Karnataka Tourism
GO UP
Ragi Mudde

ರಾಗಿ ಮುದ್ದೆ

separator
  /  ರಾಗಿ ಮುದ್ದೆ

ರಾಗಿ ಮುದ್ದೆ ಮಧ್ಯ ಕರ್ನಾಟಕ ಜಿಲ್ಲೆಗಳಲ್ಲಿ ಪ್ರಧಾನ ಊಟವಾಗಿದೆ. ರಾಗಿ ಮುದ್ದೆ ಪೌಷ್ಟಿಕ ಆಹಾರವಾಗಿದ್ದು ಅದನ್ನು ಸೇವಿಸುವ ವಿಧಾನ ವಿಶಿಷ್ಟವಾಗಿದೆ (ಜಗಿಯುವ ಬದಲಿಗೆ ನುಂಗಲಾಗುತ್ತದೆ).

ರಾಗಿ ಮುದ್ದೆ ಹೇಗೆ ತಯಾರಿಸಲಾಗುತ್ತದೆ?

ರಾಗಿ ಮುದ್ದೆ ರಾಗಿ ಹಿಟ್ಟು ಮತ್ತು ನೀರಿನಿಂದ ತಯಾರಿಸಲಾಗುತ್ತದೆ. ರಾಗಿ ಹಿಟ್ಟು ಮತ್ತು ನೀರನ್ನು ಬೆರೆಸಿ ಒಲೆ ಮೇಲೆ ಇಟ್ಟು ಕುದಿಸಲಾಗುತ್ತದೆ.  ನೀರು ಆವಿಯಾದಂತೆ ಉತ್ತಮವಾದ ಪೇಸ್ಟ್ ರೂಪುಗೊಳ್ಳುತ್ತದೆ.  ನಿಯಮಿತವಾಗಿ ಕೋಲಿನಿಂದ ಕದಡುವ ಮೂಲಕ ಅಗತ್ಯಕ್ಕಿಂತ ಹೆಚ್ಚು ಗಟ್ಟಿಯಾಗದಂತೆ ನೋಡಿಕೊಳ್ಳಲಾಗುತ್ತದೆ. ಚೆನ್ನಾಗಿ ಬೆಂದ ಮೇಲೆ ಸ್ವಲ್ಪ ತಣ್ಣಗಾಗಲು ಬಿಟ್ಟು ಟೆನ್ನಿಸ್ ಚೆಂಡಿನ ಆಕಾರವನ್ನು ಕೈಯಿಂದ ನೀಡಲಾಗುತ್ತದೆ. ಇಡೀ ಮುದ್ದೆಯನ್ನು ಬಿಸಿ ಬಿಸಿಯಾಗಿ ಬಡಿಸಲಾಗುತ್ತದೆ.

ರಾಗಿ ಮುದ್ದೆ ರುಚಿಯಲ್ಲಿ ಸಪ್ಪೆ. ಆದ್ದರಿಂದ ರಾಗಿ ಮುದ್ದೆಗೆ ಮಸಾಲೆಯುಕ್ತ ಸಾರು (ಬಸ್ಸಾರು) ಅಥವಾ ಸಾಂಬಾರಿನೊಂದಿಗೆ ಬಡಿಸಲಾಗುತ್ತದೆ.ತಿನ್ನುವವರು ರಾಗಿ ಮುದ್ದೆಯ ಒಂದು ಸಣ್ಣ ಭಾಗವನ್ನು ತೆಗೆದುಕೊಂಡು ಅದನ್ನು ಸಾರಿನಲ್ಲಿ ಚೆನ್ನಾಗಿ ಅದ್ದಿ ನಂತರ ಜಗಿಯದೆ ನುಂಗುವುದು ರಾಗಿ ಮುದ್ದೆ ಸೇವಿಸುವ ಪ್ರಸಿದ್ಧ ವಿಧಾನವಾಗಿದೆ. 

ರಾಗಿ ಮುದ್ದೆ ಎಲ್ಲಿ ಸಿಗುತ್ತದೆ?

ರಾಗಿ ಮುದ್ದೆ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಖಾನಾವಳಿಗಳಲ್ಲಿ ಸಾಮಾನ್ಯವಾಗಿ ಸಿಗುತ್ತದೆ. ರಾಗಿ ಮುದ್ದೆ ಕರ್ನಾಟಕದಾದ್ಯಂತ ಆಯ್ದ ಉಪಾಹಾರ ಗೃಹಗಳಲ್ಲಿ ಸಿಗುತ್ತದೆ. ರಾಗಿ ಮುದ್ದೆಗೆ ಲಭ್ಯವಿರುವ ಹತ್ತಿರದ ರೆಸ್ಟೋರೆಂಟ್‌ಗಳನ್ನು ಗುರುತಿಸಲು ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ.