ವನ್ಯಜೀವಿ ಸಪ್ತಾಹ 2021
ವನ್ಯಜೀವಿ ಸಪ್ತಾಹ – ಪ್ರಕೃತಿಯ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ವನ್ಯಜೀವಿಗಳ ಪಾತ್ರವು ನಿರ್ವಿವಾದವಾಗಿದೆ. ವನ್ಯಜೀವಿಗಳು ನಮ್ಮ ಭೂ ಜಗತ್ತಿನ ಪ್ರಮುಖ ಸಂಗತಿಗಳಾಗಿವೆ. ಅರಣ್ಯಕ್ಕೆ ನಾವು ಮಾಡುವ ಯಾವುದೇ ಹಾನಿಯು ಇಡೀ ಪರಿಸರ ವ್ಯವಸ್ಥೆಗೆ ಅಪಾಯವನ್ನು ತಂದೊಡ್ಡಬಹುದು ಆದ್ದರಿಂದ, ಸಸ್ಯ ಮತ್ತು ಪ್ರಾಣಿಗಳನ್ನು ಸಂರಕ್ಷಿಸುವುದು ಬಹಳ ಮುಖ್ಯವಾದ ಸಂಗತಿ ಆಗಿದೆ. ಭಾರತವು ಈ ನಿಟ್ಟಿನಲ್ಲಿ ಪ್ರತಿ ವರ್ಷ, ಅಕ್ಟೋಬರ್ 2 ರಿಂದ 8 ರವರೆಗೆ ವನ್ಯಜೀವಿ ಸಪ್ತಾಹ ವನ್ನು ಆಚರಿಸುತ್ತದೆ. ಈ ಆಚರಣೆಯು ದೇಶದಲ್ಲಿರುವ ವೈವಿಧ್ಯಮಯ ಪ್ರಾಣಿಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಈ ಸಪ್ತಾಹದಲ್ಲಿ ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸಲು ತಜ್ಞರು ಕಾರ್ಯಾಗಾರಗಳನ್ನು, ಅಭಿಯಾನಗಳನ್ನು ನಡೆಸುತ್ತಾರೆ. ಇದಲ್ಲದೇ, ಇದನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡಲು ಹಲವಾರು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ವಿವಿಧ ಹಂತಗಳಲ್ಲಿ ಆಯೋಜಿಸಲಾಗುತ್ತದೆ.ಭಾರತವು ಜೈವಿಕ ಪ್ರಭೇದಗಳಿಗೆ ಹಾಟ್ ಸ್ಪಾಟ್ ಆಗಿದ್ದು, ಹಲವಾರು ಪ್ರಾಣಿ ಪ್ರಭೇದಗಳಿಗೆ ಸುರಕ್ಷಿತ ಆವಾಸ ಸ್ಥಾನವಾಗಿದೆ. ಭೂಮಿಯ ಮೇಲ್ಮೈಯ ಕೇವಲ 2.5% ನಷ್ಟು, ಭಾರತವು ಪ್ರಪಂಚದ 7% ಕ್ಕಿಂತ ಹೆಚ್ಚು ಜೀವವೈವಿಧ್ಯತೆಯನ್ನು ಹೊಂದಿದೆ. ಭಾರತದ ಪ್ರಾಣಿ ಲೋಕದ ಸಂಪತ್ತು ನಂಬಲಾಗದಷ್ಟು ವೈವಿಧ್ಯಮಯವಾಗಿದೆ, ಇದು ಪ್ರಪಂಚದ 7.4% ರಷ್ಟು ಪ್ರಾಣಿಗಳನ್ನು ಹೊಂದಿದೆ.
ಆದಾಗ್ಯೂ ಇಂದು ಭಾರತದ ಪ್ರಾಣಿಗಳ ಜಗತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಮನುಷ್ಯರ ಅತಿ ಆಸೆ ಮತ್ತು ಪ್ರಮಾದಗಳಿಂದ ಇದು ಸಂಕಷ್ಟದ ಸುಳಿಗಳಲ್ಲಿ ಸಿಲುಕಿದೆ. ಇದರಿಂದ ನಮ್ಮ ನೈಸರ್ಗಿಕ ಸಂಪತ್ತಿಗೆ ಬಹಳಷ್ಟು ಹಾನಿ ಆಗುತ್ತಿದೆ. ವನ್ಯ ಪ್ರಾಣಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ತರವಾದ ಪ್ರಯತ್ನಗಳನ್ನು ನಾವು ಮಾಡಲೇ ಬೇಕಾಗಿದೆ. ಸರ್ಕಾರವು ಈಗಾಗಲೇ ಈ ಕುರಿತು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ದೇಶದಾದ್ಯಂತ ಎಲ್ಲಾ ರಾಜ್ಯಗಳು ವನ್ಯ ಜೀವಿ ಸರಂಕ್ಷಣೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಕರ್ನಾಟಕವು ಸಹ ಅತ್ಯಂತ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಈ ನಿಟ್ಟಿನಲ್ಲಿ ತನ್ನ ಹೆಜ್ಜೆಯನ್ನು ಮುಂದಿಟ್ಟಿದೆ. ಕರ್ನಾಟಕ ರಾಜ್ಯದ ಸುಮಾರು 22.61% ರಷ್ಟು ಭೂಮಿಯು ದಟ್ಟವಾದ ಕಾಡುಗಳಿಂದ ಆವೃತವಾಗಿದ್ದು ಇದು ವೈವಿಧ್ಯಮಯ ಪ್ರಾಣಿಗಳಿಗೆ ಆವಾಸ ಸ್ಥಾನವಾಗಿದೆ. ವಾಸ್ತವವಾಗಿ, ರಾಜ್ಯದಲ್ಲಿ ಕಂಡುಬರುವ ಅನೇಕ ಪ್ರಾಣಿ ಪ್ರಭೇದಗಳನ್ನು ಅಳಿವಿನಂಚಿನಲ್ಲಿರುವ ಅಥವಾ ಅಪಾಯದಲ್ಲಿರುವ ಜಾತಿಗಳೆಂದು ಗುರುತಿಸಲಾಗಿದೆ. ಅಷ್ಟೇ ಅಲ್ಲ! ಭಾರತದ 10% ಹುಲಿಗಳು ಮತ್ತು 25% ಆನೆಗಳು ಕರ್ನಾಟಕದಲ್ಲಿಯೇ ಇವೆ.
ಇಲ್ಲಿ ವೈವಿಧ್ಯಮಯ ಸಸ್ತನಿಗಳು, ಸರೀಸೃಪಗಳು, ಕೀಟಗಳು, ಪಕ್ಷಿಗಳು, ಉಭಯಚರಗಳು ಮತ್ತು ಮೀನುಗಳು ಕೂಡ ಇವೆ. ಕರ್ನಾಟಕ ರಾಜ್ಯವು ವನ್ಯಜೀವಿಗಳು ಮತ್ತು ಪ್ರಾಣಿ ಪ್ರಭೇದಗಳ ದೃಷ್ಟಿಯಿಂದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ನೀವು ಸಹ ವನ್ಯ ಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲವು ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ನೀವು ನಿಮ್ಮ ಕೊಡುಗೆ ನೀಡಲು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೂ ಭೇಟಿ ಸಹ ನೀಡಬಹುದು. ಬಂಡೀಪುರ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಭದ್ರಾ ವನ್ಯಜೀವಿ ಅಭಯಾರಣ್ಯ, ಭೀಮಗಡ ವನ್ಯಜೀವಿ ಅಭಯಾರಣ್ಯ ಮತ್ತು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಗಳು ಕರ್ನಾಟಕದ ಅತ್ಯಂತ ಜನಪ್ರಿಯ ವನ್ಯಜೀವಿ ಸ್ವರ್ಗಗಳಾಗಿವೆ. ನೀವು ಕಾವೇರಿ ವನ್ಯಜೀವಿ ಅಭಯಾರಣ್ಯ, ದಾಂಡೇಲಿ ವನ್ಯಜೀವಿ ಅಭಯಾರಣ್ಯ ಮತ್ತು ಜಯಮಂಗಲಿ ಬ್ಲಾಕ್‌ಬಕ್ ರಿಸರ್ವ್‌ಗೆ ಭೇಟಿ ನೀಡಬಹುದು. ಈ ವನ್ಯಜೀವಿ ಸಪ್ತಾಹ ದಂದು ವನ್ಯಜೀವಿಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ, ವನ್ಯಜೀವಿ ರಕ್ಷಣೆಗೆ ಕೆಲಸ ಮಾಡುವವರನ್ನು ಬೆಂಬಲಿಸೋಣ ಮತ್ತು ನಮ್ಮ ಸಾಮಾಜಿಕ ಮಾಧ್ಯಮವನ್ನು ಅದರ ಬಗ್ಗೆ ಜಾಗೃತಿ ಮೂಡಿಸಲು ಬಳಸೋಣ.
ಪ್ರಕೃತಿಯ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ವನ್ಯಜೀವಿಗಳ ಪಾತ್ರವು ನಿರ್ವಿವಾದವಾಗಿದೆ. ವನ್ಯಜೀವಿಗಳು ನಮ್ಮ ಭೂ ಜಗತ್ತಿನ ಪ್ರಮುಖ ಸಂಗತಿಗಳಾಗಿವೆ. ಅರಣ್ಯಕ್ಕೆ ನಾವು ಮಾಡುವ ಯಾವುದೇ ಹಾನಿಯು ಇಡೀ ಪರಿಸರ ವ್ಯವಸ್ಥೆಗೆ ಅಪಾಯವನ್ನು ತಂದೊಡ್ಡಬಹುದು ಆದ್ದರಿಂದ, ಸಸ್ಯ ಮತ್ತು ಪ್ರಾಣಿಗಳನ್ನು ಸಂರಕ್ಷಿಸುವುದು ಬಹಳ ಮುಖ್ಯವಾದ ಸಂಗತಿ ಆಗಿದೆ. ಭಾರತವು ಈ ನಿಟ್ಟಿನಲ್ಲಿ ಪ್ರತಿ ವರ್ಷ, ಅಕ್ಟೋಬರ್ 2 ರಿಂದ 8 ರವರೆಗೆ ವನ್ಯಜೀವಿ ಸಪ್ತಾಹವನ್ನು ಆಚರಿಸುತ್ತದೆ. ಈ ಆಚರಣೆಯು ದೇಶದಲ್ಲಿರುವ ವೈವಿಧ್ಯಮಯ ಪ್ರಾಣಿಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ಈ ಸಪ್ತಾಹದಲ್ಲಿ ವನ್ಯಜೀವಿ ಸಂರಕ್ಷಣೆಯ ಮಹತ್ವವನ್ನು ಜನರಿಗೆ ತಿಳಿಸಲು ತಜ್ಞರು ಕಾರ್ಯಾಗಾರಗಳನ್ನು, ಅಭಿಯಾನಗಳನ್ನು ನಡೆಸುತ್ತಾರೆ. ಇದಲ್ಲದೇ, ಇದನ್ನು ಹೆಚ್ಚು ಹೆಚ್ಚು ಜನರಿಗೆ ತಲುಪಿಸುವಂತೆ ಮಾಡಲು ಹಲವಾರು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ವಿವಿಧ ಹಂತಗಳಲ್ಲಿ ಆಯೋಜಿಸಲಾಗುತ್ತದೆ.ಭಾರತವು ಜೈವಿಕ ಪ್ರಭೇದಗಳಿಗೆ ಹಾಟ್ ಸ್ಪಾಟ್ ಆಗಿದ್ದು, ಹಲವಾರು ಪ್ರಾಣಿ ಪ್ರಭೇದಗಳಿಗೆ ಸುರಕ್ಷಿತ ಆವಾಸ ಸ್ಥಾನವಾಗಿದೆ. ಭೂಮಿಯ ಮೇಲ್ಮೈಯ ಕೇವಲ 2.5% ನಷ್ಟು, ಭಾರತವು ಪ್ರಪಂಚದ 7% ಕ್ಕಿಂತ ಹೆಚ್ಚು ಜೀವವೈವಿಧ್ಯತೆಯನ್ನು ಹೊಂದಿದೆ. ಭಾರತದ ಪ್ರಾಣಿ ಲೋಕದ ಸಂಪತ್ತು ನಂಬಲಾಗದಷ್ಟು ವೈವಿಧ್ಯಮಯವಾಗಿದೆ, ಇದು ಪ್ರಪಂಚದ 7.4% ರಷ್ಟು ಪ್ರಾಣಿಗಳನ್ನು ಹೊಂದಿದೆ.
ಆದಾಗ್ಯೂ ಇಂದು ಭಾರತದ ಪ್ರಾಣಿಗಳ ಜಗತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಮನುಷ್ಯರ ಅತಿ ಆಸೆ ಮತ್ತು ಪ್ರಮಾದಗಳಿಂದ ಇದು ಸಂಕಷ್ಟದ ಸುಳಿಗಳಲ್ಲಿ ಸಿಲುಕಿದೆ. ಇದರಿಂದ ನಮ್ಮ ನೈಸರ್ಗಿಕ ಸಂಪತ್ತಿಗೆ ಬಹಳಷ್ಟು ಹಾನಿ ಆಗುತ್ತಿದೆ. ವನ್ಯ ಪ್ರಾಣಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಮಹತ್ತರವಾದ ಪ್ರಯತ್ನಗಳನ್ನು ನಾವು ಮಾಡಲೇ ಬೇಕಾಗಿದೆ. ಸರ್ಕಾರವು ಈಗಾಗಲೇ ಈ ಕುರಿತು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ದೇಶದಾದ್ಯಂತ ಎಲ್ಲಾ ರಾಜ್ಯಗಳು ವನ್ಯ ಜೀವಿ ಸರಂಕ್ಷಣೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಕರ್ನಾಟಕವು ಸಹ ಅತ್ಯಂತ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಈ ನಿಟ್ಟಿನಲ್ಲಿ ತನ್ನ ಹೆಜ್ಜೆಯನ್ನು ಮುಂದಿಟ್ಟಿದೆ. ಕರ್ನಾಟಕ ರಾಜ್ಯದ ಸುಮಾರು 22.61% ರಷ್ಟು ಭೂಮಿಯು ದಟ್ಟವಾದ ಕಾಡುಗಳಿಂದ ಆವೃತವಾಗಿದ್ದು ಇದು ವೈವಿಧ್ಯಮಯ ಪ್ರಾಣಿಗಳಿಗೆ ಆವಾಸ ಸ್ಥಾನವಾಗಿದೆ. ವಾಸ್ತವವಾಗಿ, ರಾಜ್ಯದಲ್ಲಿ ಕಂಡುಬರುವ ಅನೇಕ ಪ್ರಾಣಿ ಪ್ರಭೇದಗಳನ್ನು ಅಳಿವಿನಂಚಿನಲ್ಲಿರುವ ಅಥವಾ ಅಪಾಯದಲ್ಲಿರುವ ಜಾತಿಗಳೆಂದು ಗುರುತಿಸಲಾಗಿದೆ. ಅಷ್ಟೇ ಅಲ್ಲ! ಭಾರತದ 10% ಹುಲಿಗಳು ಮತ್ತು 25% ಆನೆಗಳು ಕರ್ನಾಟಕದಲ್ಲಿಯೇ ಇವೆ.
ಇಲ್ಲಿ ವೈವಿಧ್ಯಮಯ ಸಸ್ತನಿಗಳು, ಸರೀಸೃಪಗಳು, ಕೀಟಗಳು, ಪಕ್ಷಿಗಳು, ಉಭಯಚರಗಳು ಮತ್ತು ಮೀನುಗಳು ಕೂಡ ಇವೆ. ಕರ್ನಾಟಕ ರಾಜ್ಯವು ವನ್ಯಜೀವಿಗಳು ಮತ್ತು ಪ್ರಾಣಿ ಪ್ರಭೇದಗಳ ದೃಷ್ಟಿಯಿಂದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದಾಗಿದೆ. ನೀವು ಸಹ ವನ್ಯ ಜೀವಿ ಸಂರಕ್ಷಣೆಯ ನಿಟ್ಟಿನಲ್ಲಿ ಕೆಲವು ಜಾಗೃತಿ ಮೂಡಿಸುವ ಚಟುವಟಿಕೆಗಳಲ್ಲಿ ಭಾಗವಹಿಸಬಹುದು. ನೀವು ನಿಮ್ಮ ಕೊಡುಗೆ ನೀಡಲು ವನ್ಯಜೀವಿ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಿಗೂ ಭೇಟಿ ಸಹ ನೀಡಬಹುದು. ಬಂಡೀಪುರ ರಾಷ್ಟ್ರೀಯ ಉದ್ಯಾನವನ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ, ಭದ್ರಾ ವನ್ಯಜೀವಿ ಅಭಯಾರಣ್ಯ, ಭೀಮಗಡ ವನ್ಯಜೀವಿ ಅಭಯಾರಣ್ಯ ಮತ್ತು ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯಗಳು ಕರ್ನಾಟಕದ ಅತ್ಯಂತ ಜನಪ್ರಿಯ ವನ್ಯಜೀವಿ ಸ್ವರ್ಗಗಳಾಗಿವೆ. ನೀವು ಕಾವೇರಿ ವನ್ಯಜೀವಿ ಅಭಯಾರಣ್ಯ, ದಾಂಡೇಲಿ ವನ್ಯಜೀವಿ ಅಭಯಾರಣ್ಯ ಮತ್ತು ಜಯಮಂಗಲಿ ಬ್ಲಾಕ್‌ಬಕ್ ರಿಸರ್ವ್‌ಗೆ ಭೇಟಿ ನೀಡಬಹುದು. ಈ ವನ್ಯಜೀವಿ ಸಪ್ತಾಹದಂದು ವನ್ಯಜೀವಿಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡೋಣ, ವನ್ಯಜೀವಿ ರಕ್ಷಣೆಗೆ ಕೆಲಸ ಮಾಡುವವರನ್ನು ಬೆಂಬಲಿಸೋಣ ಮತ್ತು ನಮ್ಮ ಸಾಮಾಜಿಕ ಮಾಧ್ಯಮವನ್ನು ಅದರ ಬಗ್ಗೆ ಜಾಗೃತಿ ಮೂಡಿಸಲು ಬಳಸೋಣ.