GO UP
Image Alt

ಪುಳಿಯೋಗರೆ

separator
  /  ಪುಳಿಯೋಗರೆ

ಪುಳಿಯೋಗರೆ ಕರ್ನಾಟಕದ ಜನಪ್ರಿಯ ಖಾದ್ಯವಾಗಿದೆ. ಅನ್ನದಿಂದ ತಯಾರಿಸುವ ಪುಳಿಯೋಗರೆ ರುಚಿಯಲ್ಲಿ ಸ್ವಲ್ಪ ಹುಳಿಯಿದ್ದು ಬೆಳಗಿನ ತಿಂಡಿ, ಮಧ್ಯಾಹ್ನದ ಊಟದ ಸಮಯ ಹೆಚ್ಚಾಗಿ ಸೇವಿಸಲಾಗುತ್ತದೆ.

ತಯಾರಿ: ಬೇಯಿಸಿದ ಸಣ್ಣ ಅಕ್ಕಿ ಮತ್ತು ಪುಳಿಯೋಗರೆ ಮಿಶ್ರಣವು ಪುಳಿಯೋಗರೆಯ ಮುಖ್ಯ ಪದಾರ್ಥಗಳಾಗಿವೆ. ಹುರಿದ ಬೇಳೆ, ಮೆಣಸಿನಕಾಯಿ ಮತ್ತು ಮಸಾಲೆಗಳನ್ನು ರುಬ್ಬುವ ಮೂಲಕ ಪುಳಿಯೋಗರೆ ಮಿಶ್ರಣವನ್ನು ತಯಾರಿಸಲಾಗುತ್ತದೆ, ನಂತರ ಅದಕ್ಕೆ ಹುಣಸೆಹಣ್ಣಿನ ರಸ ಮತ್ತು ಬೆಲ್ಲ ಸೇರಿಸಲಾಗುತ್ತದೆ. ಪುಳಿಯೋಗರೆ ಮಿಶ್ರಣವನ್ನು (ಪುಳಿಯೋಗರೆ ಪೇಸ್ಟ್ ಅಥವಾ ಗೊಜ್ಜು ಎಂದೂ ಕರೆಯುತ್ತಾರೆ) ನಂತರ ಬೇಯಿಸಿದ ಅನ್ನಕ್ಕೆ  ಸೇರಿಸಲಾಗುತ್ತದೆ ಮತ್ತು ಚೆನ್ನಾಗಿ ಮಿಶ್ರಣ ಮಾಡಲಾಗುತ್ತದೆ.

ಪುಳಿಯೋಗರೆಯನ್ನು  ಹೆಚ್ಚಾಗಿ ಮಸಾಲೆಯುಕ್ತ ತೆಂಗಿನಕಾಯಿ ಚಟ್ನಿಯೊಂದಿಗೆ ನೀಡಲಾಗುತ್ತದೆ. ಪುಳಿಯೊಗರೆ ಜೊತೆಗೆ ಹಪ್ಪಳ  / ಸೆಂಡಿಗೆ ಇದ್ದರೆ  ಉತ್ತಮ ಜೊತೆಯಾಗುತ್ತದೆ. 

ಪುಳಿಯೋಗರೆ ಎಲ್ಲಿ ಸಿಗುತ್ತದೆ? ಪುಳಿಯೋಗರೆ ಸಾಮಾನ್ಯವಾಗಿ ಹೆಚ್ಚಿನ ದರ್ಶಿನಿಗಳು, ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿನ ಉಪಾಹಾರ ಗೃಹಗಳಲ್ಲಿ ಸಿಗುತ್ತದೆ

ಬೆಂಗಳೂರಿನ ಬಸವನಗುಡಿಯಲ್ಲಿರುವ ಪುಳಿಯೋಗರೆ ಪಾಯಿಂಟ್ ಪುಳಿಯೋಗರೆಗಾಗಿ ಹೆಸರುವಾಸಿಯಾಗಿರುವ  ವಿಶೇಷ ಉಪಾಹಾರ ಗೃಹವಾಗಿದೆ. ಪುಳಿಯೋಗರೆ  ಮಿಶ್ರಣವು ಸೂಪರ್ ಮಾರ್ಕೆಟ್ ಮತ್ತು ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿರುತ್ತದೆ, ಇದನ್ನು ಬಳಸಿಕೊಂಡು ಮನೆಯಲ್ಲೇ  ಪುಳಿಯೋಗರೆ ತಯಾರಿಸಲು ಸಾಧ್ಯವಿದೆ.

ಕರ್ನಾಟಕದ ಹಲವಾರು ದೇವಾಲಯಗಳು ಪುಳಿಯೋಗರೆಯನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡುತ್ತವೆ.

.