Karnataka logo

Karnataka Tourism
GO UP
Image Alt

ಮಂಜರಾಬಾದ್ ಕೋಟೆ

separator
  /  ಮಂಜರಾಬಾದ್ ಕೋಟೆ

ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಮಂಜರಾಬಾದ್ ಕೋಟೆಯನ್ನು 1792 ರಲ್ಲಿ ಟಿಪ್ಪು ಸುಲ್ತಾನ್ ನಿರ್ಮಿಸಿದನು.ಈ ನಕ್ಷತ್ರಾಕಾರದ ಬೃಹತ್ ಕೋಟೆಯು ಸಮುದ್ರ ಮಟ್ಟದಿಂದ ಸುಮಾರು 3241 ಅಡಿ ಎತ್ತರದಲ್ಲಿ 988 ಮೀಟರ್ ಎತ್ತರದಲ್ಲಿದೆ. ಆಕಾಶವು ಮೋಡಗಳಿಲ್ಲದೇ ಶುಭ್ರವಾಗಿರುವಾಗ ನೀವು ಇಲ್ಲಿಂದ ಅರಬ್ಬಿ ಸಮುದ್ರವನ್ನು ಸಹ ನೋಡಬಹುದಾಗಿದೆ.
ಕರ್ನಾಟಕದ ಪಾರಂಪರಿಕ ನಗರವಾದ ಹಾಸನವು ಎಲ್ಲಾ ವಯೋಮಾನದ ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಗಿರಿಧಾಮವಾಗಿದ್ದು, ಹಚ್ಚಹಸಿರು ಮತ್ತು ಸುಂದರ ಭೂದೃಶ್ಯಗಳೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತದೆ. ಸಕಲೇಶಪುರದ ತುಂಬಾ ಹತ್ತಿರದಲ್ಲಿಯೇ ಮಂಜರಾಬಾದ್ ಕೋಟೆ ಇದ್ದು ಇಲ್ಲಿಗೆ ಪ್ರವಾಸಿಗರು ಭೇಟಿ ನೀಡಲೇ ಬೇಕು. ಟಿಪ್ಪು ಸುಲ್ತಾನ್ ಮೈಸೂರಿನ ಮೇಲೆ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸುವ ಸಮಯದಲ್ಲಿ ಈ ಕೋಟೆಯನ್ನು ನಿರ್ಮಿಸಿದನು. ಐರೋಪ್ಯ ಶೈಲಿಯಲ್ಲಿ ನಿರ್ಮಿಸಲಾದ ಈ ಮಂಜರಾಬಾದ್ ಕೋಟೆಗೆ ’ಮಂಜ” ಎಂಬ ಕನ್ನಡ ಪದದಿಂದ ಹೆಸರು ಬಂದಿದೆ.
ಕೋಟೆಯನ್ನು ಯುರೋಪಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದ್ದರೂ, ಕೋಟೆಯನ್ನು ನಿರ್ಮಿಸಲು ಬಳಸಿದ ಕಚ್ಚಾ ಸಾಮಗ್ರಿಗಳು ಗ್ರಾನೈಟ್ ಕಲ್ಲುಗಳು ಮತ್ತು ಸುಣ್ಣದ ಗಾರೆಗಳನ್ನು ಒಳಗೊಂಡಿವೆ ಮತ್ತು ಒಳಭಾಗವನ್ನು ಬೆಂಇಟ್ಟಿಗೆಗಳಿಂದ ನಿರ್ಮಿಸಲಾಗಿದ್ದು ಕೋಟೆಯನ್ನು ಸೇನಾ ಬ್ಯಾರಕ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ಮತ್ತು ಗನ್‌ಪೌಡರ್ ಸಂಗ್ರಹಿಸಲು ಬಳಸಲಾಗುತ್ತಿತ್ತು.
ನೀವು ಕೋಟೆಯ ಮೇಲುಗಡೆ ಬಂದಾಗ ನಿಮ್ಮ ಪ್ರಕೃತಿಯ ಸುಂದರ ಹಚ್ಚ ಹಸಿರಿನ, ಕೆಸರಿನ ಹಾದಿಗಳು ಅಸಮವಾದ ಬೆಟ್ಟಗಳು, ಕಣಿವೆಗಳು, ತೊರೆಗಳು ಮತ್ತು ದಟ್ಟವಾದ ಕಾಡುಗಳು ಕಾಣಿಸುತ್ತವೆ. ಪ್ರಕೃತಿಯ ನಂಬಲಾಗದ ದೃಶ್ಯಲೋಕವು ಪ್ರಕೃತಿ ಪ್ರಿಯರನ್ನು ಮತ್ತು ಇತಿಹಾಸದ ಉತ್ಸಾಹಿಗಳನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಮಂಜರಾಬಾದ್ ಕೋಟೆಯನ್ನು ಹೇಗೆ ತಲುಪಬಹುದು?

ಹಾಸನ ಜಿಲ್ಲೆಯ ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆಯನ್ನು ರಸ್ತೆ ಸಾರಿಗೆಯ ಮೂಲಕ ತಲುಪಬಹುದು. ಇದಕ್ಕೆ ಹತ್ತಿರವಿರುವ ವಿಮಾನ ನಿಲ್ದಾಣವೆಂದರೆ ಬೆಂಗಳೂರು. ಹಾಸನವು ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮೈಸೂರಿನಿಂದ ರಸ್ತೆ ಮತ್ತು ರೈಲು ಸಾರಿಗೆಯ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. . ಬೆಂಗಳೂರಿನಿಂದ ಹಾಸನ ತಲುಪಲು ಸುಮಾರು 4 ಗಂಟೆಗಳು ಬೇಕು. ಮಂಜರಾಬಾದ್ ಕೋಟೆ ಹಾಸನ ಜಿಲ್ಲಾ ಕೇಂದ್ರದಿಂದ ಕೇವಲ 40 ಕಿಮೀ ದೂರದಲ್ಲಿದೆ.

ಭೇಟಿ ನೀಡಲು ಉತ್ತಮ ಸಮಯ

ಚಳಿಗಾಲ ಅಥವಾ ಮಳೆಗಾಲದ ನಂತರ ಇಲ್ಲಿಗೆ ಭೇಟಿ ನೀಡಬಹುದು. ಆ ದಿನಗಳಲ್ಲಿ ಇಲ್ಲಿಯ ಪ್ರಕೃತಿ ದೃಶ್ಯಗಳು ನಯನ ಮನೋಹರವಾಗಿರುತ್ತವೆ.

ಕೋಟೆ ತೆರೆದಿರುವ ಸಮಯ

ಕೋಟೆಯು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ ಮತ್ತು ಕೋಟೆಯನ್ನು ಪ್ರವೇಶಿಸಲು ಯಾವುದೇ ಪ್ರವೇಶ ಶುಲ್ಕವಿಲ್ಲ.

ಮಂಜರಾಬಾದ್ ಕೋಟೆಯ ಬಳಿ ಭೇಟಿ ನೀಡಬಹುದಾದ ಸ್ಥಳಗಳು

ನಿಮಗೆ ಕೋಟೆಯನ್ನು ಸಂಪೂರ್ಣವಾಗಿ ನೋಡಲು ಮತ್ತು ಅದರ ಕುರಿತು ತಿಳಿಯಲು ಹೆಚ್ಚಿನ ಸಮಾಯವಕಾಶ ಬೇಕು. ಇದರ ನಂತರ ಸಕಲೇಶಪುರ ಮತ್ತು ಸುತ್ತಮುತ್ತಲಿನ ಇತರ ಸ್ಥಳಗಳಿಗೆ ಭೇಟಿ ನೀಡಬೇಕು. ಕೋಟೆಗೆ ಹತ್ತಿರವಿರುವ ಇತರ ಸ್ಥಳಗಳೆಂದರೆ ಸಕಲೇಶ್ವರ ದೇವಸ್ಥಾನ, ಅಬ್ಬೆ ಜಲಪಾತ, ಮಗಜಹಳ್ಳಿ ಜಲಪಾತ, ಬೆಟ್ಟದ ಬೈರವೇಶ್ವರ ದೇವಸ್ಥಾನ, ಇತ್ಯಾದಿ.

ಸಕಲೇಶಪುರದಲ್ಲಿ ಉಳಿದುಕೊಳ್ಳಲು ಇರುವ ಉತ್ತಮ ಸ್ಥಳಗಳು

ಸಕಲೇಶಪುರವು ಒಂದು ಗಿರಿಧಾಮವಾಗಿದೆ.ಇಲ್ಲಿ ಪ್ರವಾಸಿಗರು ತಮ್ಮ ಬಜೆಟಿನಲ್ಲಿ ಅನೇಕ ಪ್ರೀಮಿಯಂ, ಮಧ್ಯಮ-ಬಜೆಟ್ ಹೋಂಸ್ಟೇಗಳು ಮತ್ತು ಹೋಟೆಲ್‌ಗಳಲ್ಲಿ ವಸತಿಯನ್ನು ಮಾಡಬಹುದು.

ಗ್ಯಾಲರಿ

 ಚಿತ್ರ ಕೃಪೆ: ಪ್ರವೇಶ್ ಪ್ರಭು, ಸೂರ್ಯಪ್ರಕಾಶ್ ಎನ್ ಎಸ್