Karnataka logo

Karnataka Tourism
GO UP

ದೇವ‌ಬಾಗ್ ಕಡಲತೀರ, ಕಾರವಾರ

separator
ಕೆಳಗೆ ಸ್ಕ್ರಾಲ್ ಮಾಡಿ

ದೇವಬಾಗ್ ಉತ್ತರ ಕನ್ನಡ ಜಿಲ್ಲಾ ಕೇಂದ್ರ ಕಾರವಾರದ  ಅತ್ಯಂತ ಜನಪ್ರಿಯ ಕಡಲತೀರವಾಗಿದೆ. ದೇವ‌ಬಾಗ್ ಕಡಲತೀರ 20 ನೇ ಶತಮಾನದ ಆರಂಭದಲ್ಲಿ ಕಾರವಾರಕ್ಕೆ ಭೇಟಿ ನೀಡಿದ ಪ್ರಸಿದ್ಧ ಕವಿ ಶ್ರೀ ರವೀಂದ್ರನಾಥ ಟಾಗೋರರಿಗೆ ಸ್ಫೂರ್ತಿ ನೀಡಿದ ಸ್ಥಳವಾಗಿದೆ. ದೇವ‌ಬಾಗ್ ಕಡಲತೀರದಲ್ಲಿ ಹಲವು ಐಷಾರಾಮಿ ರೆಸಾರ್ಟ್ಗಳು ಲಭ್ಯವಿವೆ.

ಪ್ರವಾಸೀ ಆಕರ್ಷಣೆಗಳು

  • ಕುರುಮ‌ಗಡ ದ್ವೀಪಕ್ಕೆ ಭೇಟಿ ನೀಡಬಹುದು: ಕುರುಮಗಡ  ಕಾರವಾರ ಕರಾವಳಿಯ ಜನಪ್ರಿಯ ದ್ವೀಪವಾಗಿದ್ದು, ಆಮೆಯ  ಆಕಾರಕ್ಕೆ ಹೆಸರುವಾಸಿಯಾಗಿದೆ. ಕುರುಮಗಡ ದ್ವೀಪವನ್ನು ದೇವ‌ಬಾಗ್ ಕಡಲತೀರದಿಂದ ದೋಣಿ ಮೂಲಕ ಪ್ರವೇಶಿಸಬಹುದು ಮತ್ತು ಕಾರವಾರದಿಂದ ಅರ್ಧ ದಿನದ ವಿಹಾರಕ್ಕೆ ಸೂಕ್ತವಾಗಿದೆ.
  • ಜಲ ಕ್ರೀಡೆ: ಬಾಳೆಹಣ್ಣಿನ ದೋಣಿ ಸವಾರಿ, ಪ್ಯಾರಾಸೈಲಿಂಗ್ ಮತ್ತು ಜೆಟ್ಸ್ಕಿ ಸವಾರಿಗಳನ್ನು  ಸಾಮಾನ್ಯವಾಗಿ ದೇವ‌ಬಾಗ್ ಬೀಚ್‌ನಲ್ಲಿ ಖಾಸಗಿಯವರು ನಡೆಸುತ್ತಾರೆ
  • ಐಷಾರಾಮಿ ವಸತಿ: ದೇವ‌ಬಾಗ್‌ ಬೀಚ್‌ನ ಪಕ್ಕದಲ್ಲಿಯೇ ಉಳಿದುಕೊಳ್ಳಲು ಸಾಧ್ಯವಿದೆ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳ ದೇವ‌ಬಾಗ್‌ ಬೀಚ್ ರೆಸಾರ್ಟ್‌ ಹತ್ತಿರದಲ್ಲಿದೆ.
  • ಮಜಲಿ ಕಡಲತೀರಕ್ಕೆ ಭೇಟಿ ನೀಡಬಹುದು: ಮಜಲಿ ದೇವ‌ಬಾಗ್‌ನ ಉತ್ತರಕ್ಕೆ 2 ಕಿ.ಮೀ ದೂರದಲ್ಲಿರುವ ಜನಪ್ರಿಯ ಕಡಲತೀರ
  • ಸೂರ್ಯಾಸ್ತ: ದೇವ್‌ಬಾಗ್ ಕಡಲತೀರದಿಂದ ಸುಂದರ ಸೂರ್ಯಾಸ್ತವನ್ನು ನೋಡಬಹುದಾಗಿದೆ
  • ನರಸಿಂಹ ದೇವಸ್ಥಾನ: ದೇವ‌ಬಾಗ್‌ ಕಡಲತೀರದ ಪಕ್ಕದಲ್ಲಿಯೇ ಇರುವ ನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಬಹುದಾಗಿದೆ.
  • ಸದಾಶಿವಗಡ ಕೋಟೆ: ಕಾಳಿ ನದಿಯ ಉತ್ತರ ದಂಡೆಯಲ್ಲಿರುವ ದೇವ್‌ಬಾಗ್ ಕಡಲತೀರದಿಂದ  4 ಕಿ.ಮೀ ದೂರದಲ್ಲಿರುವ ಸದಾಶಿವಗಡ ಕೋಟೆ ಉತ್ತಮ ಸೂರ್ಯಾಸ್ತದ ನೋಟವನ್ನು ನೀಡುತ್ತದೆ. ಮೇಲೆ ದುರ್ಗಾ ದೇವಿ ದೇವಸ್ಥಾನವಿದೆ.
  • ಒಯ್ಸ್ಟರ್  ಬಂಡೆ ಮತ್ತು ದೀಪ ಸ್ಥ೦ಬ: ಕರಾವಳಿಯಿಂದ ಸ್ವಲ್ಪ ದೂರದಲ್ಲಿ ದ್ವೀಪವೊಂದರಲ್ಲಿದೆ, ವೇಗದ ದೋಣಿಗಳ ಮೂಲಕ ತಲುಪಬಹುದು

ಹತ್ತಿರದ ಇತರ ಆಕರ್ಷಣೆಗಳು: ಯಾಣ ಬಂಡೆಗಳು (80 ಕಿ.ಮೀ), ದಾಂಡೇಲಿ (100 ಕಿ.ಮೀ), ಅನ್ಶಿ ರಾಷ್ಟ್ರೀಯ ಉದ್ಯಾನ (50 ಕಿ.ಮೀ) ಮತ್ತು ಗೋಕರ್ಣ (66 ಕಿ.ಮೀ) ದೇವ‌ಬಾಗ್ ಬೀಚ್ ಜೊತೆಗೆ ಭೇಟಿ ನೀಡಬಹುದಾದ ಹತ್ತಿರದ ಸ್ಥಳಗಳಾಗಿವೆ.

ಭೇಟಿ: ಕಾರವಾರ ಬೆಂಗಳೂರಿನಿಂದ 520 ಕಿ.ಮೀ ಮತ್ತು ಮಂಗಳೂರಿನಿಂದ 271 ಕಿ.ಮೀ. ದೂರದಲ್ಲಿದೆ. ಗೋವಾ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಕಾರವಾರದಿಂದ 90 ಕಿ.ಮೀ). ಕಾರವಾರ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲ್ವೆ ನಿಲ್ದಾಣವನ್ನು ಹೊಂದಿದೆ. ಕರ್ನಾಟಕದ ಎಲ್ಲಾ ಭಾಗಗಳಿಂದ ಕಾರವಾರ ತಲುಪಲು ನಿಯಮಿತ ಬಸ್ ಸೇವೆ ಲಭ್ಯವಿದೆ. ದೇವ‌ಬಾಗ್ ಕಡಲತೀರ ಕಾರವಾರ ನಗರ ಕೇಂದ್ರದಿಂದ 9 ಕಿ.ಮೀ ದೂರದಲ್ಲಿದೆ ಮತ್ತು ಆಟೋ ಅಥವಾ ಟ್ಯಾಕ್ಸಿ ಬಳಸಿ ತಲುಪಬಹುದಾಗಿದೆ.

ವಸತಿ: ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳು ಮತ್ತು ಸ್ಟರ್ಲಿಂಗ್ ರೆಸಾರ್ಟ್‌ಗಳು ನಿರ್ವಹಿಸುವ ದೇವ್‌ಬಾಗ್ ಬೀಚ್ ರೆಸಾರ್ಟ್ ಎರಡು ಐಷಾರಾಮಿ ವಸತಿಯಾಗಿವೆ. ಕಾರವಾರ  ನಗರದಲ್ಲಿ ಅನೇಕ ಹೋಟೆಲ್‌ಗಳು ಮತ್ತು ಹೋಂ ಸ್ಟೇಗಳಿವೆ.

Tour Location

Leave a Reply

Accommodation
Meals
Overall
Transport
Value for Money