Karnataka Tourism
GO UP

ಬೆಂಗಳೂರು ಗ್ರಾಮಾಂತರ

separator
ಕೆಳಗೆ ಸ್ಕ್ರಾಲ್ ಮಾಡಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು 1986 ರಲ್ಲಿ ಬೆಂಗಳೂರು ಜಿಲ್ಲೆಯಿಂದ ಬೇರ್ಪಡಿಸಿ ರಚಿಸಲಾಯಿತು.  2007 ರಲ್ಲಿ ರಾಮನಗರ ಜಿಲ್ಲೆ ರಚನೆಯಾದಾಗ ಬೆಂಗಳೂರು ಗ್ರಾಮೀಣ ಪ್ರದೇಶದ ಕೆಲವು ತಾಲ್ಲೂಕುಗಳು ರಾಮನಗರದ ಭಾಗವಾಯಿತು.

 

ಬೆಂಗಳೂರು ಗ್ರಾಮಾಂತರ ಪ್ರದೇಶವು ಕರ್ನಾಟಕದ ಹೆಬ್ಬಾಗಿಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಘಾಟಿ ಸುಬ್ರಮಣ್ಯ ದೇವಸ್ಥಾನ, ದೇವನಹಳ್ಳಿ ಕೋಟೆ, ಶಿವಗಂಗೆ ಮತ್ತಿತರ ಆಕರ್ಷಣೆಗಳಿಗೆ ತವರೂರಾಗಿದೆ. ಬೆಂಗಳೂರು ನಗರಕ್ಕೆ ಹತ್ತಿರವಿರುವುದರಿಂದ ಬೆಂಗಳೂರಿನಿಂದ ವಾರಾಂತ್ಯದ ಅಥವಾ ದಿನದ ಪ್ರವಾಸಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರವಾಸಿ ತಾಣಗಳು ಸೂಕ್ತವಾಗಿವೆ. 

 

ಟಿಪ್ಪು ಸುಲ್ತಾನ್ ಜನಿಸಿದ್ದು ದೇವನಹಳ್ಳಿಯಲ್ಲಿ. ವೋಲ್ವೋ ಐಷಾರಾಮಿ ಬಸ್ಸುಗಳು ಮತ್ತು ಲಾರಿ‌ಗಳನ್ನು ಹೊಸಕೋಟೆಯಲ್ಲಿ ತಯಾರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕ್ಲಿಕ್ ಮಾಡಿ

ಪ್ರವಾಸಿ ಆಕರ್ಷಣೆಗಳು
  • ದೇವನಹಳ್ಳಿ ಕೋಟೆ: ದೇವನಹಳ್ಳಿ ಕೋಟೆಯನ್ನು 1501ರಲ್ಲಿ ಮಲ್ಲಭೈರ ಗೌಡ ನಿರ್ಮಿಸಿದ. ದೇವನಹಳ್ಳಿ ಕೋಟೆಯನ್ನು ನಂತರ ಮೈಸೂರು ದೊರೆಗಳಾದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಆಕ್ರಮಿಸಿಕೊಂಡರು. ಕೋಟೆ ವಠಾರದಲ್ಲಿ ದೊಡ್ಡ ಗೋಡೆಗಳು, ಬುರುಜುಗಳು ಮತ್ತು ಟಿಪ್ಪು ಸುಲ್ತಾನರ ಸ್ಮಾರಕವಿದೆ. ದೇವನಹಳ್ಳಿ ಕೋಟೆ ಸಂಕೀರ್ಣವು ಮಾವು ಮತ್ತು ತೆಂಗಿನ ತೋಟದಿಂದ ಆವೃತವಾಗಿದೆ ಮತ್ತು ಹಲವಾರು ದೇವಾಲಯಗಳನ್ನು ಹೊಂದಿದೆ.
  • ದೊಡ್ಡ ಬಳ್ಳಾಪುರ: ದೊಡ್ಡ ಬಳ್ಳಾಪುರ ಬೆಂಗಳೂರು ಗ್ರಾಮೀಣ ಪ್ರದೇಶದ ಪ್ರಮುಖ ಪಟ್ಟಣ.  ಆಶುರ್ ಖಾನಾ ಸ್ಮಾರಕ, ದೊಡ್ಡ ಕಲ್ಲಿನ ಬಾವಿ. ದೊಡ್ಡ ಬಳ್ಳಾಪುರ ವೆಂಕಟರಮಣ, ಚೌಡೇಶ್ವರಿ, ಈಶ್ವರಿ, ಜನಾರ್ಧನ, ಸೋಮೇಶ್ವರ, ಕಾಶಿ ವಿಶ್ವನಾಥ, ಅರ್ಕಾವತಿ, ನಾಗೇಶ್ವರ ದೇವಾಲಯಗಳು ಮತ್ತು ಹಲವಾರು ಮಸೀದಿಗಳ ನೆಲೆಯಾಗಿದೆ.
  • ಹೊಸಕೋಟೆ: ಹೊಸಕೋಟೆ ಒಂದು ಅನಾದಿ ಕಾಲದ ಊರು, ಆಧುನಿಕ ತಾಲೂಕು ಕೇಂದ್ರ ಕಚೇರಿ ಮತ್ತು ಪ್ರಮುಖ ಕೈಗಾರಿಕಾ ಪಟ್ಟಣವಾಗಿದೆ. ವೋಲ್ವೋ ಬಸ್ಸುಗಳು ಮತ್ತು ಲಾರಿಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಹೊಸಕೋಟೆ ಅವಿಮುಕ್ತೇಶ್ವರ, ವರದರಾಜ, ಅಂಜನೇಯ ಮತ್ತು ವಿಠೋಬ ದೇವಾಲಯಗಳಲ್ಲದೆ ಹಳೆಯ ಕೋಟೆಯನ್ನು ಹೊಂದಿದೆ.
  • ನಿಜಗಲ್: ಬೆಟ್ಟದ ಕೋಟೆಗೆ ಜನಪ್ರಿಯವಾಗಿದೆ- ಚಾರಣ ಮತ್ತು ವಿಹಾರಕ್ಕೆ ಸೂಕ್ತ ಸ್ಥಳ. ಬೆಟ್ಟದಲ್ಲಿ ಅನೇಕ ನೀರಿನ ಬುಗ್ಗೆಗಳು, ಕೆಲವು ದೇವಾಲಯಗಳು ಮತ್ತು ದರ್ಗಾಗಳಿವೆ. ವೀರಭದ್ರ ದೇವಸ್ಥಾನ ಮತ್ತು ಚೆನ್ನಿಗರಾಯ ದೇವಾಲಯಗಳು ನಿಜಗಲ್‌ನ ಪ್ರಮುಖ ದೇವಾಲಯಗಳಾಗಿವೆ.
ಧಾರ್ಮಿಕ ಸ್ಥಳಗಳು
  • ಘಾಟಿ ಸುಬ್ರಮಣ್ಯ ದೇವಸ್ಥಾನ: ಘಾಟಿ ಸುಬ್ರಮಣ್ಯವು ತೀರ್ಥಯಾತ್ರೆಯ ಕೇಂದ್ರ ಮತ್ತು ಬೆಂಗಳೂರು ನಗರದ ಹೊರವಲಯದಲ್ಲಿರುವ 600 ವರ್ಷಗಳ ಹಳೆಯ ದೇವಾಲಯವಾಗಿದೆ. ಭಗವಾನ್ ಸುಬ್ರಮಣ್ಯ ಮತ್ತು ನರಸಿಂಹರನ್ನು ಒಟ್ಟಿಗೆ ನೋಡಬಹುದಾದ ಕೆಲವೇ ದೇವಾಲಯಗಳಲ್ಲಿ ಘಾಟಿ ಸುಬ್ರಮಣ್ಯ ಒಂದು ಎಂದು ಹೇಳಲಾಗುತ್ತದೆ. ಭಗವಾನ್ ಸುಬ್ರಮಣ್ಯ ಸರ್ಪದ ವೇಷದಲ್ಲಿ ಕಠಿಣ ತಪಸ್ಸು ಮಾಡಿದ ಸ್ಥಳವಿದು ಎಂಬ ಪ್ರತೀತಿಯಿದೆ. ಹಾವುಗಳನ್ನು ಭಕ್ಷಿಸುತ್ತಿದ್ದ ಭಗವಾನ್ ವಿಷ್ಣುವಿನ ವಾಹನವಾದ ಗರುಡನಿಂದ ರಕ್ಷಣೆ ಪಡೆಯಲು ಸುಬ್ರಮಣ್ಯನು ನರಸಿಂಹನ ಮೊರೆ ಹೋದನು.  ಈ ಕಾರಣದಿಂದ, ಸುಬ್ರಮಣ್ಯ ದೇವಾಲಯಗಳು (ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ಸೇರಿದಂತೆ) ನಾಗ ದೇವರುಗಳ ಪೂಜಾ ಕೇಂದ್ರಗಳಾಗಿವೆ. ಭಕ್ತರು ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಲು, ಸರ್ಪ ದೋಷದಿಂದ ವಿಮುಕ್ತಿ ಪಡೆಯಲು ದೂರದ ಸ್ಥಳಗಳಿಂದ ಆಗಮಿಸುತ್ತಾರೆ. 
  • ಗಂಗಾವರ: ಪ್ರಾಚೀನ ಶಿವ ದೇವಾಲಯದ ನೆಲೆಯಾಗಿದೆ. 11 ನೇ ಶತಮಾನದ ತಮಿಳು ಬರಹಗಳು ಇಲ್ಲಿ ಕಂಡುಬಂದಿವೆ.
  • ಮನ್ನೆ: ಮನ್ನೆ ಗಂಗಾ ವಂಶದ ರಾಜಧಾನಿಯಾಗಿದ್ದು, ಕಪಿಲೇಶ್ವರ, ಅಂಜನೇಯ, ಅಕ್ಕ-ತಂಗಿ ಗುಡಿ ಮತ್ತು ಸೋಮೇಶ್ವರ ದೇವಾಲಯಗಳಿಗೆ ನೆಲೆಯಾಗಿತ್ತು.
  • ಚಿಕ್ಕ ಮಧುರೆ: ಶ್ರೀ ಶನಿ ಮಹಾತ್ಮ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ, ದೊಡ್ಡ ಬಳ್ಳಾಪುರದಿಂದ 18 ಕಿ.ಮೀ. ದೂರದಲ್ಲಿದೆ. 
  • ಶಿವಗಂಗೆ: ಗವಿ ಗಂಗಾಧರ ಮತ್ತು ಹೊನ್ನದೇವಿ ದೇವಾಲಯ ಇರುವ ನೆಲಮಂಗಲದ ಒಂದು ಪ್ರಮುಖ ಯಾತ್ರಾ ಕೇಂದ್ರ. ಅನೇಕ ನೀರಿನ ಮೂಲಗಳು ಶಿವಗಂಗೆಯಲ್ಲಿ ಉಗಮವಾಗುತ್ತವೆ. 
  • ವಿಠ್ಠಲ ಮಂದಿರ: ನೆಲಮಂಗಲದಲ್ಲಿರುವ ವಿಶ್ವ ಶಾಂತಿ ಆಶ್ರಮವು 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಸುಂದರವಾಗಿ ವಿನ್ಯಾಸಗೊಳಿಸಲಾದ ಕೆಲವು ದೇವಾಲಯಗಳನ್ನು ಹೊಂದಿದೆ. ಆಶ್ರಮವನ್ನು ಶ್ರೀ ಸದ್ಗುರು ಸಂತ ಕೇಶವ ದಾಸ ಸ್ಥಾಪಿಸಿದರು.
  • ಸುಗ್ಗನಹಳ್ಳಿ: ವಿಜಯನಗರ ಶೈಲಿಯ ನರಸಿಂಹ ದೇವಸ್ಥಾನಕ್ಕೆ ಜನಪ್ರಿಯವಾಗಿದೆ.
  • ವಿಜಯಪುರ: ನಾಗೇಶ್ವರ, ಚೆನ್ನಕೇಶವ, ಧರ್ಮರಾಯ ಮತ್ತು ಸೋಮೇಶ್ವರ ದೇವಾಲಯಗಳಿಗೆ ನೆಲೆಯಾಗಿದೆ. 
  • ಅವತಿ: ಚೆನ್ನಕೇಶವ, ಅಂಜನೇಯ ಮತ್ತು ಈಶ್ವರ ದೇವಾಲಯಗಳಿಗೆ ನೆಲೆಯಾಗಿದೆ. 
  • ಗೌತಮ ಗಿರಿಕ್ಷೇತ್ರ: ತಿಮ್ಮಾರಾಯಣಸ್ವಾಮಿ ದೇವಾಲಯದೊಂದಿಗೆ ಅವತಿ ಬಳಿಯ ಸಣ್ಣ ಬೆಟ್ಟ
ಇತರ ಆಕರ್ಷಣೆಗಳು
  • ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು (ಕೆಐಎಬಿ) ಕರ್ನಾಟಕದ ಹೆಬ್ಬಾಗಿಲು. ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರಿನ ವಿಮಾನ ನಿಲ್ದಾಣ ಭಾರತದ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ಪ್ರಮುಖ ನಗರಗಳಿಗೆ ಮತ್ತು 25+ ಅಂತರರಾಷ್ಟ್ರೀಯ ತಾಣಗಳಿಗೆ ನೇರ ವಿಮಾನಯಾನ ಹೊಂದಿದೆ. 37 ವಿವಿಧ ವಿಮಾನಯಾನ ಸಂಸ್ಥೆಗಳು ಬೆಂಗಳೂರು ವಿಮಾನ ನಿಲ್ದಾಣದಕ್ಕೆ ಪ್ರತಿದಿನ ಒಂದು ಲಕ್ಷ ಪ್ರಯಾಣಿಕರನ್ನು ಹೊತ್ತ 650+ ವಿಮಾನಯಾನ ಸೇವೆಗಳನ್ನು ನಿರ್ವಹಿಸುತ್ತವೆ. ಬೆಂಗಳೂರು ವಿಮಾನ ನಿಲ್ದಾಣವು 2019 ರಲ್ಲಿ 33 ಮಿಲಿಯನ್ ಪ್ರಯಾಣಿಕರನ್ನು ತಮ್ಮ ಗಮ್ಯ ತಲುಪಿಸಿದೆ. 2018-19ರ ಅವಧಿಯಲ್ಲಿ 12 ಸರಕು ವಿಮಾನಯಾನ ಸಂಸ್ಥೆಗಳು 4 ಲಕ್ಷ ಟನ್ ಸರಕುಗಳನ್ನು ಸರಿಸಿವೆ. ಕರ್ನಾಟಕಕ್ಕೆ ಭೇಟಿ ನೀಡುವ ಪ್ರವಾಸಿಗರು ಕರ್ನಾಟಕದೊಳಗಿನ ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ವಿದ್ಯಾನಗರ (ಹಂಪಿ), ಕಲಬುರಗಿ ಮತ್ತು  ಬೀದರ್ ವಿಮಾನ ನಿಲ್ದಾಣಗಳಿಗೆ ಇಲ್ಲಿಂದ ಹಾರಬಹುದಾಗಿದೆ.

Tour Location

ಬೆಂಗಳೂರು ಗ್ರಾಮೀಣ ಪ್ರದೇಶವು ವಾಯು, ರೈಲು ಮತ್ತು ರಸ್ತೆ ಮೂಲಕ ಉತ್ತಮ ಸಂಪರ್ಕ ಹೊಂದಿದೆ.

ಬೆಂಗಳೂರು ವಿಮಾನ ನಿಲ್ದಾಣವು ದೊಡ್ಡ ಬಳ್ಳಾಪುರದಿಂದ 32 ಕಿ.ಮೀ ದೂರದಲ್ಲಿದೆ.
ದೊಡ್ಡ ಬಳ್ಳಾಪುರದಲ್ಲಿ ರೈಲ್ವೆ ನಿಲ್ದಾಣವಿದೆ
ಬೆಂಗಳೂರು ಗ್ರಾಮಾಂತರ ಪ್ರದೇಶದ ಸ್ಥಳಗಳನ್ನು ಅನ್ವೇಷಿಸಲು ಟ್ಯಾಕ್ಸಿಗಳನ್ನು ದೊಡ್ಡ ಬಳ್ಳಾಪುರದಲ್ಲಿ ಅಥವಾ ಬೆಂಗಳೂರು ನಗರದಿಂದ ಬಾಡಿಗೆಗೆ ಪಡೆಯಬಹುದು. ಸೆಲ್ಫ್ ಡ್ರೈವ್ ಕಾರುಗಳು ಮತ್ತು ಬೈಕುಗಳು ಬೆಂಗಳೂರಿನಲ್ಲಿ ಲಭ್ಯವಿದೆ.

ಪರಿಸರ ಸ್ನೇಹಿ ವಸತಿ ಆಯ್ಕೆಗಳು:

ಜೆಎಲ್ಆರ್ ಗಾಳಿಬೊರೆ ನೇಚರ್ ಕ್ಯಾಂಪ್
ಉಯಂಬಳ್ಳಿ ಪೋಸ್ಟ್, ಕನಕಪುರ ತಾಲ್ಲೂಕು, ಸಂಗಮ್, ಬೆಂಗಳೂರು ಗ್ರಾಮಾಂತರ ಜಿಲ್ಲೆ 562117 ಕರ್ನಾಟಕ, ಭಾರತ ವ್ಯವಸ್ಥಾಪಕ: ಶ್ರೀ.ಪಿ.ಶಿವಪ್ರಸಾದ್ ಸಂಪರ್ಕ ಸಂಖ್ಯೆ: +919449599768 Landline:+91-080-29784504 ವೆಬ್‌ಸೈಟ್: ಕ್ಲಿಕ್ ಮಾಡಿ

ಐಷಾರಾಮಿ ವಸತಿಗಳು:

ತಾಜ್ ಬೆಂಗಳೂರು ಕೆಐಎಎಲ್
ಗೋಲ್ಡನ್ ಅಮೂನ್ ರೆಸಾರ್ಟ್ ಎನ್ಎಚ್ 4, ಓಲ್ಡ್ ಮದ್ರಾಸ್ ಆರ್ಡಿ, ಹೊಸಕೋಟೆ, ಬೆಂಗಳೂರು ಗ್ರಾಮೀಣ, ಕರ್ನಾಟಕ 562122

ಮಧ್ಯಮ ಶ್ರೇಣಿಯ ವಸತಿ ಆಯ್ಕೆಗಳು:

ಶಿವಾಸ್ ಗೇಟ್‌ವೇ
ಶಿವಾಸ್ ಗ್ಯಾಲಕ್ಸಿ ಹೋಟೆಲ್
ಹೋಟೆಲ್ ಲೋಟಸ್ ವ್ಯೂ