Karnataka Tourism
GO UP
kadalekai parishe

ಕಡಲೆಕಾಯಿ ಪರಿಷೆ

separator
  /  ಕಡಲೆಕಾಯಿ ಪರಿಷೆ

ಕ್ರಿ.ಶ. 1537 ರಲ್ಲಿ ಪ್ರಾರಂಭವಾದ ಬಸವನಗುಡಿ ಉತ್ಸವವು ಒಂದು ಪೌರಾಣಿಕ ಮೂಲ ಕಥೆಯನ್ನು ಹೊಂದಿದೆ. ಆ ಸಮಯದಲ್ಲಿ ಕಡಲೆಕಾಯಿ ಹೊಲಗಳು ರಾತ್ರಿಯಲ್ಲಿ ಕೆರಳಿದ ಬಸವನಿಂದ ಕ್ರೂರವಾಗಿ ನಾಶವಾಗುತ್ತಿದ್ದವು. ಕೃಷಿ ಹೊಲಗಳನ್ನು ನಾಶಗೊಳಿಸಿ ಓಡಾಡುತ್ತಿದ್ದ ಬಸವನನ್ನು, ಭಗವಂತ  ಶಿವನ ವಾಹನ ನಂದಿ ಎಂದು ಹೇಳಲಾಯಿತು.

ಭಾರತದ ಕರ್ನಾಟಕ ರಾಜ್ಯವನ್ನು ಬಲಪಡಿಸಿದ ಕೆಂಪೇ ಗೌಡ ಅವರು ಹಿಂದೂಗಳ ಪವಿತ್ರ ಯಕ್ಷ ದೇವತೆಯನ್ನು ಸಮಾಧಾನಪಡಿಸಲು ನಿರ್ಧರಿಸಿದರು, ಮತ್ತು ಬಸವನಗುಡಿಯ ಬೆಟ್ಟದ ಮೇಲೆ ದೇವಾಲಯವನ್ನು ‘ದೊಡ್ಡ ಬಸವ’ ನಿಗೆ(ಜನಪ್ರಿಯವಾಗಿ ನಂದಿ ದೇವಸ್ಥಾನ ಎಂದು ಕರೆಯಲಾಗುತ್ತದೆ) ಅರ್ಪಿಸಿದರು ಮತ್ತು ಪವಿತ್ರ ಬಸವನನ್ನು ಸ್ಥಾಪಿಸಿದರು. ಆಚರಣೆಯಾಗಿ, ರೈತರು ನಂದಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಕಡಲೆಕಾಯಿಯ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸುವ ಪವಿತ್ರ ಆಚರಣೆಯನ್ನು ಅನುಸರಿಸುತ್ತಾರೆ!

ಹಬ್ಬಕ್ಕೆ ನಿಗದಿತ ದಿನಾಂಕವೇನೂ ಇಲ್ಲ, ಅದು ಸಾಮಾನ್ಯವಾಗಿ ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಇರುತ್ತದೆ. ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ನಡೆಯುವ ಈ ಉತ್ಸವಕ್ಕೆ, ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಒಟ್ಟಾಗಿ ಸೇರುತ್ತಾರೆ. ರೈತರು ಬಸವನಗುಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಪ್ಪೆ ಸುಲಿಯದ ಕಡೆಲೆಕಾಯಿ, ಬೇಯಿಸಿದ ಕಡಲೆಕಾಯಿ ಮತ್ತು ಹುರಿದ ಕಡಲೆಕಾಯಿ ರಾಶಿಗಳನ್ನು ಹಾಕುತ್ತಾರೆ ಮತ್ತು ಅವರ ಕೃಷಿ ಉತ್ಪನ್ನಗಳು ಮಾರಾಟವಾಗಲು ಕಾದಿರುತ್ತಾರೆ.

ಭಾರತದ ಈ ಐಟಿ ನಗರದಲ್ಲಿ, ಜನರು ಪ್ರತಿವರ್ಷ ಬಸವನಗುಡಿಯ ರಸ್ತೆಯಲ್ಲಿ ಸೇರುತ್ತಾರೆ ಮತ್ತು  ಕರಕುಶಲ ಕಲಾಕೃತಿಗಳು, ಸಣ್ಣ ಸಣ್ಣ ಆಭರಣಗಳು, ಮಿಠಾಯಿಗಳು, ಬಟ್ಟೆಗಳು, ಜನಪ್ರಿಯ ಮೆಣಸಿನಕಾಯಿ ಬೋಂಡಾ ಮತ್ತು ಆನಂದ ನೀಡುವ ರಸಭರಿತ ಮೈಸೂರು ಪಾಕ್ ನಂತಹ ತಿಂಡಿಗಳೊಂದಿಗೆ ಇಂತಹ ಆಹ್ಲಾದಕರ ವಾತಾವರಣ ಹಾಗೂ ಸುತ್ತಮುತ್ತಲಿನ ಸೊಂಪಾದ ಹಸಿರನ್ನು  ಆನಂದಿಸುತ್ತಾರೆ.

ಈ ವಿನೋದದ ಮತ್ತು ಉಲ್ಲಾಸದ ಸ್ಥಳವನ್ನು ಕಂಡುಹಿಡಿಯಲು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ.

ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣ ಕೇವಲ ಒಂದೂವರೆ ಕಿ.ಮೀ. ದೂರದಲ್ಲಿದೆ. ವಿಶೇಷ ಪೂಜೆ ಮತ್ತು ಪ್ರಾರ್ಥನೆ ಮುಗಿದ ನಂತರ ನಡೆಯುವ ಈ ವಾರ್ಷಿಕ ಕಡಲೆಕಾಯಿ ಪರಿಷೆಯ ಬಗೆ ಬಗೆಯ ಚಟುವಟಿಕೆಗಳನ್ನು ಯಾರೂ ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ.

ಇತಿ-ಮಿತಿಯ ಕಡಲೆಕಾಯಿ ಪರಿಷೆ – “ಹೊಸ ಸಾಮಾನ್ಯ” ಹೆಸರಿಗೆ ಸರಿಹೊಂದುವ ಒಂದು ಬದಲಾವಣೆ :

ಕಡಲೆಕಾಯಿ ಪರಿಷೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಪ್ರಸಿದ್ಧ ಕಡಲೆಕಾಯಿ ಉತ್ಸವವನ್ನು ವೈಭವ, ಪರಂಪರೆ ಮತ್ತು ಬಹಳ ಅದ್ಧೂರಿಯಿಂದ ಬೆಂಗಳೂರಿನಲ್ಲಿ ಪ್ರತಿವರ್ಷವೂ  ಆಚರಿಸಲಾಗುವುದು. 2020 ರಲ್ಲಿ, ಕರೋನಾ ಭಯವು ದೇಶವನ್ನು ಭದ್ರವಾಗಿ ಹಿಡಿದಿರುವುದರಿಂದ ಮತ್ತು COVID-19 ಹರಡುವ ಭೀತಿ ಮುಂದುವರಿದಿರುವುದರಿಂದ ಹೆಚ್ಚಿನ ಉತ್ಸವಗಳ ಆಚರಣೆಗಳು ಸಂಪೂರ್ಣವಾಗಿ ಕಡಿಮೆಯಾಗಿವೆ.

ಬಸವನಗುಡಿ ಉತ್ಸವವು ಅದೇ ಮಾರ್ಗವನ್ನು ಅನುಸರಿಸುತ್ತದೆ. ಈ ವರ್ಷದ ಕಡಲೆಕಾಯಿ ಪರಿಷೆಯು   ಡಿಸೆಂಬರ್ 13, 2020 ರಿಂದ ಡಿಸೆಂಬರ್ 16, 2020 ರ ವರೆಗೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ (ಆದರೂ ಕಡಲೆಕಾಯಿ ಮಾರಾಟವನ್ನು ದೇವಾಲಯದ ಆವರಣಕ್ಕೆ ಸೀಮಿತಗೊಳಿಸಲಾಗಿದೆ).

ಆದರೆ COVID-19 ರ ನಿಟ್ಟಿನಲ್ಲಿ, ಕಡಲೆಕಾಯಿ ಬೆಳೆಯ ಮೊದಲ ಇಳುವರಿಯನ್ನು ಸ್ವಾಗತಿಸುವ ಎರಡು ದಿನಗಳ ಜಾತ್ರೆಯಾದ ಬಸವನಗುಡಿ ಕಡಲೆಕಾಯಿ ಪರಿಷೆ, ಬುಲ್ ಟೆಂಪಲ್ ಫೆಸ್ಟಿವಲ್‌ನ ವಿಶಿಷ್ಟ ಲಕ್ಷಣವಾಗಿದ್ದ ಭವ್ಯತೆಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ವಿಶ್ವವ್ಯಾಪಿ ಪಿಡುಗಿನ ಪರಿಣಾಮಗಳ ಹಿನ್ನೆಲೆಯಲ್ಲಿ, ದಕ್ಷಿಣ ಬೆಂಗಳೂರಿನ ಬಸವನಗುಡಿಯ ಬೀದಿಗಳಲ್ಲಿ ಕಡಲೆಕಾಯಿ ಕಿಕ್ಕಿರಿದು ತುಂಬಿರುವ ದೃಶ್ಯವು 2 ದಿನಗಳ ಸೀಮಿತ ಆಚರಣೆಯಾಗಿದೆ.