Karnataka logo

Karnataka Tourism
GO UP
Image Alt

ಭೀಮೇಶ್ವರ ದೇವಾಲಯ ನೀಲಗುಂದ

separator
  /  ಭೀಮೇಶ್ವರ ದೇವಾಲಯ ನೀಲಗುಂದ

ಭೀಮೇಶ್ವರ ದೇವಾಲಯ ನೀಲಗುಂದ

ಭೀಮೇಶ್ವರ ದೇವಾಲಯವು ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನೀಲಗುಂದ ಪಟ್ಟಣದಲ್ಲಿದೆ.

ದೇವಾಲಯದ ಹೊರಗಿರುವ ಮಾಹಿತಿ ಸೂಚನಾ ಫಲಕದ ಪ್ರಕಾರ, ಭೀಮೇಶ್ವರ ದೇವಾಲಯವನ್ನು 11 ನೇ ಶತಮಾನದ ಕೊನೆಯಲ್ಲಿ ಚಾಲುಕ್ಯ ರಾಜವಂಶದವರು ನೀಲಗುಂದ ಗ್ರಾಮದಲ್ಲಿ ನಿರ್ಮಿಸಿದ್ದಾರೆ. ನೀಲಗುಂದವು ಸೋಪ್‌ಸ್ಟೋನ್ ಕ್ವಾರಿಗಳಿಗೆ ಹೆಸರುವಾಸಿಯಾಗಿದ್ದು ಅಂದಿನ ಕಾಲದಿಂದಲೂ ಪ್ರಮುಖ ಗ್ರಾಮವಾಗಿದೆ.

Bhimeshvara Temple, Nilagunda

ದೇವಾಲಯವು ಮೂರು ಗರ್ಭಗೃಹಗಳನ್ನು ಒಳಗೊಂಡಿದೆ, ಪ್ರತಿಯೊಂದೂ ಉತ್ತರ, ಪಶ್ಚಿಮ ಮತ್ತು ದಕ್ಷಿಣದಲ್ಲಿ ಅಂತರಾಳವನ್ನು ಹೊಂದಿದ್ದು ಈ ಗರ್ಭಗೃಹಗಳ ಬಾಗಿಲುಗಳನ್ನು ಸುಂದರವಾಗಿ ಕೆತ್ತಲಾಗಿದೆ ಮತ್ತು ಸಭಾ ಮಂಟಪ ಮತ್ತು ಮುಖ ಮಂಟಪದ ಹತ್ತಿರ ತೆರೆಯಲಾಗಿದೆ.ಈ ದೇವಾಲಯವು ಆರ್ಕಿಯಾಲಜಿ ಸರ್ವೇ ಆಫ್ ಇಂಡಿಯಾದಿಂದ ರಕ್ಷಿಸಲ್ಪಟ್ಟಿದ್ದು ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿದೆ. ಸುಂದರವಾದ ಸರೋವರ ಮತ್ತು ನೆರೆಯ ಬೆಟ್ಟಗಳ ಸಮ್ಮೋಹನಗೊಳಿಸುವ ಭೂದೃಶ್ಯದ ಹಿನ್ನೆಲೆಯಲ್ಲಿ ನೆಲೆಗೊಂಡಿರುವ ಈ ದೇವಾಲಯಕ್ಕೆ ವಿವಿಧ ಹಬ್ಬದ ಸಂದರ್ಭಗಳಲ್ಲಿ ಸಹಸ್ರಾರು ಭಕ್ತರು ಭೇಟಿ ನೀಡುತ್ತಾರೆ.
ಭಗವಾನ್ ಶಿವನಿಗೆ ಸಮರ್ಪಿತವಾಗಿರುವ ಈ ದೇವಾಲಯಕ್ಕೆ ಭಕ್ತ ಜನರು ಭೇಟಿ ನೀಡುತ್ತಾರೆ, ಆದಾಗ್ಯೂ, ಯಾವುದೇ ಹಬ್ಬಗಳು ಅಥವಾ ಜಾತ್ರೆಯ ಸಮಯದಲ್ಲಿ ಇದು ಸಾಕಷ್ಟು ಜನದಟ್ಟಣೆಯಿಂದ ಕೂಡಿರುತ್ತದೆ. ಇಲ್ಲಿನ ಶಿವಲಿಂಗವನ್ನು ಪಾಂಡವರು ತಮ್ಮ ವನವಾಸದ ಸಮಯದಲ್ಲಿ ನಿರ್ಮಿಸಿದರು ಎಂದು ನಂಬಲಾಗಿದೆ.

Bhimeshvara temple Interiors
ಗೋಪುರ ಮತ್ತು ದೇವಾಲಯದ ಒಳಭಾಗಗಳು ಹೊಯ್ಸಳ ಶೈಲಿಯಲ್ಲಿದ್ದು ಸಂಕೀರ್ಣವಾದ ಕೆತ್ತನೆಗಳನ್ನು ಹೊಂದಿವೆ. ಇವು ಆ ಕಾಲದ ವಿಶೇಷ ಕರಕುಶಲತೆಯನ್ನು ಹೊಂದಿದ್ದು ಭಕ್ತರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಪಶ್ಚಿಮ ಗರ್ಭಗುಡಿಗೆ ಎದುರಾಗಿರುವ ಚಿಕ್ಕ ನಂದಿ ಬುಲ್ ಅನ್ನು ತಪ್ಪಿಸಿಕೊಳ್ಳಬಾರದು.ಗಣೇಶ, ಸಪ್ತಮಾತೃಕೆ ಮತ್ತು ಮಹಿಷಾಸುರಮರ್ಧಿನಿ ಮುಂತಾದ ವಿವಿಧ ಹಿಂದೂ ದೇವತೆಗಳ ಇತರ ಶಿಲ್ಪಗಳನ್ನು ದೇವಾಲಯದ ಒಳ ಗೋಡೆಗಳಲ್ಲಿ ಕಾಣಬಹುದಾಗಿದೆ.

ತಲುಪುವುದು ಹೇಗೆ?

ವಿಮಾನದ ಮೂಲಕ
ಇದಕ್ಕೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಸುಮಾರು 300 ಕಿಮೀ ದೂರದಲ್ಲಿದೆ ಮತ್ತು ರಸ್ತೆಯ ಮೂಲಕ ನೀಲಗುಂದವನ್ನು ತಲುಪಲು ಸುಮಾರು 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ರೇಲ್ವೆ ಮೂಲಕ
ದಾವಣಗೆರೆಯನ್ನು ಬೆಂಗಳೂರಿನ ಮೂಲಕ ತಲುಪಲು ರೇಲ್ವೆ ಉತ್ತಮ ಮಾರ್ಗವಾಗಿದೆ. ರೈಲ್ವೆ ಮೂಲಕ ದಾವಣಗೆರೆಯನ್ನು ತಲುಪಲು ಸುಮಾರು 4 ಗಂಟೆ 30 ನಿಮಿಷಗಳು ಮತ್ತು ರಸ್ತೆ ಮಾರ್ಗವಾಗಿ ಹರಪನಹಳ್ಳಿಗೆ ಇನ್ನೊಂದು ಗಂಟೆ ಬೇಕಾಗುತ್ತದೆ. ದಾವಣಗೆರೆಯು ಕರ್ನಾಟಕ ಮತ್ತು ನೆರೆಯ ರಾಜ್ಯಗಳ ಪ್ರಮುಖ ನಗರಗಳು ಮತ್ತು ಪಟ್ಟಣಗಳ ಮೂಲಕ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ.

ರಸ್ತೆ ಸಾರಿಗೆ ಮೂಲಕ
ಹರಪನಹಳ್ಳಿ ಗ್ರಾಮವನ್ನು ಬಸ್ ಮೂಲಕ ಅಥವಾ ಸ್ವಂತ ವಾಹನದ ಮೂಲಕ ರಸ್ತೆ ಸಾರಿಗೆ ಮೂಲಕ ತಲುಪಬಹುದು. ಕರ್ನಾಟಕದ ಬಹುತೇಕ ಪ್ರಮುಖ ಪಟ್ಟಣಗಳಿಂದ ದಾವಣಗೆರೆಗೆ ತಲುಪಲು ರಾಜ್ಯ ಸಾರಿಗೆ ಬಸ್ ಸೇವೆ ಉತ್ತಮ ಆಯ್ಕೆಯಾಗಿದೆ.

ದೇವಾಲಯ ತೆರೆಯುವ ಸಮಯ
ಎಲ್ಲ ದೇವಸ್ಥಾನಗಳಂತೆ ಭೀಮೇಶ್ವರ ದೇವಾಲಯವೂ ಸಹ ಬೆಳಿಗ್ಗೆ 5.30 ರಿಂದ ಸಾಯಂಕಾಲ 7 ಗಂಟೆಯವರೆಗೆ ತೆರೆದಿರುತ್ತದೆ.
ಪ್ರವೇಶ ಶುಲ್ಕ: ದೇವಾಲಯದಲ್ಲಿ ಯಾವುದೇ ಪ್ರವೇಶ ಶುಲ್ಕಗಳಿಲ್ಲ

ಚಿತ್ರ ಕ್ರೆಡಿಟ್‌ಗಳು: ಚೇತನ್ ಕುಮಾರ್ ಎನ್ ಕೆ