Karnataka logo

Karnataka Tourism
GO UP

ಲಲಿತ ಮಹಲ್ ಅರಮನೆ

separator
ಕೆಳಗೆ ಸ್ಕ್ರಾಲ್ ಮಾಡಿ

ಮೈಸೂರಿನ ಲಲಿತ ಮಹಲ್ ಅರಮನೆಯನ್ನು ಮೈಸೂರಿನ ಮಹಾರಾಜರು ತಮ್ಮ ಪ್ರಮುಖ ಅತಿಥಿ ಭಾರತದ ವೈಸೆರಾಯ್ ಅವರ ನಿವಾಸವಾಗಿ ನಿರ್ಮಿಸಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರದ ಹೊರಗಡೆ ಚಾಮುಂಡಿ ಬೆಟ್ಟದ ಬುಡದಲ್ಲಿರುವ ಲಲಿತ ಮಹಲ್ ಅರಮನೆಯು ಒಂದು ಭವ್ಯವಾದ ನಿವಾಸ, ಐತಿಹಾಸಿಕ ಕಟ್ಟಡ ಮತ್ತು ಈಗ ಐಷಾರಾಮಿ ಪಾರಂಪರಿಕ ಹೋಟೆಲ್ ಆಗಿದೆ. 

ಲಲಿತ ಮಹಲ್ ಬಿಳಿ ಬಣ್ಣದ ಎರಡು ಮಹಡಿಗಳ ಕಟ್ಟಡವಾಗಿದೆ. ಲಲಿತ ಮಹಲ್ ಗೋಳಾಕಾರದ ಗುಮ್ಮಟಗಳು, ದೊಡ್ಡ ಕೇಂದ್ರ ಗುಮ್ಮಟ ಮತ್ತು ಸಾಂಪ್ರದಾಯಿಕ ಕಂಭ‌ಗಳನ್ನು ಒಳಗೊಂಡಿದೆ. ಒಳಾಂಗಣವನ್ನು ಪರಿಶುದ್ಧವಾಗಿ ಹೊಳಪುಗೊಳಿಸಿದ ಅಮೃತಶಿಲೆ, ಬೀಟೆ ಮರದ ಪೀಠೋಪಕರಣಗಳು, ಭವ್ಯವಾದ ಮೆಟ್ಟಿಲುಗಳು, ಆಮದು ಮಾಡಿದ ರತ್ನಗಂಬಳಿಗಳು, ಸಂಕೀರ್ಣವಾದ ತೂಗು ದೀಪದ ಗೊಂಚಲುಗಳು ಮತ್ತು ಪರದೆಗಳಿಂದ ಅಲಂಕರಿಸಲಾಗಿದೆ. 

ಮೇಲಿನ ಮಹಡಿಯಿಂದ ಸುಂದರ ನೋಟ ಕಾಣಸಿಗುತ್ತದೆ. ಲಲಿತ ಮಹಲ್ 2021 ರಲ್ಲಿ ಒಂದು ಶತಕವನ್ನು ಪೂರ್ಣಗೊಳಿಸಲಿದೆ. ಸೆಂಟ್ರಲ್ ಹಾಲ್‌ನಲ್ಲಿ ರಾಜಮನೆತನದ ಸದಸ್ಯರ ಜೀವನ ಗಾತ್ರದ ಭಾವಚಿತ್ರಗಳು ಮತ್ತು ಮೈಸೂರಿನ ಇತಿಹಾಸವನ್ನು ಚಿತ್ರಿಸುವ ಕಲಾಕೃತಿಗಳು ಇವೆ.

ಪ್ರಸ್ತುತ ಲಲಿತ ಮಹಲ್ ಪ್ಯಾಲೇಸ್ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ನಿರ್ವಹಿಸುತ್ತಿರುವ ಐಷಾರಾಮಿ ಹೋಟೆಲ್ ಆಗಿದೆ. ಲಲಿತ ಮಹಲ್ ಅರಮನೆ 54 ಐಷಾರಾಮಿ ಸೂಟ್‌ಗಳು ಮತ್ತು ಕೊಠಡಿಗಳನ್ನು ಒದಗಿಸುತ್ತದೆ, ಇದರಲ್ಲಿ ಅತ್ಯಂತ ಐಷಾರಾಮಿ “ದಿ ವೈಸ್‌ರಾಯ್ ಸೂಟ್” ಸೇರಿದೆ. ಹಿಂದಿನ ನೃತ್ಯ ಕೋಣೆಯನ್ನು ವಿಶೇಷ ಉಪಾಹಾರ ಗೃಹವನ್ನಾಗಿ ಮರುರೂಪಿಸಲಾಗಿದೆ. ‘ಮೈಸೂರು ಬೆಳ್ಳಿ ತಟ್ಟೆಯ ಊಟ’ ಮೈಸೂರಿನಲ್ಲಿ ಯಾರೇ ಆಗಲಿ ಅನುಭವಿಸಬಹುದಾದ ಅತ್ಯಂತ ವೈಭವೋಪೇರಿತ ಊಟವಾಗಿದ್ದು ಇದನ್ನು ಬೆಳ್ಳಿಯ ತಟ್ಟೆಯಲ್ಲಿ ಬಳಸಲಾಗುತ್ತದೆ. 

ಲಲಿತ ಮಹಲ್ ಅರಮನೆ ಆವರಣದಲ್ಲಿ ಈಜುಕೊಳ, ಟೆನಿಸ್ ಕೋರ್ಟ್, ಜಾಗಿಂಗ್ ಟ್ರ್ಯಾಕ್, ಹೆಲ್ತ್ ಕ್ಲಬ್ ಮತ್ತು ಇತರ ಸೌಲಭ್ಯಗಳಿವೆ. ಅತಿಥಿಗಳು ಹತ್ತಿರದ ಗಾಲ್ಫ್ ಕೋರ್ಸ್ ಅನ್ನು ಸಹ ಪ್ರವೇಶಿಸಬಹುದು. ಸಾಂಪ್ರದಾಯಿಕ ಉಡುಪಿನಲ್ಲಿರುವ ಕೆಲಸಗಾರರು  ರಾಜವೈಭೋಗದ ಅತ್ಯಂತ ನಿಖರ ಪರಿಚಯ ಮಾಡಿಸುತ್ತಾರೆ. 

ತಲುಪುವುದು ಹೇಗೆ?

ಮೈಸೂರು ಕರ್ನಾಟಕದ ಎಲ್ಲೆಡೆಯಿಂದ ಉತ್ತಮ ವಾಯು, ರೈಲು ಮತ್ತು ರಸ್ತೆ  ಸಂಪರ್ಕ ಹೊಂದಿದೆ.

  • ವಾಯುಮಾರ್ಗ: ಮೈಸೂರು ವಿಮಾನ ನಿಲ್ದಾಣವು ನಗರ ಕೇಂದ್ರದಿಂದ 11 ಕಿ.ಮೀ ದೂರದಲ್ಲಿದೆ ಮತ್ತು ಆಯ್ದ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಗೋವಾ ಮತ್ತು ಕೊಚ್ಚಿಯಿಂದ ವಿಮಾನ ಸೇವೆಯನ್ನು ಹೊಂದಿದೆ. ಬೆಂಗಳೂರು ಮತ್ತು ಕಣ್ಣೂರು ಉತ್ತಮ ವಿಮಾನ ಸಂಪರ್ಕ ಹೊಂದಿರುವ ಹತ್ತಿರದ ಎರಡು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ. (ಮೈಸೂರಿನಿಂದ ಕ್ರಮವಾಗಿ 180 ಮತ್ತು 160 ಕಿ.ಮೀ)
  • ರೈಲು: ಮೈಸೂರು ರೈಲ್ವೆ ನಿಲ್ದಾಣವನ್ನು ಹೊಂದಿದ್ದು, ಬೆಂಗಳೂರು ಮತ್ತು ಮಂಗಳೂರಿಗೆ ರೈಲು ಮೂಲಕ ಸಂಪರ್ಕ ಹೊಂದಿದೆ. ಶತಾಬ್ದಿ ಎಕ್ಸ್‌ಪ್ರೆಸ್ ಸುಮಾರು ಎರಡು ಗಂಟೆಗಳಲ್ಲಿ ಬೆಂಗಳೂರು ಮತ್ತು ಮೈಸೂರು ನಡುವಿನ ಅಂತರವನ್ನು ಕ್ರಮಿಸುತ್ತದೆ.
  • ಬಸ್: ಕರ್ನಾಟಕದ ಪ್ರಮುಖ ನಗರಗಳಿಂದ ಮೈಸೂರು ಅತ್ಯುತ್ತಮ ಬಸ್ ಸಂಪರ್ಕವನ್ನು ಹೊಂದಿದೆ.

ಮೈಸೂರು ನಗರದಿಂದ ಲಲಿತ ಮಹಲ್ ಅರಮನೆಯನ್ನು ತಲುಪಲು ಟ್ಯಾಕ್ಸಿ ಅಥವಾ ಆಟೋ ಬಾಡಿಗೆಗೆ ಪಡೆಯಬಹುದಾಗಿದೆ. 

ವಸತಿ: ಲಲಿತ್ ಮಹಲ್ ಪ್ಯಾಲೇಸ್ ಸ್ವತಃ ಪಾರಂಪರಿಕ ವಾಸ್ತವ್ಯವಾಗಿದ್ದು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು.

Official website: Lalitha Mahal Palace Hotel

Tour Location

Leave a Reply

Accommodation
Meals
Overall
Transport
Value for Money