Karnataka Tourism
GO UP

ಕೆಳದಿ ರಾಮೇಶ್ವರ ದೇವಸ್ಥಾನ

separator
ಕೆಳಗೆ ಸ್ಕ್ರಾಲ್ ಮಾಡಿ

ಕೆಳದಿ ರಾಮೇಶ್ವರ ದೇವಾಲಯ ಒಂದು ರೀತಿಯ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ

ಕರ್ನಾಟಕವನ್ನು ದೇವಾಲಯಗಳ ನಾಡು ಎಂದು ಕರೆಯಬಹುದು, ತನ್ನದೇ ಆದ ವಿಶಿಷ್ಟ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ರಾಜ್ಯದ ಶ್ರೀಮಂತ ಪರಂಪರೆ ಪಾಂಡ್ಯರು, ಚೇರರು, ಚೋಳರು ಮತ್ತು ಪಲ್ಲವರ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಒಂದು ಅದ್ಭುತ ಕಲಾಕೃತಿಯೆಂದರೆ ಕೆಳದಿ ರಾಮೇಶ್ವರ ದೇವಸ್ಥಾನ. ಈ ಪಟ್ಟಣವನ್ನು ಒಮ್ಮೆ ವಿಜಯನಗರ ಸಾಮ್ರಾಜ್ಯದ ಭಾಗವಾದ ನಾಯಕರು ಆಳಿದರು. ಅದ್ಭುತವಾದ ದ್ರಾವಿಡ ಶೈಲಿಯ ವಾಸ್ತುಶಿಲ್ಪಕ್ಕೆ ಈ ದೇವಾಲಯವು ಅಸಾಧಾರಣ ಉದಾಹರಣೆಯಾಗಿದೆ. ದೇವಾಲಯವನ್ನು ನಿರ್ಮಿಸಿದ ಚೌಡಪ್ಪ ನಾಯಕ, ಅಂದವಾದ ಪ್ರೇರಣೀಯ ಸ್ಥಳವನ್ನು ಹುಟ್ಟುಹಾಕಲು ಪ್ರತಿ ಇಟ್ಟಿಗೆ ಮತ್ತು ಟೈಲ್ ಗಳನ್ನು ಕುಶಲತೆಯಿಂದ ಇರಿಸಿದ್ದಾರೆ.

ಪ್ರವೇಶದ್ವಾರವು ಮನೋಹರವಾಗಿದೆ , ಎರಡೂ ಬದಿಯಲ್ಲಿ ಮರದ ಕಂಬಗಳು ಅವುಗಳ ಮೇಲೆ ಸಂಕೀರ್ಣವಾದ ವಿವರಗಳಿವೆ, ಹೆಂಚಿನ ಛಾವಣಿಯನ್ನು(ಟೈಲ್ಡ್ ರೂಫ್ ) ಬೆಂಬಲಿಸುತ್ತದೆ. ಈ ದೇವಾಲಯದ ಒಳಗಿರುವ ರಚನೆಗಳು ಹಿಂದೂ ಪುರಾಣದ ಅನೇಕ ದೇವರುಗಳನ್ನು, ಕಮಲ ಮತ್ತು ಎಲೆಗಳಂತಹ ಹೂವಿನ ವಿಗ್ರಹಗಳನ್ನು ಮತ್ತು ಪೂಜಾ ಅಥವಾ ಆರಾಧನೆಗೆ ಅಗತ್ಯವಿರುವ ಇತರ ವಸ್ತುಗಳನ್ನು ಚಿತ್ರಿಸುತ್ತದೆ. ಕೆಳದಿ ರಾಮೇಶ್ವರ ದೇವಸ್ಥಾನದ ಮುಖ್ಯ ಸಂಕೀರ್ಣದಲ್ಲಿ ಪಾರ್ವತಿ, ರಾಮೇಶ್ವರ ಮತ್ತು ವೀರಭದ್ರನಿಗೆ ಸಮರ್ಪಿತವಾದ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯದಲ್ಲೂ ವಿವಿಧ ವಿನ್ಯಾಸಗಳು, ಕೆತ್ತನೆಯ ಶೈಲಿಗಳು ಮತ್ತು ವಾಸ್ತುಶಿಲ್ಪಗಳು ಇದೆ. ಸಿಂಹ, ಕುದುರೆ, ಹುಲಿ, ಆನೆ ಮುಂತಾದ ಭವ್ಯ ಜೀವಿಗಳ ರಚನೆಗಳನ್ನು ದೇವಾಲಯಗಳ ಗೋಡೆಗಳ ಮೇಲೆ ಮತ್ತು “ಗರುಡ” ಮತ್ತು “ಭೇರುಂಡ” ದಂತಹ ಪೌರಾಣಿಕ ಜೀವಿಗಳ ರಚನೆಗಳನ್ನು ಕಾಣಬಹುದು.

ಕೆಳದಿ ರಾಮೇಶ್ವರ ದೇವಸ್ಥಾನ ಸಮಯದ ಪರೀಕ್ಷೆಯಾಗಿ ನಿಂತಿದೆ, ಭೂತಕಾಲದ ಜ್ಞಾನ ಮತ್ತು ಭವಿಷ್ಯಕ್ಕೆ ಸ್ಫೂರ್ತಿ. ಈ ಪ್ರದೇಶವನ್ನು ವಿವಿಧ ಯುಗಗಳಲ್ಲಿ ಆಳಿದ ಚಕ್ರವರ್ತಿಗಳು ಎಲ್ಲ ಧಾರ್ಮಿಕ ರಚನೆಗಳು ಮತ್ತು ದೇವಾಲಯಗಳ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ. ವಿವಿಧ ಯುಗಗಳ ಕುಶಲಕರ್ಮಿಗಳು ವಾಸ್ತುಶಿಲ್ಪದ ಜ್ಞಾನವನ್ನು ಈ ಸ್ಮಾರಕಗಳು ಮತ್ತು ದೇವಾಲಯಗಳಲ್ಲಿ ತೋರಿದ್ದಾರೆ . ಕರ್ನಾಟಕವು ದೇವಾಲಯಗಳ ಭೂಮಿಯಾಗಿದ್ದು, ಅವುಗಳಲ್ಲಿ ಕೆಳದಿ ರಾಮೇಶ್ವರ ದೇವಾಲಯವು ಒಂದಾಗಿದೆ. ಮುಖ್ಯವಾಗಿ ಶಿವ ಮತ್ತು ಪಾರ್ವತಿಗೆ ಅರ್ಪಿತವಾದ ಈ ದೇವಾಲಯವು ಹಲವಾರು ವರ್ಷಗಳಿಂದ ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಈ ಉತ್ತಮ ವಾಸ್ತುಶಿಲ್ಪವನ್ನು ಸಂರಕ್ಷಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಕೆಳದಿಯ ಜನರು ಅತ್ಯುತ್ತಮ ಕೆಲಸ ಮಾಡಿದ್ದಾರೆ.

Tour Location