ಕಥೆ ಹೇಳುವ ಕಲೆ ಉತ್ಸಾಹ ಮತ್ತು ಸೃಜನಶೀಲತೆಯಿಂದ ಬರುತ್ತದೆ. ಕನ್ನಡಿಗರ ನರನಾಡಿಯಲ್ಲಿ ಕಲೆ ಮತ್ತು ಸಂಸ್ಕೃತಿ ಹಾಸು ಹೊಕ್ಕಾಗಿದೆ ಮತ್ತು ಕರ್ನಾಟಕಕ್ಕೆ ಭೇಟಿ ಕೊಡುವವರು ಇಲ್ಲಿನ ಕಲೆ, ಸಂಸ್ಕೃತಿಯ ಅನುಭವನನ್ನು ನೈಸರ್ಗಿಕವಾಗಿ ಆನಂದಿಸಬಹುದಾಗಿದೆ. ನಾಟಕ, ನೃತ್ಯ, ಸಂಗೀತ, ವೇಷ ಭೂಷಣ ಅಥವಾ ಜಾನಪದ ಕಲೆ, ಕುಣಿತಗಳ ಮೂಲಕ ನಾಡಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಇತಿಹಾಸ, ವೈವಿಧ್ಯತೆ ಮತ್ತು ವೈಭವತೆಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.