Karnataka Tourism
GO UP

ಮರವಂತೆ ಕಡಲತೀರ

separator
ಕೆಳಗೆ ಸ್ಕ್ರಾಲ್ ಮಾಡಿ

ಮರವಂತೆ ಕರ್ನಾಟಕ ಕರಾವಳಿಯ ಒಂದು ವಿಶಿಷ್ಟ ಕಡಲತೀರವಾಗಿದೆ. ಒಂದು ಕಡೆ ವಿಶಾಲ ಅರಬ್ಬೀ ಸಮುದ್ರ, ಇನ್ನೊಂದೆಡೆ ರಮಣೀಯ ಸೌಪರ್ಣಿಕಾ ನದಿ, ಮಧ್ಯೆ ರಾಷ್ಟೀಯ ಹೆದ್ದಾರಿ ೬೬. ಇಂತಹ ವಿಶಿಷ್ಟ ದೃಶ್ಯ ಭಾರತದ ಇನ್ನೆಲ್ಲೂ ಇಲ್ಲ. ಔಟ್ ಲುಕ್ ಟ್ರಾವೆಲರ್ ಪತ್ರಿಕೆ ೨೦೦೫ರಲ್ಲಿ ಮರವಂತೆ ಕಡಲ ತೀರಕ್ಕೆ  ಕರ್ನಾಟಕದ ಅತ್ಯಂತ ಸುಂದರ ಬೀಚ್ ಎಂಬ ಪಟ್ಟ ನೀಡಿದೆ. 

ಮರವಂತೆಯ ಪ್ರವಾಸಿ ಆಕರ್ಷಣೆಗಳು:

  • ರಮಣೀಯ ದೃಶ್ಯ : ಅರಬ್ಬೀ ಸಮುದ್ರ ಮತ್ತು ಸೌಪರ್ಣಿಕಾ ನದಿಯ ಮಧ್ಯ ಹಾದು ಹೋಗುವ ರಾಷ್ಟೀಯ ಹೆದ್ದಾರಿಯನ್ನು ನೋಡುವುದು ಒಂದು ಸುಂದರ ಅನುಭವ. 
  • ಕಡಲ ತೀರ: ನಿಗದಿತ ಸ್ಥಳಗಳಲ್ಲಿ ನೀರಿಗಿಳಿದು ಕಡಲ ತೀರದ ಆನಂದ ಪಡೆಯಬಹುದಾಗಿದೆ.  
  • ಎಳನೀರು: ಹೆದ್ದಾರಿ ಸಮೀಪ ಮಾರುವ ತಾಜಾ ಎಳನೀರನ್ನು ಸವಿಯಬಹುದು 
  • ಸೂರ್ಯಾಸ್ತ: ಸಂಜೆಯ ಹೊತ್ತು ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡಲು ಬಹಳ ಚೆನ್ನಾಗಿರುತ್ತದೆ 
  • ಸ್ಥಳೀಯ ಮೀನುಗಾರರು ತಮ್ಮ ದೋಣಿಗಳಲ್ಲಿ ಸಮುದ್ರದ ಅಲೆಗಳ ಏರಿಳಿತವನ್ನು ಸಂಭಾಳಿಸುತ್ತಾ ಸಾಗುವುದನ್ನು ನೋಡಬಹುದಾಗಿದೆ.
  • ರಸ್ತೆಯ ಇನ್ನೊಂದು ಬದಿ ಇರುವ ಮಾರಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡಬಹುದಾಗಿದೆ.
  • ದೋಣಿ ವಿಹಾರ: ಸೌಪರ್ಣಿಕಾ ನದಿಯಲ್ಲಿ ದೋಣಿ ವಿಹಾರ ಮಾಡಬಹುದು  
  • ಪಡುಕೋಣೆ: ಪಡುಕೋಣೆ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಮತ್ತು ಖ್ಯಾತ ಬ್ಯಾಡ್ಮಿಂಟನ್ ಪಟು ಪ್ರಕಾಶ್ ಪಡುಕೋಣೆ ಇವರ ಹುಟ್ಟೂರು. ಪಡುಕೋಣೆ ಸೌಪರ್ಣಿಕಾ ನದಿಯ ಇನ್ನೊಂದು ತೀರದಲ್ಲಿದೆ. ಮರವಂತೆಯಿಂದ ಸೇತುವೆ ದಾಟಿ ಪಡುಕೋಣೆ ಗ್ರಾಮದಲ್ಲಿ ಸುತ್ತಾಡಬಹುದಾಗಿದೆ.

ಸಂಪರ್ಕ: 

ವಿಮಾನ ಯಾನ: ಮಂಗಳೂರು ಮರವಂತೆಗೆ ಅತಿ  ಹತ್ತಿರದ ವಿಮಾನ ನಿಲ್ದಾಣ (೧೦೮ ಕಿ.ಮೀ.) ಬೆಂಗಳೂರು ಸೇರಿದಂತೆ ಹಲವು ದೇಶಿಯ ಮತ್ತು ಅಂತರರಾಷ್ಟ್ರೀಯ ನಗರಗಳಿಂದ ಮಂಗಳೂರಿಗೆ ವಿಮಾನ ಸೇವೆಯಿದೆ. 

ರೈಲು: ಕುಂದಾಪುರ ರೈಲು ನಿಲ್ದಾಣ ಮರವಂತೆಯಿಂದ ೨೦ ಕಿ ಮೀ ದೂರದಲ್ಲಿದೆ. ಬೆಂಗಳೂರು, ಮಂಗಳೂರು, ಮುಂಬೈ, ಕಾರವಾರ ನಗರಗಳಿಂದ ಇಲ್ಲಿಗೆ ರೈಲು ಸೇವೆ ಇದೆ. 

ಬಸ್: ಮರವಂತೆಗೆ ಸಮೀಪದ ನಗರಗಳಿಂದ ಸಾಕಷ್ಟು ಖಾಸಗಿ ಮತ್ತು ಸರಕಾರೀ ಬಸ್ ಸೇವೆ ಇದೆ. ಕುಂದಾಪುರ ಮತ್ತು ಬೈಂದೂರು ಮಧ್ಯೆ ಓಡಾಡುವ ಬಸ್ಸುಗಳು ಮರವಂತೆಯಲ್ಲಿ ನಿಲ್ಲುತ್ತವೆ. 

ಮರವಂತೆ ರಾಜಧಾನಿ  ಬೆಂಗಳೂರಿನಿಂದ ೪೨೦ ಕಿ ಮೀ,  ಮಂಗಳೂರಿನಿಂದ ೧೦೫ ಕಿ ಮೀ ದೂರದಲ್ಲಿದೆ. (ಕೂಡ)  ಕರಾವಳಿಯ ಯಾವುದೇ ನಗರದಿಂದ ಮರವಂತೆ ತಲುಪಲು ಉತ್ತಮ ಬಸ್ ಸೇವೆ ಇದೆ. ಕುಂದಾಪುರ ಸಮೀಪದ ದೊಡ್ಡ ನಗರ (೧೨ ಕಿ ಮೀ). ಕುಂದಾಪುರ ನಗರದಿಂದ ಬಸ್ಸು, ರಿಕ್ಷಾ ಅಥವಾ ಟ್ಯಾಕ್ಸಿ ಬಳಸಿ ಮರವಂತೆ ತಲುಪಬಹುದು. 

ವಸತಿ: ಮರವಂತೆ ಕಡಲ ತೀರಕ್ಕೆ ಸನಿಹವಾಗಿ ತ್ರಾಸಿಯಲ್ಲಿ ಹೋಮ್ ಸ್ಟೇ, ರೆಸಾರ್ಟ್ ಸೌಲಭ್ಯ ಇದೆ. ಹತ್ತಿರದ ಕುಂದಾಪುರ ನಗರದಲ್ಲಿ  ಇನ್ನಷ್ಟು ವಸತಿ ಆಯ್ಕೆ ಸಿಗುತ್ತದೆ.

Tour Location

Leave a Reply

Accommodation
Meals
Overall
Transport
Value for Money