ಚಾಮರಾಜನಗರವನ್ನು ಈ ಹಿಂದೆ ‘ಅರಿಕೊಟ್ಟಾ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಮತ್ತು ಇದು ಮೈಸೂರು ಮಹಾರಾಜರಾಗಿದ್ದ ಚಾಮರಾಜ ಒಡೆಯರ್ ಅವರ ಜನ್ಮಸ್ಥಳವಾಗಿತ್ತು ಈ ಕಾರಣದಿಂದ ಜಿಲ್ಲೆಗೆ ಚಾಮರಾಜನಗರ ಎಂದು ಹೆಸರಿಡಲಾಯಿತು.
ಚಾಮರಾಜನಗರ ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿದೆ ಮತ್ತು ತಮಿಳುನಾಡು ಮತ್ತು ಕೇರಳದ ಗಡಿಯಾಗಿದೆ. ಚಾಮರಾಜನಗರ ಜಿಲ್ಲೆಯು ಸಮೃದ್ಧ ವನ್ಯಜೀವಿಗಳಿಂದ ಆಶೀರ್ವದಿಸಲ್ಪಟ್ಟಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನ, ಬಿಳಗಿರಿ ರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಮಲೆ ಮಹದೇಶ್ವರ ಬೆಟ್ಟಗಳು ಚಾಮರಾಜನಗರದ ಕೆಲವು ಪ್ರಮುಖ ಬೆಟ್ಟಗಳು / ವನ್ಯಜೀವಿ ಆಕರ್ಷಣೆಗಳಾಗಿವೆ.
ಮಹಾಶಿವರಾತ್ರಿ ಚಾಮರಾಜನಗರದಲ್ಲಿ ಪ್ರಸಿದ್ಧವಾದ ಹಬ್ಬವಾಗಿದೆ. ಚಾಮರಾಜನಗరವು ಬೆಟ್ಟ ಕುರುಬರು, ಯೆರವರು ಮತ್ತು ಸೋಲಿಗರು ಸೇರಿದಂತೆ ಹಲವಾರು ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿದೆ. ಕಂಸಾಳೆ ನೃತ್ಯವು ಸ್ಥಳೀಯ ಸಾಂಪ್ರದಾಯಿಕ ನೃತ್ಯವಾಗಿದೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನ ಕ್ಯಾತಮಾರನ ಗುಡಿ (ಕೆ ಗುಡಿ) ಯಲ್ಲಿ ರಾತ್ರಿಯ ತಂಗುವಿಕೆ ಕಾಡಿನೊಳಗಿನ ವಸತಿಯ ವಿಶಿಷ್ಟ ಅನುಭವವನ್ನು ನೀಡುತ್ತದೆ. ಚಾಮರಾಜನಗರ ಬೆಂಗಳೂರಿನಿಂದ 180 ಕಿ.ಮೀ ದೂರದಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕ್ಲಿಕ್ ಮಾಡಿ
ಪ್ರಕೃತಿ ಮತ್ತು ವನ್ಯಜೀವಿಗಳು
- ಬಂಡಿಪುರ ರಾಷ್ಟ್ರೀಯ ಉದ್ಯಾನ: ಬಂಡೀಪುರ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಭಾರತದಲ್ಲಿ ಎರಡನೇ ಅತಿ ದೊಡ್ಡ ಹುಲಿ ಸಂರಕ್ಷಣಾ ತಾಣವಾಗಿದೆ. ಬಂಡೀಪುರದಲ್ಲಿ ಸಾಮಾನ್ಯವಾಗಿ ಕಾಣಸಿಗುವ ಕಾಡು ಪ್ರಾಣಿಗಳಲ್ಲಿ ಹುಲಿಗಳು, ಕಾಡು ನಾಯಿಗಳು, ಕಾಡುಹಂದಿ, ಆನೆಗಳು, ಕರಡಿಗಳು, ಚಿರತೆ, ಜಿಂಕೆಗಳು, ದೈತ್ಯ ಮಲಬಾರ್ ಅಳಿಲುಗಳು, ಕಾಡೆಮ್ಮೆಗಳು, ಕಡವೆಗಳು , ಮತ್ತು ವಿವಿಧ ರೀತಿಯ ಜಿಂಕೆಗಳು ಸೇರಿವೆ. ಅರಣ್ಯ ಸಫಾರಿಗಳನ್ನು ಅರಣ್ಯ ಇಲಾಖೆಯು ಪ್ರತಿದಿನ ಎರಡು ಬಾರಿ ನಡೆಸುತ್ತದೆ. ದೊಡ್ಡ ಗುಂಪುಗಳಲ್ಲಿನ ಸಂದರ್ಶಕರು ಅಗ್ಗದ ಮತ್ತು ಕಡಿಮೆ (45-60 ನಿಮಿಷಗಳು) ಬಸ್ ಸಫಾರಿ ಆಯ್ದುಕೊಳ್ಳಬಹುದಾಗಿದೆ. ಆದರೆ ಜೀಪ್ ಸಫಾರಿಗಳು ಸಣ್ಣ ಗುಂಪುಗಳಿಗೆ ದೀರ್ಘವಾದ (2-3 ಗಂಟೆಗಳವರೆಗೆ ಇರುತ್ತದೆ), ಹೆಚ್ಚು ವಿಶೇಷವಾದ ಅನುಭವಕ್ಕಾಗಿ ಹೆಚ್ಚು ಸೂಕ್ತವಾಗಿವೆ - ಎರಡೂ ಬೆಳಗ್ಗೆ 6 ರಿಂದ 9 ರವರೆಗೆ ಮತ್ತು ಮಧ್ಯಾಹ್ನ 3 ರಿಂದ 6 ಗಂಟೆಯ ವರೆಗೆ ಕಾರ್ಯನಿರ್ವಹಿಸುತ್ತವೆ.
- ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಅತಿ ಎತ್ತರದ ಶಿಖರ. ಗುಂಡ್ಲುಪೇಟೆ ಬಳಿ ಇರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟವು ವೇಣುಗೋಪಾಲಸ್ವಾಮಿ ದೇವಾಲಯ ಮತ್ತು ಹಚ್ಚ ಹಸಿರಿನಿಂದ ಕೂಡಿದ ನೈಸರ್ಗಿಕ ಪರಿಸರದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 14 ನೇ ಶತಮಾನದಲ್ಲಿ ಅಗಸ್ತ್ಯ ಋಷಿ ನಿರ್ಮಿಸಿದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಭಗವಾನ್ ಕೃಷ್ಣ (ವೇಣುಗೋಪಾಲ ಸ್ವಾಮಿ) ನೃತ್ಯದ ಭಂಗಿಯಲ್ಲಿ ನಿಂತು ತನ್ನ ಕೈಯಲ್ಲಿ ಕೊಳಲು ನುಡಿಸುತ್ತಾನೆ. ವಿಗ್ರಹದ ಹಿಂದಿನ ಫಲಕವು ಕೃಷ್ಣನ ಪತ್ನಿಗಳಾದ ಸತ್ಯಭಾಮ ಮತ್ತು ರುಕ್ಮಿಣಿ ಮತ್ತು ನೆಚ್ಚಿನ ಪ್ರಾಣಿ ಹಸು ಮತ್ತು ಅವರ ಉಸ್ತುವಾರಿ ಹೊತ್ತ ಗೋಪಾಲಕರ ಕೆತ್ತನೆಗಳನ್ನು ಒಳಗೊಂಡಿದೆ.
- ಮಲೆ ಮಹದೇಶ್ವರ ಬೆಟ್ಟ: ಮಲೆ ಮಹದೇಶ್ವರ ಬೆಟ್ಟ (ಸಂಕ್ಷಿಪ್ತವಾಗಿ ಎಂಎಂ ಬೆಟ್ಟ) ಸಂತ ಮಹದೇಶ್ವರನ ವಾಸಸ್ಥಾನ ಮತ್ತು ಪ್ರಮುಖ ಪೂಜಾ ಕೇಂದ್ರವಾಗಿದ್ದು ಶಿವನಿಗೆ ಅರ್ಪಿತವಾಗಿದೆ. ಮಲೆ ಮಹದೇಶ್ವರ ಬೆಟ್ಟವನ್ನು ‘ಏಳು ಮಲೆ’ (ಏಳು ಬೆಟ್ಟಗಳು) ಎಂದೂ ಕರೆಯುತ್ತಾರೆ. ಮಲೆ ಮಹದೇಶ್ವರ ಬೆಟ್ಟಗಳ ಶ್ರೇಣಿಯು ಕೊಂಗುಮಲೆ, ಜೇನುಮಲೆ, ಪ್ಯಾಚೆಮಲೆ, ಅನುಮಲೆ, ಕಾನುಮಲೆ, ಪೊನ್ನಾಚಿಮಲೆ ಮತ್ತು ಪಾವಲಮಲೆಗಳನ್ನು ಒಳಗೊಂಡಿದೆ.ಎಂಎಂ ಬೆಟ್ಟಗಳ ಮೇಲಿರುವ ಮಹದೇಶ್ವರ ದೇವಸ್ಥಾನವನ್ನು ಸ್ಥಳೀಯ ಕುರುಬ ಜಮೀನ್ದಾರ ಜುಂಜೆ ಗೌಡ ನಿರ್ಮಿಸಿದನೆಂದು ಹೇಳಲಾಗುತ್ತದೆ. ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಶಿವಲಿಂಗವು ಸ್ವಯಂ ಉಧ್ಭವವಾಗಿದೆ ಎಂದು ನಂಬಲಾಗಿದೆ. ಮಲೆ ಮಹದೇಶ್ವರ ಸ್ವಾಮಿ ಹುಲಿಯ ಮೇಲೆ ತಿರುಗಾಡುತ್ತಾರೆ, ಪವಾಡಗಳನ್ನು ಮಾಡುತ್ತಾರೆ ಮತ್ತು ಭಕ್ತರನ್ನು ಕೆಟ್ಟದ್ದರಿಂದ ರಕ್ಷಿಸುತ್ತಾರೆ ಎಂದು ಸ್ಥಳೀಯರು ನಂಬುತ್ತಾರೆ. ಮಲೆ ಮಹದೇಶ್ವರ ಬೆಟ್ಟಗಳು ಮತ್ತು ದೇವಾಲಯದ ಉಲ್ಲೇಖ ಕರ್ನಾಟಕದ ಹಲವಾರು ಜಾನಪದ ಗೀತೆಗಳಲ್ಲಿ ಕಂಡುಬರುತ್ತದೆ. ನೀವು ಜಾನಪದ ಹಾಡು ಅಥವಾ ಬುಡಕಟ್ಟು ನೃತ್ಯವನ್ನು ಕೇಳಿದಾಗ ‘ಏಳು ಮಲೆ’ ಮತ್ತು ‘ಮಾದೇವ’ ಎಂಬ ಪದಗಳನ್ನು ಗಮನಿಸಿ.
- ಬಿಳಿಗಿರಿ ರಂಗನ ಬೆಟ್ಟ:ಬಿಳಿಗಿರಿ ರಂಗನ ಬೆಟ್ಟ (ಬಿಆರ್ ಹಿಲ್ಸ್) ಕರ್ನಾಟಕದ ಪ್ರಮುಖ ಗಿರಿಧಾಮಗಳಲ್ಲೊಂದಾಗಿದ್ದು ಬೆಂಗಳೂರಿನ ಆಗ್ನೇಯಕ್ಕೆ ಸುಮಾರು 175 ಕಿ.ಮೀ. ದೂರದಲ್ಲಿ ಕರ್ನಾಟಕ ತಮಿಳುನಾಡು ಗಡಿಯಲ್ಲಿದೆ. ಬಿಳಿಗಿರಿ ರಂಗನ ಬೆಟ್ಟ ಹುಲಿ ಸಂರಕ್ಷಣಾ ಮೀಸಲು ಪ್ರದೇಶ ಮತ್ತು ವನ್ಯಜೀವಿ ಅಭಯಾರಣ್ಯವಾಗಿದೆ.
ಪ್ರವಾಸಿ ಆಕರ್ಷಣೆಗಳು
- ಹೊಗೆನಕಲ್ಲು ಜಲಪಾತ: ಹೊಗೆನಕಲ್ಲು ಜಲಪಾತವು ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಜಲಪಾತವಾಗಿದೆ. ಕಾವೇರಿ ನದಿ ಕರ್ನಾಟಕದಿಂದ ತಮಿಳುನಾಡಿಗೆ ಪ್ರವೇಶಿಸುತ್ತಿದ್ದಂತೆ ದೈತ್ಯ ಬಂಡೆಗಳ ಮೇಲೆ ಧುಮುಕಿ ಕಣ್ಮನ ತಣಿಸುವ ಸುಂದರ ಜಲಪಾತ ಸೃಷ್ಟಿಸುತ್ತಾಳೆ.
- ಭರಚುಕ್ಕಿ ಜಲಪಾತ: ಭರಚುಕ್ಕಿ ಚಾಮರಾಜನಗರದಿಂದ ಉತ್ತರಕ್ಕೆ 60 ಕಿ.ಮೀ ದೂರದಲ್ಲಿದೆ ಮತ್ತು ಕರ್ನಾಟಕದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಹತ್ತಿರದ ಮತ್ತೊಂದು ಜಲಪಾತ, ಗಗನಚುಕ್ಕಿ ಮಂಡ್ಯ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ.
- ಕುಂದುರಾ ಬೆಟ್ಟ: ಕೊಲ್ಲೆಗಾಲದಿಂದ 30 ಕಿ.ಮೀ ದೂರದಲ್ಲಿರುವ ಕುಂದುರಾ ಬೆಟ್ಟ ಚಾರಣಕ್ಕೆ ಸೂಕ್ತವಾಗಿದೆ.
- ದೊಡ್ಡ ಸಂಪಿಗೆ: ಕಾವೇರಿಯ ಉಪನದಿಯಾದ ಭಾರ್ಗವಿ ನದಿಯನ್ನು ಬಿ.ಆರ್. ಹಿಲ್ಸ್, ಯಿಂದ 4 ಕಿ.ಮೀ. ದೂರದಲ್ಲಿರುವ ದೊಡ್ಡ ಸಂಪಿಗೆಯಲ್ಲಿ ನೋಡಬಹುದಾಗಿದೆ.
ಧಾರ್ಮಿಕ ಸ್ಥಳಗಳು
- ಅಗರ: ರಾಮೇಶ್ವರ, ನರಸಿಂಹ, ದುರ್ಗಾ ಮತ್ತು ವರದರಾಜ ದೇವಾಲಯಗಳಿಗೆ ನೆಲೆಯಾಗಿದೆ
- ಚಾಮರಾಜನಗರ: ಜಿಲ್ಲಾ ಕೇಂದ್ರ ಮತ್ತು ಚಾಮರಾಜೇಶ್ವರ, ಭುಜಂಗೇಶ್ವರ, ಲಕ್ಷ್ಮಿ ನಾರಾಯಣ, ವೀರಭದ್ರ, ನಾರಾಯಣಸ್ವಾಮಿ ದೇವಾಲಯಗಳಿಗೆ ನೆಲೆಯಾಗಿದೆ.
- ಗುಂಡ್ಲುಪೇಟೆ: ವಿಜಯನಾರಾಯಣ, ರಾಮೇಶ್ವರ ಮತ್ತು ಪರವಾಸುದೇವ ದೇವಸ್ಥಾನಗಳಿಗೆ ನೆಲೆಯಾಗಿದೆ.
- ಹರದನಹಳ್ಳಿ: ಜನಪ್ರಿಯ ವೀರಶೈವ ಕೇಂದ್ರ, ಗೋಪಾಲಸ್ವಾಮಿ ದೇವಸ್ಥಾನ ಮತ್ತು ದಿವ್ಯಾಲಿಂಗೇಶ್ವರ ದೇವಾಲಯಗಳಿಗೆ ನೆಲೆಯಾಗಿದೆ.
- ಹೊಳೆ ಆಲೂರ್: ಅರ್ಕೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
- ಹೊಮ್ಮ: ರಾಮೇಶ್ವರ ಮತ್ತು ಜನಾರ್ಧನ ದೇವಾಲಯಗಳಿಗೆ ಹೆಸರುವಾಸಿಯಾಗಿದೆ. ಹೊಮ್ಮ ಹೊಳೆ ಆಲೂರ್ನಿಂದ ಸುಮಾರು 2 ಕಿ.ಮೀ. ದೂರದಲ್ಲಿದೆ.
- ಯಲಂದೂರು: 16 ನೇ ಶತಮಾನದ ಗೌರೀಶ್ವರ ದೇವಾಲಯ ಸಂಕೀರ್ಣಕ್ಕೆ ನೆಲೆಯಾಗಿದೆ, ಯೆಲಂದೂರು ಹಡಿನಾಡು ಆಡಳಿತಗಾರರ ಪ್ರಧಾನ ಕೇಂದ್ರವಾಗಿತ್ತು. ಪಾರ್ವತಿ ದೇವಸ್ಥಾನ ಇಲ್ಲಿಯ ಇನ್ನೊಂದು ದೇವಾಲಯವಾಗಿದೆ. ದಿವಾನ್ ಪೂರ್ಣಯ್ಯ ಅವರ 200 ವರ್ಷಗಳ ಹಳೆಯ ನಿವಾಸವನ್ನು ಪ್ರಸ್ತುತ ಸರ್ಕಾರಿ ಕಚೇರಿಯಾಗಿ ಬಳಸಲಾಗುತ್ತಿದೆ.
- ಯೆರಿಯೂರ್: ವಿಜಯನಗರ ಯುಗದ ವೀರಭದ್ರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ
- ಉಮ್ಮತ್ತೂರು: ಜನಾರ್ಥನ, ರಂಗನಾಥ, ವೀರಭದ್ರ, ಭುಜಂಗೇಶ್ವರ ದೇವಸ್ಥಾನಗಳು ಮತ್ತು ಎರಡು ಜೈನ ಬಸದಿಗಳು (ಆದಿನಾಥ ಮತ್ತು ವರ್ಧಮಾನ) ಇಲ್ಲಿವೆ.
- ತ್ರಯಂಬಕಪುರ: ಬುಕ್ಕ 2 ನ ನೆನಪಿಗಾಗಿ ವಿಜಯನಗರ ಅವಧಿಯಲ್ಲಿ ನಿರ್ಮಿಸಲಾದ ಬೃಹತ್ ತ್ರಯಂಬಕೇಶ್ವರ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ.
- ತೆರಕನಂಬಿ: ಗೋಪಾಲಸ್ವಾಮಿ, ಮೂಲಸ್ಥಾನೇಶ್ವರ, ಲಕ್ಷ್ಮಿ ವರದರಾಜಸ್ವಾಮಿ ಮತ್ತು ಸುಗ್ರೀವ ದೇವಾಲಯಗಳಿಗೆ ನೆಲೆಯಾಗಿದೆ.
- ನರಸಮಂಗಲ: ನರಸಮಂಗಲದಲ್ಲಿ ಗಂಗಾ ಯುಗದ ರಾಮೇಶ್ವರ ದೇವಸ್ಥಾನವಿದೆ. ಚಾಮರಾಜನಗರದಿಂದ 24 ಕಿ.ಮೀ ದೂರವಿದೆ.
- ಮಲೇಯೂರ್: ಹಲವಾರು ಬಸದಿಗಳು, ಮಾರಮ್ಮ ದೇವಸ್ಥಾನ ಮತ್ತು ಚಂದ್ರಮೌಳೇಶ್ವರ ದೇವಸ್ಥಾನ ಹೊಂದಿರುವ ಜನಪ್ರಿಯ ಜೈನ ಕೇಂದ್ರವಾಗಿದೆ.
- ಕುಲಗಾನ: ನೆಲ್ಲಿಕಲ್ಲ ಬಸವೇಶ್ವರ, ಪಾರ್ವತಿ, ಮಾರಮ್ಮ, ಕಾಳಿಕಾಂಬ, ಜಲವಾಸುದೇವ ಮತ್ತು ಇತರ ದೇವಾಲಯಗಳಿಗೆ ನೆಲೆಯಾಗಿದೆ.
- ಕರಿವರದರಾಜ ಬೆಟ್ಟ: ಲಕ್ಷ್ಮಿ ವರದರಾಜ ಸ್ವಾಮಿ ದೇವಾಲಯದ ನೆಲೆಯಾಗಿದೆ, ಚಾಮರಾಜನಗರದಿಂದ 5 ಕಿ.ಮೀ. ದೂರವಿದೆ.
ಇತರ ಆಕರ್ಷಣೆಗಳು
- ಕೊಳ್ಳೇಗಾಲ: ಕೊಳ್ಳೇಗಾಲ ಕರ್ನಾಟಕದ ಅತಿದೊಡ್ಡ ತಾಲೂಕಾಗಿತ್ತು (2017 ರಲ್ಲಿ ಹಣುರು ತಾಲೂಕು ರಚನೆಯಾಗುವ ವರೆಗೆ). ಎರಡು ರಾಷ್ಟ್ರೀಯ ಹೆದ್ದಾರಿಗಳು, ರಾ ಹೆ 212 ಮತ್ತು 206 ಕೊಳ್ಳೇಗಾಲ ಮೂಲಕ ಹಾದುಹೋಗುತ್ತವೆ. ಕೊಳ್ಳೇಗಾಲವು ಪ್ರಮುಖ ಬೆಟ್ಟಗಳು, ಜಲಪಾತಗಳು ಮತ್ತು ಹಚ್ಚ ಹಸಿರಿನಿಂದ ಕೂಡಿದೆ. ಇದು ಬೆಂಗಳೂರು / ಮೈಸೂರಿನಿಂದ ವಾರಾಂತ್ಯದ ವಿಹಾರಕ್ಕೆ ಅತ್ಯುತ್ತಮ ಸ್ಥಳವಾಗಿದೆ. ಶ್ರೀ ಮರುಳೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಚೌಡೇಶ್ವರಿ ದೇವಸ್ಥಾನ ಮತ್ತು ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿ ದೇವಸ್ಥಾನಗಳು ಕೊಳ್ಳೇಗಾಲದ ಪ್ರಮುಖ ದೇವಾಲಯಗಳಾಗಿವೆ. ಪರಿವಾರದವರ ಚವಾಡಿಯಲ್ಲಿನ ಚಿತ್ರಕಲೆ ಭೇಟಿ ಯೋಗ್ಯವಾಗಿದೆ.
- ಜೊಗ್ಚೆನ್ ಮಠ: ಚಾಮರಾಜನಗರದ ಬೌದ್ಧ ಮಠ, ಕೊಳ್ಳೇಗಾಲದಿಂದ 42 ಕಿ.ಮೀ. ದೂರದಲ್ಲಿದೆ http://www.dzogchen.org.in/