Karnataka logo

Karnataka Tourism
GO UP
ವಿಶ್ವ ವನ್ಯಜೀವಿ ದಿನ

ವಿಶ್ವ ವನ್ಯಜೀವಿ ದಿನ

separator
  /  ವಿಶ್ವ ವನ್ಯಜೀವಿ ದಿನ

ವಿಶ್ವ ವನ್ಯಜೀವಿ ದಿನ ಹೇಗೆ ಅಸ್ತಿತ್ವಕ್ಕೆ ಬಂದಿತು

ನಮ್ಮ ಗ್ರಹದ ವನ್ಯಜೀವಿಗಳು ಪರಿಸರ ಮತ್ತು ಭೂಮಿಯ ಪರಿಸರ ವ್ಯವಸ್ಥೆಗಳನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಡಿಸೆಂಬರ್ 2003 ರಲ್ಲಿ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು(UNGA) ತನ್ನ 68 ನೇ ಅಧಿವೇಶನದಲ್ಲಿ ಮಾರ್ಚ್ 3 ಅನ್ನು ವಿಶ್ವ ವನ್ಯಜೀವಿ ದಿನವೆಂದು ಘೋಷಿಸಿತು. ಕಳೆದ 16 ವರ್ಷಗಳಿಂದ, ಪ್ರಪಂಚದ ವಿವಿಧ ಭಾಗಗಳಲ್ಲಿ ವನ್ಯಜೀವಿಗಳನ್ನು ರೂಪಿಸುವ ಸಸ್ಯ ಮತ್ತು ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಈ ವರ್ಷ, ವಿಶ್ವ ವನ್ಯಜೀವಿ ದಿನಾಚರಣೆಯ ವಿಷಯವೆಂದರೆ “ಅರಣ್ಯ ಮತ್ತು ಜೀವನೋಪಾಯಗಳು: ಜನರು ಮತ್ತು ಗ್ರಹವನ್ನು ಉಳಿಸಿಕೊಳ್ಳುವುದು.” ವಿಶ್ವ ವನ್ಯಜೀವಿ ದಿನಾಚರಣೆಯೊಂದಿಗೆ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು(UNGA)ಮಹತ್ವದ ಹೆಜ್ಜೆ ಇಟ್ಟಿತು. ಅವರು ಎಷ್ಟೇ ಖರ್ಚಾದರೂ ಪ್ರಕೃತಿ ಮತ್ತು ವನ್ಯಜೀವಿಗಳನ್ನು ಏಕೆ ಸಂರಕ್ಷಿಸಬೇಕು ಎನ್ನುವುದರ ಬಗ್ಗೆ ಜ್ಞಾನವನ್ನು ಹರಡುವ ಗುರಿಯನ್ನು ಹೊಂದಿದ್ದರು. ಅನೇಕ ದೇಶಗಳು ಮಾರ್ಚ್ 3 ಅನ್ನು ಬಹಳ ಮಹತ್ವದ ದಿನವೆಂದು ಪರಿಗಣಿಸುತ್ತವೆ ಮತ್ತು ವಿಶ್ವ ವನ್ಯಜೀವಿ ದಿನ ಘೋಷಣೆಯಾದ ನಂತರ ವನ್ಯಜೀವಿಗಳನ್ನು ರಕ್ಷಿಸಲು ಹಲವಾರು ಪ್ರಯತ್ನಗಳನ್ನು ಕೈಗೊಳ್ಳಲಾಗಿದೆ.

ವಿಶ್ವ ವನ್ಯಜೀವಿ ದಿನಾಚರಣೆಯೊಂದಿಗೆ ಪ್ರಕೃತಿಯನ್ನು ಆಚರಿಸಲು ಕರ್ನಾಟಕದ ಉಪಕ್ರಮಗಳು

ಈ ಆಚರಣೆಗೆ ಕರ್ನಾಟಕವೂ ಹೊರತಾಗಿಲ್ಲ, ರಾಜ್ಯವು ಸಂರಕ್ಷಿಸಬೇಕಾದ ಮತ್ತು ನಿರ್ವಹಿಸಬೇಕಾದ ಅಪಾರ ಮತ್ತು ಅಮೂಲ್ಯವಾದ ವನ್ಯಜೀವಿಗಳನ್ನು ಹೊಂದಿದೆ. ಕರ್ನಾಟಕವು ಸುಂದರವಾದ ಕಾಡುಗಳಿಂದ ಸಮೃದ್ಧವಾಗಿದೆ, ಅಲ್ಲಿ ಅಪರೂಪದ ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳನ್ನು ಹೇರಳವಾಗಿ ಕಾಣಬಹುದು. ಕರ್ನಾಟಕದ ಹೆಚ್ಚಿನ ಆರ್ಥಿಕತೆಯು ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ ಮತ್ತು ರಾಜ್ಯದ ಆರ್ಥಿಕ ಪರಿಸ್ಥಿತಿಗಳನ್ನು ಉನ್ನತೀಕರಿಸುವಲ್ಲಿ ವಿಭಿನ್ನ ಕಾಡುಗಳು ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿ ವರ್ಷ ಹಲವಾರು ಪ್ರವಾಸಿಗರು ಸಾಹಸಮಯ ಕಾಡುಗಳು, ಅಭಯಾರಣ್ಯಗಳು ಮತ್ತು ಬ್ಯಾಕ್ ವಾಟರ್ಸಗೆ(ಹಿನ್ನೀರಿಗೆ) ಭೇಟಿ ನೀಡುತ್ತಾರೆ. ವಿಶ್ವ ವನ್ಯಜೀವಿ ದಿನವು ಪ್ರಪಂಚದಾದ್ಯಂತ ಇರುವಂತೆ ರಾಜ್ಯದಲ್ಲಿಯೂಸಾಕಷ್ಟು ಮಹತ್ವದ ಘಟನೆಯಾಗಿದೆ.

ಕರ್ನಾಟಕದಾದ್ಯಂತ ಹಲವಾರು ಟೂರಿಸ್ಟ್ ಲಾಡ್ಜ್ ಗಳು ಮತ್ತು ಜಂಗಲ್ ಕ್ಯಾಂಪ್ ಗಳನ್ನು ಕಾಣಬಹುದು. ಪ್ರವಾಸಿಗರಿಗೆ ಪ್ರಕೃತಿಯ ಅದ್ಭುತಗಳಿಗೆ ಸಾಕ್ಷಿಯಾಗಲು ಮತ್ತು ರಾಜ್ಯದ ಹಲವಾರು ಕಾಡುಗಳಲ್ಲಿರುವ ಅದ್ಭುತ ವನ್ಯಜೀವಿಗಳನ್ನು ಪ್ರಶಂಸಿಸಲು ಅವಕಾಶ ನೀಡುವುದು ಇದರ ಉದ್ದೇಶವಾಗಿದೆ. ಕರ್ನಾಟಕವು ರಾಜ್ಯದೊಳಗಿನ ಕಾಡುಗಳು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸಲು ನಿರಂತರವಾಗಿ ಕೆಲಸ ಮಾಡಿದೆ ಮತ್ತು ವನ್ಯಜೀವಿಗಳಿಗಾಗಿ ಈ ಧಾಮಗಳ ಪರಿಸ್ಥಿತಿಗಳನ್ನು ಸುಧಾರಿಸಲು ಕ್ರಮಗಳನ್ನು ಸಹ ತೆಗೆದುಕೊಂಡಿದೆ. ಕಾಡುಗಳ ಸುಂದರ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲು ಕರ್ನಾಟಕ ಸೇರಿದಂತೆ ಹಲವು ಸರ್ಕಾರಗಳ ಮೇಲೆ ವಿಶ್ವ ವನ್ಯಜೀವಿ ದಿನ ಪ್ರಭಾವ ಬೀರಿದೆ ಎಂದು ಹೇಳಬಹುದು.