ಹೋಳಿಗೆ ಎಂದೂ ಕರೆಯಲ್ಪಡುವ ಒಬ್ಬಟ್ಟು, ಹಬ್ಬಗಳು ಮತ್ತು ವಿಶೇಷ ಕಾರ್ಯಕ್ರಮಗಳ ಸಮಯ ತಯಾರಿಸಲ್ಪಡುವ ಕರ್ನಾಟಕದ ಸಿಹಿ ಖಾದ್ಯವಾಗಿದೆ.
ಒಬ್ಬಟ್ಟು ಹೇಗೆ ತಯಾರಿಸಲಾಗುತ್ತದೆ?
ಇತರ ಖಾದ್ಯಗಳಿಗೆ ಹೋಲಿಸಿದರೆ ಒಬ್ಬಟ್ಟು ಮಾಡುವುದು ತುಲನಾತ್ಮಕವಾಗಿ ಸ್ವಲ್ಪ ಸಂಕೀರ್ಣ ಪ್ರಕ್ರಿಯೆ. ಮೈದಾ ಹಿಟ್ಟು ಒಬ್ಬಟ್ಟಿನ ಪ್ರಮುಖ ಪದಾರ್ಥ. ಮೈದಾವನ್ನು ಗೋಧಿ ಹಿಟ್ಟು, ಉಪ್ಪು, ಸ್ವಲ್ಪ ಅರಿಶಿನ ಇತ್ಯಾದಿಗಳೊಂದಿಗೆ ಬೆರೆಸಿ ಹಿಟ್ಟನ್ನು ತಯಾರಿಸಲಾಗುತ್ತದೆ. ಕಡಲೆ ಬೇಳೆಯನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಲಾಗುತ್ತದೆ. ಹಿಟ್ಟಿನ ಪದರದ ಒಳಭಾಗದಲ್ಲಿ ಬೇಯಿಸಿದ ಕಡಲೆ ಬೇಳೆ ಮತ್ತು ಬೆಲ್ಲದ ಮಿಶ್ರಣ ಸೇರಿಸಿ ಒಬ್ಬಟ್ಟು ತಯಾರಿಸಲು ತವಾ ಮೇಲೆ ಇಟ್ಟು ಬಿಸಿಮಾಡಲಾಗುತ್ತದೆ. ಕಾಯಿಸುವಾಗ ಸ್ವಲ್ಪ ತುಪ್ಪವನ್ನು ಸೇರಿಸಲಾಗುತ್ತದೆ ಮತ್ತು ಹದವಾಗಿ ಕಾದ ನಂತರ ಒಬ್ಬಟ್ಟು ಸಿದ್ಧಗೊಳ್ಳುತ್ತದೆ.
ಒಬ್ಬಟ್ಟಿನ ವಿಧಗಳು :
- ಸರಳ ಒಬ್ಬಟ್ಟು: ಒಳಗಡೆ ಏನನ್ನೂ ತುಂಬಿಸದೆ ಮಾಡಲಾಗುವ ಸರಳ ಒಬ್ಬಟ್ಟು
- ಕಾಯಿ ಒಬ್ಬಟ್ಟು: ತೆಂಗಿನಕಾಯಿ ಬಳಸಿ ತಯಾರಿಸಿದ ಹೊಳಿಗೆ. ಸರಳ ಒಬ್ಬಟ್ಟಿಗಿಂತ ತುಂಬಾ ರುಚಿಯಾಗಿರುತ್ತದೆ ಆದರೆ ತೆಂಗಿನಕಾಯಿ ಬಳಕೆಯಿಂದಾಗಿ ಹೆಚ್ಚು ದಿನ ಕೆಡದಂತೆ ಕಾಪಾಡುವುದು ಸ್ವಲ್ಪ ಕಷ್ಟ.
- ಹಣ್ಣುಗಳು / ತರಕಾರಿ ಒಬ್ಬಟ್ಟು: ಕ್ಯಾರೆಟ್, ಮಾವಿನ ಹಣ್ಣು, ಅನಾನಸ್, ಬಾದಾಮಿ , ಚಾಕೊಲೇಟ್, ಡ್ರೈಫ್ಯೂಟ್ ಮುಂತಾದ ಹಣ್ಣುಗಳು / ತರಕಾರಿ / ಪದಾರ್ಥಗಳನ್ನು ತುಂಬಿಸುವ ಮೂಲಕ ವಿಭಿನ್ನ ರೀತಿಯ ಒಬ್ಬಟ್ಟುತಯಾರಿಸಲಾಗುತ್ತದೆ.
ಹೋಳಿಗೆಯನ್ನು ಹಾಗೇ ತಿನ್ನಬಹುದಾದರೂ ಮದುವೆ ಮನೆ ಊಟದ ವೇಳೆ ಹೋಳಿಗೆಯ ಜೊತೆ ಸಕ್ಕರೆ ಹಾಕಿದ ಹಾಲನ್ನೂ ಬಡಿಸುತ್ತಾರೆ.
ಒಬ್ಬಟ್ಟು ಎಲ್ಲಿ ಸಿಗುತ್ತದೆ?
ಒಬ್ಬಟ್ಟು ಅಥವಾ ಹೋಳಿಗೆ ಸಾಮಾನ್ಯವಾಗಿ ಬೇಕರಿಗಳಲ್ಲಿ ಲಭ್ಯವಿರುತ್ತದೆ. ವಿವಾಹ ಭೋಜನ, ದೇವಾಲಯದ ಊಟ ಮತ್ತು ಇತರ ಆಚರಣೆಗಳಲ್ಲಿ ಒಬ್ಬಟ್ಟು ಅಥವಾ ಹೋಳಿಗೆ ಊಟದ ಭಾಗವಾಗಿರುತ್ತದೆ. ಕೆಲವು ಸೂಪರ್ ಮಾರ್ಕೆಟ್ ಗಳು ತಿನ್ನಲು ಸಿದ್ಧವಾದ ಒಬ್ಬಟ್ಟುಗಳನ್ನು ಮಾರುತ್ತವೆ. ಇವನ್ನು ಸೇವಿಸುವ ಮೊದಲು ಬಿಸಿ ಮಾಡಿದರೆ ಸಾಕು.