Karnataka Tourism
GO UP
Nagamandala

ನಾಗಮಂಡಲ

separator
  /  ನಾಗಮಂಡಲ

ನಾಗಾರಾಧನೆ ಎಂದೂ ಕರೆಯಲ್ಪಡುವ ನಾಗಮಂಡಲವು ನಾಗ ದೇವರ ಗೌರವಾರ್ಥ ನಡೆಸಲಾಗುವ ಬಹು ದಿನಗಳ ಹಬ್ಬ ಮತ್ತು ಪೂಜಾ ಕಾರ್ಯಕ್ರಮವಾಗಿದೆ. ನಾಗಮಂಡಲ ವನ್ನು ಸಾಮಾನ್ಯವಾಗಿ ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ.

ಹಾವುಗಳ ಬಗ್ಗೆ, ವಿಶೇಷವಾಗಿ ನಾಗರಾಜನ ಬಗ್ಗೆ ಗೌರವವನ್ನು ತೋರಿಸಲು ಮತ್ತು ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ನಾಗ ಮಂಡಲವನ್ನು ನಡೆಸಲಾಗುತ್ತದೆ.

ನಾಗಮಂಡಲದ ಪ್ರಮುಖ ಮುಖ್ಯಾಂಶಗಳು

  • ನಾಗಬನಗಳು: ನಾಗ ಮಂಡಲ ಆಚರಣೆಯು (Nagamandala) ನಾಗಬನ ಅಥವಾ ಹಾವಿನ ಹುತ್ತದ ಸುತ್ತ ಕೇಂದ್ರೀಕರಿಸಲ್ಪಡುತ್ತದೆ. ಕರಾವಳಿ ಜಿಲ್ಲೆಯ ಹೆಚ್ಚಿನ ತೋಟ, ಕಾಡುಗಳಲ್ಲಿ ಸಣ್ಣ ನಾಗಬನವಿರುತ್ತದೆ. 
  • ಆಚರಣೆ: ನಾಗ ಮಂಡಲ ಗಂಡು ಮತ್ತು ಹೆಣ್ಣು ಹಾವಿನ ಮಿಲನವನ್ನು ಆಚರಿಸುತ್ತದೆ. ಆಚರಣೆಗಳನ್ನು ಇಬ್ಬರು ಪುರೋಹಿತರು ನಡೆಸುತ್ತಾರೆ, ಒಬ್ಬರು ಗಂಡು ಹಾವಿನ ಪಾತ್ರ ನಿರ್ವಹಿಸಿದರೆ ಇನ್ನೊಬ್ಬರು ಹೆಣ್ಣು ಹಾವಿನ ಪಾತ್ರ ವಹಿಸುತ್ತಾರೆ. ನೃತ್ಯ, ಹಾವಿನಂತ ಚಲನೆ ಮತ್ತು ಪೂಜಾ ವಿಧಿ ವಿಧಾನಗಳನ್ನು ನಡೆಸಲಾಗುತ್ತದೆ. ಕೆಲವು ಆಚರಣೆಗಳು ಮುಂಜಾನೆ ತನಕ ಮುಂದುವರಿಯುತ್ತವೆ.
  • ಅಲಂಕಾರಗಳು: ನಾಗಬನ ಸುತ್ತಮುತ್ತಲಿನ ಪ್ರದೇಶಗಳನ್ನು ನೈಸರ್ಗಿಕ ಬಣ್ಣಗಳು ಮತ್ತು ವಿನ್ಯಾಸಗಳಿಂದ ವ್ಯಾಪಕವಾಗಿ ಅಲಂಕರಿಸಲಾಗುತ್ತದೆ. ತೀವ್ರವಾದ ಶಾಖದಿಂದ ಸ್ವಲ್ಪ ಬಿಡುವು ನೀಡಲು ತೆಂಗಿನ ಗರಿಗಳಿಂದ ಮಾಡಿದ ‘ಚಪ್ಪರ’ ಹಾಕಲಾಗುತ್ತದೆ.

ಹೆಚ್ಚಿನ ನಾಗ ಮಂಡಲ ಕಾರ್ಯಕ್ರಮಗಳನ್ನು ಸ್ಥಳೀಯ ಪ್ರಾಯೋಜಕರ ಬೆಂಬಲದೊಂದಿಗೆ ನಡೆಸಲಾಗುತ್ತದೆ. ಕಾರ್ಯಕ್ರಮ ಹಲವಾರು ದಿನಗಳವರೆಗೆ (ಸಾಮಾನ್ಯವಾಗಿ ೧೨ ದಿನ) ನಡೆಯುತ್ತದೆ ಮತ್ತು ಪ್ರತಿದಿನ ಸಾವಿರಾರು ಅತಿಥಿಗಳಿಗೆ ಭೋಜನ ವ್ಯವಸ್ಥೆ ಒಳಗೊಂಡಿರುತ್ತದೆ, ಆದ್ದರಿಂದ ನಾಗಮಂ ಡಲ ಸ್ವಲ್ಪ ದುಬಾರಿ ಆಚರಣೆಯಾಗಿದೆ.

ನಾಗಮಂಡಲವನ್ನು ಎಲ್ಲಿ ನೋಡಬಹುದು?

ನಾಗಮಂಡಲ ಕಾರ್ಯಕ್ರಮದ ವಿವರಗಳನ್ನು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತದೆ. ಕರಾವಳಿ ಕರ್ನಾಟಕದಲ್ಲಿದ್ದಾಗ ಮುಂಬರುವ ಯಾವುದೇ ನಾಗಮಂಡಲ ಕಾರ್ಯಕ್ರಮಕ್ಕಾಗಿ ಸ್ಥಳೀಯ ಪತ್ರಿಕೆಗಳನ್ನು ನೋಡಬಹುದಾಗಿದೆ ಅಥವಾ ನಿಮ್ಮ ಆತಿಥೇಯರಿಂದ ಸಹಾಯ ಪಡೆಯಬಹುದಾಗಿದೆ. ನಾಗ ಮಂಡಲ ಎಲ್ಲರಿಗೂ ಮುಕ್ತವಾಗಿದೆ ಮತ್ತು ಎಲ್ಲಾ ಸಂದರ್ಶಕರಿಗೆ ಭೋಜನ ಮತ್ತು ಪ್ರಸಾದವನ್ನು ನೀಡಲಾಗುತ್ತದೆ.