Karnataka Tourism
GO UP
Image Alt

ಶ್ರೀ ರಂಗನಾಥಸ್ವಾಮಿ ದೇವಸ್ಥಾನ

separator
  /  ಶ್ರೀ ರಂಗನಾಥಸ್ವಾಮಿ ದೇವಸ್ಥಾನ

ಶ್ರೀ ರಂಗನಾಥಸ್ವಾಮಿ ದೇವಸ್ಥಾನ

ತಿರುಮಲೆ ಬೆಟ್ಟಗಳಲ್ಲಿ ನೆಲೆಗೊಂಡಿರುವ, 5 ಹಂತದ ರಾಜಗೋಪುರ ಹೊಂದಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು 16 ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ ಎಂದು ನಂಬಲಾಗಿದೆ. ತಿರುಮಲೆ ಬೆಟ್ಟಗಳು ಕರ್ನಾಟಕ ರಾಜ್ಯದ ರಾಮನಗರ ಜಿಲ್ಲೆಯ ಮಾಗಡಿ ಪಟ್ಟಣದಲ್ಲಿವೆ. ಈ ದೇವಾಲಯವು ರಂಗನಾಥ ಸ್ವಾಮಿಗೆ ಸಮರ್ಪಿತವಾಗಿದ್ದು, ದೇವರ ವಿಗ್ರಹವು ಸಾಮಾನ್ಯವಾಗಿ ಮಲಗಿರುವ ಸ್ಥಿತಿಯಲ್ಲಿರುತ್ತದೆ. ಇಲ್ಲಿರುವ ವಿಗ್ರಹವು ಸ್ವಯಂ ಉದ್ಭವವಾಗಿದೆ ಎಂಬ ನಂಬಿಕೆಯಿದ್ದು, ಭಕ್ತರು ಈ ದೇವರಲ್ಲಿ ಸಾಕಷ್ಟು ನಂಬಿಕೆಯನ್ನು ಹೊಂದಿದ್ದಾರೆ.
ಸ್ಥಳೀಯ ಸಂಪ್ರದಾಯಗಳು ಮತ್ತು ನಂಬಿಕೆಗಳ ಪ್ರಕಾರ, ರಂಗನಾಥಸ್ವಾಮಿ ವಿಗ್ರಹವು ಯಾವಾಗಲೂ ಮಲಗಿರುವ ಸ್ಥಿತಿಯಲ್ಲಿದ್ದು, ಈ ರೀತಿಯಲ್ಲಿ ಮಾತ್ರ ಪೂಜಿಸಲಾಗುತ್ತದೆ. ಆದಾಗ್ಯೂ, ರಥ ಮೆರವಣಿಗೆಯ ಸಮಯದಲ್ಲಿ ನಾಲ್ಕು ಕೈಗಳಲ್ಲಿ ಶಂಖ, ಗಧೆ, ಅಭಯ ಮತ್ತು ಚಕ್ರವನ್ನು ಹಿಡಿದು ನಿಂತಿರುವ ಪ್ರತಿಮೆಯೂ ಇದೆ. ರಂಗನಾಥಸ್ವಾಮಿಯ ಮಲಗಿದ ಸ್ಥಿತಿಯಲ್ಲಿನ ವಿಗ್ರಹದ ಪಕ್ಕದಲ್ಲಿ ಲಕ್ಷ್ಮಿ ದೇವಿ ಮತ್ತು ಪದ್ಮಾವತಿಯೂ ನೆಲೆಸಿದ್ದಾರೆ. ಈ ಪ್ರಾಚೀನ ದೇವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣೆಯಿಂದ ಸಂರಕ್ಷಿತ ಸ್ಮಾರಕವಾಗಿದ್ದು, ಬೆಂಗಳೂರು ಬಳಿಯ ಜನಪ್ರಿಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.
12ನೇ ಶತಮಾನದ ಆರಂಭದಲ್ಲಿ ಚೋಳರು ರಂಗನಾಥ ದೇವಾಲಯದ ಗರ್ಭಗುಡಿಯನ್ನು ಪರಿಶುದ್ಧಗೊಳಿಸಿದರು ಹಾಗೂ ಅಂದಿನಿಂದ ಸಾಕಷ್ಟು ನವೀಕರಣಗಳು ಮತ್ತು ವಿಸ್ತರಣೆಗಳಿಗೆ ದೇವಾಲಯವು ಒಳಗಾಗಿದೆ.
ರಂಗನಾಥ ದೇವಾಲಯದ ಗರ್ಭಗುಡಿಯನ್ನು 12 ನೇ ಶತಮಾನದ ಆರಂಭದಲ್ಲಿ ಚೋಳ ರಾಜನು ಮೊದಲ ಬಾರಿಗೆ ಪರಿಶುದ್ಧಗೊಳಿಸಿದನು ಹಾಗೂ ಅಂದಿನಿಂದ ದೇವಾಲಯವು ನವೀಕರಣ ಮತ್ತು ವಿಸ್ತರಣೆಗೆ ಒಳಗಾಗಿದೆ.
ದ್ರಾವಿಡ ಶೈಲಿಯಲ್ಲಿನ ವರ್ಣರಂಜಿತ ಮತ್ತು ಸುಂದರವಾಗಿ ಕೆತ್ತಲಾದ ಗೋಪುರವನ್ನು 16ನೇ ಶತಮಾನದಲ್ಲಿ ವಿಜಯನಗರದ ಚಕ್ರವರ್ತಿ ಕೃಷ್ಣ ದೇವರಾಯ ನಿರ್ಮಿಸಿದರು. ನಂತರ ಮೈಸೂರಿನ ರಾಜ ಜಯಚಾಮರಾಜೇಂದ್ರ ಒಡೆಯರ್ ಅದನ್ನು ನವೀಕರಿಸಿದರು.
ದೇವಾಲಯದ ರೋಮಾಂಚಕ ಹಾಗೂ ಬೆರಗುಗೊಳಿಸುವಂತಹ ಹೊರಭಾಗವು ಆಕರ್ಷಕ, ದೈವಿಕ ಕಳೆಯನ್ನು ಹೊಂದಿದ್ದು, ಪಾವಿತ್ರ್ಯತೆಯನ್ನು ಹೊಂದಿದೆ ಮತ್ತು ಸಾಕಷ್ಟು ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ದೇವಾಲಯದ ಹೊರಗಿನ ಪವಿತ್ರ ಮೆಟ್ಟಿಲು ಬಾವಿಯ ಬಳಿ ಭಕ್ತರು ಆಚರಣೆಗಳನ್ನು ನಡೆಸುತ್ತಾರೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ವಿಜಯನಗರ ಸಾಮ್ರಾಜ್ಯದ ಶಾಸನಗಳನ್ನು ಹೊಂದಿರುವ ದೇವಾಲಯದ ಹೊರಗಿನ ಧ್ವಜ ಸ್ತಂಭವು ನೋಡಲೇ ಬೇಕಾದದ್ದು.
ದೇವಾಲಯದ ಹೊರಗಿರುವ ಧ್ವಜಸ್ತಂಭವು ವಿಜಯನಗರ ಸಾಮ್ರಾಜ್ಯದ ಕಾಲದ ಕೆತ್ತನೆಗಳ ವೈಭವವನ್ನು ಪ್ರದರ್ಶಿಸುತ್ತದೆ.

ದೇವಾಲಯದ ಸಮಯ: ದೇವಾಲಯವು ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಸಂಜೆ 4.30 ರಿಂದ 7 ರವರೆಗೆ ತೆರೆದಿರುತ್ತದೆ. ಊಟದ ಸಮಯದಲ್ಲಿ ದೇವಾಲಯವನ್ನು ಮುಚ್ಚಲಾಗುತ್ತದೆ, ಆದಾಗ್ಯೂ, ಪ್ರವಾಸಿಗರು ಆ ಸಮಯದಲ್ಲಿ ತಲುಪಿದರೆ ಈ ಮಧ್ಯೆ ಇದರ ಹತ್ತಿರದ ಪ್ರದೇಶಗಳಿಗೆ ಭೇಟಿ ನೀಡಬಹುದು.
ಅವಶ್ಯಕ ಇರುವ ಸಮಯ: ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಬೆಂಗಳೂರಿನಿಂದ ಹೊರಟು ಮತ್ತೆ ವಾಪಸು ಬರಲು ಸುಮಾರು 4 ಗಂಟೆ ಅಥವಾ ಅರ್ಧ ದಿನ ಬೇಕಾಗುತ್ತದೆ. ನಿಮ್ಮ ಕೈಯಲ್ಲಿ ಹೆಚ್ಚುವರಿ ಸಮಯವಿದ್ದರೆ ನೀವು ಈ ಪ್ರದೇಶದಲ್ಲಿರುವ ಕೆಂಪೇಗೌಡ ಕೋಟೆ ಮತ್ತು ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಬಹುದು.
ತಲುಪುವುದು ಹೇಗೆ?
ಬೆಂಗಳೂರಿನ ಮೂಲಕ ಮಾಗಡಿ ಅಥವಾ ರಂಗನಾಥಸ್ವಾಮಿ ದೇವಸ್ಥಾನವನ್ನು ತಲುಪಬಹುದು. ದೇವಾಲಯವು ಕೇವಲ 60 ಕಿಮೀ ದೂರದಲ್ಲಿದೆ. ಬೆಂಗಳೂರನ್ನು ವಿಮಾನ, ರೈಲು ಮತ್ತು ರಸ್ತೆಯ ಸಾರಿಗೆಯ ಮೂಲಕ ಸುಲಭವಾಗಿ ತಲುಪಬಹುದು. ಈ ದೇವಾಲಯವು ರಾಮನಗರ ಜಿಲ್ಲೆಯ ಮುಖ್ಯ ಮಾಗಡಿ ಪಟ್ಟಣದಿಂದ ಕೇವಲ 2 ಕಿಮೀ ದೂರದಲ್ಲಿದೆ.