Karnataka logo

Karnataka Tourism
GO UP
Image Alt

ಹೊರನಾಡು – ಶ್ರೀ ಅನ್ನಪೂರ್ಣೇಶ್ವರಿ ದೇವಿ

separator
  /  ಹೊರನಾಡು – ಶ್ರೀ ಅನ್ನಪೂರ್ಣೇಶ್ವರಿ ದೇವಿ

ಹೊರನಾಡು – ಶ್ರೀ ಅನ್ನಪೂರ್ಣೇಶ್ವರಿ ದೇವಿ

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಕುರಿತು

ಪಶ್ಚಿಮ ಘಟ್ಟಗಳ ಸುಂದರವಾದ ಹಚ್ಚ ಹಸಿರಿನ ಭೂದೃಶ್ಯಗಳ ಮಧ್ಯದಲ್ಲಿರುವ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿಯ ದೈವಿಕ ದೇವಾಲಯವು 831 ಮೀ ಅಥವಾ ಸರಿಸುಮಾರು 2726 ಅಡಿ ಎತ್ತರದಲ್ಲಿದೆ. ಕಳಸದಿಂದ ಕೇವಲ 10 ಕಿಮೀ ದೂರದಲ್ಲಿ ಹೊರನಾಡು ಕಳಸ ತಾಲೂಕಿನ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಒಂದು ಸಣ್ಣ ಪಂಚಾಯತ್ ಗ್ರಾಮವಾಗಿದೆ. ಇಲ್ಲಿಗೆ ವರ್ಷವಿಡೀ ಯಾತ್ರಾರ್ಥಿಗಳು ಭೇಟಿ ನೀಡುತ್ತಾರೆ. ಭದ್ರಾ ನದಿಯ ದಡದಲ್ಲಿರುವ, ಮಲೆನಾಡು ಪ್ರದೇಶದಲ್ಲಿ ಪಶ್ಚಿಮ ಘಟ್ಟಗಳ ಮಾಂತ್ರಿಕ ಭೂದೃಶ್ಯಗಳಿಂದ ಆವೃತವಾಗಿರುವ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ನೆಲೆಯಾಗಿದೆ. ಹಲವಾರು ಶತಮಾನಗಳ ಹಿಂದೆ ಅಗಸ್ತ್ಯ ಮಹರ್ಷಿಗಳು ಅನ್ನಪೂರ್ಣೇಶ್ವರಿ ದೇವತೆಯ ಪ್ರತಿಷ್ಠಾಪನೆಯನ್ನು ಮಾಡಿದರು. ಅನ್ನಪೂರ್ಣೇಶ್ವರಿ ದೇವಿಯು ಸದಾಕಾಲ ಭಕ್ತರನ್ನು ಹರಸಿ ಸನ್ಮಂಗಳವನ್ನುಂಟು ಮಾಡುತ್ತಾಳೆ.
ಅನ್ನಪೂರ್ಣೇಶ್ವರಿ ದೇವತೆಯನ್ನು ಆಹಾರದ ದೇವತೆ ಎಂದು ನಂಬಲಾಗಿದೆ. ಹಿಂದೂ ಪುರಾಣದ ನಂಬಿಕೆಯಂತೆ ದೇವಿಗೆ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರೆ ಅವರ ಜೀವನದಲ್ಲಿ ಎಂದಿಗೂ ಆಹಾರದ ಕೊರತೆ ಉಂಟಾಗುವುದಿಲ್ಲ. ಅದಕ್ಕಾಗಿಯೇ ಈ ದೇವಾಲಯದಲ್ಲಿ ಭಕ್ತರಿಗೆ ಚಹಾ/ಕಾಫಿ ಮತ್ತು ತಿಂಡಿ ಸೇರಿದಂತೆ ಎಲ್ಲಾ ಮೂರು ಊಟಗಳನ್ನು ಅನ್ನಪ್ರಸಾದವಾಗಿ ಸಿಗುತ್ತದೆ. ದೇವಾಲಯವು ಧರ್ಮ, ಜಾತಿ, ಮತ, ಮತ್ತು ಭಾಷೆಯ ಭೇದವಿಲ್ಲದೆ ಪ್ರತಿಯೊಬ್ಬ ಭಕ್ತನನ್ನು ಸ್ವಾಗತಿಸುತ್ತದೆ. ಈ ದೇವಾಲಯವು ವರ್ಷವಿಡೀ ಭಕ್ತರಿಂದ ತುಂಬಿರುತ್ತದೆ, ಆದಾಗ್ಯೂ ನವರಾತ್ರಿಯ ಸಮಯದಲ್ಲಿ ಮತ್ತು ಅಕ್ಷಯ ತೃತಿಯ ದಿನದಂದು, ಜನಸಂದಣಿಯು ಅತ್ಯಧಿಕವಾಗಿರುತ್ತದೆ. ಈ ದೇವಾಲಯವನ್ನು ಯಾವಾಗ ನಿರ್ಮಿಸಲಾಯಿತು ಎಂಬುದಕ್ಕೆ ನಿಖರವಾದ ದಿನಾಂಕ ಲಭ್ಯವಿಲ್ಲ. ಆದಾಗ್ಯೂ ಇದು 8 ನೇ ಶತಮಾನದ್ದಾಗಿದೆ ಎಂದು ನಂಬಲಾಗಿದೆ. ದೇವಾಲಯದ ಭವ್ಯವಾದ ವಾಸ್ತುಶಿಲ್ಪ ಮತ್ತು ಸಕಾರಾತ್ಮಕ ಕಂಪನಗಳು ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ.

ಹೊರನಾಡು ಬಳಿ ಭೇಟಿ ನೀಡಬಹುದಾದ ಇತರ ಸ್ಥಳಗಳು

ಇಲ್ಲಿನ ದಟ್ಟವಾದ ಕಾಡುಗಳು, ಸುಂದರವಾದ ಭೂದೃಶ್ಯಗಳು, ರಮಣೀಯ ಕಣಿವೆಗಳು ಮತ್ತು ಜಲಪಾತಗಳು ಹೊರನಾಡು ಭೇಟಿಯನ್ನು ಇನ್ನಷ್ಟು ಆಹ್ಲಾದಕರವನ್ನಾಗಿಸುತ್ತದೆ. ಮಲೆನಾಡು ಪ್ರದೇಶವು ಪ್ರವಾಸಿಗರಿಗಾಗಿ ಇನ್ನೂ ಹೆಚ್ಚಿನ ಕೊಡುಗೆಗಳನ್ನು ಮತ್ತು ಭೇಟಿ ನೀಡಲೇಬೇಕಾದ ಸ್ಥಳಗಳನ್ನು ಹೊಂದಿದೆ. ನಿಮ್ಮ ಪ್ರವಾಸವನ್ನು ಸ್ಮರಣೀಯವಾಗಿಸಲು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಶೃಂಗೇರಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಉಡುಪಿ ಶ್ರೀ ಕೃಷ್ಣ ಮಠಗಳಿಗೆ ಸಹ ನೀವು ಭೇಟಿ ನೀಡಬಹುದು

ಕಳಸ ದೇವಸ್ಥಾನ – ಹೊರನಾಡುವಿನಿಂದ ಕೇವಲ 8 ಕಿಮೀ ದೂರದಲ್ಲಿರುವ ಶ್ರೀ ಕಾಳೇಶ್ವರ ದೇವಸ್ಥಾನ, ಕಳಸ ದೇವಸ್ಥಾನ ಎಂದು ಪ್ರಸಿದ್ಧವಾಗಿದೆ, ಇದು ಭದ್ರಾ ನದಿಯಿಂದ ಸುತ್ತುವರಿದ ಮಡಕೆಯ ಆಕಾರದ ದೇವಾಲಯವಾಗಿದೆ. ಈ ದೇವಾಲಯವು ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿದ್ದು, ಅಗಸ್ತ್ಯನಿಗೆ ಸಂಬಂಧಿಸಿದ ಅನೇಕ ಆಸಕ್ತಿದಾಯಕ ಕಥೆಗಳನ್ನು ಹೊಂದಿದೆ.

ಬಲ್ಲಾಳರಾಯನ ದುರ್ಗ – ಹೊರನಾಡುದಿಂದ ಕೇವಲ 34 ಕಿಮೀ ದೂರದಲ್ಲಿರುವ ಬಲ್ಲಾಳರಾಯನ ದುರ್ಗದಲ್ಲಿ ಭವ್ಯವಾದ ಕೋಟೆ ಇದೆ. ಇದನ್ನು 12 ನೇ ಶತಮಾನದಲ್ಲಿ ಹೊಯ್ಸಳರು ನಿರ್ಮಿಸಿದ್ದಾರೆ. ಇದು ಸಾಹಸ ಮತ್ತು ಪ್ರಕೃತಿ ಪ್ರಿಯರಿಗೆ ಸೂಕ್ತವಾದ ಸ್ಥಳವಾಗಿದೆ. ಬಲ್ಲಾಳರಾಯನ ದುರ್ಗವು ಖಂಡಿತವಾಗಿಯೂ ಛಾಯಾಗ್ರಾಹಕರಿಗೆ ಸಂತೋಷವನ್ನು ನೀಡುತ್ತದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ – ಭಾರತದ ಅತ್ಯುತ್ತಮ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿರುವ ಕುದುರೆಮುಖವು ಹೊರನಾಡುದಿಂದ ಕೇವಲ 55 ಕಿ.ಮೀ ದೂರದಲ್ಲಿದೆ. ಪ್ರವಾಸಿಗರು ಸುಲಭವಾಗಿ ಹೆಚ್ಚಿನ ತಡೆಗಳಿಲ್ಲದೇ ಭೇಟಿ ನೀಡಬಹುದಾಗಿದೆ. ಇದು ಅತ್ಯುತ್ತಮವಾದ ಪ್ರಕೃತಿ, ಬೆಟ್ಟಗಳು, ಪ್ರಾಣಿ ಮತ್ತು ಸಸ್ಯಗಳ ತಾಣವಾಗಿದೆ ಮತ್ತು ಕರ್ನಾಟಕದ ಎರಡನೇ ಅತಿ ಎತ್ತರದ ಶಿಖರದಿಂದ ಅಲಂಕರಿಸಲ್ಪಟ್ಟ ಕುದುರೆಮುಖವು ಖಚಿತವಾಗಿ ವನ್ಯಜೀವಿ ಪ್ರೇಮಿಗಳ ಆನಂದವಾಗಿದೆ.

ನೆನೆಪಿನಲ್ಲಿಡಬೇಕಾದುದು:
• ಪುರುಷರು ದೇವಸ್ಥಾನವನ್ನು ಪ್ರವೇಶಿಸುವ ಮೊದಲು ತಮ್ಮ ಶರ್ಟ್ ಅನ್ನು ತೆಗೆದುಹಾಕಬೇಕು ಮತ್ತು ಭುಜಗಳ ಮೇಲೆ ಶಾಲ್ ಅಥವಾ ಟಾವೆಲ್ ಅನ್ನು ಹಾಕಿಕೊಳ್ಳಬೇಕು. ದೇವಾಲಯದ ಆವರಣದಲ್ಲಿಯೂ ಈ ಟಾವೆಲ್‍ಗಳು ಲಭ್ಯವಿರುತ್ತದೆ.
• ಮಹಿಳೆಯರು ಸಾಂಪ್ರದಾಯಿಕವಾಗಿ ಉಡುಪುಗಳನ್ನು ಧರಿಸಿರಬೇಕು.
• ದೇವಸ್ಥಾನವು ಬೆಳಿಗ್ಗೆ 6.30 ರಿಂದ ಸಂಜೆ 9.30 ರವರೆಗೆ ತೆರೆದಿರುತ್ತದ
• ಅಕ್ಟೋಬರ್ ನಿಂದ ಮಾರ್ಚ್ ತಿಂಗಳ ಸಮಯವು ದೇವಾಲಯಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
• ದೇವಾಲಯದ ಭೇಟಿಗಾಗಿ ನಿಮಗೆ ಕನಿಷ್ಠ 2 ಗಂಟೆಗಳ ಅಗತ್ಯವಿದೆ.

ತಲುಪುವುದು ಹೇಗೆ?

ವಿಮಾನ ಮೂಲಕ

ಚಿಕ್ಕಮಗಳೂರು ಜಿಲ್ಲೆಯ ಒಂದು ಸಣ್ಣ ತಾಲೂಕಿನಲ್ಲಿರುವ ಹೊರನಾಡು, ಮಂಗಳೂರಿನಿಂದ 121 ಕಿಮೀ ದೂರದಲ್ಲಿದೆ. ಮಂಗಳೂರು ವಿಮಾನ ನಿಲ್ದಾಣವು ಹೊರನಾಡುವಿಗೆ ಹತ್ತಿರದ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣ ಆಗಿದೆ. ಬೆಂಗಳೂರು ವಿಮಾನ ನಿಲ್ದಾಣವು ಹೊರನಾಡುದಿಂದ ಸುಮಾರು 320 ಕಿ.ಮೀ ದೂರದಲ್ಲಿದೆ.

 

ರೇಲ್ವೆ ಮೂಲಕ

ಹೊರನಾಡು ಚಿಕ್ಕಮಗಳೂರು ಜಿಲ್ಲೆಯಿಂದ ಕೇವಲ 48 ಕೀಲೊ ಮೀಟರ್ ದೂರದಲ್ಲಿದೆ. ಹೊರನಾಡುವಿಗೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣವೆಂದರೆ ಬಂಟವಾಳ. ಇದು ಹೊರನಾಡುವಿನಿಂದ ಕೇವಲ 55 ಕೀಲೊ ಮೀಟರ್ ದೂರದಲ್ಲಿದೆ. ಬಂಟವಾಳದಿಂದ ಹೊರನಾಡುವನ್ನು ತಪ್ಪಲು ನಿಮಗೆ ಒಂದು ಗಂಟೆಯ ಅವಶ್ಯಕತೆ ಇದೆ. ಎರಡನೇ ಹತ್ತಿರದ ರೈಲು ನಿಲ್ದಾಣ ಎಂದರೆ ಕಬಕಪುತ್ತೂರು. ಮತ್ತು ಇದು 58 ಕಿಮೀ ದೂರದಲ್ಲಿದೆ ಮತ್ತು ಇಲ್ಲಿಗೆ ಸುಲಭವಾಗಿ ತಲುಪಬಹುದು.

ರಸ್ತೆ ಮೂಲಕ

ಹೊರನಾಡುವಿಗೆ ಇತರ ನಗರಗಳಿಂದ ಉತ್ತಮ ರಸ್ತೆ ಸಾರಿಗೆ ಸೌಲಭ್ಯವಿದೆ. ಇಲ್ಲಿ ರಾಜ್ಯದ ಸಾರ್ವಜನಿಕ ಸಾರಿಗೆ ಸೇವೆಗಳು, KSRTC ಸೇವೆಗಳು ಲಭ್ಯವಿದೆ. ಇದು ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಮಂಗಳೂರು ನಗರಗಳಿಂದ ಖಾಸಗಿ ಬಸ್ಸುಗಳ ಉತ್ತಮ ಸಂಪರ್ಕವನ್ನು ಹೊಂದಿದೆ. ಪ್ರಮುಖ ನಗರಗಳಿಂದ ಕ್ಯಾಬ್‌ಗಳು ಅಥವಾ ಟ್ಯಾಕ್ಸಿಗಳ ಮೂಲಕ ಹೊರನಾಡು ತಲುಪಬಹುದು.

ಬ್ಯಾನರ್ ಚಿತ್ರ ಕ್ರೆಡಿಟ್ಸ್: ರಜಿತ್ ಎಂಎಲ್

Screen Reader A- A A+