ಕರ್ನಾಟಕದಲ್ಲಿ ಗಣೇಶ ಚತುರ್ಥಿ ಆಚರಣೆ

ಗಣೇಶ ಚತುರ್ಥಿ ಹಬ್ಬ ಹಿಂದುಗಳ ಒಂದು ಪ್ರಮುಖ ಹಬ್ಬ. ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಒಂದು. ಇದನ್ನು ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇವ ಗಣೇಶನ ಜನ್ಮ ದಿನದಂದುಆಚರಿಸಲಾಗುತ್ತದೆ. ಈ ದಿನದಂದೇ ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಮುಖದ ಜಾಗದಲ್ಲಿ ಆನೆಯ ಮುಖವನ್ನು ಸೇರಿಸಲಾಯಿತು. ಈ ಮೂಲಕ ಗಣೇಶನೂ ಗಜಾನನ ಆದನು. ಗಣೇಶನ ಮಾತಾಪಿತರು ಶಿವ ಮತ್ತು ಪಾರ್ವತಿ. ಶಿವ ಮತ್ತು
ಪಾರ್ವತಿಯ ಪುತ್ರನಾದ ಗಣೇಶ ಅದೃಷ್ಟ, ಸಮೃದ್ಧಿ ಮತ್ತು ಬುದ್ಧಿವಂತಿಕೆಯ ದೇವರು ಎಂದು ಭಕ್ತರು ನಂಬಿದ್ದಾರೆ.ಅದಕ್ಕಾಗಿಯೇ ಜನರು ಅದೃಷ್ಟಕ್ಕಾಗಿ ಮತ್ತು ಯಾವುದೇ ವಿಘ್ನ ಬಾರದೇ ಇರಲು ಯಾವುದೇ ಪವಿತ್ರ ಸಂದರ್ಭಕ್ಕೂ ಮುನ್ನ ಗಣೇಶನನ್ನು ಪೂಜಿಸುತ್ತಾರೆ. ಹೀಗಾಗಿ ಅವನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ.
ಈ ಗಣೇಶ ಹಬ್ಬದಂದು ಭಕ್ತರು ತಮ್ಮ ಮನೆಗಳಿಗೆ ಗಣಪನನ್ನು ಸಂಭ್ರಮ ಸಡಗರದಿಂದ ಆಹ್ವಾನಿಸುತ್ತಾರೆ. ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಕೆಲವರು ಗಣಪನನ್ನು ಐದು ದಿನಗಳವರೆಗೆ ಪ್ರತಿಷ್ಠಾಪಿಸಿ ಪೂಜಿಸಿದರೇ ಇನ್ನು ಕೆಲವರು 10, 11 ಗಳವರೆಗೆ ಇಟ್ಟು ಪೂಜಿಸುತ್ತಾರೆ. ಮೋದಕ, ಕಾರಂಜಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ನಂತರ ಗಣಪನನ್ನು ಸಾಂಪ್ರದಾಯಿಕ ವಿಧಾನದಲ್ಲಿ ಭಕ್ತಿಯಿಂದ ಪೂಜಿಸುತ್ತಾರೆ. ನಂತರ ಸಂಭ್ರಮ, ಸಡಗರದಿಂದ ಹಾಡು ಮತ್ತು ನೃತ್ಯ ಮಾಡುತ್ತಾ ಗಣೇಶನನ್ನು ಮೆರವಣಿಗೆ ಮಾಡುತ್ತಾರೆ. ನಂತರ ನದಿಯ ಬಳಿ ತಂದು ಮತ್ತೆ ಪೂಜಿಸಿ ನದಿಯಲ್ಲಿ ಮುಳುಗಿಸುತ್ತಾರೆ.
ಈ ಮುಳುಗಿಸುವಿಕೆಯು ತನ್ನ ಭಕ್ತರ ಎಲ್ಲಾ ದುರದೃಷ್ಟಗಳನ್ನು ವಶಪಡಿಸಿಕೊಳ್ಳುವುದರಿಂದ ಗಣೇಶನನ್ನು ಕೈಲಾಸಕ್ಕೆತನ್ನ ನಿವಾಸದ ಕಡೆಗೆ ಬೀಳ್ಕೊಡುವುದನ್ನು ಸಂಕೇತಿಸುತ್ತದೆ.ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಆಚರಣೆಗಳು ಭವ್ಯ ಮತ್ತು ವಿಜೃಂಭಣೆಯಿಂದ ಕೂಡಿದ್ದರೂ ಸಹ , ಕರ್ನಾಟಕ ಮತ್ತು ಮಹಾರಾಷ್ಟ್ರಗಳು ತಮ್ಮ ಗಣೇಶ ಹಬ್ಬಕ್ಕೆ ಇಡೀ ದೇಶಾದ್ಯಂತ ಜನಪ್ರಿಯವಾಗಿವೆ. ಪ್ರತಿ ವರ್ಷ, ಕರ್ನಾಟಕ ಸರ್ಕಾರವು ಬೃಹತ್ ಗಣೇಶ ಮೂರ್ತಿಗಳನ್ನು ವರ್ಣಮಯವಾಗಿ ಅಲಂಕರಿಸಿದ ತಾತ್ಕಾಲಿಕ ಮಂಟಪಗಳಲ್ಲಿ ಅಥವಾ ಪಂಡಲ್‌ಗಳಲ್ಲಿ ಸ್ಥಾಪಿಸುತ್ತದೆ. ಈ ಅಲಂಕಾರಿಕ ಗಣಪಗಳನ್ನು ಸಾರ್ವಜನಿಕರ ಕಣ್ಮನಗಳನ್ನು ಸೆಳೆಯುತ್ತದೆ. ಚಿಕ್ಕ ಚಿಕ್ಕ ಬಾಳೆ ಸಸಿಗಳು, ಹೂವಿನ ಹಾರಗಳು ಮತ್ತು ನೂರಾರು ದೀಪಗಳಂತಹ ಅಲಂಕಾರಿಕ ವಸ್ತುಗಳಿಂದ ಈ ಪಂಡಲ್‌ಗಳನ್ನು ಅಲಂಕರಿಸಲಾಗುತ್ತದೆ. ಈ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಸ್ತುತ ಘಟನೆಗಳು ಅಥವಾ ಧಾರ್ಮಿಕ ವಿಷಯಗಳನ್ನು ಚಿತ್ರಿಸುವ ಥೀಮ್ ಆಧಾರಿತ ಅಲಂಕಾರಗಳನ್ನು ಕೂಡ ನಾವು ನೋಡಿ ಆನಂದಿಸಬಹುದು.
ಈ ವರ್ಷವೂ ಸಹ ಕೊರೊನಾ ಇರುವುದರಿಂದ ಹೆಚ್ಚಿನ ಜಾಗೃತೆ ಮತ್ತು ಮುನ್ನೆಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಕೋವಿಡ್ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ನಾವೆಲ್ಲರೂ ಅನುಸರಿಸಬೇಕು. ಈ ವರ್ಷ ಸಾರ್ವಜನಿಕ ಗಣೇಶ ಆಚರಣೆಗಳು ನಡೆದರೆ, ಎಲ್ಲರ ಸುರಕ್ಷತೆಗಾಗಿ ಒಂದು ಸ್ಥಳದಲ್ಲಿ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗುತ್ತದೆ.

ಸಾರ್ವಜನಿಕ ಸ್ಥಳ, ಪ್ರದೇಶಗಳಲ್ಲಿಯೂ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಜೊತೆಗೆ ಹಲವುಸಾಮಾಜಿಕ, ಸಮುದಾರ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳು ಹಲವಾರುಚಟುವಟಿಕೆಗಳನ್ನು ಹೊಂದಿದ್ದು ಪ್ರತಿಯೊಬ್ಬರ ಧಾರ್ಮಿಕ ಭಾವನೆಗಳನ್ನು ಉದ್ದೀಪನೆಗೊಳಿಸುತ್ತವೆ. ಹಬ್ಬಗಳೆಂದರೇ ರುಚಿಯಾದ ಊಟ ಮತ್ತು ತಿಂಡಿಗಳಿರಬೇಕಲ್ಲವೇ? ಇಲ್ಲದಿದ್ದರೇ ಹಬ್ಬವೇ ಅಪೂರ್ಣವಾದಂತೆ ಅನಿಸುತ್ತದೆ. ಗಣೇಶ ಚತುರ್ಥಿಯ ವಿಶೇಷ ಆಹಾರ ಎಂದರೇ ಮೋದಕ. ಇದು ಗಣಪನಿಗೆ ಬಲು ಪ್ರಿಯ. ಇದು ಹಬ್ಬದ ಮುಖ್ಯವಾದ ಸಿಹಿ ಪದಾರ್ಥವಾಗಿದೆ. ಈ ಹಬ್ಬದ ಇನ್ನೊಂದು ವಿಶೇಷ ಸಿಹಿ ತಿಂಡಿ ಎಂದರೇ ಕಾರಂಜಿ. ಮಹಿಳೆಯರು ಇವುಗಳನ್ನು ಸಂಭ್ರಮದಿಂದ ತಯಾರಿಸಿ, ತಮ್ಮ ನೆರೆಹೊರೆಯವರಿಗೆ, ಬಳಗಕ್ಕೆ ಹಂಚಿ ಸಂಭ್ರಮಿಸುತ್ತಾರೆ.
ಕರ್ನಾಟಕದ ಮಹಿಳೆಯರು ಒಳ್ಳೆಯ ಮತ್ತು ಸಮೃದ್ಧ ಜೀವನಕ್ಕಾಗಿ. ಈ ದಿನದಂದು 'ಮಂಗಳ ಗೌರಿ' ವ್ರತವನ್ನು ಭಕ್ತಿ, ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ, ಈ ವರ್ಷ, ಸೆಪ್ಟೆಂಬರ್ 10, 2021 ರಂದು ಗಣೇಶ ಚತುರ್ಥಿ ಹಬ್ಬವನ್ನು ಭಾರತದಾದ್ಯಂತ ಸಡಗರದಿಂದ ಆಚರಿಸಲಾಗುತ್ತದೆ.
ಗಣೇಶ ಚತುರ್ಥಿ ಹಬ್ಬ ಹಿಂದುಗಳ ಒಂದು ಪ್ರಮುಖ ಹಬ್ಬ. ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಇದು ಒಂದು. ಇದನ್ನು ಭಾರತದಾದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇವ ಗಣೇಶನ ಜನ್ಮ ದಿನದಂದುಆಚರಿಸಲಾಗುತ್ತದೆ. ಈ ದಿನದಂದೇ ತಂದೆ ಶಿವನಿಂದ ತುಂಡರಿಸಲ್ಪಟ್ಟ ಗಣೇಶನ ಮುಖದ ಜಾಗದಲ್ಲಿ ಆನೆಯ ಮುಖವನ್ನು ಸೇರಿಸಲಾಯಿತು. ಈ ಮೂಲಕ ಗಣೇಶನೂ ಗಜಾನನ ಆದನು. ಗಣೇಶನ ಮಾತಾಪಿತರು ಶಿವ ಮತ್ತು ಪಾರ್ವತಿ. ಶಿವ ಮತ್ತು
ಪಾರ್ವತಿಯ ಪುತ್ರನಾದ ಗಣೇಶ ಅದೃಷ್ಟ, ಸಮೃದ್ಧಿ ಮತ್ತು ಬುದ್ಧಿವಂತಿಕೆಯ ದೇವರು ಎಂದು ಭಕ್ತರು ನಂಬಿದ್ದಾರೆ.ಅದಕ್ಕಾಗಿಯೇ ಜನರು ಅದೃಷ್ಟಕ್ಕಾಗಿ ಮತ್ತು ಯಾವುದೇ ವಿಘ್ನ ಬಾರದೇ ಇರಲು ಯಾವುದೇ ಪವಿತ್ರ ಸಂದರ್ಭಕ್ಕೂ ಮುನ್ನ ಗಣೇಶನನ್ನು ಪೂಜಿಸುತ್ತಾರೆ. ಹೀಗಾಗಿ ಅವನನ್ನು ವಿಘ್ನಹರ್ತ ಎಂದೂ ಕರೆಯುತ್ತಾರೆ.
ಈ ಗಣೇಶ ಹಬ್ಬದಂದು ಭಕ್ತರು ತಮ್ಮ ಮನೆಗಳಿಗೆ ಗಣಪನನ್ನು ಸಂಭ್ರಮ ಸಡಗರದಿಂದ ಆಹ್ವಾನಿಸುತ್ತಾರೆ. ಕಚೇರಿಗಳು, ಸಾರ್ವಜನಿಕ ಸ್ಥಳಗಳಲ್ಲಿಯೂ ಗಣೇಶನನ್ನು ಪ್ರತಿಷ್ಠಾಪಿಸುತ್ತಾರೆ. ಕೆಲವರು ಗಣಪನನ್ನು ಐದು ದಿನಗಳವರೆಗೆ ಪ್ರತಿಷ್ಠಾಪಿಸಿ ಪೂಜಿಸಿದರೇ ಇನ್ನು ಕೆಲವರು 10, 11 ಗಳವರೆಗೆ ಇಟ್ಟು ಪೂಜಿಸುತ್ತಾರೆ. ಮೋದಕ, ಕಾರಂಜಿಯನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ನಂತರ ಗಣಪನನ್ನು ಸಾಂಪ್ರದಾಯಿಕ ವಿಧಾನದಲ್ಲಿ ಭಕ್ತಿಯಿಂದ ಪೂಜಿಸುತ್ತಾರೆ. ನಂತರ ಸಂಭ್ರಮ, ಸಡಗರದಿಂದ ಹಾಡು ಮತ್ತು ನೃತ್ಯ ಮಾಡುತ್ತಾ ಗಣೇಶನನ್ನು ಮೆರವಣಿಗೆ ಮಾಡುತ್ತಾರೆ. ನಂತರ ನದಿಯ ಬಳಿ ತಂದು ಮತ್ತೆ ಪೂಜಿಸಿ ನದಿಯಲ್ಲಿ ಮುಳುಗಿಸುತ್ತಾರೆ.

ಈ ಮುಳುಗಿಸುವಿಕೆಯು ತನ್ನ ಭಕ್ತರ ಎಲ್ಲಾ ದುರದೃಷ್ಟಗಳನ್ನು ವಶಪಡಿಸಿಕೊಳ್ಳುವುದರಿಂದ ಗಣೇಶನನ್ನು ಕೈಲಾಸಕ್ಕೆತನ್ನ ನಿವಾಸದ ಕಡೆಗೆ ಬೀಳ್ಕೊಡುವುದನ್ನು ಸಂಕೇತಿಸುತ್ತದೆ.ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಆಚರಣೆಗಳು ಭವ್ಯ ಮತ್ತು ವಿಜೃಂಭಣೆಯಿಂದ ಕೂಡಿದ್ದರೂ ಸಹ , ಕರ್ನಾಟಕ ಮತ್ತು ಮಹಾರಾಷ್ಟ್ರಗಳು ತಮ್ಮ ಗಣೇಶ ಹಬ್ಬಕ್ಕೆ ಇಡೀ ದೇಶಾದ್ಯಂತ ಜನಪ್ರಿಯವಾಗಿವೆ. ಪ್ರತಿ ವರ್ಷ, ಕರ್ನಾಟಕ ಸರ್ಕಾರವು ಬೃಹತ್ ಗಣೇಶ ಮೂರ್ತಿಗಳನ್ನು ವರ್ಣಮಯವಾಗಿ ಅಲಂಕರಿಸಿದ ತಾತ್ಕಾಲಿಕ ಮಂಟಪಗಳಲ್ಲಿ ಅಥವಾ ಪಂಡಲ್‌ಗಳಲ್ಲಿ ಸ್ಥಾಪಿಸುತ್ತದೆ. ಈ ಅಲಂಕಾರಿಕ ಗಣಪಗಳನ್ನು ಸಾರ್ವಜನಿಕರ ಕಣ್ಮನಗಳನ್ನು ಸೆಳೆಯುತ್ತದೆ. ಚಿಕ್ಕ ಚಿಕ್ಕ ಬಾಳೆ ಸಸಿಗಳು, ಹೂವಿನ ಹಾರಗಳು ಮತ್ತು ನೂರಾರು ದೀಪಗಳಂತಹ ಅಲಂಕಾರಿಕ ವಸ್ತುಗಳಿಂದ ಈ ಪಂಡಲ್‌ಗಳನ್ನು ಅಲಂಕರಿಸಲಾಗುತ್ತದೆ. ಈ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಸ್ತುತ ಘಟನೆಗಳು ಅಥವಾ ಧಾರ್ಮಿಕ ವಿಷಯಗಳನ್ನು ಚಿತ್ರಿಸುವ ಥೀಮ್ ಆಧಾರಿತ ಅಲಂಕಾರಗಳನ್ನು ಕೂಡ ನಾವು ನೋಡಿ ಆನಂದಿಸಬಹುದು.
ಈ ವರ್ಷವೂ ಸಹ ಕೊರೊನಾ ಇರುವುದರಿಂದ ಹೆಚ್ಚಿನ ಜಾಗೃತೆ ಮತ್ತು ಮುನ್ನೆಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಕೋವಿಡ್ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ನಾವೆಲ್ಲರೂ ಅನುಸರಿಸಬೇಕು. ಈ ವರ್ಷ ಸಾರ್ವಜನಿಕ ಗಣೇಶ ಆಚರಣೆಗಳು ನಡೆದರೆ, ಎಲ್ಲರ ಸುರಕ್ಷತೆಗಾಗಿ ಒಂದು ಸ್ಥಳದಲ್ಲಿ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗುತ್ತದೆ.

ಸಾರ್ವಜನಿಕ ಸ್ಥಳ, ಪ್ರದೇಶಗಳಲ್ಲಿಯೂ ಗಣೇಶ ಚತುರ್ಥಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಜೊತೆಗೆ ಹಲವುಸಾಮಾಜಿಕ, ಸಮುದಾರ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮಗಳು ಹಲವಾರುಚಟುವಟಿಕೆಗಳನ್ನು ಹೊಂದಿದ್ದು ಪ್ರತಿಯೊಬ್ಬರ ಧಾರ್ಮಿಕ ಭಾವನೆಗಳನ್ನು ಉದ್ದೀಪನೆಗೊಳಿಸುತ್ತವೆ. ಹಬ್ಬಗಳೆಂದರೇ ರುಚಿಯಾದ ಊಟ ಮತ್ತು ತಿಂಡಿಗಳಿರಬೇಕಲ್ಲವೇ? ಇಲ್ಲದಿದ್ದರೇ ಹಬ್ಬವೇ ಅಪೂರ್ಣವಾದಂತೆ ಅನಿಸುತ್ತದೆ. ಗಣೇಶ ಚತುರ್ಥಿಯ ವಿಶೇಷ ಆಹಾರ ಎಂದರೇ ಮೋದಕ. ಇದು ಗಣಪನಿಗೆ ಬಲು ಪ್ರಿಯ. ಇದು ಹಬ್ಬದ ಮುಖ್ಯವಾದ ಸಿಹಿ ಪದಾರ್ಥವಾಗಿದೆ. ಈ ಹಬ್ಬದ ಇನ್ನೊಂದು ವಿಶೇಷ ಸಿಹಿ ತಿಂಡಿ ಎಂದರೇ ಕಾರಂಜಿ. ಮಹಿಳೆಯರು ಇವುಗಳನ್ನು
ಸಂಭ್ರಮದಿಂದ ತಯಾರಿಸಿ, ತಮ್ಮ ನೆರೆಹೊರೆಯವರಿಗೆ, ಬಳಗಕ್ಕೆ ಹಂಚಿ ಸಂಭ್ರಮಿಸುತ್ತಾರೆ.