Karnataka Tourism
GO UP
Karnatak music

ಕರ್ನಾಟಕ ಸಂಗೀತ

separator
  /  ಕರ್ನಾಟಕ ಸಂಗೀತ

ಕರ್ನಾಟಕ ಸಂಗೀತವು ದಕ್ಷಿಣ ಭಾರತದ ವಿಶಿಷ್ಟವಾದ ಸಂಗೀತ ಪದ್ಧತಿಯಾಗಿದೆ. ಉತ್ತರ ಭಾರತ ಹಿಂದೂಸ್ತಾನಿ ಸಂಗೀತವನ್ನು ಅನುಸರಿಸಿದರೆ, ದಕ್ಷಿಣ ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಕರ್ನಾಟಕ ಸಂಗೀತ ಪ್ರದರ್ಶನಕ್ಕೆ ಹೆಸರುವಾಸಿಯಾಗಿದೆ.

ಕರ್ನಾಟಕ ಸಂಗೀತದ ಅಂಶಗಳು

  • ಶ್ರುತಿ: ಮ್ಯೂಸಿಕಲ್ ಪಿಚ್ ಅಥವಾ ಎರಡು ಸ್ವರಗಳ ಮಧ್ಯದ ಅಂತರ.
  • ಸ್ವರ: ಸ ರಿ ಗ ಮ ಪ ದ ನಿ  ಎಂಬ ಏಳು ಸ್ವರಗಳು ಕರ್ನಾಟಕ ಸಂಗೀತದ ಮೂಲ ಧ್ವನಿಗಳಾಗಿವೆ
  • ರಾಗ: ರಾಗ ಸಂಗೀತದ ಸ್ವರಗಳ ವಿಭಿನ್ನ ಅನುಕ್ರಮವಾಗಿರುತ್ತದೆ ಮತ್ತು ಯಾವುದೇ ಹಾಡು ನಿರ್ದಿಷ್ಟ ರಾಗಕ್ಕೆ ಅನುಗುಣವಾಗಿರುತ್ತದೆ. ಉದಾಹರಣೆ: ಮಧ್ಯಮಾವತಿ, ಬಿಲಹರಿ, ಸಿಂಧು ಭೈರವಿ, ಮಾಯಾ ಮಾಳವ ಗೌಳ ಇತ್ಯಾದಿ
  • ತಾಳ: ಲಯಗಳ ಪೂರ್ವನಿರ್ಧರಿತ ಅನುಕ್ರಮ- ಉದಾಹರಣೆ: ಆದಿ ತಾಳ, ರೂಪಕ ತಾಳ ಇತ್ಯಾದಿ

ಕರ್ನಾಟಕ ಸಂಗೀತದಲ್ಲಿ ಬಳಸುವ ಪ್ರಮುಖ ಉಪಕರಣಗಳು

  • ತಂಬೂರಿ
  • ಮೃದಂಗ
  • ಪಿಟೀಲು
  • ಹಾರ್ಮೋನಿಯಂ
  • ಕೊಳಲು
  • ಘಟಂ
  • ವೀಣೆ

ಕರ್ನಾಟಕ ಸಂಗೀತ ಪ್ರದರ್ಶನವು ಸಾಮಾನ್ಯವಾಗಿ ಮುಖ್ಯ ಗಾಯಕನನ್ನು ಒಳಗೊಂಡಿರುವ ಸಣ್ಣ ತಂಡವನ್ನು ಒಳಗೊಂಡಿರುತ್ತದೆ,  ಗಾಯಕರು ಮತ್ತು ಸಂಗೀತ ವಾದ್ಯಗಾರರ ಸಮ್ಮಿಲನದಿಂದ ಹೊರಬರುವ ಸುಮಧುರ ಹಾಡುಗಳು, ಧ್ವನಿಯ ಏರಿಳಿತ (ಆಲಾಪನೆ), ಲಯಬದ್ಧವಾದ ಸಂಗೀತ ಕೇಳುವುದು ಸಂಗೀತ ರಸಿಕರ ತನು ಮನಗಳಿಗೆ ಹಿತವಾದ ಅನುಭವ ನೀಡುತ್ತದೆ. (ಸಂಗೀತ ಪ್ರಿಯರನ್ನು ರಸಿಕರು ಎನ್ನುತ್ತಾರೆ)

ಕರ್ನಾಟಕ ಸಂಗೀತವನ್ನು ಎಲ್ಲಿ ಕೇಳಬಹುದು?

ನಿಮ್ಮ ಪ್ರದೇಶದಲ್ಲಿ ಮುಂಬರುವ ಯಾವುದೇ ಕರ್ನಾಟಕ ಸಂಗೀತ ಕಚೇರಿಯನ್ನು ಗುರುತಿಸುವ ಪ್ರಮುಖ ವಿಧಾನಗಳು ಈ ಕೆಳಗಿನಂತಿವೆ

  1. ನಾದ  ಸುರಭಿ
  2. ಬೆಂಗಳೂರು ಗಾಯನ ಸಮಾಜ
  3. ನಾರದಸಭ
  4. ಶ್ರೀ ರಾಮ ಲಲಿತಾ ಕಲಾ ಮಂದಿರ
  5. ಅಂತರ್ಜಾಲ ತಾಣಗಳು / ಅಪ್ಲಿಕೇಶನ್‌ಗಳು: ಬೆಂಗಳೂರಿನಲ್ಲಿ ಟಿಕೆಟ್ ಪಡೆದು ನೋಡಬಹುದಾದ ಹೆಚ್ಚಿನ   ವಾಣಿಜ್ಯ ಸಂಗೀತ ಕಾರ್ಯಕ್ರಮಗಳನ್ನು ಬುಕ್‌ಮೈಶೋ.ಕಾಮ್ (Https://in.bookmyshow.com/bengaluru/events)  ಅಥವಾ ಅಲ್ಲೆವೆಂಟ್ಸ್.ಇನ್ ಮುಂತಾದ ಅಂತರ್ಜಾಲ ತಾಣಗಳಲ್ಲಿ ಪಟ್ಟಿಮಾಡಲಾಗುತ್ತದೆ. 
  6. ಸ್ಥಳೀಯ ಪತ್ರಿಕೆ / ಆನ್‌ಲೈನ್ ಹುಡುಕಾಟ: ಕರ್ನಾಟಕ ಸಂಗೀತ ಪ್ರದರ್ಶನಗಳ ಕುರಿತು ತಿಳಿಯಲು ಪತ್ರಿಕೆಗಳಲ್ಲಿ ಬರುವ ‘ನಗರದಲ್ಲಿ ಇಂದು’ ವಿಭಾಗ ಅಥವಾ ಇತರ ವರದಿ/ಜಾಹಿರಾತುಗಳನ್ನು ನೋಡಬಹುದಾಗಿದೆ .

ಕಾಲಕಾಲಕ್ಕೆ ನಡೆಸುವ ಸಂಗೀತ ಉತ್ಸವಗಳಾದ ರಾಮನವಮಿ ಗ್ಲೋಬಲ್ ಮ್ಯೂಸಿಕ್ ಫೆಸ್ಟಿವಲ್, ಪುರಂದರ ದಾಸರ ಆರಾಧನೆ, ಚಾಲುಕ್ಯ ಉತ್ಸವ, ಬೆಂಗಳೂರು ಹಬ್ಬಇತ್ಯಾದಿಗಳ ಅಂಗವಾಗಿ ನಡೆಯುವ  ಸಂಗೀತ ಕಚೇರಿಗಳು  ಪ್ರಸಿದ್ಧ ಗಾಯಕರ ಅತ್ಯುತ್ತಮ ಕರ್ನಾಟಕ ಸಂಗೀತ ಪ್ರದರ್ಶನಗಳನ್ನು ಕೇಳಲು ಉತ್ತಮ ಅವಕಾಶಗಳಾಗಿವೆ.