Karnataka Tourism
GO UP

ಪಟ್ಟದಕಲ್ಲು

separator
ಕೆಳಗೆ ಸ್ಕ್ರಾಲ್ ಮಾಡಿ

ಪಟ್ಟದಕಲ್ಲು ಯುನೆಸ್ಕೋ ಮಾನ್ಯತೆ ಪಡೆದ 7 ಮತ್ತು 8 ನೇ ಶತಮಾನದ ಹಿಂದೂ ಮತ್ತು ಜೈನ ದೇವಾಲಯಗಳನ್ನು ಒಳಗೊಂಡಿರುವ ವಿಶ್ವ ಪರಂಪರೆಯ ತಾಣವಾಗಿದೆ. ಪಟ್ಟದಕಲ್ಲಿನ ಹೆಚ್ಚಿನ ದೇವಾಲಯಗಳಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಶೈಲಿಯ ವಾಸ್ತುಶಿಲ್ಪಗಳ ಮಿಶ್ರಣವನ್ನು ನೋಡಬಹುದಾಗಿದೆ. ಪಟ್ಟದಕಲ್ಲನ್ನು  ಚಾಲುಕ್ಯರು ಪಟ್ಟಾಭಿಷೇಕ ಸಮಾರಂಭಗಳಿಗೆ ಬಳಸುತ್ತಿದ್ದರು (ಉದಾಹರಣೆಗೆ ಹೊಸ ರಾಜನ ಕಿರೀಟ ಧಾರಣೆ ಸಮಾರಂಭ).

ಪಟ್ಟದಕಲ್ಲಿನ ಆಕರ್ಷಣೆಗಳು

  • ವಿರೂಪಾಕ್ಷ ದೇವಸ್ಥಾನ: ಕ್ರಿ.ಶ 8 ನೇ ಶತಮಾನದಲ್ಲಿ ರಾಣಿ ಲೋಕಮಹಾದೇವಿ ಅವರು ಪತಿ, ರಾಜ ವಿಕ್ರಮಾದಿತ್ಯರ ಪಲ್ಲವರ ವಿರುದ್ಧ ಜಯ ಮತ್ತು ಕಾಂಚೀಪುರಂನ ವಶಪಡಿಸಿಕೊಳ್ಳುವಿಕೆಯನ್ನು ಆಚರಿಸಲು ವಿರೂಪಾಕ್ಷ ದೇವಾಲಯವನ್ನು ನಿರ್ಮಿಸಿದರು. ವಿರೂಪಾಕ್ಷ ದೇವಾಲಯದಲ್ಲಿ ಉಗ್ರನರಸಿಂಹ ಮತ್ತು ನಟರಾಜರ ಶಿಲ್ಪಗಳನ್ನು ನೋಡಬಹುದಾಗಿದೆ 
  • ಪಾಪನಾಥ ದೇವಸ್ಥಾನ: 7 ನೇ ಶತಮಾನದ ಈ ದೇವಾಲಯವು ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳ ದೃಶ್ಯಗಳನ್ನು ಪ್ರದರ್ಶಿಸುತ್ತದೆ.
  • ಗಳಗನಾಥ ದೇವಸ್ಥಾನ: ಅಂಧಕಾಸುರ ಎಂಬ ರಾಕ್ಷಸನನ್ನು ಶಿವನು ಹತ್ಯೆಗೈದ ಸ್ಮರಣಾರ್ಥ ನಿರ್ಮಿಸಲಾದ 8 ನೇ ಶತಮಾನದ ದೇವಾಲಯ.
  • ಸಂಗಮೇಶ್ವರ ದೇವಸ್ಥಾನ: ಸಂಗಮೇಶ್ವರ ದೇವಾಲಯವು ಭಾರತದ ಅತ್ಯಂತ ಹಳೆಯ ದೇವಾಲಯ ಎಂದು ನಂಬಲಾಗಿದೆ, ಇದನ್ನು ಕ್ರಿ.ಶ 7 ನೇ ಶತಮಾನದಲ್ಲಿ ಚಾಲುಕ್ಯರು ದ್ರಾವಿಡ ವಾಸ್ತುಶಿಲ್ಪದಲ್ಲಿ ನಿರ್ಮಿಸಿದ್ದಾರೆ.
  • ಇತರ ಜನಪ್ರಿಯ ದೇವಾಲಯಗಳು: ಚಂದ್ರಶೇಖರ ದೇವಸ್ಥಾನ, ಕಾಶಿ ವಿಶ್ವನಾಥ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಜಂಬುಲಿಂಗೇಶ್ವರ ದೇವಸ್ಥಾನ, ಕಾಡಸಿದ್ದೇಶ್ವರ ದೇವಸ್ಥಾನ ಇತ್ಯಾದಿ. 
  • ನೃತ್ಯೋತ್ಸವ: ಕರ್ನಾಟಕ ಸರ್ಕಾರದ ಪ್ರಾಯೋಜಕತ್ವದಲ್ಲಿ ಪ್ರತಿವರ್ಷ ಪಟ್ಟದಕಲ್ಲು ನೃತ್ಯೋತ್ಸವ ನಡೆಯುತ್ತದೆ. ಆಹ್ವಾನಿತ ನೃತ್ಯಗಾರರು ಪಟ್ಟದಕಲ್ಲಿನ ಪ್ರಸಿದ್ಧ ದೇವಾಲಯಗಳ ಹಿನ್ನೆಲೆಯಲ್ಲಿ ಪ್ರೇಕ್ಷಕರ ಸಂತೋಷಕ್ಕೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.

ಹತ್ತಿರದಲ್ಲಿ ಇನ್ನೇನಿದೆ? ಪಟ್ಟದಕಲ್ಲಿಗೆ ಭೇಟಿ ನೀಡುವ ಹೆಚ್ಚಿನ ಪ್ರವಾಸಿಗರು ಐಹೊಳೆ ಮತ್ತು ಬಾದಾಮಿಗೆ ಭೇಟಿ ನೀಡುತ್ತಾರೆ. 

ತಲುಪುವುದು ಹೇಗೆ: ಪಟ್ಟದಕಲ್ಲು  ಬೆಂಗಳೂರಿನಿಂದ 445 ಕಿ.ಮೀ ದೂರದಲ್ಲಿದೆ. ಹುಬ್ಬಳ್ಳಿ ಹತ್ತಿರದ ವಿಮಾನ ನಿಲ್ದಾಣವಾಗಿದೆ (ಪಟ್ಟದಕಲ್ಲಿನಿಂದ 130 ಕಿ.ಮೀ). ಬಾದಾಮಿ ಹತ್ತಿರದ ರೈಲ್ವೆ ನಿಲ್ದಾಣವಾಗಿದೆ (ಪಟ್ಟದಕಲ್ಲಿನಿಂದ 17 ಕಿ.ಮೀ) ಪಟ್ಟದಕಲ್ಲು  ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಬಸ್ ಸೇವೆ ಮತ್ತು ರಸ್ತೆ ಸಂಪರ್ಕವನ್ನು ಹೊಂದಿದೆ.

ವಸತಿ: 22 ಕಿ.ಮೀ ದೂರದಲ್ಲಿರುವ ಬಾದಾಮಿ ಪಟ್ಟಣದಲ್ಲಿ ಹಲವು ರೆಸಾರ್ಟ್‌ಗಳು ಲಭ್ಯವಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಬಾದಾಮಿಯಲ್ಲಿ ಹೋಟೆಲ್ ಮಯೂರ ಚಾಲುಕ್ಯ ನಡೆಸುತ್ತಿದೆ.

 

Tour Location

 

Leave a Reply

Accommodation
Meals
Overall
Transport
Value for Money