ಮೈಸೂರು ರೈಲು ವಸ್ತುಸಂಗ್ರಹಾಲಯ
ಮೈಸೂರು ರೈಲು ವಸ್ತುಸಂಗ್ರಹಾಲಯ: 1976 ರಲ್ಲಿ ಸ್ಥಾಪನೆಯಾದ ಮೈಸೂರು ರೈಲು ವಸ್ತುಸಂಗ್ರಹಾಲಯವು ಭಾರತದ ಎರಡನೇ ರೈಲ್ವೆ ವಸ್ತು ಸಂಗ್ರಹಾಲಯವಾಗಿದೆ (ಮೊದಲನೆಯದು ದೆಹಲಿಯಲ್ಲಿದೆ). ರೈಲ್ವೆಯ ವಿಕಾಸವನ್ನು ತಿಳಿಸಿಕೊಡುವ ಅನೇಕ ಪ್ರದರ್ಶನಗಳೊಂದಿಗೆ, ರೈಲುಗಳಲ್ಲಿ ಬಳಸುವ ತಂತ್ರಜ್ಞಾನ, ಪರಿಕರಗಳು ಮತ್ತಿತರ ಮಾಹಿತಿಯನ್ನು ಜನರಿಗೆ ಪರಿಚಯಿಸಿ ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗುತ್ತದೆ
ಪ್ರಮುಖ ಪ್ರದರ್ಶನಗಳು
- ಆಸ್ಟಿನ್ ರೈಲು ಮೋಟಾರು ಕಾರು: 1925 ರ ಆಸ್ಟಿನ್ ಕಾರಿಗೆ ರೈಲ್ವೆ ಚಕ್ರಗಳನ್ನು ಅಳವಡಿಸಿ ಮತ್ತು ತಪಾಸಣೆ ಕಾರ್ ಆಗಿ ಬಳಸಲಾಗುತಿತ್ತು.
- ವ್ಯಾಗ್ನಾಲ್ & ಕೋ 119 ಇ ಉಗಿ ಎಂಜಿನ್
- ಶಿವಮೊಗ್ಗ ಮತ್ತು ತಾಳಗುಪ್ಪ ನಡುವೆ ಓಡುತ್ತಿದ್ದ ಮೀಟರ್ ಗೇಜ್ ಬಸ್ ರೈಲು
- ಮೈಸೂರಿನ ಮಹಾರಾಜರು ಬಳಸಿದ ರಾಯಲ್ ಬೋಗಿಗಳು
- 1963 ವೈಪಿ -2511 ಟೆಲ್ಕೊ ನಿರ್ಮಿಸಿದ ಮೀಟರ್ ಗೇಜ್ ಉಗಿ ಎಂಜಿನ್.
- ನ್ಯಾರೋ ಗೇಜ್ (ಒಂದು ಮೀಟರ್ ಗಿಂತ ಕಡಿಮೆ ಅಗಲ) ಮತ್ತು ಮೀಟರ್ ಗೇಜ್ ರೈಲು ಬೋಗಿಗಳು
- ಮಹಾರಾಣಿ ಸಲೂನ್- ಮಲಗುವ ಕೋಣೆ , ಅಡಿಗೆ ಮನೆ ಮತ್ತು ಊಟದ ಕೋಣೆ ಇರುವ ರಾಯಲ್ ಬೋಗಿಗಳು
- 85 1885 ಎಂಜಿ ಹ್ಯಾಂಡ್ ಕ್ರೇನ್ (ಭಾರ ಎತ್ತುವ ಸಾಧನ)
- ರೈಲ್ವೆಗೆ ಸಂಬಂಧಿಸಿದ ಸಿಗ್ನಲಿಂಗ್ ವ್ಯವಸ್ಥೆಗಳು, ವರ್ಣಚಿತ್ರಗಳು ಮತ್ತು ಇತರ ಕಲಾಕೃತಿಗಳು
ಮೈಸೂರು ರೈಲು ವಸ್ತುಸಂಗ್ರಹಾಲಯವು ಮಕ್ಕಳಿಗಾಗಿ ಬ್ಯಾಟರಿ ಚಾಲಿತ ಆಟಿಕೆ ರೈಲು ಹೊಂದಿದೆ,
ಮೈಸೂರು ರೈಲು ವಸ್ತುಸಂಗ್ರಹಾಲಯ ಸಮಯಗಳು: ಮೈಸೂರು ರೈಲು ವಸ್ತುಸಂಗ್ರಹಾಲಯವು ಸೋಮವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತದೆ. ಸಂಜೆ ನಾಲ್ಕೂವರೆಗೆ ಟಿಕೆಟ್ ಮಾರಾಟ ನಿಲ್ಲುತ್ತದೆ.
ತಲುಪುವುದು ಹೇಗೆ: ಮೈಸೂರು ಬೆಂಗಳೂರಿನಿಂದ (150 ಕಿ.ಮೀ ದೂರದಲ್ಲಿ) ವಾಯು, ರಸ್ತೆ ಮತ್ತು ರೈಲು ಮೂಲಕ ಉತ್ತಮವಾಗಿ ಸಂಪರ್ಕ ಹೊಂದಿದೆ. ಮೈಸೂರು ರೈಲು ವಸ್ತುಸಂಗ್ರಹಾಲಯವು ಮೈಸೂರು ರೈಲ್ವೆ ನಿಲ್ದಾಣದ ಆವರಣದಲ್ಲಿಯೇ ಇದೆ, ಕೃಷ್ಣ ರಾಜ ಸಾಗರ ರಸ್ತೆಯ ಮೂಲಕ ಪ್ರವೇಶಿಸಬಹುದು.
ವಸತಿ: ಮೈಸೂರು ನಗರವು ಎಲ್ಲಾ ರೀತಿಯ ವಸತಿ ಗೃಹ ಮತ್ತು ರೆಸಾರ್ಟ್‌ಗಳನ್ನು ಹೊಂದಿದೆ.