Karnataka Tourism
GO UP
Image Alt

ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ, ತುಮಕೂರು

separator
  /  ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ, ತುಮಕೂರು

ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ, ತುಮಕೂರು

ಹಿಂದೂ ದೇವರಾದ ವಿಷ್ಣುವಿನ ಅವತಾರವಾದ ನರಸಿಂಹ ದೇವರಿಗೆ ಸಮರ್ಪಿತವಾಗಿರುವ ಈ ದೇವಾಲಯವು ತುಮಕೂರು ಪ್ರಧಾನ ಕಛೇರಿಯಿಂದ 20 ಕಿಮೀ ದೂರದಲ್ಲಿರುವ ಸೀಬಿ (ಸಿಬಿ) ಯಲ್ಲಿದೆ. ಈ ದೇವಾಲಯವನ್ನು ಹಿಂದಿನ ಕಾಲದ ಒಬ್ಬ ಪ್ರಸಿದ್ಧಿ ವ್ಯಾಪಾರಿಯಿಂದ ನಿರ್ಮಾಣವಾಗಿದೆ ಎಂದು ನಂಬಲಾಗಿದೆ. ವ್ಯಾಪಾರಿಯು ವ್ಯಾಪಾರ ನಿಮಿತ್ತ ಸಿಬಿ ಮೂಲಕ ಪಯಣಿಸುವಾಗ ಆಯಾಸಗೊಂಡು ಸಿಬಿಯಲ್ಲಿ ಒಂದು ಬಂಡೆಯ ಮೇಲೆ ವಿಶ್ರಾಂತಿಯನ್ನು ಪಡೆಯಲು ಮಲಗಿದನು. ಆಗ ನರಸಿಂಹ ಸ್ವಾಮಿ ಅವರ ಕನಸಿನಲ್ಲಿ ಕಾಣಿಸಿಕೊಂಡನು. ನರಸಿಂಹ ಸ್ವಾಮಿಯು ಈ ಸ್ಥಳದಲ್ಲಿ ತನ್ನ ಕನಸಿನಲ್ಲಿ ಬಂದುದರಿಂದ ಆ ವ್ಯಾಪಾರಿಯು ಇದು ಪೂಜನೀಯ ಸ್ಥಳವೆಂದು ನಂಬಿ ಅವರು ಇಲ್ಲಿ ಚಿಕ್ಕದಾದ ದೇವಾಲಯವನ್ನು ನಿರ್ಮಿಸಿದರು ಎಂಬ ಪ್ರತೀತಿ ಇದೆ. ಮುಂದೆ 18 ನೇ ಶತಮಾನದಲ್ಲಿ, ಮೈಸೂರು ರಾಜ ಟಿಪ್ಪು ಸುಲ್ತಾನನ ಆಸ್ಥಾನದಲ್ಲಿದ್ದ ಕಚೇರಿ ಕೃಷ್ಣಪ್ಪರ ಅವರ ಮಕ್ಕಳಾದ ಲಕ್ಷ್ಮೀನರಸಪ್ಪ, ಪುಟ್ಟಣ್ಣ ಮತ್ತು ನಲ್ಲಪ ಎಂಬ ಮೂವರು ಸಹೋದರರು ಈಗ ಇರುವ ದೊಡ್ಡ ದೇವಾಲಯದ ನಿರ್ಮಾಣವನ್ನು ಮಾಡಿದರು.

Seebi Narasimha Swamy Temple

ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ

ದ್ರಾವಿಡ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಈ ದೇವಾಲಯದ ನಿರ್ಮಾಣವು ಪೂರ್ಣಗೊಳ್ಳಲು ಸುಮಾರು 10 ವರ್ಷಗಳು ಬೇಕಾಯಿತು. ದೇವಸ್ಥಾನದ ಗೋಡೆಯ ಮೇಲೆ ರಾಮಾಯಣ, ಮಹಾಭಾರತ, ಭಗವದ್ ಗೀತೆ ಮತ್ತು ನರಸಿಂಹ ಪುರಾಣದ ಕಥೆಗಳನ್ನು ಚಿತ್ರಿಸಲಾಗಿದೆ ಮತ್ತು ಛಾವಣಿಗಳ ಮೇಲಿನ ಮ್ಯೂರಲ್ ಪೇಂಟಿಂಗ್‌ಗಳು ದೇವಾಲಯದ ಮುಖ್ಯಾಂಶವಾಗಿದೆ. ಇತಿಹಾಸಕಾರರು ಮತ್ತು ವಿಮರ್ಶಕರ ಪ್ರಕಾರ, ಈ ದೇವಾಲಯದಲ್ಲಿ ಚಿತ್ರಿಸಲಾದ ಭಿತ್ತಿಚಿತ್ರಗಳು ‘ಜಾನಪದ’ ಲಕ್ಷಣಗಳನ್ನು ಹೊಂದಿದ್ದು ಮೈಸೂರು ಕಾಲದ ಅತ್ಯುತ್ತಮ ಭಿತ್ತಿಚಿತ್ರಗಳಾಗಿವೆ. ಇಲ್ಲಿನ ವರ್ಣಚಿತ್ರಗಳು ಮೊಗಲ್ ಪ್ರಭಾವವನ್ನು ಸಹ ಚಿತ್ರಿಸುತ್ತವೆ.ದೊಡ್ಡ ಪ್ರದೇಶದಲ್ಲಿ ಹರಡಿರುವ ಪ್ರವೇಶದ್ವಾರವು ಮೂರು ಹಂತದ ಗೋಪುರವಾಗಿದ್ದು, ರಾಮ, ಕೃಷ್ಣ, ಗಣೇಶ ಮತ್ತು ಸಪ್ತಮಾತೃಕೆಯರ ಚಿಕ್ಕ ದೇವಾಲಯಗಳನ್ನು ಹೊಂದಿದೆ.

Manjarabad Fort


ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ

ಗೋಡೆಗಳ ಮೇಲಿನ ಆಕರ್ಷಕ ಮತ್ತು ಮೋಡಿಮಾಡುವ ಭಿತ್ತಿಚಿತ್ರಗಳನ್ನು ಮೂರು ಸಾಲುಗಳಾಗಿ ವಿಂಗಡಿಸಲಾಗಿದೆ. ಮೇಲಿನ ಸಾಲು ಬಾಲ ಕೃಷ್ಣನ ಕಥೆಗಳನ್ನು ಚಿತ್ರಿಸುತ್ತದೆ, ಅಂದರೆ ಭಗವಾನ್ ಕೃಷ್ಣನ ಬಾಲ್ಯದ ತುಂಟತನದ ಮತ್ತು ಆಸಕ್ತಿದಾಯಕ ತಮಾಷೆಯ ಕಥೆಗಳನ್ನು ಚಿತ್ರಿಸುತ್ತದೆ. ಎರಡನೇ ಸಾಲು ಮಹಾರಾಜ ಕೃಷ್ಣರಾಜ ಒಡೆಯರ್ III ರ ನಲ್ಲಪ್ಪನೊಂದಿಗಿನ ವೈಭವದ ದೃಶ್ಯವನ್ನು ಚಿತ್ರಿಸುತ್ತದೆ. ನಲ್ಲಪ್ಪ ದಿವಾನ್ ಕೃಷ್ಣಪ್ಪನವರ ಪುತ್ರರಲ್ಲಿ ಒಬ್ಬರು. ಕುತೂಹಲಕಾರಿಯಾಗಿ, ಮೂರನೇ ಸಾಲು ಹೈದರ್ ಅಲಿ ಮತ್ತು ಅವನ ಮಗ ಟಿಪ್ಪು ಸುಲ್ತಾನ್ ಮತ್ತು ಇತರ ಪ್ರಮುಖ ವ್ಯಕ್ತಿಗಳಾದ ಕಚೇರಿ ಕೃಷ್ಣಪ್ಪ, ರವಣಪ್ಪ ಮತ್ತು ವೆಂಕಟಪ್ಪನ ಆಸ್ಥಾನದ ಕಥೆಗಳನ್ನು ವಿವರಿಸುತ್ತದೆ. ಈ ದೇವಸ್ಥಾನದ ಹೆಚ್ಚಿನ ನವೀಕರಣ ಮತ್ತು ಪುನಃಸ್ಥಾಪನೆಯನ್ನು 18 ನೇ ಶತಮಾನದ ಕೊನೆಯಲ್ಲಿ ಅಥವಾ 19 ನೇ ಶತಮಾನದ ಆರಂಭದಲ್ಲಿ ಮಾಡಲಾಯಿತು.

Manjarabad Fort


ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ

ನೀವು ದೇವಾಲಯದ ಆವರಣದಲ್ಲಿರುವ ಗಜ ಪುಷ್ಕರಿಣಿ ಎಂದೂ ಕರೆಯಲ್ಪಡುವ ನೀರಿನ ಹೊಂಡವನ್ನು ನೋಡಲೇ ಬೇಕು. ದಂತಕಥೆಗಳು ಅಥವಾ ಪುರಾಣದ ಪ್ರಕಾರ, ಇದು ಗಜೇಂದ್ರನು ಮೋಕ್ಷ ಪಡೆದ ಸ್ಥಳವಾಗಿದೆ.
ಸೀಬಿ ನರಸಿಂಹ ದೇವಾಲಯವು ಭಾರತೀಯ ಪುರಾತತ್ವ ಸಮೀಕ್ಷೆಯ ಅಡಿಯಲ್ಲಿ ಸಂರಕ್ಷಿತ ಸ್ಮಾರಕವಾಗಿದೆ.

ದೇವಾಲಯದ ಸಮಯ

Manjarabad Fort

ಸೀಬಿ ನರಸಿಂಹ ಸ್ವಾಮಿ ದೇವಸ್ಥಾನ

ದೇವಾಲಯವು ಪ್ರತಿದಿನ ಬೆಳಿಗ್ಗೆ 8.30 ರಿಂದ ಸಂಜೆ 6.30 ರವರೆಗೆ ಸುಮಾರು 2-3 ಗಂಟೆಗಳ ಊಟದ ವಿರಾಮದೊಂದಿಗೆ ತೆರೆದಿರುತ್ತದೆ. ಪ್ರತಿದಿನ ಬೆಳಗ್ಗೆ 9 ಗಂಟೆಗೆ ಅಭಿಷೇಕ ನಡೆಯುತ್ತದೆ.

ತಲುಪುವುದು ಹೇಗೆ?

ಈ ದೇವಸ್ಥಾನವನ್ನು ನೀವು ಯಾವುದೇ ಮಾರ್ಗದಿಂದಲಾದರೂ ತಲುಪಬಹುದು. ರಸ್ತೆಗಳು ಉತ್ತಮವಾಗಿದ್ದು ಪ್ರಯಾಣಿಕರಿಗೆ ಅನುಕೂಲವಾಗಿವೆ.
ವಿಮಾನದ ಮೂಲಕ
ಈ ದೇವಾಲಯಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಈ ದೇವಾಲಯವು ವಿಮಾನ ನಿಲ್ದಾಣದಿಂದ ಸುಮಾರು 115 ಕಿಮೀ ದೂರದಲ್ಲಿದ್ದು ತಲುಪಲು ಸುಮಾರು 2 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಬೆಂಗಳೂರಿನಿಂದ ತುಮಕೂರಿಗೆ ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸಲು ಟ್ಯಾಕ್ಸಿ / ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು.
ರೈಲ್ವೆ ಮೂಲಕ
ತುಮಕೂರು ರೈಲು ನಿಲ್ದಾಣವು ಕರ್ನಾಟಕದ ಇತರ ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಈ ದೇವಾಲಯವು ತುಮಕೂರು ರೈಲು ನಿಲ್ದಾಣದಿಂದ 33 ಕಿಮೀ ದೂರದಲ್ಲಿದೆ ಮತ್ತು ರಸ್ತೆಯ ಮೂಲಕ ತಲುಪಲು ಸುಮಾರು 40 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನೀವು ಕ್ಯಾಬ್, ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆಯಬಹುದು ಅಥವಾ ರಾಜ್ಯ-ನಗರದ ಅಂತರ-ನಗರ ಬಸ್ ಸಾರಿಗೆ ಸೇವೆಗಳನ್ನು ತೆಗೆದುಕೊಳ್ಳಬಹುದು.
ರಸ್ತೆ ಸಾರಿಗೆ ಮೂಲಕ
ಈ ದೇವಾಲಯವು ತುಮಕೂರು ಜಿಲ್ಲೆಯ ತುಮಕೂರು ತಾಲ್ಲೂಕಿನಲ್ಲಿದೆ. ಈ ದೇವಾಲಯವು ತುಮಕೂರು ಬಸ್ ನಿಲ್ದಾಣವು ಸುಮಾರು 33 ಕಿಮೀ ದೂರದಲ್ಲಿದ್ದು ತಲುಪಲು ಸುಮಾರು 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನೀವು ಬೆಂಗಳೂರು ಮೆಜೆಸ್ಟಿಕ್ ಬಸ್ ನಿಲ್ದಾಣ/ರೈಲ್ವೆ ನಿಲ್ದಾಣದಿಂದ ಈ ದೇವಸ್ಥಾನವು 102 ಕಿಮೀ ದೂರದಲ್ಲಿದೆ. ನೀವು ಇಲ್ಲಿಗೆ ರಸ್ತೆ ಸಾರಿಗೆಯ ಮೂಲಕ ಪ್ರಯಾಣಿಸಲು ಬಯಸಿದರೆ, ಇದು ಸುಮಾರು 2 ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ .