GO UP
Image Alt

ಏಕವ್ಯಕ್ತಿ ಪ್ರಯಾಣಿಕರು

separator
  /  ಏಕವ್ಯಕ್ತಿ ಪ್ರಯಾಣಿಕರು

ಇಡೀ ಭಾರತವು ಭೇಟಿ ನೀಡಬೇಕಾದ ಅದ್ಭುತ ಸ್ಥಳಗಳಿಂದ ತುಂಬಿದೆ, ಎಲ್ಲವನ್ನೂ ನೀಡುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಮೈಸೂರಿನ ರಾಜ ಪರಂಪರೆ ಮತ್ತು ಭವ್ಯವಾದ ಕಟ್ಟಡಗಳ ಭೂಮಿಯಿಂದ ಹಿಡಿದು ಗೋಕರ್ಣದ ಪತ್ತೆಯಾಗದ, ಬೆರಗುಗೊಳಿಸುವ ಕಡಲತೀರಗಳು ಮತ್ತು ಬೆಂಗಳೂರಿನ ವೇಗವಾಗಿದ್ದರೂ, ಕನಸುಗಳಿಂದ ತುಂಬಿದ ಮಹಾನಗರದ  ಜೀವನದೊಂದಿಗೆ ಕರ್ನಾಟಕವು ತನ್ನನ್ನು ಭೇಟಿ ಮಾಡುವ ಪ್ರತಿಯೊಬ್ಬರಿಗೂ ತನ್ನ ಭಂಡಾರದಲ್ಲಿಏನನ್ನಾದರೂ ಹೊಂದಿರುವ ಬಗ್ಗೆ ಹೆಮ್ಮೆಪಡುತ್ತದೆ, ಅದಕ್ಕಾಗಿಯೇ ಇದನ್ನು “ಒಂದು ರಾಜ್ಯ, ಅನೇಕ ಪ್ರಪಂಚಗಳು” ಎಂದು ಸರಿಯಾಗಿಯೇ ವಿವರಿಸಲಾಗಿದೆ.

Vittala temple hampi
ಹಂಪಿ

ಪ್ರತಿ ಮೂಲೆ, ಮೂಲೆಯಲ್ಲಿ ಇತಿಹಾಸ’ ಹಂಪಿಯನ್ನು ಹೀಗೆ ಉತ್ತಮವಾಗಿ ವರ್ಣಿಸಬಹುದು. ದೇವಾಲಯಗಳು ಮತ್ತು ಅರಮನೆಗಳ ಪ್ರಾಚೀನ ಅವಶೇಷಗಳು ಇತಿಹಾಸದಲ್ಲಿಯೇ ನಡೆಯುತ್ತಿದ್ದೇವೆ ಎಂಬ ಭಾವನೆಯನ್ನು ಮೂಡಿಸುತ್ತವೆ. ಕರ್ನಾಟಕದ ಯುನೆಸ್ಕೋ(UNESCO) ಮತ್ತು ವಿಶ್ವ ಪರಂಪರೆಯ ತಾಣವಾಗಿರುವ ಈ ಮಾಂತ್ರಿಕ ಭೂಮಿಯು ಪುರಾಣಗಳು, ದೇವರುಗಳು ಮತ್ತು ದೇವತೆಗಳ ಕಥೆಗಳು ಮತ್ತು ವಿಶಾಲವಾದ ಭತ್ತದ ಗದ್ದೆಗಳಿಂದ ತುಂಬಿದೆ. ಇದರ ಪ್ರಶಾಂತವಾದ ತೇಜಸ್ಸು ಮತ್ತು ನೈಸರ್ಗಿಕ ಸೌಂದರ್ಯವು ಶಾಂತಿಯನ್ನು ನೀಡುತ್ತದೆ ಮತ್ತು ಪ್ರಯಾಣಿಕರ ಆತ್ಮದ ಮೇಲೆ ಶಾಶ್ವತವಾಗಿ ಪ್ರಭಾವ ಬೀರುತ್ತದೆ. ಪ್ರಮುಖ ಪ್ರವಾಸಿ ತಾಣಗಳು 7 ನೇ ಶತಮಾನದಲ್ಲಿ ನಿರ್ಮಿಸಲಾದ ವಿರೂಪಾಕ್ಷ ದೇವಾಲಯ, ಹಂಪಿ ಪುರಾತತ್ವ ಅವಶೇಷಗಳು ಈ ನಗರವು ಒಂದಾನೊಂದು ಕಾಲದಲ್ಲಿ ಹೊಂದಿದ್ದ ಭವ್ಯತೆಯನ್ನು ತೋರಿಸುತ್ತವೆ.

gokarna
ಗೋಕರ್ಣ

ಎಲ್ಲಾ ಕಡಲತೀರದ ಉತ್ಸಾಹಿಗಳಿಗೆ ಸ್ವರ್ಗವಾಗಿರುವ ಗೋಕರ್ಣವು,ಇದರ ಸ್ಥಬ್ಧಗೊಳಿಸುವ ಸೂರ್ಯಾಸ್ತಗಳು, ಭೋರ್ಗರೆಯುವ ಅಲೆಗಳು ಮತ್ತು ಇಲ್ಲಿನ ಪ್ರಶಾಂತತೆಯಿಂದ ನಿಮ್ಮನ್ನು ಪ್ರಕೃತಿಗೆ ಹತ್ತಿರವಾಗುವಂತೆ ಮಾಡುತ್ತದೆ. ಏಕತಾನತೆಯ ಜೀವನದ ಚಿಂತೆಗಳನ್ನು ಮರೆತುಬಿಡುವಂತೆ ಮಾಡುವ ಇಲ್ಲಿನ ಕಾಲುಗಳ ಕೆಳಗಿನ ಮರಳು, ಅಲೆಗಳು ಅಪ್ಪಳಿಸುವ ಶಬ್ದ ಮತ್ತು ಶುದ್ಧ ಗಾಳಿಯಿಂದ ಇದು ಪ್ರತಿಯೊಬ್ಬ ಏಕಾಂಗಿ ಪ್ರಯಾಣಿಕರು ಭೇಟಿ ನೀಡಬೇಕಾದ ಆದರ್ಶ ಪಟ್ಟಣವಾಗಿದೆ.
ರೋಮಾಂಚನಗೊಳಿಸುವ ಜಲ ಕ್ರೀಡೆಗಳು, ಆಧ್ಯಾತ್ಮಿಕ ಭಕ್ತರಿಗೆ ಮಹಾಬಲೇಶ್ವರ ದೇವಸ್ಥಾನ ಮತ್ತು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಲು ಅಥವಾ ಪುನರ್ಯೌವನಗೊಳ್ಳಲು ಇರುವ ಶಾಂತ ಕಡಲತೀರಗಳು, ಇವೆಲ್ಲವನ್ನೂ ಗೋಕರ್ಣ ಹೊಂದಿದೆ.

chikmagalur hills
ಚಿಕ್ಕಮಗಳೂರು

ಕಾಫಿ ಪ್ರಿಯರಿಗೆ ಅಗ್ರ ಸ್ಥಾನವಾದ ಚಿಕ್ಕಮಂಗಳೂರನ್ನು ಕರ್ನಾಟಕದ ಕಾಫಿ ಜಿಲ್ಲೆ ಎಂದು ಕರೆಯಲಾಗುತ್ತದೆ. ಬೆರಗುಗೊಳಿಸುವ ಬೆಟ್ಟಗಳು ಮತ್ತು ಕಣಿವೆಗಳಿಂದ ತುಂಬಿರುವ ಈ ಪ್ರಶಾಂತ ಪಟ್ಟಣವು ಪ್ರಕೃತಿಯ ಮಧ್ಯೆ ಉತ್ತಮ ವಾಸ್ತವ್ಯವನ್ನು ಪ್ರೀತಿಸುವ ಯಾರಾದರೂ ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಮುಳ್ಳಯ್ಯನಗಿರಿಗೆ ಚಾರಣದಿಂದ ಹಿಡಿದು ಭದ್ರಾ ನದಿಯಲ್ಲಿ ರಿವರ್ ರಾಫ್ಟಿಂಗ್ ವರೆಗೆ ಇಲ್ಲಿ ಸಾಕಷ್ಟು ಚಟುವಟಿಕೆಗಳನ್ನು ಮಾಡಬಹುದು, ನಗರದ ಜೀವನದ ಗಡಿಬಿಡಿ ಗದ್ದಲದಿಂದ ತಪ್ಪಿಸಿಕೊಂಡು ವಾರಾಂತ್ಯದಲ್ಲಿ ಹೊರಹೋಗಲು ಬಯಸುವ ಒಂಟಿ ಪ್ರಯಾಣಿಕರಿಗೆ ಚಿಕ್ಕಮಂಗಳೂರು ಅದ್ಭುತ ಸ್ಥಳವಾಗಿದೆ ಮತ್ತು ಇದರ ಪತ್ತೆಯಾಗದ ಜಾಗಗಳಿಂದಾಗಿ ಇದು ನಿಮ್ಮನ್ನು ಚೈತನ್ಯಗೊಳಿಸುತ್ತದೆ

mysore palace Honeymoon Destinations
ಮೈಸೂರು

ರಾಯಲ್ ಸಿಟಿ ಮೈಸೂರು ದಕ್ಷಿಣ ಭಾರತದ ಅತ್ಯಂತ ಸೊಗಸಾದ ನಗರಗಳಲ್ಲಿ ಒಂದಾಗಿದೆ. ಈ ಪಟ್ಟಣಕ್ಕೆ ಭೇಟಿ ನೀಡುವುದಕ್ಕೆ ಸಾಕಷ್ಟು ಕಾರಣಗಳಿವೆ ಅವು ವ್ಯಾಪಕವಾದ ರೇಷ್ಮೆ ಸೀರೆಗಳು ಮತ್ತು ರುಚಿಯಾದ ತಿಂಡಿತಿನಿಸುಗಳು. ಬಾಯಲ್ಲಿ ನೀರೂರಿಸುವ ಮೈಸೂರು ಪಾಕ್ ಅಥವಾ ಸಮರ್ಪಕವಾದ ದಕ್ಷಿಣ ಭಾರತದ ಥಾಲಿಗಳಿಗೆ ಹೆಸರುವಾಸಿಯಾಗಿದರುವ, ಇದು ಪ್ರತಿ ಫೂಡೀಗಳಿಗೆ ಸ್ವರ್ಗವಾಗಿದೆ.
ವಾಸ್ತುಶಿಲ್ಪದಲ್ಲಿ ಭವ್ಯತೆಯನ್ನು ಸಾರುವ ಮೈಸೂರು ಅರಮನೆಯು ಅತ್ಯಂತ ಜನಪ್ರಿಯ ತಾಣವಾಗಿದ್ದರೆ, ಇತರ ಗಮನಾರ್ಹ ತಾಣಗಳು ಚಾಮುಂಡಿ ಬೆಟ್ಟಗಳು ಮತ್ತು ದೇವರಾಜ ಮಾರುಕಟ್ಟೆಗಳು.

karwar beach
ಕಾರವಾರ

ಈ ಸ್ಥಳದ ಪ್ರಶಾಂತತೆಯು ತನ್ನ ಸೌಂದರ್ಯದೊಂದಿಗೆ ಪ್ರತಿ ಪ್ರಯಾಣಿಕರನ್ನು ಮಂತ್ರಮುಗ್ಧಗೊಳಿಸುತ್ತದೆ. ಇದರ ಕಡಲತೀರಗಳು ಶಾಂತವಾಗಿರುವುದು ಮಾತ್ರವಲ್ಲದೆ ಮಹಾನ್ ಕವಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ಸ್ಫೂರ್ತಿ ನೀಡಿದೆ. ಅತ್ಯಂತ ಪ್ರಶಾಂತವಾದ ಕಡಲತೀರಗಳಲ್ಲಿ ಒಂದಾದ ದೇವ್ಬಾಗ್ ಬೀಚ್ ಉದ್ದದ ಕಡಲತೀರ ಮತ್ತು ಕ್ಯಾಸುಆರಿನಾ ಮರಗಳನ್ನು ಹೊಂದಿದೆ. ಇತಿಹಾಸದಿಂದ ಅಲಂಕರಿಸಲ್ಪಟ್ಟ ಮತ್ತೊಂದು ತಾಣವೆಂದರೆ ಕೋಡಿಬಾಗ್ ಕೋಟೆ ಅವಶೇಷಗಳು ಮತ್ತು ಅದರ ಸುತ್ತಲಿನ ಬೀಚ್. ಅಲ್ಲದೆ, ಸಮುದ್ರಾಹಾರ ಪ್ರಿಯರಿಗೆ ಇದು ಒಂದು ಕನಸನ್ನು ನನಸಾಗಿಸುವಂತಿದೆ.

ಪ್ರಯಾಣವು ನಿಮ್ಮನ್ನು ಮೂಕನನ್ನಾಗಿ ಮಾಡುತ್ತದೆ ಮತ್ತು ನಂತರ ನಿಮ್ಮನ್ನು ಕಥೆಗಾರನನ್ನಾಗಿ ಮಾಡುತ್ತದೆ ಎಂದು ಸರಿಯಾಗಿ ಹೇಳಲಾಗಿದೆ ಮತ್ತು ಕರ್ನಾಟಕವು ನಿಜವಾಗಿಯೂ ಅದಕ್ಕೆ ಸಾಕ್ಷಿಯಾಗಿದೆ.