ಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕ
ಶ್ರವಣಬೆಳಗೊಳ ಮಹಾ ಮಸ್ತಕಾಭಿಷೇಕವು 12 ವರ್ಷಗಳಿಗೊಮ್ಮೆ ಆಚರಿಸಲಾಗುವ ಉತ್ಸವವಾಗಿದೆ. ಗೋಮಟೇಶ್ವರ (ಬಾಹುಬಲಿ) ಪ್ರತಿಮೆಯನ್ನು ಸ್ವಚ್ಛಗೊಳಿಸುವುದು ಮತ್ತು ಪೂಜಿಸುವುದನ್ನು ಮಹಾ ಮಸ್ತಕಾಭಿಷೇಕದ ಪ್ರಮುಖ ಆಚರಣೆಯಾಗಿದೆ.
ಪಟ್ಟದಕಲ್ಲು ನೃತ್ಯೋತ್ಸವ
ಪಟ್ಟದಕಲ್ಲು ನೃತ್ಯೋತ್ಸವವನ್ನು ಪ್ರತಿವರ್ಷ ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತದೆ. ಆಹ್ವಾನಿತ ನರ್ತಕರು ಪಟ್ಟದಕಲ್ಲಿನ ಪ್ರಸಿದ್ಧ ದೇವಾಲಯಗಳ ಹಿನ್ನೆಲೆಯಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ.
ಕನಕಗಿರಿ ಉತ್ಸವ
ಕನಕಗಿರಿ ಉತ್ಸವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕನಕಗಿರಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಹಬ್ಬವಾಗಿದೆ.
ಚಾಲುಕ್ಯ ಉತ್ಸವ
ಚಾಲುಕ್ಯ ಉತ್ಸವ ಉತ್ತರ ಕರ್ನಾಟಕದ ಐತಿಹಾಸಿಕ ನಗರಗಳಾದ ಬಾದಾಮಿ ಮತ್ತು ಐಹೊಳೆಯಲ್ಲಿ ನಡೆಯುವ ವಾರ್ಷಿಕ ಸಾಂಸ್ಕೃತಿಕ ಮತ್ತು ಪಾರಂಪರಿಕ ಉತ್ಸವವಾಗಿದೆ. ಚಾಲುಕ್ಯ ಉತ್ಸವವನ್ನು ಸಾಮಾನ್ಯವಾಗಿ ಫೆಬ್ರವರಿ ಆರಂಭದಲ್ಲಿಎರಡು ಅಥವಾ ಮೂರು ದಿನಗಳ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ,
ಲಕ್ಕುಂಡಿ ಉತ್ಸವ
ಲಕ್ಕುಂಡಿ ಉತ್ಸವ ಉತ್ತರ ಕರ್ನಾಟಕದ ಗದಗ ಬಳಿಯ ಲಕ್ಕುಂಡಿ ಪಟ್ಟಣದಲ್ಲಿ ನಡೆಯುವ ವಾರ್ಷಿಕ ಹಬ್ಬ. ಲಕ್ಕುಂಡಿ ಉತ್ಸವವನ್ನು ಪ್ರತಿವರ್ಷ ಫೆಬ್ರವರಿ / ಮಾರ್ಚ್‌ನಲ್ಲಿ ಆಚರಿಸಲಾಗುತ್ತದೆ.
ಮೈಸೂರು ಮಸಾಲೆ ದೋಸೆ
ಮಸಾಲೆ ದೋಸೆಯ ಇನ್ನೊಂದು ಜನಪ್ರಿಯ ವಿಧವಾಗಿದೆ ಮೈಸೂರು ಮಸಾಲೆ ದೋಸೆ. ಒಳಭಾಗದಲ್ಲಿ ಹಚ್ಚಿದ ಕೆಂಪು ಮೆಣಸು-ಬೆಳ್ಳುಳ್ಳಿ ಚಟ್ನಿಯೊಂದಿಗೆ ಮೈಸೂರು ಮಸಾಲೆ ದೋಸೆ ಸಾಮಾನ್ಯ ಮಸಾಲೆ ದೋಸೆಯಂತೆಯೇ ಇರುತ್ತದೆ.
ಹಂಪಿ ಉತ್ಸವ 2023
ಹಂಪಿ ಕರ್ನಾಟಕದ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾಗಿದ್ದು, ಹಿಂದಿನ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುತ್ತದೆ. ಪ್ರತಿ ವರ್ಷ ಹಂಪಿ ಉತ್ಸವವನ್ನು ಹಿಂದಿನ ಯುಗದ ವೈಭವವನ್ನು ನೆನಪಿಸಲು 2 ರಿಂದ 3 ದಿನಗಳ ಅವಧಿಯಲ್ಲಿ ಆಚರಿಸಲಾಗುತ್ತದೆ.
ವಿಟ್ಲ ಪಿಂಡಿ
ಕರಾವಳಿ ಕರ್ನಾಟಕದ ಉಡುಪಿ ನಗರದಲ್ಲಿ ವಿಟ್ಲ ಪಿಂಡಿ ಜನಪ್ರಿಯ ಹಬ್ಬವಾಗಿದೆ. ವಿಟ್ಲ ಪಿಂಡಿಯನ್ನು ಮೊಸರು ಕುಡಿಕೆ ಹಬ್ಬ ಎಂದೂ ಕರೆಯುತ್ತಾರೆ. ವಿಟ್ಲ ಪಿಂಡಿ ಹಬ್ಬವನ್ನು ಜನರು ಶ್ರೀಕೃಷ್ಣನ ಬಾಲ್ಯದ ತುಂಟಾಟಗಳನ್ನು ನೆನಪಿಸಿಕೊಳ್ಳಲು ಶ್ರೀಕೃಷ್ಣ ಜನ್ಮಾಷ್ಟಮಿ ಸಮಯದಲ್ಲಿ ಆಚರಿಸಲಾಗುತ್ತದೆ. ಇದು ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ.
ಉಡುಪಿ ಪರ್ಯಾಯ ಉತ್ಸವ
ಉಡುಪಿ ಪರ್ಯಾಯ ಉತ್ಸವವು ಕರಾವಳಿ ಕರ್ನಾಟಕದ ಉಡುಪಿಯಲ್ಲಿ ನಡೆಯುವ ದ್ವೈವಾರ್ಷಿಕ ಹಬ್ಬವಾಗಿದೆ. ಉಡುಪಿ ಶ್ರೀ ಕೃಷ್ಣ ದೇವಾಲಯದ ನಿರ್ವಹಣೆಯನ್ನು ಉಡುಪಿಯ ಅಷ್ಟ ಮಠಗಳಲ್ಲಿ ಒಂದರಿಂದ ಇನ್ನೊಂದಕ್ಕೆ ಹಸ್ತಾಂತರಿಸುವುದನ್ನು ಪರ್ಯಾಯ ಉತ್ಸವದ ಮೂಲಕ ಆಚರಿಸಲಾಗುತ್ತದೆ.
ಕಂಬಳ
ಕಂಬಳವು ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ಜನಪ್ರಿಯವಾಗಿರುವ ಕೋಣಗಳ ಓಟದ ಸ್ಪರ್ಧೆಯಾಗಿದೆ. ಕಂಬಳ ಗ್ರಾಮಸ್ಥರಿಗೆ ಅದ್ಭುತ ಕ್ರೀಡಾ ಮತ್ತು ಮನರಂಜನಾ ಕಾರ್ಯಕ್ರಮವಾಗಿದ್ದು ಪ್ರವಾಸಿಗರು ಮತ್ತು ಛಾಯಾಗ್ರಾಹಕರೂ ಉತ್ಸಾಹದಿಂದ ಕಂಬಳಕ್ಕೆ ಸಾಕ್ಷಿಯಾಗುತ್ತಾರೆ.