಿರಿ ರಂಗನ ಬೆಟ್ಟ ಬೆಂಗಳೂರಿನಿಂದ 175 ಕಿ.ಮೀ ಮತ್ತು ಮೈಸೂರಿನಿಂದ 90 ಕಿ.ಮೀ ದೂರದಲ್ಲಿದೆ. ಮೈಸೂರು ಹತ್ತಿರದ ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣವಾಗಿದೆ. ಬಿಳಿಗಿರಿ ರಂಗನ ಬೆಟ್ಟವನ್ನು ಸ್ವಂತ ವಾಹನ ಅಥವಾ ಟ್ಯಾಕ್ಸಿಯಲ್ಲಿ ತಲುಪಬೇಕಾಗಿದೆ.
ವಸತಿ: ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳು ಬಿಆರ್ ಹಿಲ್ಸ್‌ನಲ್ಲಿ ಕೆ-ಗುಡಿ ವೈಲ್ಡರ್ನೆಸ್ ಕ್ಯಾಂಪ್ ನಡೆಸುತ್ತವೆ. ಬಿಳಿಗಿರಿ ರಂಗನ ಬೆಟ್ಟ ಪ್ರದೇಶದಲ್ಲಿ ಕೆಲವು ಖಾಸಗಿ ಹೋಟೆಲ್‌ಗಳು ಸಹ ಕಾರ್ಯನಿರ್ವಹಿಸುತ್ತವೆ. 90 ಕಿ.ಮೀ ದೂರದಲ್ಲಿರುವ ಮೈಸೂರು ನಗರದಲ್ಲಿ ಹೆಚ್ಚಿನ ಆಯ್ಕೆಗಳು ಲಭ್ಯವಿದೆ.