Karnataka Tourism
GO UP
Thatte Idli

ತಟ್ಟೆ ಇಡ್ಲಿ

separator
  /  ತಟ್ಟೆ ಇಡ್ಲಿ

ತಟ್ಟೆ ಇಡ್ಲಿ ಇಡ್ಲಿಯ ಜನಪ್ರಿಯ ರೂಪಾಂತರವಾಗಿದೆ. ಸಾಮಾನ್ಯ ಇಡ್ಲಿ ಚಿಕ್ಕದಾಗಿದ್ದು ತೆಳ್ಳಗಿದ್ದರೆ ತಟ್ಟೆ ಇಡ್ಲಿ ಸುತ್ತಳತೆ ಮತ್ತು ದಪ್ಪದಲ್ಲಿ ದೊಡ್ಡದಾಗಿರುತ್ತದೆ ಮತ್ತು ಅದನ್ನು ವೃತ್ತಾಕಾರದ ತಟ್ಟೆಯಲ್ಲಿ ಬೇಯಿಸುವುದರಿಂದ ಈ ಹೆಸರು ಪಡೆದುಕೊಂಡಿದೆ. 

ತಟ್ಟೆ ಇಡ್ಲಿಯನ್ನು ಹೇಗೆ ತಯಾರಿಸಲಾಗುತ್ತದೆ?

ಇಡ್ಲಿ ಹಿಟ್ಟು ಪಡೆಯಲು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಹಲವಾರು ಗಂಟೆಗಳ ಕಾಲ ನೀರಿನಲ್ಲಿ ನೆನೆಸಲಾಗುತ್ತದೆ. ಅವು ಮೃದುವಾದ ನಂತರ, ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ರುಬ್ಬಿ ಹಿಟ್ಟು ತಯಾರಿಸಲಾಗುತ್ತದೆ. ಈ ಹಿಟ್ಟನ್ನು ಹುದುಗಲು ಬರಲು ರಾತ್ರಿಯಿಡಿ ಬಿಡಲಾಗುತ್ತದೆ  ಹುದುಗಿಸಿದ ಹಿಟ್ಟು ಸಾಕಷ್ಟು ಗಾಳಿಯ ಗುಳ್ಳೆಗಳೊಂದಿಗೆ ಪರಿಮಾಣದಲ್ಲಿ ದ್ವಿಗುಣಗೊಳ್ಳುತ್ತದೆ. ಮರುದಿನ, ಉಪ್ಪನ್ನು ಸೇರಿಸಲಾಗುತ್ತದೆ ಮತ್ತು ವೃತ್ತಾಕಾರದ ತಟ್ಟೆಯಲ್ಲಿ ಸುರಿದು ಬೇಯಿಸಲಾಗುತ್ತದೆ. ಹೋಟೆಲುಗಳಲ್ಲಿ ಇಡ್ಲಿ ಬೇಯಿಸಲು ವಿಶೇಷ ಪಾತ್ರೆಗಳನ್ನು ಬಳಸಲಾಗುತ್ತದೆ. ೧೦-೧೫ ನಿಮಿಷ ಹಬೆಯಲ್ಲಿ ಬೆಂದ ನಂತರ  ಇಡ್ಲಿ ಸವಿಯಲು  ಸಿದ್ದವಾಗುತ್ತದೆ 

ಒಂದು ತಟ್ಟೆ ಇಡ್ಲಿ ಪರಿಮಾಣದಲ್ಲಿ  2-3 ಸಾಮಾನ್ಯ ಗಾತ್ರದ ಇಡ್ಲಿಗಳಿಗೆ ಸಮನಾಗಿರುತ್ತದೆ. ಆದ್ದರಿಂದ ತಟ್ಟ-ಇಡ್ಲಿಯ ಬೆಲೆ ಒಂದು ಸಾಮಾನ್ಯ ಇಡ್ಲಿಗಿಂತ ಸ್ವಲ್ಪ ಹೆಚ್ಚಿರುತ್ತದೆ.

ತಟ್ಟೆ ಇಡ್ಲಿಯನ್ನು ತೆಂಗಿನಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಬಡಿಸಲಾಗುತ್ತದೆ. ಇಡ್ಲಿಯನ್ನು ಆನಂದಿಸುವಾಗ ಒಂದು ಕಪ್ ಫಿಲ್ಟರ್ ಕಾಫಿ ಕುಡಿಯುವುದು ಬಹುತೇಕ ಕನ್ನಡಿಗರ ಅಭ್ಯಾಸ.

ತಟ್ಟೆ ಇಡ್ಲಿಯನ್ನು ಎಲ್ಲಿ ಸವಿಯಬಹುದು?

ಬ್ರಾಹ್ಮಣರ ತಟ್ಟೆ ಇಡ್ಲಿ ರೆಸ್ಟೋರೆಂಟ್‌ಗಳು ಬೆಂಗಳೂರಿನಲ್ಲಿ ತಟ್ಟೆ ಇಡ್ಲಿಯನ್ನು ಸವಿಯಲು ಜನಪ್ರಿಯ ತಾಣಗಳಾಗಿವೆ. ಬೆಂಗಳೂರು  ಮತ್ತು ಮೈಸೂರು ನಡುವಿನ ರಾಜ್ಯ ಹೆದ್ದಾರಿಗಳಲ್ಲಿರುವ ಉಪಾಹಾರ ಗೃಹಗಳು ಸೇರಿದಂತೆ ರಾಜ್ಯದಾದ್ಯಂತ ವಿವಿಧ  ದರ್ಶಿನಿ, ಹೊಟೇಲುಗಳಲ್ಲಿ ತಟ್ಟೆ ಇಡ್ಲಿಯನ್ನು ಮಾರಾಟ ಮಾಡಲಾಗುತ್ತದೆ.  ತಟ್ಟೆ ಇಡ್ಲಿ ಸಾಮಾನ್ಯವಾಗಿ ಬೆಳಗಿನ ಉಪಾಹಾರ ಸಮಯ ಮತ್ತು ಸಂಜೆಯ  ಸಮಯದಲ್ಲಿ ಲಭ್ಯವಿರುತ್ತದೆ.