Karnataka Tourism
GO UP

ಸಿರಿಮನೆ ಜಲಪಾತ

separator
ಕೆಳಗೆ ಸ್ಕ್ರಾಲ್ ಮಾಡಿ

ಸಿರಿಮನೆ ಜಲಪಾತ: ಸಿರಿಮನೆ ಜಲಪಾತವು ಪಶ್ಚಿಮ ಘಟ್ಟದ ​​ಜನಪ್ರಿಯ ಜಲಪಾತವಾಗಿದೆ, ಇದು ಚಿಕ್ಕಮಗಳೂರು ಜಿಲ್ಲೆಯ ಶ್ರಿಂಗೇರಿ ಶಾರದಾಂಬ ದೇವಾಲಯದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ.

ಸಿರಿಮನೆ ಜಲಪಾತದ  ಸಮೀಪ ತಲುಪಲು ರಸ್ತೆ ಇದೆ. ಜಲಪಾತಕ್ಕೆ ಹತ್ತಿರ ಇರುವ ಹಳ್ಳಿಯ ಹೆಸರು ಕಿಗ್ಗಾ  (ಸಿರಿಮನೆ ಜಲಪಾತದಿಂದ  5 ಕಿ.ಮೀ). ಸಿರಿಮನೆ ಜಲಪಾತ ಸುಮಾರು 40 ಅಡಿ ಎತ್ತರವಿದೆ. ಜಲಪಾತದ ಬುಡದಲ್ಲಿ ಇರುವ ಕೊಳದ ಆಳವು ಕಡಿಮೆ, ಆದ್ದರಿಂದ ಸಿರಿಮನೆ ಜಲಪಾತ ಸ್ನಾನ ಮಾಡಲು ಸುರಕ್ಷಿತವಾಗಿದೆ (ಮಳೆಗಾಲದಲ್ಲಿ ನೀರಿನ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ತೀರಾ ಹತ್ತಿರ ಹೋಗದಿರುವುದು ಒಳ್ಳೆಯದು)  ಸಿರಿಮನೆ ಜಲಪಾತವು ದೊಡ್ಡ ಗುಂಪುಗಳಿಗೆ ಏಕಕಾಲದಲ್ಲಿ ಸ್ಥಳಾವಕಾಶ ಕಲ್ಪಿಸುವಷ್ಟು ಅಗಲವಿದೆ. ಶೃಂಗೇರಿ, ಹೊರನಾಡು ದೇವಾಲಯಗಳಿಗೆ ಭೇಟಿ ನೀಡುವ ಹೆಚ್ಚಿನ ಭಕ್ತರು ಸಿರಿಮನೆ ಜಲಪಾತಕ್ಕೂ ಭೇಟಿ ನೀಡುತ್ತಾರೆ.

ಸಮಯ: ಸಿರಿಮನೆ ಜಲಪಾತ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.

ಹತ್ತಿರ: ಅಗುಂಬೆ (41 ಕಿ.ಮೀ), ಶೃಂಗೇರಿ ದೇವಾಲಯಗಳು (17 ಕಿ.ಮೀ), ಕುಂದಾದ್ರಿ (40 ಕಿ.ಮೀ), ಕವಿಶೈಲ (51 ಕಿ.ಮೀ) ಮತ್ತು ಹೊರನಾಡು (60 ಕಿ.ಮೀ) ಸಿರಿಮನೆ ಜಲಪಾತದ ಜೊತೆಗೆ ಭೇಟಿ ಕೊಡಬಹುದಾದ ಇತರ ಪ್ರವಾಸಿ ತಾಣಗಳಾಗಿವೆ.

ತಲುಪುವುದು ಹೇಗೆ? ಸಿರಿಮನೆ ಜಲಪಾತವನ್ನು ತಲುಪಲು ಶೃಂಗೇರಿ ಪಟ್ಟಣಕ್ಕೆ ಬರಬೇಕು. ಶೃಂಗೇರಿ ಬೆಂಗಳೂರಿನಿಂದ 320 ಕಿ.ಮೀ ಮತ್ತು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 111 ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ಹತ್ತಿರದ ರೈಲು ನಿಲ್ದಾಣ (90 ಕಿ.ಮೀ). ಶೃಂಗೇರಿಗೆ ಬೆಂಗಳೂರಿನಿಂದ ನೇರ ಬಸ್ ಸೇವೆ ಇದೆ. ಶಿವಮೊಗ್ಗ, ಆಗುಂಬೆ, ತೀರ್ಥಹಳ್ಳಿ ಮತ್ತಿತರ ನಗರಗಳಿಂದ ಶೃಂಗೇರಿ ತಲುಪಲು ಬಸ್ಸುಗಳು ಸಿಗುತ್ತವೆ. ಶೃಂಗೇರಿಯಿಂದ ಕಿಗ್ಗಾ ಹಳ್ಳಿಯ ವರೆಗೆ ಬಸ್ ಸೇವೆ ಇದೆ. ಕಿಗ್ಗಾದಿಂದ ಚಾರಣ ಮೂಲಕ ಸಿರಿಮನೆ ಜಲಪಾತ ತಲುಪಬಹುದು ಅಥವಾ ಶೃಂಗೇರಿಯಿಂದ ಟ್ಯಾಕ್ಸಿ / ಆಟೋ ಬಳಸಿ  ಸಿರಿಮನೆ ಜಲಪಾತವನ್ನು ತಲುಪಬಹುದು.

ವಸತಿ: ಶೃಂಗೇರಿ ದೇವಾಲಯ ಭಕ್ತರಿಗೆ ವಸತಿ ಸೌಲಭ್ಯವನ್ನು ನೀಡುತ್ತದೆ. ಶೃಂಗೇರಿ ಪಟ್ಟಣದಲ್ಲಿ  ಕಡಿಮೆ ಖರ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money