ಕುಮಾರಧಾರ ನದಿಯ ದಡದಲ್ಲಿರುವ ಕುಕ್ಕೆ ಸುಬ್ರಮಣ್ಯವು 5000 ವರ್ಷಗಳಷ್ಟು ಹಳೆಯದಾದ ದೇವಾಲಯವಾಗಿದೆ. ಕುಕ್ಕೆ ಸುಬ್ರಮಣ್ಯವು ‘ನಾಗರಾಧಾನೆ’ ಅಥವಾ ನಾಗ ದೇವರ ಪೂಜೆ ಮತ್ತು ಸರ್ಪ ದೋಷ ನಿವಾರಣೆಗೆ ಜನಪ್ರಿಯ ಸ್ಥಳವಾಗಿದೆ.
ಇತಿಹಾಸ: ಸಂತ ಪರಶುರಾಮ ರಚಿಸಿದ ಏಳು ಪವಿತ್ರ ಸ್ಥಳಗಳಲ್ಲಿ ಕುಕ್ಕೆ ಸುಬ್ರಮಣ್ಯ ಕೂಡ ಒಂದಾಗಿದೆ. ದೈವಿಕ ಸರ್ಪ ವಾಸುಕಿ ಗರುಡ (ಪೌರಾಣಿಕ ಪಕ್ಷಿ ಮತ್ತು ವಿಷ್ಣುವಿನ ಅಧಿಕೃತ ವಾಹನ) ಬೇಟೆಯಿಂದ ತಪ್ಪಿಸಿಕೊಳ್ಳಲು ಕುಕ್ಕೆ ಸುಬ್ರಮಣ್ಯದಲ್ಲಿ ಆಶ್ರಯ ಪಡೆದಿದ್ದನೆಂದು ನಂಬಲಾಗಿದೆ. ಕುಕ್ಕೇ ಸುಬ್ರಮಣ್ಯ ಬಳಿಯ ಕುಮಾರ ಪರ್ವತದಲ್ಲಿ ಭಗವಾನ್ ಕುಮಾರಸ್ವಾಮಿ ಮತ್ತು ಅವರ ಸಹೋದರ ಗಣೇಶ ರಾಕ್ಷಸರಾದ ತಾರಕ ಮತ್ತು ಶೂರಪದ್ಮಾಸುರರನ್ನು ಸಂಹರಿಸಿದ್ದಾರೆ ಎನ್ನಲಾಗಿದೆ. ವಿಜಯದ ನಂತರ, ಭಗವಾನ್ ಕುಮಾರಸ್ವಾಮಿ ಇಂದ್ರನ ಮಗಳು ದೇವಸೇನಳನ್ನು ವಿವಾಹವಾದ ಸ್ಥಳ ಕುಕ್ಕೆ ಸುಬ್ರಮಣ್ಯಕ್ಕೆ ಹತ್ತಿರದ ಕುಮಾರ ಪರ್ವತವಾಗಿದೆ. ಎಲ್ಲಾ ಪ್ರಮುಖ ದೇವರುಗಳು ಈ ವಿವಾಹಕ್ಕೆ ಸಾಕ್ಷಿಯಾಗಿ ಈ ಸ್ಥಳಕ್ಕೆ ದೈವಿಕ ಶಕ್ತಿಯನ್ನು ನೀಡಿದರು ಎಂದು ನಂಬಲಾಗಿದೆ.
ಜನಪ್ರಿಯ ಆಚರಣೆಗಳು: ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಸಿಕೊಡುವ ಎರಡು ಜನಪ್ರಿಯ ಪೂಜಾ ವಿಧಿಗಳೆಂದರೆ ಆಶ್ಲೇಷ ಬಲಿ (ಕರಿನಾಗನಿಂದ ರಕ್ಷಣೆ ಕೋರುವ ಪೂಜಾವಿಧಿಗಳು) ಮತ್ತು ಸರ್ಪ ದೋಶ ಪರಿಹಾರ (ನಾಗದೇವರ ಯಾವುದೇ ಶಾಪ ನಿವಾರಣೆಗಾಗಿ ನಡೆಸುವ ಪೂಜಾ ವಿಧಿ). ಈ ಆಚರಣೆಗಳನ್ನು ಆನ್‌ಲೈನ್‌ನಲ್ಲಿಯೂ ಕಾಯ್ದಿರಿಸಬಹುದಾಗಿದೆ.
ಹತ್ತಿರ: ಕುಕ್ಕೆ ಸುಬ್ರಮಣ್ಯ ಬಳಿಯ ಕುಮಾರ ಪರ್ವತವು ಜನಪ್ರಿಯ ಚಾರಣ ತಾಣವಾಗಿದೆ. ಕುಕ್ಕೆ ಸುಬ್ರಮಣ್ಯದೊಂದಿಗೆ ಧರ್ಮಸ್ಥಳ (55 ಕಿ.ಮೀ), ಮಡಿಕೇರಿ (75 ಕಿ.ಮೀ), ಬಿಸಿಲೆ ಘಾಟ್ (20 ಕಿ.ಮೀ) ಭೇಟಿ ನೀಡಬೇಕಾದ ಕೆಲವು ಆಕರ್ಷಣೆಗಳಾಗಿವೆ.
ತಲುಪುವುದು ಹೇಗೆ? ಕುಕ್ಕೆ ಸುಬ್ರಮಣ್ಯ ಬೆಂಗಳೂರಿನಿಂದ 280 ಕಿ.ಮೀ ಮತ್ತು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 105 ಕಿ.ಮೀ ದೂರದಲ್ಲಿದೆ. ಸುಬ್ರಮಣ್ಯ ರಸ್ತೆ ರೈಲು ನಿಲ್ದಾಣವು ಕುಕ್ಕೆ ಸುಬ್ರಮಣ್ಯದಿಂದ 12 ಕಿ.ಮೀ ದೂರದಲ್ಲಿದೆ. ಮಂಗಳೂರು ಅಥವಾ ಬೆಂಗಳೂರಿನಿಂದ ಕುಕ್ಕೆ ಸುಬ್ರಮಣ್ಯವನ್ನು ತಲುಪಲು ಸೀಮಿತ ಬಸ್ ಸೇವೆ ಲಭ್ಯವಿದೆ.
ವಸತಿ: ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸುತ್ತಹಲವು ಬಜೆಟ್ ಹೋಟೆಲ್‌ಗಳು ಲಭ್ಯವಿದೆ
ಅಧಿಕೃತ ವೆಬ್‌ಸೈಟ್: Kukke Subramanya Temple