ದಾವಣಗೆರೆ ಬೆಣ್ಣೆ ದೋಸೆ ಉತ್ತರ ಕರ್ನಾಟಕದ ದಾವಣಗೆರೆ ನಗರದಲ್ಲಿ ಮೊದಲು ಪರಿಚಯಿಸಲ್ಪಟ್ಟ ಜನಪ್ರಿಯ ದೋಸೆಯಾಗಿದೆ. ದಾವಣಗೆರೆ ಬೆಣ್ಣೆ ದೋಸೆಯಲ್ಲಿ ಉದಾರ ಪ್ರಮಾಣದ ಬೆಣ್ಣೆ ಬಳಸುವುದು ವಿಶಿಷ್ಟ ರುಚಿ, ಪರಿಮಳ ನೀಡುತ್ತದೆ. ಈ ಕಾರಣದಿಂದ ಸಾದಾ ದೋಸೆಗಿಂತ ದಾವಣಗೆರೆ ಬೆಣ್ಣೆ ದೋಸೆಗೆ ಬೇಡಿಕೆ ಹೆಚ್ಚು.
ದಾವಣಗೆರೆ ಬೆಣ್ಣೆ ದೋಸೆಯನ್ನು ಹೇಗೆ ಮಾಡಲಾಗುತ್ತದೆ?
ದಾವಣಗೆರೆ ಬೆಣ್ಣೆ ದೋಸೆಗೆ ಬೇಕಾದ ಹಿಟ್ಟನ್ನು ಇತರ ದೋಸೆ ಹಿಟ್ಟುಗಳಂತೆ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲಾಗುತ್ತದೆ. ರಾತ್ರಿಯಿಡಿ ಹುಳಿ ಹಿಡಿದ ದೋಸೆ ಹಿಟ್ಟನ್ನು ಬಿಸಿ ಕಾವಲಿಯ ಮೇಲೆ ಗರಿಗರಿಯಾಗಿ ಹುಯ್ದು ದೋಸೆ ತಯಾರಿಸಲಾಗುತ್ತದೆ. ಬಿಸಿ ಬಿಸಿ ದೋಸೆಯ ಮೇಲೆ ಬೆಣ್ಣೆಯ ತುಣುಕನ್ನು ಹಾಕಲಾಗುತ್ತದೆ ಮತ್ತು ದೋಸೆ ಮೇಲ್ಮೈ ಬಿಸಿಯಾಗಿರುವುದರಿಂದ ಬೆಣ್ಣೆಯ ತುಂಡು ಬೇಗನೆ ಕರಗಿ ವಿಶಿಷ್ಟ ಪರಿಮಳ ಮತ್ತು ರುಚಿ ನೀಡುತ್ತದೆ.
ವಿಧಗಳು: ದಾವಣಗೆರೆ ಬೆಣ್ಣೆ ದೋಸೆಯನ್ನು ಬೆಣ್ಣೆ ಖಾಲಿ ದೋಸೆ ಮತ್ತು ಬೆಣ್ಣೆ ಮಸಾಲೆ ದೋಸೆ ಮತ್ತಿತರ ಮಾದರಿಯಲ್ಲಿ ತಯಾರಿಸಬಹುದಾಗಿದೆ.
ದಾವಣಗೆರೆ ಬೆಣ್ಣೆ ದೋಸೆಯನ್ನು ಸಾಮಾನ್ಯವಾಗಿ ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರಿನೊಂದಿಗೆ ನೀಡಲಾಗುತ್ತದೆ.
ಉದ್ದದ ದೋಸೆ: ಕೆಲವು ಉಪಾಹಾರ ಗೃಹಗಳು ಅಸಾಧಾರಣವಾಗಿ ಉದ್ದ ಗಾತ್ರದ ದೋಸೆಗಾಗಿ ಹೆಸರುವಾಸಿಯಾಗಿವೆ. 3 ರಿಂದ 4 ಅಡಿ ಉದ್ದ ಇರುವ ಒಂದು ದೋಸೆ ಇಡೀ ಕುಟುಂಬಕ್ಕೆ ಸಾಕಾಗುತ್ತದೆ.
ದಾವಣಗೆರೆ ಬೆಣ್ಣೆ ದೋಸೆಯನ್ನು ಎಲ್ಲಿ ಸವಿಯಬಹುದು?
ದಾವಣಗೆರೆ ಬೆಣ್ಣೆ ದೋಸೆ ಸವಿಯಲು ಪ್ರಯತ್ನಿಸಲು ಉತ್ತಮ ನಗರ ದಾವಣಗೆರೆ (ಬೆಂಗಳೂರಿನ ಉತ್ತರಕ್ಕೆ 260 ಕಿ.ಮೀ). ಬೆಂಗಳೂರು, ಮೈಸೂರು ಮತ್ತು ಮಂಗಳೂರು ಸೇರಿದಂತೆ ಕರ್ನಾಟಕದ ಅನೇಕ ನಗರಗಳಲ್ಲಿ ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್‌ಗಳಿದ್ದು ದಾವಣಗೆರೆ ಬೆಣ್ಣೆ ದೋಸೆ ಸವಿಯಲು ಸಿಗುತ್ತವೆ.