ಬಾಳೆಹಣ್ಣಿನ ಬನ್
ಮಂಗಳೂರು ಬಾಳೆಹಣ್ಣಿನ ಬನ್ ಕರಾವಳಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ತಿನಿಸು. ಬಾಳೆಹಣ್ಣಿನ ಬನ್ ಅನ್ನು ಮಾಗಿದ ಬಾಳೆಹಣ್ಣು, ಹಿಟ್ಟು ಮತ್ತು ಸಕ್ಕರೆಯಿಂದ ತಯಾರಿಸಲಾಗುತ್ತದೆ. ಕರಾವಳಿ ಕರ್ನಾಟಕಕ್ಕೆ ಭೇಟಿ ನೀಡಿದಾಗ ಬಾಳೆಹಣ್ಣಿನ ಬನ್ ರುಚಿ ನೋಡಬಹುದಾಗಿದೆ
ಕರ್ನಾಟಕ ಸಂಗೀತ
ಕರ್ನಾಟಕ ಸಂಗೀತವು ದಕ್ಷಿಣ ಭಾರತದ ವಿಶಿಷ್ಟವಾದ ಸಂಗೀತ ಪದ್ಧತಿಯಾಗಿದೆ. ಉತ್ತರ ಭಾರತ ಹಿಂದೂಸ್ತಾನಿ ಸಂಗೀತವನ್ನು ಅನುಸರಿಸಿದರೆ, ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಕರ್ನಾಟಕ ಸಂಗೀತ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ.
ಹುಲಿ ವೇಷ
ಹುಲಿ ವೇಷ ಕರಾವಳಿ ಕರ್ನಾಟಕ ಭಾಗದಲ್ಲಿ ಕಂಡು ಬರುವ ವಿಶಿಷ್ಟ ನೃತ್ಯ. ನವರಾತ್ರಿ ಹಬ್ಬದ ದಿನಗಳಲ್ಲಿ ಸ್ಥಳೀಯ ಯುವಕರು ಹುಲಿ ವೇಷವನ್ನು ಧರಿಸಿ ಕುಣಿದು ಸಾರ್ವಜನಿಕರನ್ನು ರಂಜಿಸುತ್ತಾರೆ.
ಗೊಂಬೆ ಆಟ
ಗೊಂಬೆ ಆಟ ಕರ್ನಾಟಕದಲ್ಲಿ ಕಂಡುಬರುವ ಒಂದು ವಿಶಿಷ್ಟ ಜಾನಪದ ಕಲೆಯಾಗಿದೆ. ಗೊಂಬೆಗಳಿಂದ ಮಾಡಿದ ಪಾತ್ರಧಾರಿಗಳನ್ನು ಬಳಸಿಕೊಂಡು ಕಥೆ ಹೇಳುವುದು ಗೊಂಬೆ ಆಟದ ವೈಶಿಷ್ಟ್ಯ. ಗೊಂಬೆ ಆಡಿಸುವ ಆಟಗಾರರು ಪರದೆಯ ಹಿಂದೆ ನಿಂತು ಅದೃಶ್ಯ ದಾರವನ್ನು ಬಳಸಿ ಗೊಂಬೆಗಳನ್ನು ನಿಯಂತ್ರಿಸುತ್ತಾರೆ ಮತ್ತು ಅವುಗಳಿಂದ ನಾಟಕ ನಡೆಸಿಕೊಡುತ್ತಾರೆ.