Karnataka logo

Karnataka Tourism
GO UP
Neelakurinji Flowers banner

ಕರ್ನಾಟಕದಲ್ಲಿ ನೀಲಕುರಿಂಜಿ ಹೂವುಗಳು

separator
  /  ಕರ್ನಾಟಕದಲ್ಲಿ ನೀಲಕುರಿಂಜಿ ಹೂವುಗಳು

ಕರ್ನಾಟಕದಲ್ಲಿ ಗಣೇಶ ಚತುರ್ಥಿ ಆಚರಣೆ

Neelakurinji Flowers

ಕೊಡಗಿನ ನಿವಾಸಿಗಳಿಗೆ ಈ ವರ್ಷ ವಿಶೇಷವಾಗಿದೆ. ಏಕೆ ಗೊತ್ತೇ? ಇಲ್ಲಿ ಸುಂದರ ನೀಲಿಕುರಂಜಿ ಹೂವುಗಳು ಅರಳಿ ನಿಂತಿವೆ. ಈ ಬೇಸಿಗೆಯಲ್ಲಿ ನೀಲಕುರಿಂಜಿ ಹೂವುಗಳು ಅರಳಿರುವುದರಿಂದ ಕೊಡಗಿಗೆ ವಿಶೇಷ ಆಕರ್ಷಣೆ ಬಂದಿದೆ. ಕುರಿಂಜಿ ಎಂದೂ ಕರೆಯಲ್ಪಡುವ ಈ ಹೂವುಗಳು ಕೊಡಗು ಜಿಲ್ಲೆಯ ಮಾಂಡಲಪಟ್ಟಿ ಬೆಟ್ಟಗಳಲ್ಲಿ ಬೆಳೆದಿದ್ದು, ಈ ಸ್ಥಳಕ್ಕೆ ಒಂದು ವಿಶಿಷ್ಟವಾದ ಆಕರ್ಷಣೆಯನ್ನು ತಂದಿದೆ. ಇಡೀ ಪ್ರದೇಶವು ರಮಣೀಯವಾದ ನೈಸರ್ಗಿಕ ಸೌಂದರ್ಯದಿಂದ ಆಶೀರ್ವದಿಸಲ್ಪಟ್ಟಿದೆ. ಕೋಟೆ ಬೆಟ್ಟ ಮತ್ತು ಕುಮಾರ ಪರ್ವತಗಳಲ್ಲಿ ಕಳೆದ ಕೆಲವು ದಿನಗಳಿಂದ ನೀಲಕುರಂಜಿ ಹೂಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಳೆಯುತ್ತಿದ್ದು, ಅಲ್ಲಿನ ನಿವಾಸಿಗಳ, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ಈ ಹೂವುಗಳು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟಗಳ ಶೋಲಾ ಅರಣ್ಯಗಳಲ್ಲಿ ವಿಶೇಷವಾಗಿ ಕಂಡುಬರುವ ಪೊದೆಸಸ್ಯಕ್ಕೆ ಸೇರಿವೆ. ಈ ಜಾತಿಗಳಲ್ಲಿ ಹೆಚ್ಚಿನವು ಒಂದು ವಿಶಿಷ್ಟವಾದ ಹೂಬಿಡುವ ಚಕ್ರವನ್ನು ಹೊಂದಿವೆ, ಇದರ ಪರಿಣಾಮವಾಗಿ ಕೆಲವು ಸಸ್ಯಗಳು ಒಂದು ವರ್ಷದಿಂದ 16 ವರ್ಷಗಳವರೆಗೆ ಹೂಬಿಡುವ ಚಕ್ರವನ್ನು ಹೊಂದಿರುತ್ತವೆ. . ಕೊಡಗಿನ ಸೊಬಗು ಹೆಚ್ಚಿಸುವ ಕುರಿಂಜಿ ಹೂವುಗಳು ಪ್ರತಿ 12 ವರ್ಷಗಳಿಗೊಮ್ಮೆ ಬೆಳೆಯುತ್ತವೆ . ಆಗಸ್ಟ್ ಮೊದಲ ವಾರದ ಸುಮಾರಿಗೆ ಈ ಹೂವುಗಳು ಮೊದಲು ಕಾಣಿಸಿಕೊಂಡವು. ಇಡೀ ಪ್ರದೇಶವು ನೇರಳೆ ಹೂವುಗಳಿಂದ ಆವೃತವಾಗಿತ್ತು. ಮುಂದಿನ ದಿನಗಳಲ್ಲಿ, ಈ ಅಪರೂಪದ ಹೂವುಗಳಿಂದ ಹೆಚ್ಚಿನ ಬೆಟ್ಟಗಳು ಆವರಿಸಲ್ಪಡುತ್ತವೆ. ಈ ಸುಂದರ ನೋಟವು ಸೆಪ್ಟೆಂಬರ್ ಅಂತ್ಯದವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸ್ಥಳೀಯರು ಮಾತ್ರವಲ್ಲದೆ ಪ್ರವಾಸಿಗರು ಸಹ ಈ ನೈಸರ್ಗಿಕ ಅದ್ಭುತವನ್ನು ಮನಸಾರೆ ಸವಿಯಲು ಸಮಾನವಾಗಿ ಉತ್ಸುಕರಾಗಿದ್ದಾರೆ. ದೇಶದ ವಿವಿಧ ಭಾಗಗಳಿಂದ ಜನರು ಈ ಸೊಗಸಾದ ಸೌಂದರ್ಯವನ್ನು ನೋಡಲು ಮಂಡಲಪಟ್ಟಿ ಬೆಟ್ಟಗಳಿಗೆ ಭೇಟಿ ನೀಡುತ್ತಾರೆ. ಈ ಕುರಿಂಜಿ ಹೂವುಗಳು 1,300 – 2,400 ಮೀಟರ್ ಎತ್ತರದಲ್ಲಿ ಬೆಳೆಯುತ್ತವೆ, ಈ ಪ್ರದೇಶವು ಕರ್ನಾಟಕದ ಅತ್ಯಂತ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ. ತಮ್ಮ ಪ್ರವಾಸದ ಒಟ್ಟಾರೆ ಅನುಭವವನ್ನು ಹೆಚ್ಚಿಸಲು ಕೊಡಗಿಗೆ ಭೇಟಿ ನೀಡಲು ಯೋಜಿಸುತ್ತಿರುವ ಪ್ರವಾಸಿಗರ, ಚಾರಣಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಇಲ್ಲಿ ಇರುವ ನಿವಾಸಿಗಳು ಹಲವಾರು ವರ್ಷಗಳ ನಂತರ ಕೊಡಗಿನ ಈ ವೈಭವದ ಸುಂದರ ಭೂದೃಶ್ಯವನ್ನು ಸವಿಯುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕೊಡಗಿನಲ್ಲಿ ಅತಿ ಮಳೆಯಾದ ಕಾರಣ ಇಲ್ಲಿ ನೈಸರ್ಗಿಕವಾಗಿ ಅಪಾರವಾದ ಹಾನಿ ಉಂಟಾಗಿತ್ತು. ಈ ವರ್ಷ ಪ್ರಕೃತಿ ತೋರಿಸಿದ ಉದಾರ ಭಾವದಿಂದಾಗಿ ಇಲ್ಲಿನ ನಿವಾಸಿಗಳು ಹರ್ಷಚಿತ್ತರಾಗಿದ್ದಾರೆ. ಕರ್ನಾಟಕವು ದೇಶದ ಅತ್ಯಂತ ದಟ್ಟವಾದ ಕಾನನಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದು ಎಂಬುದರಲ್ಲಿ ಸಂದೇಹವಿಲ್ಲ, ಮತ್ತು ಇಲ್ಲಿ ಅರಳಿದ ನೀಲಕುರಿಂಜಿ ಹೂವುಗಳು ಇದರ ಸೌಂದರ್ಯವನ್ನು ಹೆಚ್ಚಿಸಿವೆ.