Karnataka logo

Karnataka Tourism
GO UP

ಬೀದರ್ ಕೋಟೆ

separator
ಕೆಳಗೆ ಸ್ಕ್ರಾಲ್ ಮಾಡಿ

ಬೀದರ್ ಕರ್ನಾಟಕದ ಉತ್ತರದ ತುದಿಯಲ್ಲಿರುವ ಕರ್ನಾಟಕದ ಕಿರೀಟ ಎಂದು ಕರೆಯಲ್ಪಡುವ  ಜಿಲ್ಲೆಯಾಗಿದೆ. ಬೀದರ್ ನಗರವು ಕೋಟೆ ಮತ್ತು ಗುರುದ್ವಾರಕ್ಕೆ ಹೆಸರುವಾಸಿಯಾಗಿದೆ.

ಇತಿಹಾಸ: ಬೀದರ್ 14ನೇ ಶತಮಾನದಲ್ಲಿ ಬಹಮನಿ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಬೀದರ್ ಕೋಟೆಯನ್ನು ಅಹ್ಮದ್ ಷಾ ವಾಲಿ ಬಹಮನಿ ನಿರ್ಮಿಸಿದ್ದಾರೆ. ಬೀದರ್ ಕೋಟೆಯನ್ನು 15 ನೇ ಶತಮಾನದಲ್ಲಿ ಸುಲ್ತಾನ್ ಅಹ್ಮದ್ ಷಾ- I ನವೀಕರಿಸಿದನು.

ಬೀದರ್ ಕೋಟೆಯಲ್ಲಿ ಏನು ನೋಡಬಹುದು?

  • ಇಸ್ಲಾಮಿಕ್ ಮತ್ತು ಪರ್ಷಿಯನ್ ವಾಸ್ತುಶಿಲ್ಪ
  • ಏಳು ಮುಖ್ಯ ದ್ವಾರಗಳು
  • ಲೋಹದ ಫಿರಂಗಿಗಳೊಂದಿಗೆ ಅಷ್ಟಭುಜಾಕೃತಿಯ ಆಕಾರದ 37 ಬುರುಜುಗಳು
  • ಮಸೀದಿಗಳು ಮತ್ತು ಮಹಲ್‌ಗಳು
  • ಮೂವತ್ತಕ್ಕೂ ಹೆಚ್ಚು ಇಸ್ಲಾಮಿಕ್ ಸ್ಮಾರಕಗಳು

ಭೇಟಿ ಸಮಯ: ಬೀದರ್ ಕೋಟೆ ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತೆರೆದಿರುತ್ತದೆ.

ಗಮನಿಸಿ: ಬೀದರ್‌ನಲ್ಲಿ ಬೇಸಿಗೆಯ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಬಹುದು. ನಿಮ್ಮ ಭೇಟಿಯ ವೇಳೆ ಸಾಕಷ್ಟು ನೀರು, ಛತ್ರಿ ಮತ್ತು ಇತರ ಅವಶ್ಯ ತಯಾರಿ ಅವಶ್ಯವಾಗಿದೆ. 

ತಲುಪುವುದು ಹೇಗೆ? ಬೀದರ್ ಕೋಟೆ ಬೆಂಗಳೂರಿನಿಂದ 700 ಕಿ.ಮೀ ದೂರದಲ್ಲಿದೆ. ಇತ್ತೀಚೆಗೆ ತೆರೆಯಲಾದ ಬೀದರ್ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (ಬೀದರ್ ಕೋಟೆಯಿಂದ 11 ಕಿ.ಮೀ) ಇದು ಬೆಂಗಳೂರಿನಿಂದ ದಿನಕ್ಕೆ ಒಂದು ಬಾರಿ ವಿಮಾನ ಯಾನವನ್ನು ಹೊಂದಿದೆ. ಹೈದರಾಬಾದ್ ವಿಮಾನ ನಿಲ್ದಾಣವು ಮುಂದಿನ ಅತ್ಯುತ್ತಮ ಆಯ್ಕೆಯಾಗಿದೆ, ಬೀದರ್ ನಿಂದ 150 ಕಿ.ಮೀ. ದೂರದಲ್ಲಿದೆ . ಬೀದರ್ ನಗರ ರೈಲು ನಿಲ್ದಾಣ ಬೀದರ್ ಕೋಟೆಯಿಂದ 3 ಕಿ.ಮೀ ದೂರದಲ್ಲಿದೆ. ಬೀದರ್ ತಲುಪಲು ಬೆಂಗಳೂರಿನಿಂದ ಬಸ್ಸುಗಳು ಮತ್ತು ರೈಲುಗಳು ಲಭ್ಯವಿದೆ.

ವಸತಿ: ಬೀದರ್ ನಗರವು ಹಲವು ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್‌ಗಳನ್ನು ಹೊಂದಿದೆ.

Tour Location

Leave a Reply

Accommodation
Meals
Overall
Transport
Value for Money