ವಿಶ್ವ ಪ್ರವಾಸೋದ್ಯಮ ದಿನ 2021 – ಸಮಗ್ರ ಬೆಳವಣಿಗೆಗಾಗಿ ಪ್ರವಾಸೋದ್ಯಮ

ಇಂದು ಪ್ರವಾಸೋದ್ಯಮವು ಜಾಗತಿಕ ಆರ್ಥಿಕತೆ ಮತ್ತು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಬೆಳವಣಿಗೆಗೆ ತನ್ನದೇ ಅಭೂತಪೂರ್ವ ಕೊಡುಗೆ ನೀಡುವ ಅತ್ಯಂತ ಆಕರ್ಷಕ ಉದ್ಯಮ ವಲಯಗಳಲ್ಲಿ ಒಂದಾಗಿದೆ. ಇದಕ್ಕಾಗಿಯೇ ಜಗತ್ತಿನಾದ್ಯಂತದ ರಾಷ್ಟ್ರಗಳು ತಮ್ಮ ದೇಶೀಯ ಹಾಗೂ ಗಡಿಯಾಚೆಗಿನ ಪ್ರವಾಸೋದ್ಯಮ ವಲಯವನ್ನು ಉತ್ತೇಜಿಸುತ್ತಿವೆ. ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO)ಯು ಪ್ರವಾಸೋದ್ಯಮದ ಆಕರ್ಷಣೆ, ಉತ್ಸಾಹ ಮತ್ತು ಆರ್ಥಿಕತೆಯನ್ನು ಹೆಚ್ಚಿಸಲು 1980 ರಿಂದ ಪ್ರತಿವರ್ಷ ಸೆಪ್ಟೆಂಬರ್ 27 ಅನ್ನು ವಿಶ್ವ ಪ್ರವಾಸೋದ್ಯಮ ದಿನವನ್ನಾಗಿ ಆಚರಿಸುತ್ತದೆ.ಈ ಪ್ರವಾಸೋದ್ಯಮ ದಿನವನ್ನು ವಿಶ್ವದಾದ್ಯಂತ ಸರ್ಕಾರಗಳು, ಪ್ರವಾಸೋದ್ಯಮ ಕಂಪನಿಗಳು, ಉತ್ಸಾಹಿಗಳು ಮತ್ತು ಇತರ ಪ್ರವಾಸೋದ್ಯಮ-ಸಂಬಂಧಿತ ಉದ್ಯಮಗಳು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತವೆ.
ಇಂದು ಕೋರೊನಾನಂದತ ಸಾಂಕ್ರಾಮಿಕ ರೋಗದ ದೀರ್ಘಕಾಲೀನ ಅಪಾಯಗಳ ನಡುವೆ, ವಿಶ್ವ ಪ್ರವಾಸೋದ್ಯಮ ಉದ್ಯಮವು ಭಾರೀ ನಷ್ಟವನ್ನು ಅನುಭವಿಸಿದೆ. ಹೀಗಾಗಿ ಈ ಮೊದಲಿನ ಪ್ರವಾಸೋದ್ಯಮದ ಉತ್ಸಾಹ ಮತ್ತು ಸಹಜತೆಯನ್ನು ಮರಳಿ ತರಲು, ವಿಶ್ವ ಪ್ರವಾಸೋದ್ಯಮ ದಿನ 2021 ರ ಥೀಮ್ ಅನ್ನು ಸಮಗ್ರ ಬೆಳವಣಿಗೆಗಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಾಗತಿಕ ಪ್ರವಾಸೋದ್ಯಮ ಉದ್ಯಮವು ಪುನಃಶ್ಚೇತನಗೊಳ್ಳಲು ಮತ್ತು ಸಕಾರಾತ್ಮಕ ಬೆಳವಣಿಗೆಯನ್ನು ದಾಖಲಿಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ಇದು ಅತ್ಯಂತ ಸೂಕ್ತವಾಗಿದೆ.
ಈ ವರ್ಷದ ವಿಶ್ವ ಪ್ರವಾಸೋದ್ಯಮ ದಿನದ ಅಧಿಕೃತ ಆಚರಣೆಗಳನ್ನು ಆಫ್ರಿಕಾದ ದೇಶವಾದ ಕೋಟ್ ಡಿ ಐವೊಯಿರ್ ನಲ್ಲಿ ಆಯೋಜಿಸಲಾಗಿದ್ದು, ಜಾಗತಿಕವಾಗಿ ಪ್ರವಾಸೋದ್ಯಮದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಸೂಕ್ತ ವೇದಿಕೆ ಒದಗಿಸುತ್ತದೆ ಮತ್ತು ವಿವಿಧ ಪ್ರವಾಸೋದ್ಯಮ ಅವಕಾಶಗಳನ್ನು, ವೈವಿಧ್ಯತೆಗಳನ್ನು ಸೃಷ್ಟಿಸುತ್ತದೆ. ಈ ವಿಶ್ವ ಪ್ರವಾಸೋದ್ಯಮ ದಿನ 2021 ಸಹ ಸುಸ್ಥಿರ ಅಭಿವೃದ್ಧಿ ಗುರಿಗಳ (ಎಸ್‌ಡಿಜಿ) ಮೇಲೆ ಕೇಂದ್ರೀಕರಿಸುತ್ತದೆ. ಅದ್ಭುತ ಉದ್ಯಮದ ಆರ್ಥಿಕತೆಯನ್ನು ಹೆಚ್ಚಿಸುವುದೇ ಇದರ ಧ್ಯೇಯವಾಗಿದೆ. ಪ್ರವಾಸೋದ್ಯಮವು ಆರ್ಥಿಕತೆಯ ಮಹತ್ವದ ಆಧಾರ ಸ್ತಂಭವಾಗಿದೆ.
ಸಾಂಕ್ರಾಮಿಕ ರೋಗದಿಂದಾಗಿ ಜಾಗತಿಕ ಪ್ರವಾಸೋದ್ಯಮ ಉದ್ಯಮವು $ 4 ಟ್ರಿಲಿಯನ್ ನಷ್ಟವನ್ನು ಅನುಭವಿಸಿದೆ. UNWTO ಕೋವಿಡ್ -19 ವಿರುದ್ಧ ಜಾಗತಿಕ ಲಸಿಕಾಕರಣವನ್ನು (ವ್ಯಾಕ್ಸಿನೇಷನ್) ಅನ್ನು ಪ್ರವಾಸೋದ್ಯಮದ ಕುಂಠಿತ ಸ್ಥಿತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಹೆಜ್ಜೆಯೆಂದು ಗುರುತಿಸಿದೆ.ಭಾರತದ ವೈವಿಧ್ಯಮಯ ಭೌಗೋಳಿಕತೆಯನ್ನು ಹೊಂದಿದೆ. ಭಾರತ ದೇಶದಲ್ಲಿ ಅಸಂಖ್ಯಾತ ಆಕರ್ಷಣೀಯ ಸ್ಥಳಗಳಿವೆ. ಪ್ರವಾಸಿಗರು ತಮ್ಮ ರಜಾ ಸಮಯವನ್ನು ಸದುಪಯೋಗಪಡಿಸಿಕೊಳ್ಳಲು ಹಲವಾರು ರಾಜ್ಯಗಳಿದ್ದರೂ ಸಹ ಕರ್ನಾಟಕ ರಾಜ್ಯವು ಪ್ರವಾಸಿಗರಿಗೆ ಒಂದು ಅತ್ಯುತ್ತಮ ಆಯ್ಕೆಯಾಗಿದೆ.

ಕರ್ನಾಟಕ ರಾಜ್ಯವು ಸುಂದರವಾದ ಪರಿಸರ, ವನ್ಯಜೀವಿಗಳು, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಧಾರ್ಮಿಕ ಪರಂಪರೆ ಇರುವ ಶ್ರೀಮಂತ ಸ್ಥಳವಾಗಿದೆ.ಪರ್ವತಗಳು,ಗುಡ್ಡ ಬೆಟ್ಟಗಳು, ದಟ್ಟವಾದ ಅರಣ್ಯಗಳಿಂದ ಕೂಡಿದ ಕರ್ನಾಟಕದಲ್ಲಿ ಸಮುದ್ರ ತೀರಗಳು, ಭೋರ್ಗೆರೆಯುವ ಎತ್ತರದ ಜಲಪಾತಗಳು ಮತ್ತು ಮನೋಹರವಾದ ವನ್ಯಜೀವಿ ಆವಾಸಸ್ಥಾನಗಳು, ಪ್ರಾಚೀನ ಶಿಲ್ಪಕಲೆಗಳು, ದೇವಾಲಯಗಳು ಹೀಗೆ ಹತ್ತು ಹಲವು ಆಕರ್ಷಣೆಗಳಿವೆ. ಹೀಗಾಗಿ ಕರ್ನಾಟಕ ರಾಜ್ಯವನ್ನು ಪ್ರವಾಸೋದ್ಯಮ ಮತ್ತು ಅದರ ಪ್ರಾಮುಖ್ಯತೆಯನ್ನು ಉತ್ತೇಜಿಸುವ ಅತ್ಯುತ್ತಮ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸುವುದರಲ್ಲಿ ಆಶ್ಚರ್ಯವಿಲ್ಲ. ಕರ್ನಾಟಕಕ್ಕೆ ಭೇಟಿ ನೀಡುವ ಪ್ರವಾಸಿಗರು ವಿವಿಧ ಚಟುವಟಿಕೆಗಳು, ವನ್ಯಜೀವಿ ಶಿಬಿರಗಳು ಮತ್ತು ರಾಜ್ಯವು ಆಯೋಜಿಸುವ ಇತರ ಉಲ್ಲಾಸಮಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.
ವಿಶ್ವ ಪ್ರವಾಸೋದ್ಯಮ ದಿನ 2021 ನಮ್ಮ ಜೀವನದಲ್ಲಿ ಹಾಗೂ ಜಾಗತಿಕ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಪ್ರಾಮುಖ್ಯತೆಯನ್ನು ಪುನರ್ವಿಮರ್ಶಿಸಲು ಒಂದು ಹೊಸ ಅವಕಾಶವನ್ನು ನೀಡುತ್ತದೆ. ಪ್ರವಾಸೋದ್ಯಮದ ಭವಿಷ್ಯವನ್ನು ಸ್ಥಳೀಯ ಹಾಗೂ ಜಾಗತಿಕ ಮಟ್ಟದಲ್ಲಿ ಮರುವಿನ್ಯಾಸಗೊಳಿಸಲು ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸವಾಲುಗಳನ್ನು ಜಯಿಸಲು ಇದು ಸೂಕ್ತ ಸಮಯವಾಗಿದೆ.
ನಿಮಗೆಲ್ಲರಿಗೂ ವಿಶ್ವ ಪ್ರವಾಸೋದ್ಯಮ ದಿನದ ಶುಭಾಶಯಗಳು.