Karnataka Tourism
GO UP

ಮಾಣಿಕ್ಯಧಾರ ಜಲಪಾತ

separator
ಕೆಳಗೆ ಸ್ಕ್ರಾಲ್ ಮಾಡಿ

ಮಾಣಿಕ್ಯಧಾರವು ಚಿಕ್ಕಮಗಲೂರು ಜಿಲ್ಲೆಯ ಬಾಬಾಬುಡನಗಿರಿ ಬೆಟ್ಟದಲ್ಲಿನ ಜನಪ್ರಿಯ ಜಲಪಾತವಾಗಿದೆ. ಮಾಣಿಕ್ಯಧಾರ ಜಲಪಾತ ದ ಮೇಲೆ ಸೂರ್ಯನ ಬೆಳಕು ಬಿದ್ದಾಗ ನೀರಿನ ಹನಿಗಳು ಹೊಳೆಯುವ ಮುತ್ತುಗಳಂತೆ ಕಾಣಿಸಿಕೊಳ್ಳುತ್ತವೆ. ಬಾಬಾಬುಡನಗಿರಿ ದತ್ತಪೀಠಕ್ಕೆ ಭೇಟಿ ನೀಡುವ ಹೆಚ್ಚಿನ ಯಾತ್ರಾರ್ಥಿಗಳು ಮಾಣಿಕ್ಯಧಾರ ಜಲಪಾತಕ್ಕೂ ಭೇಟಿ ನೀಡುತ್ತಾರೆ ಮತ್ತು ಜಲಪಾತದ ಕೆಳಗೆ ಸ್ನಾನ ಮಾಡುವುದನ್ನು ಪವಿತ್ರವೆಂದು ಪರಿಗಣಿಸುತ್ತಾರೆ.

ಮಾಣಿಕ್ಯಧಾರ ಜಲಪಾತಗಳನ್ನು ತಲುಪಲು 200+ ಮೆಟ್ಟಿಲುಗಳನ್ನು ಇಳಿಯ ಬೇಕಾಗುತ್ತದೆ.  ಮಾಣಿಕ್ಯಧಾರ ಜಲಪಾತ ಪ್ರದೇಶದಿಂದ ಪಶ್ಚಿಮ ಘಟ್ಟಗಳ ವಿಹಂಗಮ ನೋಟವು ಕಾಣಸಿಗುತ್ತದೆ. ಮೆಟ್ಟಿಲುಗಳ ಉದ್ದಕ್ಕೂ ವೀಕ್ಷಣಾ ಗೋಪುರಗಳು ಮತ್ತು ವಿಶ್ರಾಂತಿ ಪ್ರದೇಶಗಳು ಲಭ್ಯವಿದೆ. ಸ್ಥಳೀಯರು ಗಿಡಮೂಲಿಕೆಗಳು ಮತ್ತು ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಮಾಣಿಕ್ಯಾಧರ ಜಲಪಾತದ ಎತ್ತರ 30 ಅಡಿ.

ಭೇಟಿ ನೀಡಲು ಉತ್ತಮ ಸಮಯ: ಆಗಸ್ಟ್ ನಿಂದ ಮಾರ್ಚ್ ವರೆಗೆ ಮಾಣಿಕ್ಯಧಾರ ಜಲಪಾತವನ್ನು ಭೇಟಿ ಮಾಡಲು ಉತ್ತಮ ಸಮಯ. ಮಾಣಿಕ್ಯಧಾರ ಜಲಪಾತ ಬೇಸಿಗೆಯ ಸಮಯದಲ್ಲಿ ಸಹ ಒಣಗುವುದಿಲ್ಲ ಎಂದು ಹೇಳಲಾಗುತ್ತದೆಯಾದರೂ ಬೇಸಿಗೆಯ ತಿಂಗಳುಗಳಲ್ಲಿ ನೀರಿನ ಮಟ್ಟವು ಬಹಳ ಕಡಿಮೆ ಇರುತ್ತದೆ.

ಹತ್ತಿರದಲ್ಲಿ ಇನ್ನೇನಿದೆ?: ಮುಳ್ಳಯನಗಿರಿ ಬೆಟ್ಟ (26 ಕಿ.ಮೀ) ಕರ್ನಾಟಕದ ಅತಿ ಎತ್ತರದ ಬೆಟ್ಟವಾಗಿದ್ದು ಮಾಣಿಕ್ಯಧಾರ ಜಲಪಾತದೊಂದಿಗೆ ಭೇಟಿ ನೀಡಬಹುದಾಗಿದೆ. ಮಾಣಿಕ್ಯಧಾರ ಜಲಪಾತದ ಹಾದಿಯಲ್ಲಿ ಬಾಬಾಬುಡನಗಿರಿ ದತ್ತ ಪೀಠ ಮತ್ತಿತರ ದೇವಾಲಯಗಳಿವೆ.

ತಲುಪುವುದು ಹೇಗೆ: ಮಾಣಿಕ್ಯಧಾರ ಜಲಪಾತ ಬೆಂಗಳೂರಿನಿಂದ 278 ಕಿ.ಮೀ ಮತ್ತು ಚಿಕ್ಕಮಗಳೂರಿನಿಂದ 34 ಕಿ.ಮೀ. ದೂರದಲ್ಲಿದೆ.  ಮಂಗಳೂರು ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (185 ಕಿ.ಮೀ) ಮತ್ತು ಕಡೂರು ಜಂಕ್ಷನ್ (71 ಕಿ.ಮೀ) ಹತ್ತಿರದ ರೈಲು ನಿಲ್ದಾಣವಾಗಿದೆ. ಕರ್ನಾಟಕದ ಎಲ್ಲಾ ಭಾಗಗಳಿಂದ ಚಿಕ್ಕಮಗಳೂರು ತಲುಪಲು ನಿಯಮಿತ ಬಸ್ ಸೇವೆ ಲಭ್ಯವಿದೆ ಮತ್ತು ಚಿಕ್ಕಮಗಳೂರು ನಗರದಲ್ಲಿ ಮಾಣಿಕ್ಯಧಾರ  ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

ವಸತಿ: ಮಾಣಿಕ್ಯಾಧರ ಜಲಪಾತದ ಸಮೀಪದಲ್ಲಿ ಯಾವುದೇ ವಾಸ್ತವ್ಯದ ಆಯ್ಕೆಗಳಿಲ್ಲ. ಚಿಕ್ಕಮಗಳೂರು ನಗರ (34 ಕಿ.ಮೀ) ಬಜೆಟ್ ಮತ್ತು ಮಧ್ಯ ಶ್ರೇಣಿಯ ಹೋಟೆಲ್‌ಗಳನ್ನು ಹೊಂದಿದೆ. ಐಷಾರಾಮಿ ರೆಸಾರ್ಟ್‌ಗಳು ಮತ್ತು ಮನೆ ವಸತಿ (ಹೋಂ-ಸ್ಟೇ)ಗಳು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money