
ಕೊಡಚಾದ್ರಿ ಬೆಟ್ಟಗಳು
ಕೊಡಚಾದ್ರಿ ಬೆಟ್ಟಗಳು: ಕೊಡಚಾದ್ರಿ ಪಶ್ಚಿಮ ಘಟ್ಟದ ಚಾರಣ ಸ್ನೇಹಿ ಬೆಟ್ಟವಾಗಿದ್ದು, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರವಿರುವ ಕೊಡಚಾದ್ರಿ ಕರ್ನಾಟಕದ ಅತಿ ಎತ್ತರದ ಶಿಖರಗಳಲ್ಲೊಂದಾಗಿದೆ. ಸಂಸ್ಕ್ರತದ “ಕುಟಜಾ” ಎಂಬ ಪದದಿಂದ ಕೊಡಚಾದ್ರಿ ಹೆಸರು ಬಂದಿದೆ. ಕುಟಜಾ ಎಂದರೆ ಮಲ್ಲಿಗೆಯ ಬೆಟ್ಟ ಎಂದರ್ಥ.

ರಾಮನಗರದಲ್ಲಿ ಬಂಡೆ ಏರುವ ಸಾಹಸ
ರಾಮನಗರ ಜಿಲ್ಲೆಯು ಬೃಹದಾಕಾರದ ಬಂಡೆಗಳಿಗೆ ಹೆಸರುವಾಸಿಯಾಗಿದೆ. ರಾಮನಗರದಲ್ಲಿರುವ ರಾಮದೇವರ ಬೆಟ್ಟ ಸಾಹಸವನ್ನು ಪ್ರಯತ್ನಿಸುವವವರನ್ನು ಮತ್ತು ಪರ್ವತಾರೋಹಿಗಳನ್ನು ಆಕರ್ಷಿಸುತ್ತದೆ. ಬಂಡೆ ಆರೋಹಣ ಮತ್ತು ಹಗ್ಗವನ್ನು ಉಪಯೋಗಿಸಿಕೊಂಡು ಹತ್ತುವುದು (ರಾಪೆಲಿಂಗ್) ಚಟುವಟಿಕೆಗಳು ಸಾಹಸದ ಅರ್ಥವನ್ನು ನೀಡುತ್ತದೆ ಮತ್ತು ಒಬ್ಬರ ತಾಳ್ಮೆ ಮತ್ತು ಫಿಟ್ನೆಸ್ ಮಟ್ಟವನ್ನು ಪರೀಕ್ಷಿಸುತ್ತವೆ.