Karnataka Tourism
GO UP
Image Alt

ಚೌ-ಚೌ ಬಾತ್

separator
  /  ಚೌ-ಚೌ ಬಾತ್

ಚೌ-ಚೌ ಬಾತ್ – ಉಪ್ಪಿಟ್ಟು ಮತ್ತು ಶಿರಾದ ರುಚಿಕರ ಉಪಹಾರ

ಕರ್ನಾಟಕವು ಹಲವು ಪಾಕ ವೈವಿಧ್ಯಗಳನ್ನು ಹೊಂದಿದೆ. ಇಲ್ಲಿ ನೀವು ಹಲವಾರು ರೀತಿಯ ರುಚಿಕರವಾದ ಆಹಾರ ತಿಂಡಿಗಳನ್ನು ಸವಿಯಬಹುದು. ಅದರಲ್ಲಿ ಚೌಚೌ ಬಾತ್ ಸಹ ಒಂದು.ಚೌ-ಚೌ ಬಾತ್ ಕರ್ನಾಟಕದ ಅತ್ಯಂತ ಪ್ರಸಿದ್ಧ ಮತ್ತು ರುಚಿಕರವಾದ ಉಪಹಾರಗಳಲ್ಲಿ ಒಂದಾಗಿದೆ. ಇದು ಖಾರಾಬಾತ್ ಮತ್ತು ಕೇಸರಿಬಾತ್ ಗಳ ಮಿಶ್ರಣ ಅಥವಾ ಉಪಮಾ,ಉಪ್ಪಿಟ್ಟು ಮತ್ತು ಶಿರಾದ ಸಂಯೋಜನೆ ಆಗಿದೆ.
ಉಪ್ಪಿಟ್ಟು ಮತ್ತು ಶಿರಾ ಎರಡನ್ನೂ ರವೆಯಿಂದಲೇ ತಯಾರಿಸಲಾಗುತ್ತದೆ. ಉಪ್ಪಿಟ್ಟು ಅಥವಾ ಖಾರಾಬಾತ್ ಅನ್ನು ಎರಡು ವಿಧದ ಚಟ್ನಿಗಳೊಂದಿಗೆ ಬಡಿಸುತ್ತಾರೆ. ಉಪ್ಪಿಟ್ಟು ಅಥವಾ ಖಾರಾಬಾತ್ ಅನ್ನು ರವೆ ಮತ್ತು ಸಾಕಷ್ಟು ತರಕಾರಿಗಳು, ಮಸಾಲೆ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಮತ್ತು ಕೇಸರಿಬಾತ್ ಅಥವಾ ಶಿರಾ ಅನ್ನು ಸಕ್ಕರೆ,ತುಪ್ಪ, ಎಲಕ್ಕಿ , ದ್ರಾಕ್ಷಿಗಳನ್ನು , ಕೆಲವು ಹಣ್ಣುಗಳನ್ನು ಸೇರಿಸಿ ತಯಾರಿಸಲಾಗುತ್ತದೆ.

ಸಾಂಪ್ರದಾಯಿಕವಾಗಿ ಚೌಚೌ ಬಾತ್ ಅನ್ನು ಮನೆಯಲ್ಲಿ ಮಾಡುತ್ತಿರಲಿಲ್ಲ.ಆದರೆ ಈ ಸಂಯೋಜನೆಯು ಹೋಟೇಲಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದ್ದರಿಂದ ಈಗ ಚೌಚೌ ಬಾತ್ ಅನ್ನು ಮನೆಯಲ್ಲಿಯೇ ಮಾಡುತ್ತಾರೆ. ಇದು ಉಪ್ಪಿಟ್ಟು ಮತ್ತು ಶಿರಾದ ಸಂಯೋಜನೆ ಆಗಿದೆ. ಇವೆರಡು ಪ್ರತ್ಯೇಕ ತಿಂಡಿಗಳಾಗಿವೆ. ಆದರೆ ಇದನ್ನು ಒಟ್ಟಾಗಿ ನೀಡಿದಾಗ ಇದನ್ನು ಚೌಚೌ ಬಾತ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಜನಪ್ರಿಯ ದರ್ಶಿನಿ ಹೋಟೆಲ್‌ಗಳು ಅಥವಾ ಎಂಟಿಆರ್, ಬ್ರಾಹ್ಮಣ ಕೆಫೆ, ಕಾಮತ್ಸ್ ಮತ್ತು ವಿಧ್ಯಾರ್ಥಿ ಭವನಗಳಂತಹ ಐಕಾನಿಕ್ ರೆಸ್ಟೋರೆಂಟ್‌ಗಳು ಚೌ-ಚೌ ಬಾತ್‌ನ್ನು ಇತರ ಖಾರದ ತಿಂಡಿಯೊಂದಿಗೆ ಜೊತೆಗೆ ನೀಡುತ್ತವೆ.

ಇದನ್ನು ಚೌ-ಚೌ ಬಾತ್ ಎಂದು ಏಕೆ ಕರೆಯುತ್ತಾರೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳು, ಪುರಾವೆಗಳು ಅಥವಾ ನಂಬಿಕೆಗಳಿಲ್ಲ. ಆದಾಗ್ಯೂ, ಸಿಹಿ ಮತ್ತು ಮಸಾಲೆಯುಕ್ತ ಖಾರದ ಮಿಶ್ರಣವನ್ನು ಚೌ-ಚೌ ಬಾತ್ ಎಂದು ಕರೆಯಲಾಗುತ್ತದೆ. ಹೆಚ್ಚಿನ ಜನಪ್ರಿಯ ದರ್ಶಿನಿ ಹೋಟೆಲ್‌ಗಳು ಅಥವಾ ಎಂಟಿಆರ್, ಬ್ರಾಹ್ಮಣ ಕೆಫೆ, ಕಾಮತ್ಸ್ ಮತ್ತು ವಿಧ್ಯಾರ್ಥಿ ಭವನಗಳಂತಹ ಐಕಾನಿಕ್ ರೆಸ್ಟೋರೆಂಟ್‌ಗಳು ಚೌ-ಚೌ ಬಾತ್‌ನ್ನು ಇತರ ಖಾರದ ತಿಂಡಿಗಳ ಜೊತೆಗೆ ನೀಡುತ್ತವೆ.
ನೀವು ಚೌಚೌ ಬಾತ್ ಅನ್ನು ಫಿಲ್ಟರ್ ಕಾಫಿಯೊಂದಿಗೆ ಸೇವಿಸಿದರೆ ಅದರ ಮಜವೇ ಬೇರೆಯಾಗಿರುತ್ತದೆ. ಒಂದು ಸಲ ಸೇವಿಸಿ ನೋಡಿ.

ಎಲ್ಲಿ ಸಿಗುತ್ತದೆ?

ಬೆಂಗಳೂರು ಮತ್ತು ಕರ್ನಾಟಕದ ಇತರ ಕೆಲವು ಭಾಗಗಳಲ್ಲಿ ದರ್ಶಿನಿ ಶೈಲಿಯ ರೆಸ್ಟೋರೆಂಟ್‌ಗಳು ಬೆಳಗಿನ ಉಪಾಹಾರ ಮತ್ತು ಸಂಜೆಯ ತಿಂಡಿಗಳಿಗೆ ಚೌ-ಚೌ ಬಾತ್ ಅನ್ನು ನೀಡುತ್ತವೆ. ಚೌಚೌ ಬಾತ್‍ಗೆ ಪ್ರಸಿದ್ಧವಾದ ಮತ್ತು ಭೇಟಿ ನೀಡಬಹುದಾದ ಹಲವಾರು ರೆಸ್ಟೋರೆಂಟ್‌ಗಳಿವೆ.