ಬೆಂಗಳೂರು ನಗರದ Thumby Aviation ನಿಂದ Helii Taxi ಸೇವೆಗಳು ಕರ್ನಾಟಕದಲ್ಲಿ ವೈಮಾನಿಕ ಅನುಭವ ಸವಾರಿಗಳನ್ನು ಮತ್ತೆ ಆರಂಭಿಸಿದೆ.
ಈ ಸೇವೆಯು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲ್ಪಡುವ ಕೂರ್ಗ್‌ನ ಅದ್ಭುತ ನೋಟವನ್ನು ನೀಡುತ್ತದೆ. ನೀವು ಈಗ ಕೂರ್ಗ್ ಸ್ಥಳಕ್ಕೆ ಹೊಗಿ ಹಚ್ಚ ಹಸಿರಿನ ಕಾಡುಗಳು, ಮಂಜಿನಿಂದ ಕೂಡಿದ ಬೆಟ್ಟಗಳು, ಕಾಫಿ ತೋಟಗಳು ಮತ್ತು ಇತರ ಅದ್ಭುತ ದೃಶ್ಯಗಳನ್ನು ವೀಕ್ಷಿಸಬಹುದು.
Helii Taxi ಹೆಲಿಕಾಪ್ಟರ್ ಜಾಯ್‌ರೈಡ್ ನ ನಿಗದಿತ ದಿನಾಂಕ ಮತ್ತು ಸಮಯಗಳು
ಕೂರ್ಗ್ ವೈಮಾನಿಕ ನೋಟವನ್ನು ಡಿಸೆಂಬರ್ 23 2020 ರಿಂದ ಜನವರಿ 1 2021 ರವರೆಗೆ ನಿಗದಿಪಡಿಸಲಾಗಿದೆ.
ಜಾಯ್ ರೈಡ್ ಬೆಳಿಗ್ಗೆ 09:30 ರಿಂದ ಸಂಜೆ 05:30 ವರೆಗೆ ಲಭ್ಯವಿದೆ.
ಹೆಲಿ ಟ್ಯಾಕ್ಸಿ ಬೆಲೆ
ನೀವು ಈಗ 15 ನಿಮಿಷಗಳ ಜಾಯ್ ರೈಡ್ ಪ್ರತಿ ವ್ಯಕ್ತಿಗೆ ರೂ.5500 ಗೆ ಕೂರ್ಗ್ ವೈಮಾನಿಕ ದೃಶ್ಯದ ಅನುಭವವನ್ನು ಪಡೆದುಕೊಳ್ಳಬಹುದು .
ಅವರು ಪ್ರತಿ ವ್ಯಕ್ತಿಗೆ 3000 ರೂಪಾಯಿಗೆ ಕಡಿಮೆ ಸಮಯದ ವೈಮಾನಿಕ ನೋಟವನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ 500 ರೂ.ಗಳ ರಿಯಾಯಿತಿ ಸಿಗುತ್ತದೆ.
ಬುಕ್ ಮಾಡುವುದು ಹೇಗೆ
ಬೆಂಗಳೂರು Helii Taxi ಯನ್ನು ಈ ಕೆಳಗಿನ ಯಾವುದೇ ವಿಧಾನಗಳಿಂದ ಕಾಯ್ದಿರಿಸಬಹುದು:
- + 91-09400399999 ಗೆ ಗ್ರಾಹಕ ಸೇವೆಗಳಿಗೆ ಕರೆ ಮಾಡುವ ಮೂಲಕ.
- ಮಡಿಕೇರಿಯ ಮನ್ಸ್ ಕಾಂಪೌಂಡ್, ಜೂನಿಯರ್ ಕಾಲೇಜ್ ಮೈದಾನದಲ್ಲಿರುವ ಕೌಂಟರ್ ಮೂಲಕ ನೇರವಾಗಿ ಬುಕ್ ಮಾಡಬಹುದು
ಸ್ಥಳ
ಜೂನಿಯರ್ ಕಾಲೇಜು ಮೈದಾನ. ಮನ್ಸ್ ಕಾಂಪೌಂಡ್, ಮಡಿಕೇರಿ 571201
ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತ, ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಸಂತೋಷದಿಂದ ಹಿಗ್ಗುತ್ತಾ ಸವಾರಿಯನ್ನು ಆನಂದಿಸಿ.