ತಣ್ಣೀರು ಭಾವಿ ಕಡಲತೀರ ಕರಾವಳಿ ಕರ್ನಾಟಕದ ಮಂಗಳೂರು ನಗರದ ಸಮೀಪವಿರುವ ಜನಪ್ರಿಯ ಕಡಲತೀರವಾಗಿದೆ.
ತಣ್ಣೀರು ಭಾವಿ ಕಡಲತೀರದ ಆಕರ್ಷಣೆಗಳು
- ಕಡಲತೀರದ ಚಟುವಟಿಕೆಗಳು: ತಣ್ಣೀರು ಭಾವಿ ಕಡಲತೀರ ಕುಟುಂಬದೊಂದಿಗೆ ಭೇಟಿ ನೀಡಲು ಸುರಕ್ಷಿತ ಸ್ಥಳವಾಗಿದೆ, ಜೀವ ರಕ್ಷಕರ ಉಪಸ್ಥಿತಿ ಇದ್ದು ಹೆಚ್ಚಿನ ಆಳವಿಲ್ಲದೆ ಇರುವುದರಿಂದ ಮಕ್ಕಳಿಗೆ ಸುರಕ್ಷಿತವಾಗಿದೆ.
- ಉದ್ಯಾನ: ಪಶ್ಚಿಮ ಘಟ್ಟದ ಸಸ್ಯಗಳು, ವಿಶೇಷ ಗಿಡಮೂಲಿಕೆಗಳು ಮತ್ತು ಔಷಧೀಯ ಸಸ್ಯಗಳ ಸಂಗ್ರಹ ಇರುವ ತಣ್ಣೀರು ಭಾವಿ ಕಡಲತೀರದ ಸಮೀಪದ 15 ಎಕರೆ ಅಗಲದ ಮರದ ಉದ್ಯಾನವನವು ಭೇಟಿ ನೀಡಲು ಯೋಗ್ಯವಾಗಿದೆ.
- ಉಪಹಾರಗಳು: ತಣ್ಣೀರು ಭಾವಿ ಕಡಲತೀರದಲ್ಲಿ ಉಪಾಹಾರ ಗೃಹಗಳು ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾರುತ್ತವೆ. ಈ ಪ್ರದೇಶ ಕುಳಿತು ವಿಶ್ರಾಂತಿ ಪಡೆಯಲು ಸೂಕ್ತವಾಗಿದೆ.
ಸೌಲಭ್ಯಗಳು: ತಣ್ಣೀರು ಭಾವಿ ಕಡಲತೀರದಲ್ಲಿ ಶೌಚಾಲಯ, ತಿನಿಸುಗಳು, ಉದ್ಯಾನವನಗಳು ಮುಂತಾದ ಸೌಲಭ್ಯಗಳಿವೆ ಮತ್ತು ಹಗಲಿನ ವೇಳೆಯಲ್ಲಿ ಜೀವ ರಕ್ಷಕರು ಇರುತ್ತಾರೆ
ಹತ್ತಿರದ ಇತರ ಆಕರ್ಷಣೆಗಳು: ಪಣಂಬೂರು ಕಡಲತೀರ (9 ಕಿ.ಮೀ), ಸೋಮೇಶ್ವರ ಕಡಲತೀರ (22 ಕಿ.ಮೀ), ಕದ್ರಿ ಮಂಜುನಾಥ ದೇವಸ್ಥಾನ (10 ಕಿ.ಮೀ) ಮತ್ತು ಸುಲ್ತಾನ್ ಬತ್ತೇರಿ (10 ಕಿ.ಮೀ) ತಣ್ಣೀರು ಭಾವಿ ಕಡಲತೀರದ ಜೊತೆಗೆ ಭೇಟಿಕೊಡಬಹುದಾದ ಕೆಲವು ಸ್ಥಳಗಳಾಗಿವೆ.
ತಲುಪುವುದು ಹೇಗೆ: ತಣ್ಣೀರು ಭಾವಿ ಕಡಲತೀರ ಬೆಂಗಳೂರಿನಿಂದ 340 ಕಿ.ಮೀ. ಮತ್ತು ಮಂಗಳೂರು ವಿಮಾನ ನಿಲ್ದಾಣದಿಂದ 9 ಕಿ.ಮೀ ದೂರದಲ್ಲಿದೆ. ಮಂಗಳೂರು ಕರ್ನಾಟಕದ ಎಲ್ಲಾ ಭಾಗಗಳಿಂದ ವಾಯುಯಾನ, ರೈಲು ಮತ್ತು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ತಣ್ಣೀರು ಭಾವಿ ಕಡಲತೀರಕ್ಕೆ ಭೇಟಿ ನೀಡಲು ಮಂಗಳೂರು ನಗರದಿಂದ ಆಟೋ ಅಥವಾ ಟ್ಯಾಕ್ಸಿ ಪಡೆಯಬಹುದು. ಗುರುಪುರ ನದಿ ದಾಟಿ ದೋಣಿ ಮುಖಾಂತರ ಕೂಡ ತಣ್ಣೀರು ಭಾವಿ ಕಡಲತೀರ ತಲುಪಬಹುದಾಗಿದೆ.
ವಸತಿ: ಮಂಗಳೂರು ನಗರದಲ್ಲಿ ಎಲ್ಲಾ ವರ್ಗದ ವಸತಿಗೃಹಗಳಿವೆ.