Karnataka logo

Karnataka Tourism
GO UP
Kannada Rajyotsava

ಕರ್ನಾಟಕ ರಾಜ್ಯೋತ್ಸವ

separator
  /  ಕರ್ನಾಟಕ ರಾಜ್ಯೋತ್ಸವ

ಕನ್ನಡ ದಿನ ಎಂದೂ ಕರೆಯಲ್ಪಡುವ ಕರ್ನಾಟಕ ರಾಜ್ಯೋತ್ಸವವು ವಿಶ್ವದಾದ್ಯಂತದ ಕನ್ನಡಿಗರ ಜೀವನದಲ್ಲಿ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ಕೂಡಿಸಿ ಸ್ಥಾಪಿಸಲಾದ ಕರ್ನಾಟಕ ರಾಜ್ಯದ ಜನನರ ನೆನಪಿಗಾಗಿ, ನವೆಂಬರ್ ೧ ಅನ್ನು ಪ್ರತಿವರ್ಷ ಕರ್ನಾಟಕ ದಿನವಾಗಿ ಬಹಳ ಆಡಂಬರ ಮತ್ತು ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ.

ಕನ್ನಡ ಮಾತನಾಡುವ ಜನರಿಗೆ ಒಂದು ವಿಶಿಷ್ಟ ಮತ್ತು ಏಕೀಕೃತ ರಾಜ್ಯದ ಬೇಕೆಂಬ ಕಲ್ಪನೆಯನ್ನು ೧೯೦೫ನೇ ಇಸವಿಯಲ್ಲಿಯೇ ಕ್ರಾಂತಿಕಾರಿ ಕನ್ನಡ ಪ್ರಶಸ್ತಿ ವಿಜೇತ ಅಲೂರು ವೆಂಕಟರಾವ್ ಅವರು ಕಟ್ಟಿಕೊಟ್ಟಿದ್ದರು. ಇವರನ್ನು ಕರ್ನಾಟಕ ಕುಲಪುರೋಹಿತ ಎಂದು ಕರೆಯುಲಾಗುತ್ತದೆ. ಭಾರತಗಣರಾಜ್ಯವಾಗುತ್ತಿದ್ದಂತೆ ಪ್ರಾದೇಶಿಕ ಆಡಳಿತವನ್ನು ಸ್ಥಳೀಯರ ಅನುಕೂಲಕ್ಕೆ ತಕ್ಕಂತೆ ಬದಲಿಸುವ ಆಲೋಚನೆ ಮತ್ತು ಕನ್ನಡಿಗರಿಗೆ ಪ್ರತ್ಯೇಕ ರಾಜ್ಯ ನಿರ್ಮಾಣದ ಕನಸು ನಾಯಕರಲ್ಲಿ ಮತ್ತೆ ಮುಂಚೂಣಿಗೆ ಬಂದಿತು. ನವೆಂಬರ್ ೧, ೧೯೫೬ ರಂದು, ಬಹುನಿರೀಕ್ಷಿತ ಕನಸು ನನಸಾಯಿತು ಮತ್ತು ಮೈಸೂರು ರಾಜ್ಯ (ಮೈಸೂರಿನ ಪ್ರಬಲ ರಾಜ ಸಂಸ್ಥಾನದ ಹೆಸರನ್ನು ಆಧರಿಸಿ ನೀಡಿದ ಹೆಸರು) ಜನಿಸಿತು. ನಂತರ ಈ ಹೆಸರನ್ನು 1973 ರಲ್ಲಿ ಕರ್ನಾಟಕ ಎಂದು ಬದಲಾಯಿಸಲಾಯಿತು.

ಹೊಸದಾಗಿ ರೂಪುಗೊಂಡ ರಾಜ್ಯವು ಹಿಂದಿನ ರಾಜಾಡಳಿತದಲ್ಲಿದ್ದ ಮೈಸೂರು, ಮದ್ರಾಸ್ ಮತ್ತು ಬಾಂಬೆ ಪ್ರಾಂತ್ಯಗಳ ಕನ್ನಡ-ಮಾತನಾಡುವ ಪ್ರದೇಶಗಳು ಮತ್ತು ಹೈದರಾಬಾದ್ ನಿಜಾಮರ ಆಡಳಿತದಲ್ಲಿದ್ದ ವಿವಿಧ ಭಾಗಗಳನ್ನು ಒಳಗೊಂಡಿದೆ. ದೀರ್ಘ ಕಾಲದ ಒಂದು ಉದಾತ್ತ ಕನಸು ಈ ಮೂಲಕ ವಾಸ್ತವಕ್ಕೆ ಪರಿವರ್ತನೆಯಾಗಿದ್ದು, ಎಲ್ಲಾ ಕನ್ನಡ ಮಾತನಾಡುವ ಜನರ ಏಕೀಕೃತ ಅಭಿವ್ಯಕ್ತಿಯ ಪ್ರಾರಂಭವನ್ನು ಹೆಮ್ಮೆಯಿಂದ ಆಚರಿಸುವ ಅಗತ್ಯವಿದೆ.