ದಾಂಡೇಲಿಯಲ್ಲಿ ಮಂಗಟ್ಟೆ ವೀಕ್ಷಣೆ
ದಾಂಡೇಲಿಯಲ್ಲಿ ಮಂಗಟ್ಟೆ ವೀಕ್ಷಣೆ: ಮಂಗಟ್ಟೆ (ಹಾರ್ನ್ಬಿಲ್) ಒಂದು ಸುಂದರ ಪಕ್ಷಿ ಪ್ರಭೇದವಾಗಿದ್ದು ಇತರ ಪಕ್ಷಿಗಳಿಗಿಂತ ವಿಭಿನ್ನವಾಗಿವೆ. ಮಂಗಟ್ಟೆ ದೊಡ್ಡ, ವಿಶಿಷ್ಟ ಆಕಾರದ ಹಳದಿ ಬಣ್ಣದ ಕೊಕ್ಕುಗಳನ್ನು ಹೊಂದಿರುವುದರಿಂದ ಗುರುತಿಸುವುದು ಬಹಳ ಸುಲಭ ಮತ್ತು ತನ್ನ ಈ ಬಣ್ಣದ ಕೊಕ್ಕಿನಿಂದಾಗಿ ಪಕ್ಷಿ ವೀಕ್ಷಕರ ಮತ್ತು ಛಾಯಾಗ್ರಾಹಕರ ಕಣ್ಮಣಿವಾಗಿದೆ. ಮಂಗಟ್ಟೆಗಳನ್ನು ಗುರುತಿಸಲು ಕರ್ನಾಟಕದ ದಾಂಡೇಲಿ ಅತ್ಯಂತ ಜನಪ್ರಿಯ ಸ್ಥಳವಾಗಿದೆ.
ಪ್ರಪಂಚದಾದ್ಯಂತ ಸುಮಾರು 55 ವಿವಿಧ ರೀತಿಯ ಮಂಗಟ್ಟೆಗಳಿವೆ. ಭಾರತದ ಪಶ್ಚಿಮ ಘಟ್ಟದ ಪ್ರದೇಶದ ಹೊರತಾಗಿ, ಆಫ್ರಿಕಾ, ಫಿಲಿಪೈನ್ಸ್ ಇತ್ಯಾದಿ ದೇಶಗಳಲ್ಲೂ ಮಂಗಟ್ಟೆಗಳು ಕಂಡುಬರುತ್ತವೆ. ಭಾರತವು ಸುಮಾರು 9 ಜಾತಿಯ ಮಂಗಟ್ಟೆಗಳಿಗೆ ನೆಲೆಯಾಗಿದೆ. ದಾಂಡೇಲಿಯಲ್ಲಿ ಕಂಡುಬರುವ ಮಂಗಟ್ಟೆಗಳು ಸಾಮಾನ್ಯವಾಗಿ ಮಲಬಾರ್ ಪೈಡ್ ಹಾರ್ನ್ಬಿಲ್, ಮಲಬಾರ್ ಗ್ರೇ ಹಾರ್ನ್ಬಿಲ್ ಮತ್ತು ಇಂಡಿಯನ್ ಗ್ರೇ ಹಾರ್ನ್ಬಿಲ್ ಪ್ರಭೇದಕ್ಕೆ ಸೇರಿದವುಗಳಾಗಿವೆ.
ದಾಂಡೇಲಿಯಲ್ಲಿ ಮಂಗಟ್ಟೆಯನ್ನು ಎಲ್ಲಿ ನೋಡಬಹುದು:
ಮಂಗಟ್ಟೆಗಳನ್ನು ಗುರುತಿಸಲು ಸಾಕಷ್ಟು ತಾಳ್ಮೆ, ಸ್ವಲ್ಪ ಅದೃಷ್ಟ ಮತ್ತು ಸ್ವಲ್ಪ ಸ್ಥಳೀಯ ಮಾಹಿತಿಯ ಅಗತ್ಯವಿರುತ್ತದೆ. ಗಣೇಶ ಗುಡಿಯಲ್ಲಿರುವ ಓಲ್ಡ್ ಮ್ಯಾಗಜೀನ್ ಹೌಸ್ ಮತ್ತು ದಾಂಡೇಲಿಯ ಕಾಳಿ ಸಾಹಸ ಶಿಬಿರ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ನಿರ್ವಹಿಸುತ್ತಿದ್ದು, ಚಾರಣ / ಪಕ್ಷಿ ವೀಕ್ಷಣೆ ನಡಿಗೆಗಳನ್ನು ನಡೆಸುತ್ತದೆ, ಈ ಸಮಯದಲ್ಲಿ ಅನುಭವಿ ಮಾರ್ಗದರ್ಶಕರು ಜೊತೆಗಿರುತ್ತಾರೆ ಮತ್ತು ಮಂಗಟ್ಟೆಗಳು ಕಾಣಸಿಗುವ ಸಂಭವನೀಯತೆ ಹೆಚ್ಚಾಗಿರುತ್ತದೆ. ನಿಮ್ಮ ಆತಿಥೇಯರ (ಉದಾ: ಮನೆ ವಸತಿ ಮಾಲೀಕರು, ರೆಸಾರ್ಟ್ ಸಿಬ್ಬಂದಿ) ಸಹಾಯದಿಂದ ಮಂಗಟ್ಟೆಗಳು ಕಾಣಿಸಬಹುದಾದ ಹತ್ತಿರದ ಪ್ರದೇಶದ ಮಾಹಿತಿ ಪಡೆಯಬಹುದಾಗಿದೆ.
ಹತ್ತಿರದಲ್ಲಿ ಇನ್ನೇನಿದೆ:
ಸಾಥೋಡಿ ಜಲಪಾತ, ಲಾಲ್ ಗುಲಿ ಜಲಪಾತ, ಅಟ್ಟಿವೇರಿ ಪಕ್ಷಿಧಾಮ, ಸೋಂಡಾ, ಮತ್ತು ಸಿಂಥೆರಿ ಬಂಡೆಗಳು ದಾಂಡೇಲಿಗೆ ಹತ್ತಿರವಿರುವ ಆಕರ್ಷಣೆಗಳಾಗಿವೆ.
ದಾಂಡೇಲಿಯನ್ನು ತಲುಪುವುದು ಹೇಗೆ:
ದಾಂಡೇಲಿ ಬೆಂಗಳೂರಿನಿಂದ 460 ಕಿ.ಮೀ.ದೂರದಲ್ಲಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ (65 ಕಿ.ಮೀ). ಲೋಂಡಾ, ಅಲ್ನವಾರ್ ಹತ್ತಿರದ ರೈಲು ನಿಲ್ದಾಣಗಳಾಗಿವೆ (35 ಕಿ.ಮೀ). ಕಾರವಾರ, ಹುಬ್ಬಳ್ಳಿ ಅಥವಾ ಅಲ್ನವಾರ್ ನಿಂದ ದಾಂಡೇಲಿಗೆ ಭೇಟಿ ನೀಡಲು ಟ್ಯಾಕ್ಸಿ ಪಡೆಯಬಹುದಾಗಿದೆ.
ವಸತಿ:
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಲಿಮಿಟೆಡ್ ದಾಂಡೇಲಿ- ಕಾಳಿ ಸಾಹಸ ಶಿಬಿರ ಮತ್ತು ಓಲ್ಡ್ ಮ್ಯಾಗಜೀನ್ ಹೌಸ್ ವಸತಿ ಸೌಲಭ್ಯಗಳನ್ನು ನಡೆಸುತ್ತಿದೆ. ದಾಂಡೇಲಿಯಲ್ಲಿ ಹಲವಾರು ಮನೆ ವಸತಿ ಮತ್ತು ಖಾಸಗಿ ರೆಸಾರ್ಟ್ಗಳು ಲಭ್ಯವಿದೆ.