PATA ಟ್ರಾವೆಲ್ ಅವಾರ್ಡ್ಸ್ 2020 ರಲ್ಲಿ ಕರ್ನಾಟಕ ಪ್ರವಾಸೋದ್ಯಮ ಲೇಖನಗಳು ಇತಿಹಾಸ ಸೃಷ್ಟಿಸಿದೆ
ಸ್ಕ್ರಿಪ್ಟ್ ಯುವರ್ ಅಡ್ವೆಂಚರ್ ಎಂಬ ಅಭಿಯಾನಕ್ಕಾಗಿ ಕರ್ನಾಟಕ ಪ್ರವಾಸೋದ್ಯಮವು ಮಾರುಕಟ್ಟೆ ಅಭಿಯಾನದ (ರಾಜ್ಯ ಮತ್ತು ನಗರ-ಜಾಗತಿಕ) ವಿಭಾಗದಲ್ಲಿ PATA ಗೋಲ್ಡ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ವಾರ್ಷಿಕ PATA (ಪೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್) ಗೋಲ್ಡ್ ಅವಾರ್ಡ್ಸ್ ಏಷ್ಯಾ ಪೆಸಿಫಿಕ್ ಪ್ರವಾಸ ಮತ್ತು ಪ್ರವಾಸೋದ್ಯಮದಲ್ಲಿ ಅತ್ಯುತ್ತಮ ಸಾಧನೆಗಳನ್ನು ಆಚರಿಸುತ್ತದೆ. ಈ ಪ್ರಶಸ್ತಿಗಳು ವಿವಿಧ ವಿಭಾಗಗಳಲ್ಲಿ ಅಸಾಧಾರಣ ಸಾಧನೆಯನ್ನು ಗುರುತಿಸುತ್ತವೆ ಮತ್ತು ಏಷ್ಯಾ ಪೆಸಿಫಿಕ್‌ನ ಪ್ರವಾಸೋದ್ಯಮದ ಅತ್ಯುತ್ತಮ ಬಹುಮಾನವನ್ನು ನೀಡುತ್ತವೆ. ಈ ವರ್ಷ ಪ್ರಶಸ್ತಿ ಪ್ರಧಾನ ಸಮಾರಂಭವು COVID ಸಾಂಕ್ರಾಮಿಕ ರೋಗದಿಂದಾಗಿ 2020 ರ ಸೆಪ್ಟೆಂಬರ್ 24 ರಂದು ಸಾಧಾರಣವಾಗಿ ನಡೆಯಿತು .
ಒಂದೇ ರಾಜ್ಯ ಅನೇಕ ಪ್ರಪಂಚಗಳು ಎಂಬ ಹೇಳಿಕೆಗೆ ಸರಿಯಾಗಿ , ಕರ್ನಾಟಕವು ಪ್ರತಿಯೊಂದು ರೀತಿಯ ಪ್ರವಾಸಿಗರನ್ನು ತನ್ನತ್ತ ಸಳೆಯುತ್ತದೆ. ಪರಂಪರೆ, ಸಂಸ್ಕೃತಿ, ಪ್ರಕೃತಿ, ಕಡಲತೀರಗಳು ಅಥವಾ ವನ್ಯಜೀವಿಗಳನ್ನು; ನೀವು ಆನಂದಿಸಲು ಕರ್ನಾಟಕವು ಸಮೃದ್ಧವಾದ ಆಕರ್ಷಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ಅಭಿಯಾನವು ಹಂಪಿ, ಮಂಜರಾಬಾದ್ ಕೋಟೆ, ಕಬಿನಿ, ಮೈಸೂರು ಮತ್ತು ಓಂ ಬೀಚ್ ಅನ್ನು ಒಳಗೊಂಡ ರಾಜ್ಯದ 5 ಜನಪ್ರಿಯ ತಾಣಗಳ ಮೇಲೆ ಕೇಂದ್ರೀಕರಿಸಿದೆ. ಅನೇಕ ದೃಶ್ಯಗಳನ್ನು ವೈಮಾನಿಕ ಛಾಯಾಗ್ರಹಣದಿಂದ ಸಹ ಸೆರೆಹಿಡಿಯಲಾಗಿದೆ, ಇದು ಪ್ರವಾಸಿ ತಾಣಗಳನ್ನು ಸಂಪೂರ್ಣವಾಗಿ ಹೊಸ ದೃಷ್ಟಿಕೋನದಿಂದ ತೋರಿಸುತ್ತದೆ.
ಮುಖ್ಯ ಉದ್ದೇಶವು ಎಲ್ಲಾ ರೀತಿಯ ಪ್ರಯಾಣಿಕರಿಗೆ ಇಲ್ಲಿ ಲಭ್ಯವಿರುವ ವೈವಿಧ್ಯಮಯ ಅನುಭವಗಳನ್ನು ನೀಡುವುದು . ಕರ್ನಾಟಕದಲ್ಲಿ ಪ್ರವಾಸಿಗರ ಸಾಹಸವನ್ನು ಮಾಡಲು ತಮ್ಮದೇ ಆದ ಕಾರಣವನ್ನು ಕಂಡುಕೊಳ್ಳಲು ಈ ಪ್ರಯಾಣಿಕರನ್ನು ಆಕರ್ಶಿಸುವುದು. ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ಹಿಂದೆಂದೂ ನೋಡಿರದ ಅನಿಸಿಕೆಗಳನ್ನು ಹೊರತರುವುದು ಪ್ರತಿಯೊಬ್ಬ ಪ್ರಯಾಣಿಕರನ್ನು ಸೆಳೆಯುತ್ತದೆ. ಇವೆಲ್ಲದರ ಉದ್ದೇಶ ಪ್ರಯಾಣಿಕರು ಕರ್ನಾಟಕದಲ್ಲಿ ತಮ್ಮದೇ ಆದ ಮರೆಯಲಾಗದ ಅನುಭವವನ್ನು ದಾಖಲಿಸುವುದಾಗಿದೆ .