Karnataka logo

Karnataka Tourism
GO UP
Image Alt

ಬಂದಾಜೆ ಜಲಪಾತ

separator
  /  ಬಂದಾಜೆ ಜಲಪಾತ

ಬಂದಾಜೆ ಜಲಪಾತ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಸುಮಾರು 200 ಅಡಿ ಎತ್ತರದಿಂದ ಧುಮುಕುವ ಈ ಜಲಪಾತವು ಕರ್ನಾಟಕದ ಅತ್ಯಂತ ಅದ್ಭುತವಾದ ಜಲಪಾತಗಳಲ್ಲಿ ಒಂದಾಗಿದೆ. ದಟ್ಟವಾದ ಕಾಡುಗಳು ಮತ್ತು ಹುಲ್ಲುಗಾವಲುಗಳ ಮಡಿಲಲ್ಲಿ ನೆಲೆಸಿರುವ ಈ ಜಲಪಾತವನ್ನು ಟ್ರೆಕ್ಕಿಂಗ್ ಮೂಲಕ ಮಾತ್ರ ತಲುಪಬಹುದು .. ಹಚ್ಚ ಹಸಿರಿನ ದಟ್ಟವಾದ ಕಾಡುಗಳು, ಮಂತ್ರಮುಗ್ಧಗೊಳಿಸುವ ಘಾಟ್‌ಗಳು, ಸುಂದರ ಸೂರ್ಯಾಸ್ತಗಳು, ಚಿಲಿಪಿಲಿ ಹಕ್ಕಿಗಳ ಮಧುರ ಧ್ವನಿ ಮತ್ತು ಕಾಡು ಸಸ್ಯಗಳ ಪರಿಮಳಗಳನ್ನು ಹೊಂದಿರುವ ಬಂಡಾಜೆ ಜಲಪಾತದ ಕಡೆಗಿನ ಚಾರಣ ಮಾರ್ಗವು ನಿಮಗೆ ಒಂದು ಸುಂದರ ಅಲೌಕಿಕ ಅನುಭವವನ್ನು ನೀಡುತ್ತದೆ.
ಬಲ್ಲಾಳರಾಯನ ಚಾರಣ ಮಾಡಲು ಮತ್ತು ಜಲಪಾತಕ್ಕೆ ಭೇಟಿ ನೀಡಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಬೆಳ್ತಂಗಡಿ ವನ್ಯಜೀವಿ ವ್ಯಾಪ್ತಿಯ ಕಚೇರಿಯಿಂದ ಅರಣ್ಯ ಅನುಮತಿ ಪಡೆಯಬೇಕು. ಇಲ್ಲಿನ ದಟ್ಟ ಅರಣ್ಯ ಮತ್ತು ಅನುಮತಿ ಸಮಸ್ಯೆಗಳಿಂದಾಗಿ, ಇಲ್ಲಿ ಯಾವುದೇ ಶಾಶ್ವತ ವಸತಿಗಳು ಲಭ್ಯವಿಲ್ಲ. ಆದಾಗ್ಯೂ, ನೀವು ಕ್ಯಾಂಪಿಂಗ್ ಆಯ್ಕೆಯನ್ನು ಮಾಡಬಹುದು. ನೀವು ವಿಶ್ವಾಸಾರ್ಹ ಪ್ರವಾಸ ಸಂಘಟಕರು ಮತ್ತು ಮಾರ್ಗದರ್ಶಿಯೊಂದಿಗೆ ಪ್ರಯಾಣಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ಕ್ಯಾಂಪಿಂಗ್ ಮಾಡಿದರೆ ದಟ್ಟವಾದ ಕಾಡಿನ ನಡುವಿನ ಶಿಬಿರದಲ್ಲಿ ತಂಪಾದ ಗಾಳಿಯೊಂದಿಗೆ ನಕ್ಷತ್ರಗಳ ರಾತ್ರಿಯ ಸೌಂದರ್ಯವನ್ನು ನೋಡುತ್ತಾ ಆನಂದವನ್ನು ಅನುಭವಿಸಿ.
ಈ ಜಲಪಾತವನ್ನು ಟ್ರೆಕ್ಕಿಂಗ್ ಮೂಲಕ ತಲುಪಬಹುದು. ಇದು ಸ್ವಲ್ಪ ಶ್ರಮದಾಯಕವಾಗಿದೆ. ಆದರೆ ನೀವು ಫಿಟ್ ಇದ್ದರೆ, ದೃಢ ನಿಶ್ವಯವನ್ನು ಹೊಂದಿದ್ದರೆ ಇದನ್ನು ಸುಲಭವಾಗಿ ಸಾಧಿಸಬಹುದು. ಹೌದು, ಜಲಪಾತವನ್ನು ತಲುಪಲು ಒಬ್ಬರು ದೈಹಿಕ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಬೇಕು ಏಕೆಂದರೆ ಚಾರಣಕ್ಕೆ ಹೆಚ್ಚಿನ ಶಕ್ತಿಯ ಅಗತ್ಯವಿರುತ್ತದೆ. ಜಲಪಾತಗಳು ಒಂದೇ ತೊರೆಯಾಗಿ ಹರಿದು ನೇತ್ರಾವತಿ ನದಿಯನ್ನು ಉಪನದಿಯಾಗಿ ಸೇರುತ್ತದೆ. ಸೂರ್ಯಾಸ್ತದ ಸಮಯದಲ್ಲಿ ಮಂತ್ರಮುಗ್ಧಗೊಳಿಸುವ ದೃಶ್ಯವು ಹಚ್ಚ ಹಸಿರಿನ ಹಿನ್ನೆಲೆಯಲ್ಲಿ ಭೋರ್ಗರೆಯುವ ಹೊಳೆಯುವ ಜಲಪಾತಗಳೊಂದಿಗೆ ವಿಲೀನಗೊಂಡಾಗ ಮೂಡುವ ದೃಶ್ಯ ಅದ್ಭುತವೇ ಸರಿ. ಇದನ್ನು ಪ್ರತಿಯೊಬ್ಬ ಪ್ರಕೃತಿ ಪ್ರಿಯರು ಅಸ್ವಾದಿಸಲೇ ಬೇಕು.

ಇಲ್ಲಿಗೆ ಭೇಟಿ ಮಾಡಲು ಉತ್ತಮವಾದ ಸಮಯ

ಜಲಪಾತಕ್ಕೆ ಭೇಟಿ ನೀಡಲು ಮತ್ತು ಬಲ್ಲಾಳರಾಯನ ಚಾರಣಕ್ಕೆ ಹೋಗಲು ಉತ್ತಮ ಸಮಯವೆಂದರೆ ಮಳೆಗಾಲದ ನಂತರದ ಸಮಯ ಎಂದು ಉಲ್ಲೇಖಿಸಬೇಕಾಗಿಲ್ಲ. ಇಲ್ಲಿಗೆ ಬಂದಾಗ ಆಕರ್ಷಕವಾಗಿ ಧುಮ್ಮಿಕ್ಕುವ ಜಲಪಾತಗಳು ಮತ್ತು ಸುತ್ತಲೂ ಹಚ್ಚ ಹಸಿರಿನ ಪ್ರಕೃತಿಯನ್ನು ಆನಂದಿಸಿ. ಮಾನ್ಸೂನ್ ಸಮಯದಲ್ಲಿ ಚಾರಣವು ಸವಾಲಿನದ್ದಾಗಿರಬಹುದು ಏಕೆಂದರೆ ಆಗಿನ ಸಮಯದಲ್ಲಿ ಈ ಮಾರ್ಗವು ಕೆಸರುಗಟ್ಟಿರುತ್ತದೆ ಮತ್ತು ಜಿಗಣೆಗಳ ಸಮಸ್ಯೆಯು ಎದುರಾಗಬಹುದು. ಇಲ್ಲಿ ಚಳಿಗಾಲವು ಆಹ್ಲಾದಕರವಾಗಿರುತ್ತದೆ. ಸಾಧ್ಯವಾದಷ್ಟೂ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡಬೇಡಿ. ಸೆಪ್ಟೆಂಬರ್ ನಿಂದ ಫೆಬ್ರವರಿ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಬಂಡಾಜೆ ಜಲಪಾತವನ್ನು ತಲುಪುವುದು ಹೇಗೆ?

ಬಂಡಾಜೆ ಜಲಪಾತವನ್ನು ಬಲ್ಲಾಳರಾಯನ ದುರ್ಗ ಕೋಟೆಯ ಚಾರಣದ ಮೂಲಕ ತಲುಪಬಹುದು. 6-7 ಕಿಮೀ ಮಧ್ಯಮ ಚಾರಣವು ಹಿಂತಿರುಗಲು ಸುಮಾರು 7-8 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಕೋಟೆಯಿಂದ ಜಲಪಾತವು ಮೂರುವರೆ ಕೀಲೊ ಮೀಟರ್ ದೂರದಲ್ಲಿದೆ. ಇದು 2.30 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.
ಅಧಿಕೃತ ಮಾರ್ಗದರ್ಶಿಯೊಂದಿಗೆ ಮಾತ್ರ ನೀವು ಚಾರಣ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೇ ಕಾಡಿನಲ್ಲಿ ಕಳೆದುಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಕರ್ನಾಟಕ ಪರಿಸರ ಪ್ರವಾಸೋದ್ಯಮದೊಂದಿಗೆ ನಿಮ್ಮ ಚಾರಣವನ್ನು ನೀವು ಕಾಯ್ದಿರಿಸಬಹುದು ಇಲ್ಲಿ ಕ್ಲಿಕ್ ಮಾಡಿ

ತಲುಪುವುದು ಹೇಗೆ?

ನೀವು ಇಲ್ಲಿಗೆ ರಸ್ತೆ ಸಾರಿಗೆ, ರೈಲು ಸಾರಿಗೆ ಮತ್ತು ವಿಮಾನದ ಮೂಲಕ ಈ ಸ್ಥಳಕ್ಕೆ ತಲುಪಬಹುದು.

ವಿಮಾನದ ಮೂಲಕ
ಇದಕ್ಕೆ ಹತ್ತಿರದ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನ ನಿಲ್ದಾಣವೆಂದರೆ ಮಂಗಳೂರು. ಇದು ಸುಮಾರು 78 ಕಿಮೀ ದೂರದಲ್ಲಿದ್ದು ಜಲಪಾತವನ್ನು ತಲುಪಲು ಸುಮಾರು 2 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಬೆಳ್ತಂಗಡಿ ತಲುಪಲು ಟ್ಯಾಕ್ಸಿ ಅಥವಾ ರೈಲನ್ನು ಬಾಡಿಗೆಗೆ ಪಡೆಯಬಹುದು. ಬೆಳ್ತಂಗಡಿ 57 ಕಿಮೀ ದೂರದಲ್ಲಿದೆ ಮತ್ತು ತಲುಪಲು ಸುಮಾರು ಒಂದು ಗಂಟೆ ತೆಗೆದುಕೊಳ್ಳುತ್ತದೆ.

ರೇಲ್ವೆ ಮೂಲಕ
ಮಂಗಳೂರು ಹತ್ತಿರದ ಪ್ರಮುಖ ರೈಲು ಜಂಕ್ಷನ್ ಆಗಿದೆ ಮತ್ತು ಇದು ರಾಜ್ಯದ ಮತ್ತು ದೇಶದ ಇತರ ಹಲವಾರು ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ.

ರಸ್ತೆ ಸಾರಿಗೆ ಮೂಲಕ
ನೀವು ರಸ್ತೆ ಸಾರಿಗೆ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದು. ಈ ಜಲಪಾತವನ್ನು ತಲುಪಲು ಕ್ಯಾಬ್, ಖಾಸಗಿ ಬಸ್ ಅಥವಾ ಸರ್ಕಾರಿ ಸಾರಿಗೆ ಸೇವೆಯನ್ನು ತೆಗೆದುಕೊಳ್ಳಬಹುದು. ಈ ಬಸ್ಸುಗಳು ಮಂಗಳೂರು ಮತ್ತು ಬೆಂಗಳೂರಿನಿಂದಲೂ ಸಂಚರಿಸುತ್ತವೆ.

ಚಿತ್ರ ಕೃಪೆ : ಮೋಹನ್ ರಾವ್