ಬೆಂಗಳೂರಿನಲ್ಲಿ ವಿಮಾನ ಹಾರಾಟ ನಡೆಸಬಹುದೆಂದು ನಿಮಗೆ ತಿಳಿದಿದೆಯೇ? ಯಾವುದೇ ಪರವಾನಗಿ ಅಗತ್ಯವಿಲ್ಲದೆ, ಜಕ್ಕೂರ್ ಏರೋಡ್ರಮ್ ನಲ್ಲಿ ಇದು ಸಾಧ್ಯವಿದೆ.
ಮೈಕ್ರೋ ವಿಮಾನಗಳು ಎಂದೆರೇನು:
ಮೈಕ್ರೊಲೈಟ್ ವಿಮಾನಗಳು ಪೈಲಟ್ ಮತ್ತು ತರಬೇತಿ ಪಡೆಯುವರಿಗಾಗಿ/ಪ್ರಯಾಣಿಕರಿಗಾಗಿ ಮೀಸಲಾದ ಎರಡು ಸೀಟಿನ ಸಣ್ಣ ವಿಮಾನಗಳಾಗಿವೆ. ಬೆಂಗಳೂರಿನ ವಾಯುಯಾನ ಕಂಪನಿಗಳು ಬಳಸುವ ಎರಡು ಪ್ರಸಿದ್ಧ ಮೈಕ್ರೋ ಲೈಟ್ ಮಾದರಿಯ ವಿಮಾನವೆಂದರೆ ಜೆನ್ ಏರ್ ಮತ್ತು ಎಕ್ಸ್ ಏರ್ ವಿಮಾನ.
ನಾನು ಹೇಗೆ ಹಾರಬಲ್ಲೆ: ಮೈಕ್ರೋ ಲೈಟ್ ಪ್ಲೇನ್ ನಿರ್ವಾಹಕರು ಸಂತೋಷ ಸವಾರಿಗೆ ಮಾಡುವುದಕ್ಕೆ ಅನುಮತಿಯನ್ನು ನೀಡುತ್ತಾರೆ. ವ್ಯಕ್ತಿಗಳು ನಿಗದಿತ ಸಮಯವನ್ನು ಬುಕ್ ಮಾಡಿ ಪೈಲಟ್‌ನೊಂದಿಗೆ ಹಾರಬಲ್ಲರು. ಸವಾರಿಯ ಸಮಯದಲ್ಲಿ ಹಾರಾಟದ ಮೂಲಭೂತ ಅಂಶಗಳನ್ನು ಪ್ರಯಾಣಿಕರಿಗೆ ವಿವರಿಸಲಾಗುವುದು ಮತ್ತು ಪ್ರಯಾಣಿಕರಿಗೆ ತಿರುವು ತೆಗೆದುಕೊಳ್ಳುವುದು , ಎತ್ತರವನ್ನು ಹೆಚ್ಚಿಸುವುದು/ಇಳಿಸುವುದು ಮುಂತಾದ ಕೆಲವು ಸರಳ ಕುಶಲತೆಯನ್ನು ಮಾಡಲು ಹೇಳಿಕೊಡುತ್ತಾರೆ.
ಬೆಂಗಳೂರಿನಲ್ಲಿ ಮೈಕ್ರೋ ಫ್ಲೈಟ್ ಫ್ಲೈಯಿಂಗ್ ಎಲ್ಲಿದೆ: ಉತ್ತರ ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಜಕ್ಕೂರ್ ಏರೋಡ್ರೋಮ್‌ನಲ್ಲಿ ಮೈಕ್ರೊಲೈಟ್ ಹಾರಾಟವನ್ನು ನಡೆಸಲಾಗುತ್ತದೆ.
ಮೈಕ್ರೋ ಫ್ಲೈಟ್ ಹಾರುವ ಅವಧಿ: ಟ್ಯಾಕ್ಸಿ ಮಾಡುವ ಸಮಯ ಸೇರಿದಂತೆ ಸಾಮಾನ್ಯ ಹಾರಾಟದ ಅನುಭವವು 10-15 ನಿಮಿಷಗಳವರೆಗೆ ಇರುತ್ತದೆ. ಮೇಲೆ ಗಾಳಿಯಲ್ಲಿರುವ ಸಮಯ ಸುಮಾರು 7-10 ನಿಮಿಷಗಳು ಇರಬಹುದು. ಖರೀದಿಸಿದ ಪ್ಯಾಕೇಜ್ ಮತ್ತು ಹವಾಮಾನದಂತಹ ಇತರ ಅಂಶಗಳನ್ನು ಅವಲಂಬಿಸಿ ನಿಖರವಾದ ಹಾರಾಟದ ಅವಧಿ ಬದಲಾಗಬಹುದು.
ಗಮನಿಸಬೇಕಾದ ಇತರ ಅಂಶಗಳು: ತೂಕ ನಿರ್ಬಂಧಗಳು ಅನ್ವಯವಾಗಬಹುದು. ಮಕ್ಕಳಿಗೆ ಹಾರಲು ಅವಕಾಶವಿಲ್ಲ. ಶೂ ಅನ್ನು ಧರಿಸಬೇಕಾಗುತ್ತದೆ. ವಿಮಾನವು ಅನುಕೂಲಕರ ಹವಾಮಾನ, ಗೋಚರತೆ ಮತ್ತು ATC ಕ್ಲಿಯರೆನ್ಸ್‌ಗೆ ಒಳಪಟ್ಟಿರುತ್ತದೆ. ಭದ್ರತಾ ಕಾರಣಗಳಿಂದ ಛಾಯಾಗ್ರಹಣ/ವೀಡಿಯೋಗ್ರಫಿ ನಿರ್ಬಂಧಗಳು ಅನ್ವಯವಾಗಬಹುದು. ಮೈಕ್ರೋ ಲೈಟ್ ವಿಮಾನವನ್ನು ಹಾರಲು ಮುಂಜಾನೆ ಉತ್ತಮ ಸಮಯವಾಗಿರುತ್ತದೆ ಏಕೆಂದರೆ ಈ ಸಮಯದಲ್ಲಿ ವಾಯುಮಾನ ಪರಿಸ್ಥಿತಿಯು ಸಹ ಅನುಕೂಲಕರವಾಗಿರುತ್ತದೆ.
ಬೆಂಗಳೂರಿನಲ್ಲಿ ಮೈಕ್ರೋ ಫ್ಲೈಟ್ ಹಾರಾಟದ ವೆಚ್ಚ: ಕಡಿಮೆ ಸಮಯದ ಹಾರಾಟವು ಅಂದಾಜು 3000-5000 ರೂ ಆಗಬಹುದು ,ಆಪರೇಟರ್ ಮತ್ತು ಹಾರಾಟದ ಅವಧಿಯ ಮೇಲೆ ಅವಲಂಬಿಸಿರುತ್ತದೆ .
ಮೈಕ್ರೋ ಫ್ಲೈಟ್ ಫ್ಲೈಯಿಂಗ್ ಸಾಹಸವನ್ನು ಎಲ್ಲಿ ಬುಕ್ ಮಾಡುವುದು: ಲಭ್ಯತೆ ಮತ್ತು ಸಮಯಾದ ನಿಗದಿಯನ್ನು ಪರಿಶೀಲಿಸಲು ಮೈಕ್ರೋ ಲೈಟ್ ಆಪರೇಟರ್‌ಗಳನ್ನು ಸಂಪರ್ಕಿಸಿ. Https://www.myflying.in/ ಅಥವಾ http://www.agniaero.com/.
ಜಕ್ಕೂರ್ ಏರೋಡ್ರೋಮ್ ತಲುಪುವುದು ಹೇಗೆ: ಜಕ್ಕೂರ್ ಏರೋಡ್ರಮ್ ಬೆಂಗಳೂರು ವಿಮಾನ ನಿಲ್ದಾಣದಿಂದ 22 ಕಿ.ಮೀ ದೂರದಲ್ಲಿದೆ ಮತ್ತು ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ 15 ಕಿ.ಮೀ ದೂರದಲ್ಲಿದೆ. ಬೆಂಗಳೂರು ನಗರದಿಂದ ಸಾರ್ವಜನಿಕ ಸಾರಿಗೆ ಅಥವಾ ಆಟೋ/ಟ್ಯಾಕ್ಸಿ ಬಳಸಿ ಜಕ್ಕೂರ್ ತಲುಪಬಹುದು.
ಜಕ್ಕೂರ್ ಏರೋಡ್ರಮ್ ಬಳಿ ಉಳಿಯಲು ಸ್ಥಳಗಳು: ಬೆಂಗಳೂರಿನ ಹೊರವಲಯದಲ್ಲಿರುವ ಹೆಬ್ಬಾಳ ಮತ್ತು ಯಲಹಂಕ ಪ್ರದೇಶದಲ್ಲಿ ಸಾಕಷ್ಟು ಸ್ಥಳಗಳು ಲಭ್ಯವಿದೆ ಲಭ್ಯವಿದೆ.