Karnataka logo

Karnataka Tourism
GO UP
new year celebration

ಕರ್ನಾಟಕದಲ್ಲಿ ಹೊಸ ವರ್ಷದ ಆಚರಣೆಗಳು

separator
  /  ಕರ್ನಾಟಕದಲ್ಲಿ ಹೊಸ ವರ್ಷದ ಆಚರಣೆಗಳು

ಹೊಸ ವರ್ಷಾಚರಣೆಗೆ ಕರ್ನಾಟಕ ಹೆಸರುವಾಸಿಯಾಗಿದೆ. ಹಲವಾರು ಹೋಟೆಲ್ ಗಳು, ಬಾರ್ ಗಳು ಹಾಗೂ ಇತರೆ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಪಾರ್ಟಿಗಳನ್ನು ಆಯೋಜಿಸಲಾಗುತ್ತದೆ.

ಬೆಂಗಳೂರು ಯುವಕರ ಮಿಡಿತದ ಕೇಂದ್ರವಾಗಿರುವುದರಿಂದ, ಪಾರ್ಟಿಯನ್ನು ಹೇಗೆ ಆಚರಿಸಬೇಕೆಂದು ಅದಕ್ಕೆ ತಿಳಿದಿದೆ. ಹೊಸ ವರ್ಷದ ಆಚರಣೆಗೆ ಪ್ರಸಿದ್ಧವಾದ ಅನೇಕ ಅತಿಥಿ ಗೃಹಗಳು, ಹೋಟೆಲ್ ಗಳು ಮತ್ತು ಮೇಲ್ಚಾವಣಿಯ(ರೂಫ್ ಟಾಪ್) ಬಾರ್‌ಗಳಿವೆ. ಕೆಲವು ಹಳ್ಳಿಯ ವಾತಾವರಣವನ್ನು ಹೊಂದಿದ್ದರೆ, ಉಳಿದವುಗಳು ವಿನೂತನ ವಿಷಯಾಧಾರಿತ(ಥೀಮ್ಡ್) ಪಾರ್ಟಿಗಳು ಮತ್ತು ಭರ್ಜರಿಯಾದ ಸಂಗೀತದೊಂದಿಗೆ ಅತಿಥಿಗಳನ್ನು ರಂಜಿಸುತ್ತಾರೆ. ನಿಮ್ಮ ಪ್ರೀತಿಪಾತ್ರರೊಡನೆ ಪ್ರಕೃತಿಯ ಮಧ್ಯೆ ಈ ವರ್ಷ ಹೊಸ ವರ್ಷವನ್ನು ಆಚರಿಸಲು ನೀವು ಹತ್ತಿರದ ಸ್ಥಳಗಳಾದ ನಂದಿ ಬೆಟ್ಟ, ಸಕಲೇಶಪುರ ಅಥವಾ  ಚಿಕ್ಕಮಂಗಳೂರಿಗೆ ಭೇಟಿ ನೀಡಬಹುದು.

ಉತ್ತಮ ಹೊಸ ವರ್ಷದ ಆಚರಣೆಗಳ ಬಗ್ಗೆ ಹೆಮ್ಮೆಪಡುವ ಕರ್ನಾಟಕದ ಕೆಲವು ಜನಪ್ರಿಯ ತಾಣಗಳು:

Family Destinations Bangalore
ಬೆಂಗಳೂರು

ಎಂ.ಜಿ.ರೋಡ್ ನ ಹೊಸ ವರ್ಷದ ಆಚರಣೆಗಳು ಅನೇಕ ಆಫರ್ ಗಳನ್ನು ಮತ್ತು ವರ್ಷದ ರಿಯಾಯಿತಿಗಳನ್ನು ನೀಡುವ ಅದರ ಹಲವಾರು ಪಬ್‌ಗಳು ಮತ್ತು ಶಾಪಿಂಗ್ ಮಾಲ್ ಗಳಿಂದ ಬಹಳ ಜನಪ್ರಿಯವಾಗಿವೆ. ಹೊಸ ವರ್ಷದ ಬ್ಯಾಶಸ್ ಮತ್ತು ಆರ್ಟ್ ಗ್ಯಾಲರಿಗಳು ತಮ್ಮ ಸಂಜೆಯ ಬ್ಯಾಶಸ್ ಮತ್ತು ಪಾರ್ಟಿಗಳೊಂದಿಗೆ ಅನ್ವೇಷಿಸಲು ಜನಪ್ರಿಯ ಸ್ಥಳಗಳಾಗಿವೆ.

ಹೊಸ ವರ್ಷವನ್ನು ಪ್ರಾರಂಭಿಸಲು ಮತ್ತೊಂದು ಜನಪ್ರಿಯ ಸ್ಥಳವೆಂದರೆ ಹೆಬ್ಬಾಳ ಕೆರೆ. ಸ್ಪಾಟ್-ಬಿಲ್ಡ್ ಪೆಲಿಕನ್ ಗಳು, ಹೆರಾನ್ ಗಳು ಮತ್ತು ಮೂಚೆಸ್ ಗಳ ಅದ್ಭುತ ನೋಟಗಳನ್ನು ನೋಡಲು ಕರ್ನಾಟಕದ ಸುತ್ತಮುತ್ತಲಿನ ಪ್ರಕೃತಿ ಪ್ರಿಯರು ಹೆಬ್ಬಾಳ ಕೆರೆಗೆ  ಭೇಟಿ ನೀಡುತ್ತಾರೆ.

ನಿಮ್ಮ ಕುಟುಂಬದೊಂದಿಗೆ ಕರ್ನಾಟಕದಲ್ಲಿ ಹೊಸ ವರ್ಷವನ್ನು ಪ್ರಾರಂಭಿಸಲು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಬೆಂಗಳೂರು ಅರಮನೆ ಮತ್ತು ಲುಂಬಿನಿ ಉದ್ಯಾನಗಳು ಸಹ ರೋಮಾಂಚಕಾರಿ ಸ್ಥಳಗಳಾಗಿವೆ.

karwar beach
ಕಾರವಾರ

ಗೋವಾದಿಂದ 77 ಕಿಲೋಮೀಟರ್ ದೂರದಲ್ಲಿರುವ, ಕಾರವಾರದಲ್ಲಿ ಹೊಸ ವರ್ಷದ ಹಿಂದಿನ ದಿನದ ಸಂಭ್ರಮಗಳು ಖಂಡಿತವಾಗಿಯೂ ಎದುರು ನೋಡಬೇಕಾದ ಸಂಗತಿಯಾಗಿದೆ. ಅಲಂಕಾರಿಕ ಪಾರ್ಟಿಯಿಂದ ಹಿಡಿದು ತಾರಸಿ(ರೂಫ್ ಟಾಪ್) ರೆಸ್ಟೋರೆಂಟ್‌ಗಳಿಂದ ಹೊಸ ವರ್ಷದ ಪಟಾಕಿಗಳನ್ನು ನೋಡುವವರೆಗೆ ನಗರವು ಎಲ್ಲವನ್ನೂ ನೀಡುತ್ತದೆ.

gokarna
ಗೋಕರ್ಣ

ಈ ಅದ್ಭುತ ದೃಶ್ಯಗಳು ಮತ್ತು ಉತ್ಸಾಹಭರಿತ ವಾತಾವರಣಗಳಿಗೆ ಹೆಸರುವಾಸಿಯಾಗಿರುವ. ಇದು ಹೊಸ ವರ್ಷಗಳಿಗೆ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಇದು ಗೋವಾದಿಂದ 134 ಕಿಲೋಮೀಟರ್ ದೂರದಲ್ಲಿದೆ ಮತ್ತು ಇದು ಬೀಚ್ ಪ್ರಿಯರಿಗೆ ಹೆಚ್ಚು ಪ್ರಿಯವಾಗಿದೆ. 

ಈ ವರ್ಷ ಕೋವಿಡ್ 19 ರ ಕಾರಣ, ರಾಜ್ಯಾದ್ಯಂತ ಹೊಸ ವರ್ಷದ ಆಚರಣೆಯನ್ನು ನಿಷೇಧಿಸಲಾಗುವುದು. ಆದಾಗ್ಯೂ ಹೋಟೆಲ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ತಮ್ಮ ಸಾಮರ್ಥ್ಯದ 50% ರೊಂದಿಗೆ ಆಚರಿಸುವುದಕ್ಕೆ ಅನುಮತಿ ನೀಡಲಾಗಿದೆ.