Karnataka logo

Karnataka Tourism
GO UP

ಬಸವಕಲ್ಯಾಣ

separator
ಕೆಳಗೆ ಸ್ಕ್ರಾಲ್ ಮಾಡಿ

ಬೀದರ ಜಿಲ್ಲೆಯಲ್ಲಿರುವ ಬಸವಕಲ್ಯಾಣ ಕಲ್ಯಾಣ ಚಾಲುಕ್ಯ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇತಿಹಾಸದ ದಿನಗಳಲ್ಲಿ ಬಸವಕಲ್ಯಾಣ ಒಂದು ಮಹಾನಗರವಾಗಿತ್ತು ಮತ್ತು ಈ ಪ್ರದೇಶದಲ್ಲಿ ಸಂಪತ್ತು ಹಾಗು ಸಮೃದ್ಧಿಯ ಕೇಂದ್ರವಾಗಿತ್ತು.

ಬಸವಕಲ್ಯಾಣಕ್ಕೆ ಭೇಟಿ ನೀಡಲು ಕಾರಣಗಳು

  • ಬಸವಕಲ್ಯಾಣ ಕೋಟೆ: ಬಸವಕಲ್ಯಾಣ ಪಟ್ಟಣದ ಉತ್ತರದಲ್ಲಿ ನೆಲೆಗೊಂಡಿರುವ ಈ ಕೋಟೆಯನ್ನು ಚಾಲುಕ್ಯ ಆಡಳಿತಗಾರರು ನಿರ್ಮಿಸಿದ್ದಾರೆ. ಬಸವಕಲ್ಯಾಣ ಕೋಟೆಯಲ್ಲಿ ಪ್ರಾಚೀನ ದ್ವಾರಗಳು, ಹಲವು ಸಣ್ಣ ಮತ್ತು ಒಂದು 694 ಸೆಂ.ಮೀ ದೊಡ್ಡದಾದ   ‘ನವಗಜ್’ ಎಂದು ಕರೆಯಲಾಗುವ ಫಿರಂಗಿ ಇದೆ. ಕೋಟೆಯಲ್ಲಿ ಯಾವುದೇ ದೇವತೆ ಇಲ್ಲದ ದೇವಾಲಯವಿದೆ, ಇಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತಿತ್ತೆಂದು ನಂಬಲಾಗಿದೆ. ಕೋಟೆಯ ಗೋಡೆಗಳಲ್ಲಿ ಹಿಂದೂ ಮತ್ತು ಜೈನ ಪ್ರತಿಮೆಗಳನ್ನು ಕಾಣಬಹುದು. ಕೋಟೆ ವಠಾರದಲ್ಲಿ ಅನೇಕ ಆಸಕ್ತಿದಾಯಕ ಪ್ರಾಚೀನ ವಸ್ತುಗಳನ್ನು ಪ್ರದರ್ಶಿಸುವ ವಸ್ತು ಸಂಗ್ರಹಾಲಯವಿದೆ.
  • ಬಸವೇಶ್ವರ ದೇವಸ್ಥಾನ: ಪ್ರತಿ ಸೋಮವಾರ ವಿಶೇಷ ಪೂಜೆ ನಡೆಯುವ ಆಧುನಿಕ ದೇವಾಲಯ.
  • ಪರುಶ ಕಟ್ಟೆ (ಫಿಲಿಯೋಸ್ಫರ್ಸ್ ಸ್ಟೋನ್): ಸಂತ ಬಸವೇಶ್ವರ ಅವರು ಕುಳಿತುಕೊಳ್ಳುತ್ತಿದ್ದ, ನಿರ್ಗತಿಕರಿಗೆ ನೆರವು, ಮಾರ್ಗದರ್ಶನ ನೀಡುತ್ತಿದ್ದ ಮತ್ತು ಅವರ ಶಿಷ್ಯರಿಗೆ ವಚನಗಳನ್ನು   ಪಠಿಸುತ್ತಿದ್ದ ಸ್ಥಳವೆಂದು ನಂಬಲಾಗಿದೆ. ಹತ್ತಿರದಲ್ಲೊಂದು ಹಳೆಯ ಕೋಟೆಯ ಅವಶೇಷವಿದ್ದು ಈಗ ಇದನ್ನು ಹೂದೊಟವಾಗಿ ಪರಿವರ್ತಿಸಲಾಗಿದೆ.
  • ತ್ರಿಪುರಂತಕ ಸರೋವರ: ಶಿವ ದೇವಾಲಯ ಮತ್ತು  ಲ್ಯಾಟರೈಟ್ ಗುಹೆಗಳಿಗೆ (ಅಕ್ಕ ನಾಗಮ್ಮ ಗುಹೆ, ನುಲಿಯಾ ಚಂದ್ರಯ್ಯ ಗುಹೆ, ಚೆನ್ನಬಸವಣ್ಣ ಗುಹೆ, ಮತ್ತು ವಿಜನೇಶ್ವರ ಗುಹೆ) ಹೆಸರುವಾಸಿಯಾದ ಬಸವಕಲ್ಯಾಣ ನಗರದಿಂದ 5 ಕಿ.ಮೀ ದೂರದಲ್ಲಿರುವ ಒಂದು ಸರೋವರ .
  • ಅನುಭವ ಮಂಟಪ: ರುದ್ರಮುನಿ ಗುಹೆಯ ಹಿಂದೆ ಇರುವ ಬೃಹತ್ ಶಿವಲಿಂಗದ ಆಕಾರದಲ್ಲಿ ನಿರ್ಮಿಸಲಾದ ಸಮುದಾಯ ಸ್ಥಳ. ಅನುಭವ ಮಂಟಪದಲ್ಲಿ ಗ್ರಂಥಾಲಯ, ವಸ್ತುಸಂಗ್ರಹಾಲಯ ಮತ್ತು ಪ್ರವಾಸಿಗರಿಗೆ ಕುಟೀರಗಳಿವೆ.

ತಲುಪುವುದು ಹೇಗೆ: ಬಸವಕಲ್ಯಾಣ ಬೆಂಗಳೂರಿನಿಂದ 660 ಕಿ.ಮೀ ಮತ್ತು ಜಿಲ್ಲಾ ಕೇಂದ್ರ ಬೀದರ್ ನಿಂದ 80 ಕಿ.ಮೀ. ದೂರದಲ್ಲಿದೆ. ಬೀದರ್ ಹತ್ತಿರದ ವಿಮಾನ ನಿಲ್ದಾಣವಾಗಿದೆ (71 ಕಿ.ಮೀ ದೂರದಲ್ಲಿದೆ). ಹುಮ್ನಾಬಾದ್ ಹತ್ತಿರದ ರೈಲು ನಿಲ್ದಾಣವಾಗಿದೆ (32 ಕಿ.ಮೀ ದೂರದಲ್ಲಿದೆ). ಬೀದರ್ ಮತ್ತು ಹುಮ್ನಾಬಾದ್‌ನಿಂದ ಬಸವಕಲ್ಯಾಣ ತಲುಪಲು ಬಸ್‌ಗಳು ಲಭ್ಯವಿದೆ

ವಸತಿ: ಬಸವಕಲ್ಯಾಣ ಕೆಲವು ಬಜೆಟ್ ಹೋಟೆಲ್‌ಗಳನ್ನು ಹೊಂದಿದೆ. ಹುಮ್ನಾಬಾದ್‌ನಲ್ಲಿ ಹೆಚ್ಚಿನ ವಾಸ್ತವ್ಯದ ಆಯ್ಕೆಗಳು ಲಭ್ಯವಿದೆ.

Tour Location

Leave a Reply

Accommodation
Meals
Overall
Transport
Value for Money